Connect with us

    MANGALORE

    ಮಂಗಳೂರು: ಬರ್ಕೆ ಪ್ರೀಮಿಯರ್ ಲೀಗ್‌ ಸೀಸನ್‌-2ಗೆ ಚಾಲನೆ

    Published

    on

    ಮಂಗಳೂರು: ನಗರದ ಉರ್ವಾ ಮೈದಾನದಲ್ಲಿ ಇಂದು ಬೆಳಿಗ್ಗೆ ಬರ್ಕೆ ಪ್ರೀಮಿಯರ್ ಲೀಗ್‌ ಸೀಸನ್‌ 2 ಕ್ರಿಕೆಟ್ ಪಂದ್ಯಾಟ ನಡೆಯಿತು.


    ಕ್ರೀಡಾಕೂಟದ ಉದ್ಘಾಟನೆಯನ್ನು ಮಂಗಳೂರು ನಗರ ಪಾಲಿಕೆ ಸದಸ್ಯ ಜಗದೀಶ್ ಶೆಟ್ಟಿ ಉದ್ಘಾಟಿಸಿದರು. ಸ್ಥಾಪಕಾಧ್ಯಕ್ಷ ಯಜ್ಞೇಶ್ ಬರ್ಕೆ, ಕಾರ್ಯದರ್ಶಿ ಗೋಡ್ವಿನ್ ಕಾರಿಯಪ್ಪ, ಪಾಲಿಕೆ ಸದಸ್ಯರಾದ ಗಣೇಶ್‌ ಕುಲಾಲ್‌,

    ಸಂಧ್ಯಾ ಆಚಾರ್ಯ, ಕಿಶನ್‌ ಬರ್ಕೆ, ಪ್ರದೀಪ್‌ ಬರ್ಕೆ, ದಿವಾಕರ್‌, ಪ್ರಶಾಂತ್, ಸತೀಶ್, ಮೋಹನ್ ಕುಮಾರ್, ಸಂತೋಷ್ ಶೆಟ್ಟಿ, ಉದಯಕುಮಾರ್‌ ಮೊದಲಾದವರಿದ್ದರು. ಕ್ರೀಡಾ ಕೂಟ ಎರಡು ದಿನಗಳ ಕಾಲ ನಡೆಯಲಿದ್ದು, 10 ತಂಡಗಳು ಇದರಲ್ಲಿ ಪಾಲ್ಗೊಂಡಿವೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ವಾಮಂಜೂರು ಶಾರದಾ ಮಹೋತ್ಸವದ ಕಾರ್ಯಾಲಯ ಉದ್ಘಾಟನೆ

    Published

    on

    ಮಂಗಳೂರು: ಶ್ರೀ ರಕ್ತೇಶ್ವರಿ ಮತ್ತು ‌ಪಂಚದೇವತಾ ಸಾನಿಧ್ಯ ಶ್ರೀರಾಮನಗರ,ವಾಮಂಜೂರು‌ ಹಾಗೂ ವಾಮಂಜೂರು ಸಾರ್ವಜನಿಕ ಶ್ರೀ ಶಾರದಾ ಪೂಜಾ‌ ಸಮಿತಿ(ರಿ)ವತಿಯಿಂದ ಅಕ್ಟೋಬರ್ 9‌ರಿಂದ 13‌ರವರೆಗೆ ವಾಮಂಜೂರಿನ‌ ಕೇಂದ್ರ ಮೈದಾನದಲ್ಲಿ “ವಾಮಂಜೂರು ಶಾರದಾ ಮಹೋತ್ಸವ” ನಡೆಯಲಿದ್ದು,ಇದರ‌ ಕಾರ್ಯಾಲಯವನ್ನ ವಾಮಾಂಜೂರಿನ‌ ಬಾವ ಬಿಲ್ಡರ್ಸ್ ನ ಕಟ್ಟಡದಲ್ಲಿ ಸೆ.17 ಉದ್ಘಾಟಿಸಲಾಯಿತು.

    ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ರಾಜೇಶ್ ಕೊಟ್ಟಾರಿ ಪ್ರಮುಖರಾದ ಚಂದ್ರಶೇಖರ ರಾಮನಗರ,ಸದಾನಂದ ಪೂಜಾರಿ,ಮೋಹನ್ ಪಚ್ಚನಾಡಿ,ರಾಕೇಶ್ ಶೆಟ್ಟಿ ಅಮೃತನಗರ,ಅಜಯ್ ಮಂಗಳನಗರ,ಬಿಪಿನ್ ವಾಮಂಜೂರು,ಗೋಪಾಲ್ ದೇವಿನಗರ, ಸುರೇಂದ್ರ ಗುರುಪುರ, ನವೀನ್ ಅಮೃತ ನಗರ,ವೆಂಕಪ್ಪ‌ ಅಮೃತ ನಗರ,ನವೀನ್‌ ಶೆಟ್ಟಿ ಸಂತೋಷ್ ನಗರ ಹಾಗೂ ಸಮಿತಿ‌ ಸದಸ್ಯರು ಉಪಸ್ಥಿತರಿದ್ದರು.

    Continue Reading

    LATEST NEWS

    ಕರಾವಳಿಯಲ್ಲಿ ಮುಂದಿನ 7 ದಿನ ಮಳೆ ಸಾಧ್ಯತೆ

    Published

    on

    ಬೆಂಗಳೂರು: ಕರಾವಳಿಯಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಮುಂದಿನ ಒಂದು ವಾರ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ.

    ರಾಜ್ಯದಲ್ಲಿ ಮುಂದಿನ 7 ದಿನಗಳ ಕಾಲ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಪ್ರಮುಖವಾಗಿ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಸಿಲಿಕಾನ್ ಸಿಟಿ ಬೆಂಗಳೂರು ನಗರ ಸೇರಿದಂತೆ ಹಲವೆಡೆ ಇಂದು ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲೂ ಇಂದು ಸಾಧಾರಣ ಮಳೆಯಾಗಲಿದೆ.

    Continue Reading

    LATEST NEWS

    ಏಕಕಾಲದಲ್ಲಿ ಸಾವಿರಾರು ಪೇಜರ್‌ ಬ್ಲಾಸ್ಟ್‌..! ಇಸ್ರೇಲ್‌ ಕೃತ್ಯದ ಅನುಮಾನ..!

    Published

    on

    ಲೆಬೆನಾನ್‌ ( ಬೈರುತ್ ) : ಏಕಕಾಲದಲ್ಲಿ ಸಾವಿರಾರು ಪೇಜರ್‌ಗಳು ಸ್ಫೋಟಗೊಂಡ ಕಾರಣ 9 ಜನರು ಸಾವನ್ನಪ್ಪಿದ್ದು, 2700 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಲೆಬೆನಾನ್‌ನಲ್ಲಿ ಈ ಘಟನೆ ನಡೆದಿದ್ದು, ಇಸ್ರೇಲ್‌ ಈ ಸ್ಫೋಟಕ್ಕೆ ಕಾರಣವಾಗಿರುವ ಅನುಮಾನ ಮೂಡಿಸಿದೆ. ಇಸ್ರೇಲ್‌ನ ಮೊಸಾದ್ ಗುಪ್ತಚರ ಸಂಸ್ಥೆ 5 ಸಾವಿರ ತೈವಾನ್ ನಿರ್ಮಿತ ಪೇಜರ್‌ಗಳಲ್ಲಿ ಸಣ್ಣ ಪ್ರಮಾಣದ ಸ್ಫೋಟಕ ಇರಿಸಿದೆ ಎಂದು ಲೆಬನಾನಿನ ಗೆಜ್ಬೊಲ್ಲಾಹ್‌ ಗುಂಪು ಮಾಹಿತಿ ನೀಡಿದ್ದಾಗಿ ಲೆಬೆನಾನ್‌ ಭದ್ರತಾ ಮೂಲಗಳು ರಾಯಿಟರ್ಸ್‌ಗೆ ಮಾಹಿತಿ ನೀಡಿದೆ. ಸ್ಫೋಟದ ನಂತರ ಇರಾನ್‌ ಬೆಂಬಲಿತ ಹಿಜ್ಬುಲ್ಲಾ, ಇಸ್ರೇಲ್‌ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದೆ.

    ಸ್ಫೋಟಕ್ಕೆ ತಿಂಗಳುಗಟ್ಟಲೆ ಯೋಜನೆ ನಡೆಸಲಾಗಿತ್ತೇ ?

