Connect with us

    LATEST NEWS

    ನಿಲ್ಲದ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಾರ್ : ಬೆಳಗಾವಿಯಲ್ಲಿ ಲಾಠಿ ಚಾರ್ಜ್

    Published

    on

    ನಿಲ್ಲದ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಾರ್ : ಬೆಳಗಾವಿಯಲ್ಲಿ ಲಾಠಿ ಚಾರ್ಜ್

    ಬೆಳಗಾವಿ: ಬೆಳಗಾವಿಯ ಪೀರನವಾಡಿ ಗ್ರಾಮದಲ್ಲಿ ಸಂಗೊಳ್ಳಿರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿರೋಧಿಸಿ ಪ್ರತಿಭಟನೆಗೆ ಜಮಾಯಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿಗಳು ಹಾಗೂ ಎಂಇಎಸ್ ಬೆಂಬಲಿಗರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.  ಪರಿಸ್ಥಿತಿ ನಿಯಂತ್ರಿಸಲು ಗುಂಪನ್ನು ಚದುರಿಸಿದರು. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೆ ಮೊಕ್ಕಾಂ ಹೂಡಿದ್ದಾರೆ.

    ರಾಯಣ್ಣ ಪ್ರತಿಮೆ ಪ್ರತಿಷ್ಠಾಪಿಸಿದ ಸ್ಥಳದಲ್ಲೇ ಶಿವಾಜಿ ಪ್ರತಿಮೆ ಪ್ರತಿಷ್ಠಾಪನೆಗೆ ಅವಕಾಶ ಕೊಡಬೇಕು ಎನ್ನುವುದು ಮಹಾರಾಷ್ಟ್ರ ಏಕೀಕರಣ ಸಮಿತಿ ವಾದವಾಗಿದೆ.

    ಘಟನೆಯ ಹಿನ್ನೆಲೆ : ಪೀರನವಾಡಿ ಗ್ರಾಮದ ವೃತ್ತದಲ್ಲಿ ಅಭಿಮಾನಿಗಳು, ಕನ್ನಡ ಪರ ಸಂಘಟನೆಗಳು ಕ್ರಾಂತಿವೀರ ಸಂಗೊಳ್ಳಿರಾಯಣ್ಣನ ಪ್ರತಿಮೆಯನ್ನು ನಿನ್ನೆ ಮಧ್ಯರಾತ್ರಿ ಪ್ರತಿಷ್ಠಾಪನೆ ಮಾಡಿ ವಿಜಯೋತ್ಸವ ಆಚರಿಸಿದ್ದರು.

    ರಾಯಣ್ಣನ ಜಯಂತಿಯ ದಿನವಾದ ಆ. 15ರಂದು ಸ್ಥಳೀಯ ರಾಯಣ್ಣನ ಅಭಿಮಾನಿಗಳು ಪ್ರತಿಷ್ಠಾಪಿಸಿದ್ದ ಪ್ರತಿಮೆಯನ್ನು ಪೊಲೀಸರು ಕೆಲ ಹೊತ್ತಿನಲ್ಲೇ ತೆರವುಗೊಳಿಸಿ ವಶಕ್ಕೆ ಪಡೆದುಕೊಂಡಿದ್ದರು. ಅನುಮತಿ ಪಡೆದಿರಲಿಲ್ಲ ಎನ್ನುವುದು ಪೊಲೀಸರ ವಾದವಾಗಿತ್ತು.

    ಇದನ್ನು ವಿರೋಧಿಸಿ ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು ಈ ನಡುವೆ ನಿನ್ನೆ ತಡ ರಾತ್ರಿ ಅಭಿಮಾನಿಗಳು ಸಂಗೊಳ್ಳಿ ರಾಯನ ಬೇರೊಂದು ಪ್ರತಿಮೆ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ದರು.

    ಕರವೇ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ‌ ಗುಡಗನಟ್ಟಿ ಹಾಗೂ ಸ್ಥಳೀಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದನ್ನು ಖಂಡಿಸಿ ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿಗಳು ಇಂದು ಬೆಳಿಗ್ಗೆ ಪ್ರತಿಭಟನೆ ನಡೆಸಿದರು.

