Connect with us

    LATEST NEWS

    ಮುಸ್ಲಿಮರಿಗೆ ಗೋಮಾಂಸ ನಿಷೇಧ: ಧರ್ಮಗುರು ಮೌಲಾನಾ ಶಹಾಬುದ್ದೀನ್‌ ಹೇಳಿಕೆ

    Published

    on

    ಮಂಗಳೂರು/ಅಸ್ಸಾಂ: ಹೋಟೆಲ್‌ ಮತ್ತು ಕಾರ್ಯಕ್ರಮದ ಸ್ಥಳಗಳಲ್ಲಿ ಗೋಮಾಂಸ ನಿಷೇಧಿಸಿ ಅಸ್ಸಾಂ ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ಇದರ ಬೆನ್ನಲ್ಲೇ, ಮುಸ್ಲಿಂ ಧರ್ಮಗುರು ಮೌಲಾನಾ ಶಹಾಬುದ್ದೀನ್‌ ರಿಜ್ವಿ ಬರೇಲ್ವಿ , ಅಸ್ಸಾಂ ರಾಜ್ಯದ ಮುಸ್ಲಿಮರು ಗೋಮಾಂಸ ಸೇವನೆ ನಿಲ್ಲಿಸಬೇಕು ಎಂದು ಸಲಹೆ ನೀಡಿದ್ದಾರೆ.

    ಅಸ್ಸಾಂ ಸಿಎಂ ಶರ್ಮಾ ರಾಜ್ಯದ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸವನ್ನು ಬಡಿಸುವುದು ಮತ್ತು ಸೇವಿಸುವುದನ್ನು ನಿಷೇಧಿಸುವುದಾಗಿ ಘೋಷಿಸಿದ್ದಾರೆ. ಗೋಮಾಂಸ ಸೇವನೆಗೆ ಸಂಬಂಧಿಸಿದಂತೆ ಈಗಿರುವ ಕಾನೂನಿಗೆ ತಿದ್ದುಪಡಿ ತಂದು ಹೊಸ ನಿಯಮಗಳನ್ನು ಅಳವಡಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಒಟ್ಟಿನಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮುಸ್ಲಿಂ ವಿರೋಧಿ ಮನಸ್ಥಿತಿ ಹೊಂದಿದ್ದಾರೆ. ಯಾವಾಗಲೂ ಮುಸ್ಲಿಮರ ವಿರುದ್ಧ ಮಾತನಾಡುತ್ತಾರೆ. ಅವರ ಚಿಂತನೆಯು ಮುಸ್ಲಿಂ ವಿರೋಧಿಯಾಗಿದೆ ಎಂದು ಮುಸ್ಲಿಂ ಧರ್ಮಗುರು ಟೀಕಿಸಿದ್ದಾರೆ.

    ಆದರೆ, ಗೋಮಾಂಸ ನಿಷೇಧವು ಮುಸ್ಲಿಂ ಸಮುದಾಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇಸ್ಲಾಂ ಗೋಮಾಂಸ ಸೇವನೆಯನ್ನು ಕಡ್ಡಾಯ ಮಾಡುವುದಿಲ್ಲ. ಜನರು ವೈಯಕ್ತಿಕ ಆದ್ಯತೆಗಳ ಆಧಾರದ ಮೇಲೆ ತಿನ್ನುತ್ತಾರೆ ಮತ್ತು ಕುಡಿಯುತ್ತಾರೆ ಎಂದು ಧರ್ಮಗುರು ಸ್ಪಷ್ಟಪಡಿಸಿದ್ದಾರೆ. ಮುಸ್ಲಿಮರು ಗೋಮಾಂಸವಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ನಂಬಿರುವಂತಿದೆ. ಇದೀಗ ಅಸ್ಸಾಂನಲ್ಲಿರುವ ಮುಸ್ಲಿಮರು ಗೋಮಾಂಸ ತಿನ್ನದೆ ಬದುಕುವಂತೆ ನಾನು ಕರೆ ನೀಡುತ್ತೇನೆ. ಜೀವನ ಮತ್ತು ಸಾವು ದೇವರ ಕೈಯಲ್ಲಿದೆ ಎಂದು ಹೇಳಿದ್ದಾರೆ.

