Connect with us

    BELTHANGADY

    ದುಬೈನಲ್ಲಿ ಭೀಕರ ಅಪಘಾತ: ಬೆಳ್ತಂಗಡಿಯ ಯುವಕ ದಾರುಣ ಅಂತ್ಯ..

    Published

    on

    ಬೆಳ್ತಂಗಡಿ: ದುಬೈಯಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಬೆಳ್ತಂಗಡಿಯ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.

    ಕುವೆಟ್ಟು ನಿವಾಸಿ ಕ್ಲೇವಿನ್ ಅವಿನ್ ರೊಡ್ರಿಗಸ್ ಮೃತಪಟ್ಟ ದುರ್ದೈವಿ.


    ಕುವೆಟ್ಟು ಸರ್ಕಾರಿ ಶಾಲೆಯ ಬಳಿಯ ಸಿರಿಲ್ ರೊಡ್ರಿಗಸ್ ಮತ್ತು ಮೇರಿ ಮೊಂತೆರೋ ದಂಪತಿಯ ಪುತ್ರನಾಗಿರುವ ನಿವಾಸಿ ಕ್ಲೇವನ್ ಅವಿನ್ ರೊಡ್ರಿಗಸ್ ಮಡಂತ್ಯಾರು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ನಂತರ ನಿಟ್ಟೆ ಕಾಲೇಜಿನಲ್ಲಿ ಎಂ.ಬಿ.ಎ ಪದವಿ ಮುಗಿಸಿ ದುಬೈಗೆ ಹೋಗಿದ್ದರು.

    3 ದಿನಗಳ ಹಿಂದೆಯಷ್ಟೆ ಇವರಿಗೆ ಉದ್ಯೋಗ ದೊರಕಿದ್ದು, ಕೆಲಸದಿಂದ ಸ್ನೇಹಿತನೊಂದಿಗೆ ಬೈಕ್ ನಲ್ಲಿ ಬರುವಾಗ ಅಪಘಾತವಾಗಿ ಡಿವೈಡರ್ ಗೆ ತಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

    Click to comment

    Leave a Reply

    Your email address will not be published. Required fields are marked *

    BELTHANGADY

    ಗುರುವಾಯನಕೆರೆ – ಹೊಂಡ ತಪ್ಪಿಸಲು ಹೋಗಿ ಕಾರುಗಳು ಜ*ಖಂ

    Published

    on

    ಗುರುವಾಯನಕೆರೆ: ಇಂದು (ಅ.12) ಮುಂಜಾನೆ ಎರಡು ಕಾರುಗಳ ನಡೆವೆ ಭೀಕರ ಅ*ಪಘಾತವು ಗುರುವಾಯನಕೆರೆ ಶಕ್ತಿನಗರದಲ್ಲಿ ಸಂಭವಿಸಿದೆ.


    ಗುರುವಾಯನಕೆರೆಯಿಂದ ಹೆಬ್ರಿ ಕಡೆಗೆ ಹೋಗುವ ಸ್ಕೋಡಾ ಕಾರು ಮತ್ತು ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ಐ20 ಕಾರಿನ ನಡೆವೆ ಅ*ಪಘಾತ ಸಂಭವಿಸಿದೆ.


    ಐ 20 ಕಾರು ಚಾಲಕ ರಸ್ತೆಯ ಹೊಂಡ ತಪ್ಪಿಸಲು ಹೋಗಿ ಈ ದುರ್ಘಟನೆ ನಡೆದಿದೆ ಎಂಬುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.

     

     

    ಇದನ್ನೂ ಓದಿ:  ಉಪ್ಪಿನಂಗಡಿ| ಪ್ರಪಾತಕ್ಕೆ ಉರುಳಿದ ಖಾಸಗಿ ಬಸ್:‌ ಚಾಲಕ ಮೃ*ತ್ಯು

     

    ಎರಡೂ ಕಾರು ಉಲ್ಟಾ ಬಿದಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿಲ್ಲ ಎಂಬುವುದು ತಿಳಿದು ಬಂದಿದೆ. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

    Continue Reading

    BELTHANGADY

    ಭಾರೀ ಮಳೆಯಿಂದ ಚಾರ್ಮಾಡಿ ಘಾಟ್‌ನಲ್ಲಿ ಸಾಲು ಸಾಲು ಗುಡ್ಡ ಕುಸಿತ; ಫುಲ್‌ ಟ್ರಾಫಿಕ್ ಜಾಮ್

    Published

    on

    ಚಿಕ್ಕಮಗಳೂರು: ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಪರಿಣಾಮವಾಗಿ ಚಾರ್ಮಡಿ ಘಾಟ್‌ನಲ್ಲಿ ಸಾಲು ಸಾಲು ಗುಡ್ಡ ಕುಸಿತವಾಗಿದೆ. ಧಾರಾಕಾರ ಮಳೆಯಿಂದ ನೀರು ರಸ್ತೆಯಲ್ಲಿ ನದಿಯಂತೆ ಹರಿಯುತ್ತಿದ್ದು, ಹೀಗಾಗಿ ಭಾರೀ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ವಾಹನಗಳು ಹಿಂದಕ್ಕೂ ಹೋಗದೇ, ಮುಂದಕ್ಕೆ ಹೋಗದೆ ಮಧ್ಯವೇ ಪರದಾಡುವಂತಾಗಿದೆ.