    ತಾವು ತಂದಿದ್ದ ಶಿವಾಜಿ ಪ್ರತಿಮೆ ಪ್ರತಿಷ್ಠಾಪನೆಗೆ ಯತ್ನಿಸಿದರು. ಅವರನ್ನು ಪೊಲೀಸರು ತಡೆದರು. ಈ ವೇಳೆ ಪೊಲೀಸರು ಹಾಗೂ ಶಿವಾಜಿ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

    ಬೆಳಿಗ್ಗೆ ಸ್ಥಳಕ್ಕೆ ಬಂದ ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ, ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಹಾಗೂ ಕಾರ್ಯಕರ್ತರನ್ನು ಪೊಲೀಸರು ಅಲ್ಲಿಂದ ಕಳುಹಿಸಿದ್ದು, ಸ್ಥಳದಲ್ಲಿ ಬಿಗುವಾತಾವರಣ ನಿರ್ಮಾಣವಾಗಿದೆ.

    LATEST NEWS

    ಉತ್ತರ ಪ್ರದೇಶದ ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತು*ಳಿತ; ಮಕ್ಕಳು ಸೇರಿ 27 ಜನ ಬ*ಲಿ

    Published

    on

    ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭೀ*ಕರ ಕಾಲ್ತು*ಳಿತ ಸಂಭವಿಸಿದ್ದು, 27ಕ್ಕೂ ಅಧಿಕ ಮಂದಿ ಸಾವ*ನ್ನಪ್ಪಿರುವುದಾಗಿ ವರದಿಯಾಗಿದೆ.

    ಮಂಗಳವಾರ ಭೋಲೆ ಬಾಬಾ ಎಂಬವರ ಧಾರ್ಮಿಕ ಪ್ರವಚನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಇದ್ದಕ್ಕಿದ್ದಂತೆ ಕಾಲ್ತು*ಳಿತ ಉಂಟಾಗಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ನೂರಾರು ಜನರು ಗಾಯಗೊಂಡಿದ್ದು, ಪ್ರಾಥಮಿಕ ಮಾಹಿತಿಯ ಪ್ರಕಾರ ಈವರೆಗೆ 27 ಮೃ*ತದೇಹಗಳು ಇಟಾಹ್ ಜಿಲ್ಲೆಯ ಆಸ್ಪತ್ರೆಗೆ ತಲುಪಿರುವುದಾಗಿ ವರದಿಯಾಗಿದೆ.

    ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ ಎಂದು ಸ್ಥಳೀಯ ಪತ್ರಕರ್ತರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳವು ಇಟಾಹ್- ಸಿಕಂದರ ರಾವ್ ಗಡಿಯಲ್ಲಿದ್ದು, ಮೃ*ತಪಟ್ಟವರಲ್ಲಿ ಹಲವಾರು ಮಹಿಳೆಯರು ಮತ್ತು ಒಂದು ಮಗು ಕೂಡ ಸೇರಿರುವುದಾಗಿ ವರದಿಯಾಗಿದೆ.

    ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ಪತ್ರಕರ್ತರು ಮಾಹಿತಿ ನೀಡಿದ್ದಾರೆ. ಕಾಲ್ತುಳಿತ ಸಂಭವಿಸಿದ ಬಳಿಕ ಹಲವರು ಸಾವ*ನ್ನಪ್ಪಿದ್ದು, ಮಹಿಳೆಯರು ಹಾಗೂ ಮಕ್ಕಳ ಮೃ*ತದೇಹಗಳು ಅಲ್ಲಲ್ಲಿ ಬಿದ್ದಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗುತ್ತಿದೆ. ಘಟನೆಗೆ ಕಾರಣ ಏನು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಮೃ*ತದೇಹಗಳನ್ನು ಟೆಂಪೋಗಳಲ್ಲಿ ಸಾಗಿಸುತ್ತಿರುವ ವಿಡಿಯೋ ಕೂಡ ಹರಿದಾಡುತ್ತಿವೆ.

