Connect with us

    BIG BOSS

    BBK11: ಎಲಿಮಿನೇಷನ್‌ ವಿಚಾರದಲ್ಲಿ ಬಿಗ್‌ ಟ್ವಿಸ್ಟ್..‌ ಈ ವಾರ ಎಲಿಮಿನೇಷನ್‌ ಇರುತ್ತಾ, ಇಲ್ವೋ..?

    Published

    on

    ಬೆಂಗಳೂರು: ಬಿಗ್ ಬಾಸ್‌ ಮನೆಯಿಂದ ಇಂದು ಯಾರು ಆಚೆ ಬರಲಿದ್ದಾರೆ ಎನ್ನುವ ಕುತೂಹಲ ಪ್ರೇಕ್ಷಕರಿಗಿದೆ.

    ವಾರದ ಕಥೆಯಲ್ಲಿ ಕಿಚ್ಚ ಸುದೀಪ್‌ ಈ ವಾರ ನಡೆದ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಯಾರು ಯಾರು ಏನೇನು ತಪ್ಪು ಮಾಡಿದ್ದಾರೆ. ಮನೆಮಂದಿ ಎಡವಿದ್ದೆಲ್ಲಿ ಹೀಗೆ ಕಿಚ್ಚ ದೊಡ್ಮನೆಗೆ ಎಚ್ಚರಿಕೆ ಜತೆ ಆಟದ ಗಂಭೀರತೆಯ ಬಗ್ಗೆ ಮಾತನಾಡಿದ್ದಾರೆ. ಈ ವಾರ ದೊಡ್ಮನೆಯಿಂದ ಆಚೆ ಹೋಗಲು 7 ಮಂದಿ ನಾಮಿನೇಟ್‌ ಆಗಿದ್ದರು. ಭವ್ಯ, ಮೋಕ್ಷಿತಾ, ಚೈತ್ರಾ, ಧರ್ಮ, ತ್ರಿವಿಕ್ರಮ್, ಧನರಾಜ್, ಸುರೇಶ್ ನಾಮಿನೇಟ್ ಆಗಿದ್ದರು.

    ಈ ಪೈಕಿ ಮೋಕ್ಷಿತಾ, ತ್ರಿವಿಕ್ರಮ್‌ ಅವರು ನಿನ್ನೆಯ ಸಂಚಿಕೆಯಲ್ಲಿ ಸೇಫ್‌ ಆಗಿದ್ದಾರೆ. ಇನ್ನುಳಿದವರ ಪೈಕಿ ಯಾರು ಆಚೆ ಬರಲಿದ್ದಾರೆ ಎನ್ನುವುದರ ಬಗ್ಗೆ ವೀಕ್ಷಕರು ಚರ್ಚೆ ಆರಂಭಿಸಿದ್ದಾರೆ. ಕೆಲವರು ಭವ್ಯ, ಗೌತಮಿ ಆಚೆ ಬರಬೇಕೆಂದು ಕಮೆಂಟ್‌ ಮಾಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.

    ಈ ವಾರ ಎಲಿಮಿನೇಷನ್‌ ಇರುತ್ತಾ, ಇಲ್ವೋ..?

    ಈ ವಾರ ವೋಟಿಂಗ್‌ ಲೈನ್ ತೆರೆದು ಇರುವುದಿಲ್ಲವೆಂದು ಬಿಗ್‌ ಬಾಸ್‌ ಕಾರ್ಯಕ್ರಮದ ವೇಳೆ ಟಿವಿಯಲ್ಲಿ‌ ಹಾಕಲಾಗಿತ್ತು. ಆ ನಿಟ್ಟಿನಲ್ಲಿ ಈ ವಾರ ಯಾವುದೇ ಎಲಿಮಿನೇಷನ್‌ ಇರುವುದಿಲ್ಲವೆಂದು ಹೇಳಲಾಗುತ್ತಿದೆ.

    ಮುಂದಿನ ವಾರ ದೊಡ್ಮನೆಯಿಂದ ಮಿಡ್‌ ವೀಕ್‌ ಎಲಿಮಿನೇಷನ್‌ ಅಥವಾ ಡಬಲ್‌ ಎಲಿಮಿನೇಷನ್‌ ಇದ್ದರೆ ಅಚ್ಚರಿಪಡಬೇಕಿಲ್ಲ. ಯಾವುದಕ್ಕೂ ಮುಂದಿನ ಎಲಿಮಿನೇಷನ್‌ ವರೆಗೆ ಕಾದು ನೋಡಬೇಕಿದೆ.