    DAKSHINA KANNADA

    ಮಂಗಳೂರು : ಮೂರು ಮಕ್ಕಳ ತಂದೆಜೊತೆ 19ರ ಯುವತಿ ಪರಾರಿ !!

    Published

    on

    ಮಂಗಳೂರು: ನರ್ಸಿಂಗ್ ಕಲಿಯುತ್ತಿರುವ 19ರ ಹರೆಯದ ವಿದ್ಯಾರ್ಥಿನಿಯೊಬ್ಬಳು ಹೆಂಡತಿ ಮತ್ತು ಮೂವರು ಮಕ್ಕಳಿರುವ ನಾಟೆಕಲ್ಲಿನ ವಿವಾಹಿತನ ಜೊತೆ ಪರಾರಿಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದ್ದು, ಸ್ಥಳೀಯರು ಇದರ ಬಗ್ಗೆ ಆಶ್ವರ್ಯ ವ್ಯಕ್ತಪಡಿಸಿದ್ದಾರೆ.

    ಈಗಿನ ಕಾಲದಲ್ಲಿ ಪ್ರೀತಿ- ಪ್ರೇಮ ಎಲ್ಲವೂ ಒಂದು ಅರ್ಥವಿಲ್ಲದ ಬಂಧವಾಗಿಬಿಟ್ಟಿದೆ. ಯಾವುದೋ ಆಮಿಷಕ್ಕೋ, ಆಕರ್ಷಣೆಗೋ ಬಲಿಯಾಗಿ ಹೆಣ್ಮಕ್ಕಳು ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಣ್ಣ ಪ್ರಾಯದ ತರುಣಿಯರು ಮುದುಕನನ್ನು ವಿವಾಹವಾಗೋದು, ಆಂಟಿಯರು ಶಾಲೆ ಕಲಿಯುವ ಬಾಲಕರೊಂದಿಗೆ ಓಡಿ ಹೋಗುವುದು ಇಂತಹ ಚಿತ್ರವಿಚಿತ್ರ ಸನ್ನಿವೇಶಗಳನ್ನು ಸಮಾಜದಲ್ಲಿ ನೋಡುತ್ತಲೇ ಇರುತ್ತೇವೆ. ಕಾ*ಮದಾಹಕ್ಕೋ, ಹಣದ ಆಸೆಗೋ ಇಂತಹ ನಿರ್ಧಾರಗಳನ್ನು ತೆಗೆದುಕೊಂಡು ತಮ್ಮ ಭವಿಷ್ಯವನ್ನು ತಾವೇ ನರಕಕ್ಕೆ ದೂಡಿಕೊಳ್ಳುತ್ತಿದ್ದಾರೆ.

    ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಪರಾರಿಯಾದ ಜೋಡಿ ಯುವಕನ ಸಂಬಂಧಿಕರ ಮನೆಯಲ್ಲಿರುವುದನ್ನು ಪತ್ತೆಹಚ್ಚಿದ್ದಾರೆ. ಇಬ್ಬರನ್ನೂ ಠಾಣೆಗೆ ಕರೆತಂದು ವಿಚಾರಿಸಿದಾಗ ಅಲ್ಲಿ ಯುವತಿ ಈತನೊಂದಿಗೇ ಹೋಗುವುದಾಗಿ ಪಟ್ಟು ಹಿಡಿದಿದ್ದಾಳೆ. ಅದಲ್ಲದೆ ಆಕೆಯ ಹೆತ್ತವರನ್ನು ಠಾಣೆಗೆ ಕರೆಸಿ ಮಾತನಾಡಿಸಿದಾಗ ಕೂಡಾ ಆಕೆ ಅದೇ ನಿರ್ಧಾರವನ್ನು ವ್ಯಕ್ತಪಡಿಸಿದ್ದಾಳೆ. ಆಕೆಯ ಪ್ರಿಯತಮನನ್ನು ವಿಚಾರಿಸಿದಾಗ ಕೂಡಾ ತಾನು ಪತ್ನಿಯ ಒಪ್ಪಿಗೆಯಿಂದ ಯುವತಿಯನ್ನು ಮದ್ವೆಯಾಗುತ್ತೇನೆ ಎಂದು ಹೇಳಿದ್ದಾನೆ.