    Continue Reading

    FILM

    ಜೊತೆಯಾಗುತ್ತಿದ್ದಾರೆ ತ್ಯಾಗರಾಜರು…ಇದು ‘ನೀವು ಹಿಂದೆಂದೂ ನೋಡಿರದ ಗ್ರೇಟೆಸ್ಟ್ ಶೋ’!

    Published

    on

    ತಮ್ಮ ನೆಚ್ಚಿನ ನಟರ ಸಿನಿಮಾಗಳು ಸೆಟ್ಟೇರುತ್ತವೆ ಅಂದಾಗ ಅಭಿಮಾಗಳಲ್ಲಿ ಸಂಭ್ರಮ ಮನೆ ಮಾಡುತ್ತೆ. ಅಂತಹುದರಲ್ಲಿ ಜನಪ್ರಿಯ ನಾಯಕರಿಬ್ಬರು ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದಂದ್ರೆ ಹೇಳ್ಬೇಕಾ ಡಬಲ್ ಸಂಭ್ರಮ. ಇದೀಗ ಇಂತಹ ಸಂಭ್ರಮ ಕೊಡ್ತಾ ಇರೋದು ಅಂದ್ರೆ ರಮೇಶ್ ಅರವಿಂದ್ ಹಾಗೂ ಗಣೇಶ್.


    ತ್ಯಾಗರಾಜರ ಸಮಾಗಮ :


    ಇಂದು(ಜು.2) ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟು ಹಬ್ಬ. ಹೀಗಾಗಿ ಹೊಸ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಅದರಲ್ಲಿ ಗಣೇಶ್ – ರಮೇಶ್ ಕಾಂಬಿನೇಷನ್ ಚಿತ್ರದ ಪೋಸ್ಟರ್ ಕೂಡ ಒಂದು. ಈ ಪೋಸ್ಟರ್ ನೋಡಿ ಇಬ್ಬರ ಅಭಿಮಾನಿಗಳಿಗೆ ಸಂತಸವಾಗಿರೋದು ಸುಳ್ಳಲ್ಲ.

    ಕನ್ನಡ ಚಿತ್ರರಂಗದಲ್ಲಿ ‘ತ್ಯಾಗರಾಜ’ ಎಂದೇ ರಮೇಶ್ ಅರವಿಂದ್ ಫೇಮಸ್. ಬ್ಯಾಕ್ ಟು ಬ್ಯಾಕ್ ಹಿಟ್‌ಗಳನ್ನು ಕೊಟ್ಟಿದ್ದ ರಮೇಶ್ ಅರವಿಂದ್ ಪ್ರತಿ ಸಿನಿಮಾದಲ್ಲೂ ನಾಯಕಿಯನ್ನು ಕಳೆದುಕೊಂಡಿದ್ದರು. ಹಾಗಾಗಿ ಅವರನ್ನು ಎಂದು ಕರೆಯಲಾಗುತ್ತಿತ್ತು. ಮುಂಗಾರು ಮಳೆ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ತ್ಯಾಗರಾಜ ಪಟ್ಟ ಸಿಕ್ಕಿತ್ತು. ಇದೀಗ ಇವರಿಬ್ಬರು ಒಂದಾಗುತ್ತಿರೋ ಅಭಿಮಾನಿಗೆ ವ್ಹಾವ್ ಎಂದೆನಿಸಿರೋದು ಸುಳ್ಳಲ್ಲ.

    ಆಸಕ್ತಿದಾಯಕವಾಗಿದೆ ಪೋಸ್ಟರ್ :