    BIG BOSS

    ಬಿಗ್‌ಬಾಸ್‌ ಮನೆಯಿಂದ ದಿಢೀರ್‌ ಹೊರ ಬಂದ ಚೈತ್ರಾ ಕುಂದಾಪುರ

    Published

    on

    ಬಿಗ್​​ಬಾಸ್ 11 ಮನೆಯೊಳಗೆ ಸಖತ್ ಸೌಂಡ್ ಮಾಡುತ್ತಿರುವ ಸ್ಪರ್ಧಿ ಚೈತ್ರಾ ಕುಂದಾಪುರ ಅವರು ಬಿಗ್​ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಶಾಕಿಂಗ್ ಬೆಳವಣಿಗೆಯಲ್ಲಿ ಚೈತ್ರಾ ಕುಂದಾಪುರ ಅವರು ಬಿಗ್​ಬಾಸ್ ಮನೆಯಿಂದ ಹೊರಗೆ ಬಂದಿರುವ ಘಟನೆ ನಡೆದಿದೆ. ನಟಿ ಶೋಭಾ ಶೆಟ್ಟಿ ಅವರು ದೊಡ್ಮನೆಯಿಂದ ಹೊರ ಬಂದ ಬೆನ್ನಲ್ಲೇ ಈ ಘಟನೆ ನಡೆದಿದೆ.

    ಚೈತ್ರಾ ಕುಂದಾಪುರ ಅವರು ಕೇಸ್ ಸಂಬಂಧವಾಗಿ ವಿಚಾರಣೆಗೆ ಹಾಜರಾಗಲು ಬಿಗ್​ಬಾಸ್ ಮನೆಯಿಂದ ಹೊರಗೆ ಬಂದಿದ್ದರು. ಈಗ ಚೈತ್ರಾ ಕುಂದಾಪುರ ಅವರ ಕೇಸ್ ವಿಚಾರಣೆಯನ್ನು ಜನವರಿ 13ಕ್ಕೆ ಮುಂದೂಡಲಾಗಿದ್ದು ಅವರು ಮತ್ತೆ ಬಿಗ್​ಬಾಸ್ ಮನೆಗೆ ಹೋಗಲಿದ್ದಾರೆ ಎನ್ನಲಾಗಿದೆ.

    Continue Reading

    BIG BOSS

    ದೊಡ್ಮನೆಯಿಂದ ಹೊರಬಂದು ಸುದೀಪ್‌ಗೆ ಸುದೀರ್ಘ ಪತ್ರ ಬರೆದ ಶೋಭಾ ಶೆಟ್ಟಿ

    Published

    on

    ಕನ್ನಡದ ನಟಿ ಶೋಭಾ ಶೆಟ್ಟಿ ಅವರು ‘ಬಿಗ್ ಬಾಸ್ ಕನ್ನಡ 11’ರ ಆಟಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ತಮ್ಮ ಸ್ವತಃ ನಿರ್ಧಾರದಿಂದ ದೊಡ್ಮನೆಯಿಂದ ನಟಿ ಹೊರಬಂದಿದ್ದಾರೆ. ಬಿಗ್ ಬಾಸ್‌ನಿಂದ ಹೊರಬಂದು ಸುದೀಪ್‌ಗೆ ನಟಿ ಸುದೀರ್ಘವಾಗಿ ಪತ್ರ ಬರೆದಿದ್ದಾರೆ. ಇದೀಗ ನಟಿಯ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

    ನನ್ನ ಪ್ರೀತಿಯ ಕನ್ನಡಿಗರೇ, ನನ್ನ ಬಿಗ್ ಬಾಸ್ ಪಯಣ ಮುಗಿದಿದೆ. ಆಟದ ಮೇಲೆ ಗಮನ ಕೊಡಲು ಆರೋಗ್ಯ ಸಹಕರಿಸುತ್ತಿಲ್ಲ, ಮುನ್ನಡೆಯುವ ಇಚ್ಛೆಯಿದ್ದರೂ ದೇಹ ಮುಂದುವರಿಯಲು ಬಿಡುತ್ತಿಲ್ಲ. ಯಾರನ್ನೂ ಯಾವುದನ್ನೂ ನಾನು ಹಗುರವಾಗಿ ತೆಗೆದುಕೊಂಡಿಲ್ಲ, ಜೀವನದ ಜವಬ್ದಾರಿಗಳಿಗೆ ಆರೋಗ್ಯವನ್ನು ಕಾಪಾಡಿಕೊಂಡು ಮುನ್ನಡೆಯುವ ಸಲುವಾಗಿ ನನ್ನ ಈ ನಿರ್ಧಾರ. ಇದೆಲ್ಲದರ ಮಧ್ಯೆ ನೀವು ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಅಭಾರಿಯಾಗಿದ್ದೀನಿ, ತಿಳಿದೋ ತಿಳಿಯದೆಯೋ ನನ್ನಿಂದ ಯಾರಿಗಾದರೂ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದಿದ್ದಾರೆ.