    ಇನ್ನು ಯುವತಿ ಆಕೆಯ ಪ್ರಿಯಕರನೊಂದಿಗೆ ತೆರಳಲು ‘ನಮ್ಮದೇನೂ ಅಭ್ಯಂತರವಿಲ್ಲ’ ಎಂದು ಕುಟುಂಬದವರು ಪೊಲೀಸರಲ್ಲಿ ಹೇಳಿಕೆಯನ್ನು ನೀಡಿದ್ದಾರೆ. ಆದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಾರೆಯಾಗಿ ಈ ವಿಚಿತ್ರ ಘಟನೆ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ‌.

    Continue Reading

    BIG BOSS

    ಆಟಕ್ಕೆ ಅವಕಾಶ ಸಿಗುತ್ತಿಲ್ಲ ಎಂದು ಸಣ್ಣ ಮಕ್ಕಳಂತೆ ಕಣ್ಣೀರು ಹಾಕಿದ ಚೈತ್ರಾ !

    Published

    on

    ಮಂಗಳೂರು: ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ರೇಸ್ ಸ್ಪರ್ಧೆ ಜೋರಾಗಿದೆ. ಹನುಮಂತ ಹಾಗೂ ಗೌತಮಿ ನೇತೃತ್ವದಲ್ಲಿ ಎರಡು ತಂಡಗಳಾಗಿ ವಿಭಾಗಿಸಿದ್ದು, ನಾಯಕನ ಆಯ್ಕೆಯ ಪ್ರಕ್ರಿಯೆಗಳು ಜಾರಿಯಲ್ಲಿವೆ.

    ಈ ಮಧ್ಯೆ ಚೈತ್ರಾ ಕುಂದಾಪುರ ಅವರಿಗೆ ಇತ್ತೀಚೆಗೆ ಆಟ ಆಡೋಕೆ ಅವಕಾಶ ಸಿಗುತ್ತಿರಲಿಲ್ಲ. ಅವರನ್ನು ಕೇವಲ ಉಸ್ತುವಾರಿಗೆ ಸೀಮಿತ ಮಾಡಲಾಗುತ್ತಿತ್ತು. ಈ ವಾರವು ಅದು ಮುಂದುವರಿದಿದೆ. ಈ ಮಧ್ಯೆ ಅವಕಾಶಕ್ಕಾಗಿ ಚೈತ್ರಾ ಸಣ್ಣ ಮಕ್ಕಳಂತೆ ಕಣ್ಣಿರು ಇಟ್ಟಿದ್ದಾರೆ.

    ನಿನ್ನೆ ನಡೆದ ಒಂದು ಪಂದ್ಯದಲ್ಲಿ ಗೌತಮಿ ತಂಡದ ಪರ ಚೈತ್ರಾ ಹಾಗೂ ಮಂಜು ಆಡಿದ್ದರು. ಚೈತ್ರಾ ಹಾಗೂ ಮಂಜು ಜೋಡಿ ಸೋಲನ್ನು ಕಂಡಿದೆ. ನಂತರದ ಗೇಮ್ ಗೆ ಚೈತ್ರಾ ಅವರನ್ನು ಉಸ್ತುವಾರಿಯಾಗಿ ನೇಮಕ ಮಾಡಿದ್ದರು. ಹೀಗಾಗಿ ಕ್ಯಾಪ್ಟನ್ ಗೌತಮಿ ತಂಡದಲ್ಲಿರುವ ಚೈತ್ರಾ ಕುಂದಾಪುರಗೆ ಆಡಲು ಅವಕಾಶ ಸಿಗುತ್ತಿಲ್ಲ ಎಂಬುದು ಆರೋಪವಾಗಿದೆ.

    ಇದನ್ನೂ ಓದಿ: ಇಂದಿಗೂ ಅಚ್ಚಳಿಯದೇ ಉಳಿದಿದೆ ವಿನೋದ್ ಕಾಂಬ್ಳಿಯವರ ಈ ದಾಖಲೆ !

