Connect with us

BELTHANGADY

ಪ್ರವಾಸಕ್ಕೆ ತೆರಳಿ ನಾಪತ್ತೆಯಾಗಿದ್ದ ದೀಕ್ಷಿತ್ ಮರಳಿ ಮನೆಗೆ..!

Published

on

ಬೆಳ್ತಂಗಡಿ: ಪ್ರಸಿದ್ದ ಪ್ರವಾಸಿ ತಾಣ ದೇವರ ಮನೆಗೆ ಪ್ರವಾಸಕ್ಕೆ ತೆರಳಿದ್ದ ಬೆಳ್ತಂಗಡಿ ತಾಲೂಕಿನ ಕೊಯ್ಯುರಿನ ನಿವಾಸಿ ದೀಕ್ಷಿತ್ (27) ನಾಪತ್ತೆಯಾಗಿದ್ದು, ಬಣಕಲ್ ಪೊಲೀಸರು ಹಾಗೂ ಅರಣ್ಯ ಇಲಾಖೆ ಹುಡುಕಾಟ ನಡೆಸಿದ್ದರು.

ಇದೀಗ ಈ ಹುಡುಗ ಮನೆ ಸೇರಿದ್ದಾನೆ. ಈತ ತನ್ನ ಸ್ನೇಹಿತರೊಂದಿಗೆ ದೇವರ ಮನೆ ಪ್ರವಾಸಕ್ಕೆ ತೆರಳಿದ್ದ. ಬಳಿಕ ಹಿಂದಿರುಗಿ ಬರುವಾಗ ರಸ್ತೆ ಮದ್ಯೆ ಸ್ನೇಹಿತರಲ್ಲಿ ಗಲಾಟೆ ನಡೆದಿದೆಯಂತೆ. ಈ ವೇಳೆ ಗುಡ್ಡ ತೋಟ ಬಳಿ ಕಾರು ನಿಲ್ಲಿಸಿ ಯುವಕರು ಜಗಳವಾಡಿಕೊಂಡಿದ್ದು, ದೀಕ್ಷಿತ್ ಮುನಿಸಿಕೊಂಡು ಕಾರು ಹತ್ತದೆ ಕಣ್ಣರೆಯಾಗಿದ್ದು, ಮಂಗಳವಾರ ಸಂಜೆ ನಾಪತ್ತೆಯಾಗಿದ್ದು ವಿಚಾರ ತಿಳಿದು ಸ್ಥಳೀಯರು ಹಾಗೂ ಬಣಕಲ್ ಪೊಲೀಸರು ಹಾಗೂ ಅರಣ್ಯ ಇಲಾಖೆ ಹುಡುಕಾಟ ನಡೆಸಿದರು ಪತ್ತೆಯಾಗಿಲ್ಲ.ಇದೀಗ ಯುವಕ ಬೇರೆ ವಾಹನದ ಮೂಲಕ ಊರಿಗೆ ಮರಳಿ ಪತ್ತೆಯಾಗಿರುವ ಬಗ್ಗೆ ಬಣಕಲ್ ಪೊಲೀಸರಿಗೆ ಮನೆ ಮಂದಿ ಮಾಹಿತಿ ನೀಡಿದ್ದಾರೆ.

BELTHANGADY

Belthangady: ರಸ್ತೆ ಪಕ್ಕದ ಗೂಡಂಗಡಿಯನ್ನು ಧ್ವಂಸಗೊಳಿಸಿದ ಕಿಡಿಗೇಡಿಗಳು..!