    ಇನ್ನು ರಿಲೀಸ್ ಆಗಿರೋ ಪೋಸ್ಟರ್ ಆಸಕ್ತಿ ಹುಟ್ಟು ಹಾಕಿದೆ. ರಮೇಶ್ ಅರವಿಂದ್ ಹಾಗೂ ಗಣೇಶ್ ಅವರ ಯಂಗ್ ಇರುವ ಫೋಟೊಗಳನ್ನು ಬಳಸಲಾಗಿದೆ. ಒಂದು ಕಾಗದದ ಲಕೋಟೆ, ಅದರ ಮೇಲೊಂದು ಪೀಪಿ ಇಡಲಾಗಿದೆ. ವಿದೇಶದ ಸೀಲೊಂದು ಇದೆ. ಹಾಗಾಗಿ ಚಿತ್ರದಲ್ಲೇನೋ ವಿಶೇಷತೆ ಇದೆ ಅನ್ನಿಸುತ್ತೆ. ಆಗಸ್ಟ್ 16ಕ್ಕೆ ಫಸ್ಟ್ ಲುಕ್ ರಿಲೀಸ್ ಆಗುತ್ತೆ ಎಂದಿರುವ ಚಿತ್ರತಂಡ ‘ನೀವು ಹಿಂದೆಂದೂ ನೋಡಿರದ ಗ್ರೇಟೆಸ್ಟ್ ಶೋ’ ಎಂದು ಬರೆದುಕೊಂಡು, ಪೋಸ್ಟರ್ ಹಂಚಿಕೊಂಡಿದೆ.

    ಇದನ್ನೂ ಓದಿ :ದರ್ಶನ್ ಅಭಿಮಾನಿಗಳ ಹುಚ್ಚುತನ; ಮಗನಿಗೆ ಖೈದಿ ರೀತಿ ಡ್ರೆಸ್ ಹಾಕಿ ಫೋಟೋಶೂಟ್  

    ಅಂದಹಾಗೆ, ಪುಷ್ಪಕ ವಿಮಾನ, ಇನ್ಸ್‌ಪೆಕ್ಟರ್ ವಿಕ್ರಮ್, ಮಾನ್ಸೂನ್ ರಾಗದಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ವಿಖ್ಯಾತ್ ಎ ಆರ್ ಈ ಚಿತ್ರದ ಮೂಲಕ ನಿರ್ದೇಶಕನ ಟೋಪಿ ಹಾಕಿದ್ದಾರೆ.

    Continue Reading

    LATEST NEWS

    ಡೋರ್‌ ಲಾಕ್ ತುಂಡಾಗಿ ಬಸ್ಸಿನಿಂದ ಹೊರಬಿದ್ದ ಮಹಿಳೆ

    Published

    on

    ಚಿಕ್ಕಮಗಳೂರು: ಸರಕಾರಿ ಬಸ್ಸು ಹತ್ತುವ ವೇಳೆ ಡೋರ್ ಲಾಕ್ ತುಂಡಾದ ಪರಿಣಾಮ ಮಹಿಳೆ ಬಸ್ಸಿನಿಂದ ಹೊರಗೆ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ಐದಳ್ಳಿ ಗ್ರಾಮದ ಬಳಿ ಮಂಗಳವಾರ ನಡೆದಿದೆ.

    ಐದಳ್ಳಿ ಗ್ರಾಮದ ಶಕುಂತಲಮ್ಮ ಎಂಬ ಮಹಿಳೆಗೆ ಗಂಭೀರ ಗಾಯವಾಗಿದ್ದು ಅವರನ್ನು ಅಲ್ದೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಬಸ್ಸು ಚಿಕ್ಕಮಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದು ಶಕುಂತಳಮ್ಮ ಬಾಳೆಹೊನ್ನೂರಿಗೆ ತೆರಳಲು ಬಸ್ ಹತ್ತುವಾಗ ಬಸ್ಸಿನ ಬಾಗಿಲಿನ ಲಾಕ್ ತುಂಡಾಗಿದೆ. ಬಾಗಿಲು ಹಿಡಿದ್ದಿದ್ದ ಮಹಿಳೆ ಏಕಾಏಕಿ ಬಸ್ಸಿನಿಂದ ಹೊರಗೆ ಬಿದ್ದು ಗಾಯಗೊಂಡಿದ್ದಾರೆ.

    ಬಸ್ಸಿನ ಸರಿಯಾದ ನಿರ್ವಹಣೆ ಇಲ್ಲದೆ ಈ ರೀತಿ ಆಗಿದೆ ಎಂದು ಪ್ರಯಾಣಿಕರು ಹೇಳಿಕೊಂಡಿದ್ದು ಘಟನೆ ಸಂಬಂಧ ಅಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    Trending