    ನನ್ನ ಜನರಿಗೆ, ಕಲರ್ಸ್ ಕನ್ನಡ ತಂಡಕ್ಕೆ, ಹಾಗು ನನ್ನ ಪ್ರೀತಿಯ ಕಿಚ್ಚ ಸುದೀಪ್ ಸರ್ ನಿಮಗೆ ಧನ್ಯವಾದಗಳು. ಹೊಸ ಹುರುಪಿನೊಂದಿಗೆ ನಿಮ್ಮನ್ನು ರಂಜಿಸಲು, ನಿಮ್ಮ ಪ್ರೀತಿಯನ್ನು ಮತ್ತೆ ಪಡೆಯಲು ಮತ್ತೊಂದು ರೂಪದಲ್ಲಿ ಮತ್ತೆ ನಿಮ್ಮ ಮುಂದೆ ಖಂಡಿತಾ ನಾನು ಬರುವೆ. ಇಂತಿ ಪ್ರೀತಿಯ, ಶೋಭಾ ಶೆಟ್ಟಿ ಎಂದು ಸುದೀರ್ಘ ಪತ್ರ ಬರೆದಿದ್ದಾರೆ. ಇನ್ನೂ ಬಹುತೇಕ ಅಭಿಮಾನಿಗಳಿಗೆ ನಟಿ ನಿರ್ಧಾರ ನೋವುಂಟು ಮಾಡಿದೆ. ಬಿಗ್ ಬಾಸ್ ಬಿಟ್ಟು ಬರಬಾರದಿತ್ತು ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.

    ತೆಲುಗಿನ ಬಿಗ್‌ಬಾಸ್ ಸೀಸನ್ 7ರಲ್ಲಿ ಸಖತ್ ಸೌಂಡು ಮಾಡಿದ್ದ ಶೋಭಾ ಶೆಟ್ಟಿ ಕೊನೆಯವರೆಗೂ ಪ್ರೀತಿ ಗಳಿಸಿ ಉಳಿದುಕೊಂಡಿದ್ದರು. ಆದರೆ ಕನ್ನಡದಲ್ಲಿ ಅವರ ಆಟ ನಡೆಯಲೇ ಇಲ್ಲ. ತೆಲುಗಿನ ವೀಕ್ಷಕರ ಅಭಿರುಚಿ ಮತ್ತು ಕನ್ನಡ ವೀಕ್ಷಕರ ಅಭಿರುಚಿ ವಿಭಿನ್ನವಾಗಿದೆ ಎಂದು ಶೋಭಾ ಅವರ ಮನಸ್ಸಿಗೆ ಅನಿಸಿತೋ ಗೊತ್ತಿಲ್ಲ. ಆದರೆ ಅನಾರೋಗ್ಯದ ಕಾರಣವನ್ನು ನೀಡಿ, ಶೋಭಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ.

    Continue Reading

    BIG BOSS

    BBK11: ಶೋಭಾ ಶೆಟ್ಟಿ ನಿರ್ಧಾರಕ್ಕೆ ಕಿಚ್ಚ ಗರಂ; ವೋಟ್ ಮಾಡಿದ ಜನರಿಗೆ ಕ್ಷಮೆ ಕೇಳಿದ ಸುದೀಪ್

    Published

    on

    ವೈಲ್ಡ್​ ಕಾರ್ಡ್​ ಮೂಲಕ ಬಿಗ್​ಬಾಸ್​ ಮನೆಗೆ ಎಂಟ್ರಿ ನೀಡಿದ್ದ ಶೋಭಾ ಶೆಟ್ಟಿ, ಶೋನಿಂದ ಕ್ವಿಟ್ ಮಾಡಿದ್ದಾರೆ. ಮುಂದಿನ ವಾರಕ್ಕೆ ಉಳಿದುಕೊಳ್ಳಲು ವೀಕ್ಷಕರಿಂದ ನೇರವಾಗಿ ಇಮ್ಯುನಿಟಿ ಪಡೆದರೂ ದಿಕ್ಕರಿಸಿ ಮನೆಯಿಂದ ಆಚೆ ಹೋಗುವ ನಿರ್ಧಾರ ಮಾಡಿದರು.