    ಬೆಳ್ತಂಗಡಿ ತಾಲೂಕಿನ ಸುತ್ತಮುತ್ತ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕಕ್ಕಿಂಜೆ, ಚಾರ್ಮಾಡಿ ಘಾಟ್‌ ರಸ್ತೆ ಸಂಪೂರ್ಣ ಜಲಮಯವಾಗಿದೆ. ನೆರಿಯಾ, ಪುಲ್ಲಾಜೆ ಸೇತುವೆಗಳು ಮುಳುಗಡೆಯಗಿದೆ.

    ಚಾರ್ಮಾಡಿಯ 3ನೇ ತಿರುವಿನಲ್ಲಿ ರಸ್ತೆ ಮೇಲೆ ನೀರು ನದಿಯಂತೆ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

    Continue Reading

    BELTHANGADY

    ಬೆಳ್ತಂಗಡಿ: ಸಹಾಯದ ಹೆಸರಲ್ಲಿ ಅಪರಿಚಿತರಿಂದ ವಂಚನೆ

    Published

    on

    ಬೆಳ್ತಂಗಡಿ: ಸಹಾಯ ಮಾಡುವ ಹೆಸರು ಹೇಳಿ ಬ್ಯಾಂಕ್ ಖಾತೆಯಿಂದ ಇನ್ಯಾಯತರ್ಪು ಗ್ರಾಮದ ಜಾರಿಗೆಬೈಲು ನಿವಾಸಿ ಅಬೂಬಕ್ಕರ್ (71) ಅವರ ಹಣ ಎಗರಿಸಿದ ಘಟನೆ ಬೆಳ್ತಂಗಡಿ ಗೇರಕಟ್ಟೆ ಕೆನರಾ ಬ್ಯಾಂಕ್‌ನ ಎಟಿಎಂ ಕೇಂದ್ರದಲ್ಲಿ ನಡೆದಿದೆ.


    ಅ.2 ರಂದು ಮಧ್ಯಾಹ್ನ 12 ಗಂಟೆಗೆ ಹಣ ಡ್ರಾ ಮಾಡುತ್ತಿರುವಾಗ ಒಳ ಪ್ರವೇಶಿಸಿದ ಅಪರಿಚಿತರಿಬ್ಬರು ಹಿಂದಿಯಲ್ಲಿ ಮಾತಾಡಿ ಸಹಾಯಕ್ಕೆ ಬಂದಿದ್ದರು. ಅಬಾಬಕ್ಕರ್ ಸಹಾಯದ ಅಗತ್ಯ ಇಲ್ಲ ಎಂದು ಹೇಳಿದರೂ, ಒಳಗಡೆಯೇ ನಿಂತಿದ್ದರು. ಮಧ್ಯಾಹ್ನ 12 ಗಂಟೆಗೆ ಹಣ ತೆಗೆದು ಎಟಿಎಂ ಕೇಂದ್ರದಿಂದ ಕಾರ್ಡ್ ಸಹಿತ ಹೊರಗೆ ಹೋಗಿದ್ದರು. ನಂತರ ಅ.4 ರಂದು ಅಳಿಯ ಹಾಗೂ ಮಗ ಹಾಕಿದ ಹಣವನ್ನು ಡ್ರಾ ಮಾಡಲು ಎಟಿಎಂ ಕೇಂದ್ರಕ್ಕೆ ಹೋದಾಗ ಕಾರ್ಡ್ ರೀಡ್ ಆಗಲಿಲ್ಲ.
    ಅನುಮಾನದಿಂದ ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ಎಟಿಎಂ ಕಾರ್ಡ್ ಬದಲಾಗಿದೆ ಎಂದು ತಿಳಿಸಿದ್ದು, ನಂತರ ಬ್ಯಾಲೆನ್ಸ್ ಚೆಕ್ ಮಾಡಿದಾಗ ಖಾತೆಯಲ್ಲಿದ್ದ 49,200 ರೂ. ಅನ್ನು ವಂಚಿಸಿರುವುದು ಗೊತ್ತಾಯಿತು.
    ಅ.2 ರಂದು ಎಟಿಎಂ ಕೇಂದ್ರದಲ್ಲಿದ್ದ ಅಪರಿಚಿತ ಇಬ್ಬರು ವ್ಯಕ್ತಿಗಳು ಬೇರೆ ಬೇರೆ ಎಟಿಎಂ ಕೇಂದ್ರದಲ್ಲಿ ತೆಗೆದು ಕಳವು ಮಾಡಿದ್ದು, ಈ ಬಗ್ಗೆ ವಂಚಿಸಿ ಕಳವು ಮಾಡಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
    ಭಾವಚಿತ್ರದಲ್ಲಿರುವ ಅಪರಿಚಿತ ವ್ಯಕ್ತಿಗಳನ್ನು ಪತ್ತೆ ಮಾಡಲು ಸಹಕರಿಸಿ, ಪತ್ತೆಯಾದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಈ ಮೂಲಕ ಕೋರಲಾಗುತ್ತಿದೆ.
    ಸಂಪರ್ಕಿಸಬೇಕಾದ ಸಂಖ್ಯೆ: 08256-232093

    Continue Reading

    LATEST NEWS

    Trending