Published

on

ಬೆಳ್ತಂಗಡಿ: ಬೆಳ್ತಂಗಡಿ ನಿಡ್ಲೆ ಗ್ರಾಮದ ಬೂಡುಜಾಲು ಎಂಬಲ್ಲಿ ರಸ್ತೆ ಬದಿಯಲ್ಲಿದ್ದ ಗೂಡಂಗಡಿಯನ್ನು ಕಿಡಿಗೇಡಿಗಳು ರಾತ್ರಿಯ ವೇಳೆ ಧ್ವಂಸಗೊಳಿಸಿದ ಘಟನೆ ಸಂಭವಿಸಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಕೊಕ್ಕಡ ಗ್ರಾಮದ ಮಲ್ಲಿಗೆಮಜಲು ನಿವಾಸಿ ಅಬ್ದುಲ್ ಅಝೀಝ್ ಎಂಬವರು ತಮ್ಮ ಜೀವನೋಪಾಯಕ್ಕಾಗಿ ರಾಜ್ಯ ಹೆದ್ದಾರಿಯ ಬದಿಯಲ್ಲಿ ಗೂಡಂಗಡಿಯನ್ನು ಹಾಕಿ ವ್ಯಾಪಾರ ನಡೆಸುತ್ತಿದ್ದರು.

ಕಳೆದ ಮೂರು ವರ್ಷಗಳಿಂದ ಈ ಗೂಡಂಗಡಿ ಕಾರ್ಯ‌ ನಿರ್ವಹಿಸುತ್ತಿತ್ತು. ರಸ್ತೆ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಗೂಡಂಗಡಿಯನ್ನು ನಿರ್ಮಿಸಲಾಗಿತ್ತು. ಎಂದಿನಂತೆ ಶುಕ್ರವಾರ ರಾತ್ರಿಯ ವೇಳೆ ಅಂಗಡಿಯನ್ನು ಮುಚ್ಚಿ ಹೋಗಿದ್ದ ಅಬ್ದುಲ್ ಅಝೀಝ್ ಶನಿವಾರ ಬೆಳಗ್ಗೆ ಬಂದು ನೋಡಿದಾಗ ಅಂಗಡಿಯನ್ನು ಧ್ವಂಸಗೊಳಿಸಿರುವುದು ಕಂಡು ಬಂದಿದೆ. ಅಂಗಡಿಯಲ್ಲಿದ್ದ ವಸ್ತುಗಳೆಲ್ಲವನ್ನು ಹೊರಗೆಳೆದು ನಾಶಗೊಳಿಸಲಾಗಿದೆ. ತಂಪು ಪಾನೀಯಗಳ ಬಾಟ್ಲಿಗಳನ್ನು ಒಡೆದು ಹಾಕಲಾಗಿದೆ. ಅಂಗಡಿಯನ್ನು ಬಹುತೇಕ ಧ್ವಂಸಗೊಳಿಸಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಲಾಗಿದೆ.

Continue Reading

BELTHANGADY

Belthangady: ಕಾರಿನ ಮೇಲೆ ಕಾಡಾನೆ ದಾಳಿ- 6 ಮಂದಿಗೆ ಗಾಯ..!

Published

on

ಬೆಳ್ತಂಗಡಿ: ಕಾರಿನ ಮೇಲೆ ಕಾಡಾನೆ ದಾಳಿ ನಡೆಸಿ ಪ್ರಯಾಣಿಕರಿಗೆ ಗಾಯವಾಗಿರುವ ಘಟನೆ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯಾ ಎಂಬಲ್ಲಿ ನಡೆದಿದ್ದು, ಅಲ್ಟೋ ಕಾರಿನ ಮೇಲೆ ಏಕಾಏಕಿ ದಾಳಿ ನಡೆಸಿದ ಪರಿಣಾಮ ಆರು ಮಂದಿಗೆ ಗಾಯವಾಗಿದೆ.

ಈ ಘಟನೆ ನೆರಿಯಾದ ಪೋಸ್ಟ್ ಆಫೀಸ್ ಬಳಿ ನಡೆದಿದೆ. ನೆರಿಯಾ ಗ್ರಾಮ ಕಾಡಿನ ಅಂಚಿನಲ್ಲಿರೋ ಕಾರಣ ಕಾಡಾನೆ ಆತಂಕ ಹೆಚ್ಚಾಗಿದೆ. ಕಾಡಾನೆ ದಾಳಿಯಿಂದ ಕಾರಿಗೆ ಹಾನಿಯಾಗಿದ್ದು, ಗಾಯಗೊಂಡವರಿಗೆ ಬೆಳ್ತಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Continue Reading

BELTHANGADY

Belthangady: ಮನೆಯ ಶೆಡ್‌ ನಲ್ಲಿ ನಿಲ್ಲಿಸಿದ್ದ ಕಾರು ಕಳವು- ನಾಲ್ವರು ಅರೆಸ್ಟ್..!