    ಸುದೀಪ್, ಅವರನ್ನು ಬಿಗ್​ಬಾಸ್ ಶೋನಲ್ಲಿ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಶೋಭಾ ಶೆಟ್ಟಿ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಇದರಿಂದ ಕಿಚ್ಚ ಸುದೀಪ್ ವೇದಿಕೆ ಮೇಲೆ ಬೇಸರ ವ್ಯಕ್ತಪಡಿಸಿದರು. ನನ್ನ ಜನಗಳಿಗೆ ಯಾರು ಮರ್ಯಾದೆ ಕೊಡಲ್ವೋ, ಅದರ ಸಿಂಪಥಿಯೇ ಬೇಡ. ಈ ರೀತಿ ಯಾವತ್ತೂ ನಡೆದಿಲ್ಲ. ನಿಮ್ಮ ಮಾತಿಗೆ ನಾನು ಬೆಲೆ ಕೊಡ್ತೀನಿ. ಶೋಭಾ ಅವರೇ ಇದನ್ನು ನೀವೇ ನಿಮ್ಮ ಮೇಲೆ ತಂದುಕೊಂಡಿದ್ದೀರಿ. ಜನರು ವೋಟ್ ಮಾಡಿದ್ದಾರೆ, ಜನರಿಗೆ ನೀವು ಏನು ಹೇಳಬೇಕೋ, ಅದನ್ನು ಹೇಳಿಕೊಳ್ಳಿ. ಇದು ತುಂಬಾ ಬೇಸರದ ವಿಚಾರ. ಗೊತ್ತೋ, ಗೊತ್ತಿಲ್ಲದೆಯೋ ನನ್ನ ಮಾತುಗಳಿಂದ ನಿಮಗೆ ನೋವಾಗಿದ್ದರೆ ಕ್ಷಮಿಸಿ. ನನಗೆ ಯಾರಿಗೂ ನೋವು ಕೊಡಲು ಇಷ್ಟವಿಲ್ಲ. ನಿಮ್ಮನ್ನು ಉಳಿಸಿಕೊಳ್ಳಲು ನನ್ನ ಪ್ರಯತ್ನವನ್ನು ನಾನು ಮಾಡಿದೆ.

    ಯಾರೆಲ್ಲ ಶೋಭಾ ಪರವಾಗಿ ವೋಟ್ ಮಾಡಿದ್ದಿರೋ.. ಅವರಿಗೆಲ್ಲ ಬಿಗ್​ಬಾಸ್ ತಂಡದ ಪರವಾಗಿ ನಾನು ಕ್ಷಮೆ ಕೇಳುತ್ತೇನೆ. ಇದು ಸರಿಯಾದ ಕ್ರಮವಲ್ಲ. ಅವರು ಹೋಗಬೇಕು ಎಂದು ಹಠ ಮಾಡಿದಾಗ ನಾವು ಕಳುಹಿಸಿ ಕೊಡುತ್ತಿದ್ದೇವೆ. ವೋಟ್ ಮಾಡಿದವರಿಗೆ ಕ್ಷಮೆ ಕೇಳುತ್ತೇವೆ. ಜೊತೆ ವೋಟ್ ಮಾಡಿದ್ದಕ್ಕಾಗಿ ಧನ್ಯವಾದ ಕೂಡ ಹೇಳುತ್ತಿದ್ದೇವೆ. ನೀವು ನೋಡಿ, ವೋಟ್ ಮಾಡಿ ಯಾವರೀತಿ ಪ್ರೋತ್ಸಾಹ ಕೊಡ್ತಿದ್ದೀರೋ, ಅದು ಒಂದೇ ಒಂದು ಕಾರಣಕ್ಕೆ ಬಿಗ್​ಬಾಸ್ ಈ ಮಟ್ಟಕ್ಕೆ ಬಂದು ಬೆಳೆದು ನಿಂತಿದೆ ಎಂದರು.

    Continue Reading

    LATEST NEWS

    Trending