    ಇದಕ್ಕೆ ಬೆಸರಗೊಂಡ ಚೈತ್ರಾ, ನನಗೆ ಆಡೊಕೆ ಕೊಡಲ್ಲ. ಉಸ್ತುವಾರಿ ಮಾಡಲ್ಲ ಅಂತಿನಿ, ನನಗೆ ಅದನ್ನೇ ಕೊಡ್ತಾರೆ. ಕಳೆದ ವಾರ ಎಲಿಮಿನೇಟ್ ಆಗಿ ವಾಪಸ್ ಬಂದಿದ್ದೀನಿ. ಇಡೀ ವಾರ ಆಟ ಆಡಿಲ್ಲ. ಆಡ್ತೀನಿ ಅಂದರೆ ಆಡೊಕೆ ಕೊಡಲ್ಲ. ಆಮೇಲೆ ಆಟಕ್ಕೆ ಉಂಟು, ಲೆಕ್ಕಕ್ಕೆ ಇಲ್ಲ ಅಂತಾರೆ ಎನ್ನುತ್ತ ಕಣ್ಣೀರು ಇಟ್ಟಿದ್ದಾರೆ.

    ಆದರೆ ನಂತರ ನಡೆದ ಟಾಸ್ಕ್ ನಲ್ಲೂ ಮತ್ತೆ ಗೌತಮಿ ತಂಡ ಸೋಲನ್ನು ಕಂಡಿದೆ. ಹೀಗಾಗಿ ಬಿಗ್ ಬಾಸ್, ನಿಮ್ಮ ತಂಡದಿಂದ ಒಬ್ಬರನ್ನು ಕ್ಯಾಪ್ಟನ್ಸಿ ರೇಸ್ ನಿಂದ ಹೊರಗೆ ಇಡಬೇಕು ಎನ್ನುತ್ತಾರೆ. ಆಗ ಗೌತಮಿ ಚೈತ್ರಾ ಹೆಸರನ್ನು ತೆಗೆದುಕೊಂಡಿದ್ದಾರೆ. ಇದು ಚೈತ್ರಾ ಅವರಿಗೆ ಮತ್ತಷ್ಟು ನೋವು ಉಂಟುಮಾಡಿದೆ.

    ಹೀಗಾಗಿ ಇಂದಿನ ಸಂಚಿಕೆಯಲ್ಲಿ ಯಾವ ರೀತಿಯ ಹೈಡ್ರಾಮಗಳು ನಡೆಯುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

    Continue Reading

    bengaluru

    ಡೆ*ತ್‌*ನೋಟ್‌ನಲ್ಲಿ ಜಡ್ಜ್‌ ಹೆಸರು; ವಿಚ್ಛೇದನ ಪರಿಹಾರಕ್ಕೆ ಸುಪ್ರೀಂನಿಂದ ಹೊಸ ಸೂತ್ರ..!

    Published

    on

    ಮಂಗಳೂರು/ಬೆಂಗಳೂರು: ಬೆಂಗಳೂರು ಮೂಲದ ಟೆಕ್ಕಿ ಅತುಲ್ ಸುಭಾಷ್ (34) ಆ*ತ್ಮಹತ್ಯೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಯ ನಡುವೆ, ಜೀವನಾಂಶದ ಮೊತ್ತವನ್ನು ನಿರ್ಧರಿಸಲು ಸುಪ್ರೀಂ ಕೋರ್ಟ್ ಎಂಟು ಅಂಶಗಳ ಸೂತ್ರವನ್ನು ಹಾಕಿದೆ. ಹಣಕ್ಕಾಗಿ ಪತ್ನಿ ಹಾಗೂ ಅತ್ತೆಯಂದಿರ ಕಿ*ರುಕುಳ ನೀಡಿದ್ದು, ಸುಭಾಷ್ ಆ*ತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಅದಲ್ಲದೇ, ಬೇರೆ ಕಾರಣಗಳೂ ಡೆ*ತ್‌ನೋಟ್‌ನಲ್ಲಿ ಪತ್ತೆಯಾಗಿದೆ.

    ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ, ಅತುಲ್ ತನ್ನ ವಿಚ್ಛೇದಿತ ಪತ್ನಿ ನಿಕಿತಾ ಸಿಂಘಾನಿಯಾ ಮತ್ತು ಆಕೆಯ ಕುಟುಂಬವನ್ನು ಸು*ಲಿಗೆ ಮತ್ತು ಕಿ*ರುಕುಳವನ್ನು ಆರೋಪಿಸಿ 80 ನಿಮಿಷಗಳ ವೀಡಿಯೊವನ್ನು ರೆಕಾರ್ಡ್ ಮಾಡಿದ್ದು ವ್ಯರ್ಥವಾಗಿತ್ತು. ಹಾಗಾಗಿ ನ್ಯಾಯ ವ್ಯವಸ್ಥೆಯನ್ನು ಟೀಕಿಸಿ 24 ಪುಟಗಳ ಡೆ*ತ್‌ನೋಟ್‌ ಬರೆದಿದ್ದಾನೆ. ಮೇಲ್ಮನವಿ (ಪತಿ) ಮತ್ತು ಪ್ರತಿವಾದಿ (ಪತ್ನಿ) ಆರು ವರ್ಷಗಳ ಕಾಲ ಸಂಸಾರ ನಡೆಸಿ, ಸುಮಾರು 20 ವರ್ಷ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ವಿಚ್ಛೇದನ ಪಡೆಯುವ ಸಮಯ ನ್ಯಾಯಾಲಯದ ನ್ಯಾಯಮೂರ್ತಿಗಳು “ನನ್ನ ಮಾತನ್ನು ಕೇಳಿ ನಗೆ ಬೀರಿದ್ದಾರೆ” ಎಂಬ ಅಂಶವನ್ನು ಸುಭಾಷ್ ಡೆತ್‌ನೋಟ್‌ನಲ್ಲಿ ಬರೆದಿದ್ದು, ಅವನ ಆತ್ಮಹತ್ಯೆಗೆ ಇದೂ ಕೂಡ ಕಾರಣವಾಗಿರುವಂತೆ ಕಾಣುತ್ತಿದೆ. ಹಾಗಾಗಿ ಟೆಕ್ಕಿ ಸಾವಿನ ಬಳಿಕ ನ್ಯಾಯಲಯವು, ಜೀವನಾಂಶವನ್ನು ನಿರ್ಧರಿಸುವಾಗ ಪರಿಗಣಿಸಬೇಕಾದ ಎಂಟು ಅಂಶಗಳ ಬಗೆಗೆ ತಿಳಿಸಿದೆ. ಅವುಗಳು ಯಾವುದು ಎಂಬ ಮಾಹಿತಿ ಇಲ್ಲಿದೆ.

    •ಪಕ್ಷಗಳ ಸ್ಥಿತಿ, ಸಾಮಾಜಿಕ ಮತ್ತು ಹಣಕಾಸು
    • ಪತ್ನಿ ಮತ್ತು ಅವಲಂಬಿತ ಮಕ್ಕಳ ಸಮಂಜಸವಾದ ಅಗತ್ಯತೆಗಳು
    •ಪಕ್ಷಗಳ ವೈಯಕ್ತಿಕ ಅರ್ಹತೆಗಳು ಮತ್ತು ಉದ್ಯೋಗ ಸ್ಥಿತಿಗಳು
    •ಸ್ವತಂತ್ರ ಆದಾಯ ಅಥವಾ ಅರ್ಜಿದಾರರ ಒಡೆತನದ ಸ್ವತ್ತುಗಳು
    •ವೈವಾಹಿಕ ಮನೆಯಲ್ಲಿ ಹೆಂಡತಿ ಆನಂದಿಸುವ ಜೀವನದ ಗುಣಮಟ್ಟ
    •ಕುಟುಂಬದ ಜವಾಬ್ದಾರಿಗಳಿಗಾಗಿ ಮಾಡಿದ ಯಾವುದೇ ಉದ್ಯೋಗ ತ್ಯಾಗ
    •ಕೆಲಸ ಮಾಡದ ಹೆಂಡತಿಗೆ ಸಮಂಜಸವಾದ ದಾವೆ ವೆಚ್ಚಗಳು
    •ಪತಿಯ ಆರ್ಥಿಕ ಸಾಮರ್ಥ್ಯ, ಅವರ ಆದಾಯ, ನಿರ್ವಹಣೆ ಹೊಣೆಗಾರಿಕೆಗಳು ಮತ್ತು ಹೊಣೆಗಾರಿಕೆಗಳು