Published

on

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯಲ್ಲಿ ಮನೆಯ ಶೆಡ್‌ನ‌ಲ್ಲಿ ನಿಲ್ಲಿಸಿದ್ದ ಇನ್ನೋವಾ ಕಾರನ್ನು ಕಳ್ಳತನ ಮಾಡಿದ ಪ್ರಕರಣವನ್ನು ಧರ್ಮಸ್ಥಳ ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಿನ್ನಿಗೋಳಿಯ ತಾಳಿಪಾಡಿ ಗ್ರಾಮದ ಉಮಾ ಅಜಯ್‌ ಶೆಟ್ಟಿ(32), ಬೆಳ್ತಂಗಡಿ ತಾಲೂಕಿನ ಸೋಣಂದೂರು ಗ್ರಾಮದ ಗಾಣದಬೆಟ್ಟು ನಿವಾಸಿ ಸೂರಜ್‌ ಶೆಟ್ಟಿ(23), ಇಳಂತಿಲ ಗ್ರಾಮದ ಎನ್ಮಾಡಿ ನಿವಾಸಿ ಮಂಜುನಾಥ ಪೂಜಾರಿ (30) ಮತ್ತು ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಪರೆಕಲ್‌ ನಿವಾಸಿ ಕಿಶೋರ್‌ ಟಿ.(32) ಬಂಧಿತ ಆರೋಪಿಗಳು.

ಚಾರ್ಮಾಡಿ ಗ್ರಾಮದ ಕಕ್ಕಿಂಜೆಯಲ್ಲಿ ನ. 9 ರಂದು ರಾತ್ರಿ 10 ಗಂಟೆ ವೇಳೆಗೆ ಇಸಾಕ್‌ ಅವರ ಅಕ್ಕನ ಮಗ ನೌಫಾಲ್‌ ತನ್ನ ಕಾರ್‌ಶೆಡ್ಡಿನಲ್ಲಿ ನಿಲ್ಲಿಸಿದ್ದ ಇನ್ನೋವಾ ಕಾರನ್ನು ಗೆಳೆಯ ಸೈಫ‌ುದ್ದಿನ್‌ನ ಸ್ನೇಹಿತ ಸೂರಜ್‌ ಶೆಟ್ಟಿ ಮತ್ತು ಅಜಯ್‌ ಶೆಟ್ಟಿ ಅವರು ಬಾಡಿಗೆಗೆ ನೀಡುವಂತೆ ಕೇಳಿದ್ದರು. ಆದರೆ ಕಾರನ್ನು ನೀಡದ ಕಾರಣ ಅವರೇ ಕಳವು ಮಾಡಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು. ಬೆಳ್ತಂಗಡಿ ಪೊಲೀಸ್‌ ಇನ್ಸ್ ಪೆಕ್ಟರ್‌ ನಾಗೇಶ್‌ ಕದ್ರಿ ಅವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಅನಿಲ್‌ ಕುಮಾರ್‌ ಡಿ. ಮತ್ತು ಸಬ್‌ ಇನ್‌ಸ್ಪೆಕ್ಟರ್‌ ಸಮರ್ಥ ರವೀಂದ್ರ ಗಾಣಿಗೇರ, ಎಎಸ್‌ಐಗಳಾದ ಸಾಮ್ಯುವೆಲ್‌ ಮತ್ತು ಪೌಲೋಸ್‌ ಹಾಗೂ ಸಿಬಂದಿ ರಾಜೇಶ್‌ ಎನ್‌., ಪ್ರಶಾಂತ್‌, ಮಂಜುನಾಥ್‌, ಮಲ್ಲಿಕಾರ್ಜುನ್‌ ಅವರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಅವರಿಗೆ 14 ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

 

Continue Reading

LATEST NEWS

Trending