    “ಶಾಶ್ವತ ಜೀವನಾಂಶದ ಮೊತ್ತವನ್ನು ನಿರ್ಧರಿಸಲು ಮಾರ್ಗಸೂಚಿಗಳನ್ನು ಅನುಸರಿಸಲು ಇತರ ಎಲ್ಲಾ ನ್ಯಾಯಾಲಯಗಳಿಗೆ ಉನ್ನತ ನ್ಯಾಯಾಲಯವು ಸಲಹೆ ನೀಡಿದಾಗ, ಮೇಲೆ ತಿಳಿಸಲಾದ ಅಂಶಗಳು ‘ಸ್ಟ್ರೈಟ್ ಜಾಕೆಟ್’ ಸೂತ್ರವನ್ನು ಹಾಕದೆ ಶಾಶ್ವತ ಜೀವನಾಂಶವನ್ನು ನಿರ್ಧರಿಸುವಾಗ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಬೇಕು. ಪತಿಗೆ ದಂಡ ವಿಧಿಸದ ರೀತಿಯಲ್ಲಿ ನಿರ್ಧರಿಸಬೇಕು ಆದರೆ ಹೆಂಡತಿಗೆ ಯೋಗ್ಯವಾದ ಜೀವನ ಮಟ್ಟವನ್ನು ಖಾತ್ರಿಪಡಿಸಬೇಕು” ಎಂದು ನ್ಯಾಯಾಲಯವು ತಿಳಿಸಿದೆ.

    ಅತುಲ್ ಅವರ ಸಹೋದರ ಬಿಕಾಸ್ ಕುಮಾರ್ ಅವರು ನೀಡಿದ ದೂರಿನ ಆಧಾರದ ಮೇಲೆ ಅತುಲ್ ಅವರ ಪತ್ನಿ ನಿಕಿತಾ ಸಿಂಘಾನಿಯಾ ಸೇರಿದಂತೆ ನಾಲ್ವರ ವಿರುದ್ಧ ಕಲಂ 108 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು 3 (5) (ಅಪರಾಧ ಕೃತ್ಯವಾದಾಗ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ (BNS) ಒಂದು ಸಾಮಾನ್ಯ ಉದ್ದೇಶದ ಮುಂದುವರಿಕೆಯಲ್ಲಿ ಬಹು ವ್ಯಕ್ತಿಗಳಿಂದ ನಡೆಸಲ್ಪಡುತ್ತದೆ.

    ಉತ್ತರ ಪ್ರದೇಶದಲ್ಲಿ ಅತುಲ್ ವಿರುದ್ಧ ಪತ್ನಿ ಹಲವಾರು ಪ್ರಕರಣಗಳನ್ನು ದಾಖಲಿಸಿದ್ದರಿಂದ ವೈವಾಹಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆ*ತ್ಮಹತ್ಯೆಯಿಂದ ಸಾಯುವ ಮೊದಲು, ಅವರು ತಮ್ಮ ಭಾಗವಾಗಿದ್ದ NGO ದ ವಾಟ್ಸಾಪ್ ಗುಂಪಿನಲ್ಲಿ ಟಿಪ್ಪಣಿಯನ್ನು ಹಂಚಿಕೊಂಡಿದ್ದಾರೆ. ಅವರು ಅದನ್ನು ಇಮೇಲ್ ಮೂಲಕ ಇತರ ಹಲವರಿಗೆ ಕಳುಹಿಸಿದ್ದಾರೆ. ಈ ಪ್ರಕರಣದ ಕುರಿತು ಇನ್ನೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    Trending