    ಪೇಜರ್‌ಗಳ ಈ ಸ್ಫೋಟಕ್ಕೆ ಹಲವಾರು ತಿಂಗಳುಗಳಿಂದ ತಯಾರಿ ನಡೆದಿರಬಹುದು ಎಂದು ಲೆಬೆನಾನ್‌ ಭದ್ರತಾ ಮೂಲಗಳು ಮಾಹಿತಿ ನೀಡಿದೆ. ತೈವಾನ್ ಮೂಲದ ಗೋಲ್ಡ್‌ ಅಪೋಲೋ ಕಂಪೆನಿ ತಯಾರಿಸಿದ 5 ಸಾವಿರ ಪೇಜರ್‌ಗಳು ಇದಕ್ಕಾಗಿ ದೇಶಕ್ಕೆ ತರಲಾಗಿದೆ ಎಂದು ಅದು ಹೇಳಿದೆ. AP924 ಮಾದರಿಯ ಪೇಜರ್‌ಗಳು ಇದಾಗಿದ್ದು, ಕೇವಲ ಟೆಕ್ಸ್ಟ್‌ ಮೆಸೇಜ್‌ ಕಳುಹಿಸಲಷ್ಟೇ ಇದು ಬಳಕೆಯಾಗುತ್ತದೆ. ಇಸ್ರೇಲಿನ ಸ್ಥಳ ಟ್ರ್ಯಾಕ್‌ ಮಾಡುವ ತಂತ್ರಜ್ಞಾನದಿಂದ ತಪ್ಪಿಸಿಕೊಳ್ಳಲು ಹಿಜ್ಬುಲ್ಲಾ ಹೋರಾಟಗಾರರು ಈ ಪೇಜರ್‌ಗಳನ್ನು ಬಳಸುತ್ತಿದ್ದಾರೆ.

    ಉತ್ಪಾದನಾ ಮಟ್ಟದಲ್ಲಿ ಸ್ಫೋಟಕ ತುಂಬಿದ ಅನುಮಾನ..!

    ಇಸ್ರೇಲ್‌ನ ಗುಪ್ತಚರ ಸಂಸ್ಥೆಯು ಈ ಪೇಜರ್‌ಗಳನ್ನು ಉತ್ಪಾದನಾ ಮಟ್ಟದಲ್ಲಿ ಮಾರ್ಪಡಿಸಲಾಗಿದೆ ಎಂದು ಲೆಬನಾನ್ ಮೂಲವೊಂದು ತಿಳಿಸಿದೆ. ಈ ಮೂಲವು, “ಮೊಸಾದ್ ಸಾಧನದೊಳಗೆ ಒಂದು ಬೋರ್ಡ್ ಅನ್ನು ಸ್ಥಾಪಿಸಿದೆ, ಅದು ಕೋಡ್ ಅನ್ನು ಸ್ವೀಕರಿಸುತ್ತದೆ. ಯಾವುದೇ ಸಾಧನ ಅಥವಾ ಸ್ಕ್ಯಾನರ್ ಸಹಾಯದಿಂದ ಅದನ್ನು ಪತ್ತೆಹಚ್ಚುವುದು ತುಂಬಾ ಕಷ್ಟ. ಕೋಡ್ ಮಾಡಲಾದ ಸಂದೇಶವನ್ನು ಕಳುಹಿಸಿದಾಗ 3 ಸಾವಿರ ಪೇಜರ್‌ಗಳು ಏಕಕಾಲದಲ್ಲಿ ಸ್ಫೋಟಗೊಂಡಿದೆ. ಪೇಜರ್‌ನಲ್ಲಿ 3 ಗ್ರಾಂ ನಷ್ಟು ಸ್ಫೋಟಕಗಳನ್ನು ಅಡಗಿಸಿ ಇಡಲಾಗಿತ್ತು ಎಂದು ಅನುಮಾನ ವ್ಯಕ್ತ ಪಡಿಸಿದೆ.

    ತೈವಾನ್ ಕಂಪನಿ ಆರೋಪಗಳನ್ನು ನಿರಾಕರಿಸಿದೆ

    ಮತ್ತೊಂದೆಡೆ, ತೈವಾನ್ ಮೂಲದ ಗೋಲ್ಡ್ ಅಪೊಲೊ ಕಂಪನಿ ಈ ಆರೋಪಗಳನ್ನು ನಿರಾಕರಿಸಿದೆ. ಲೆಬನಾನ್‌ನಲ್ಲಿ ಮಂಗಳವಾರ ನಡೆದ ಸ್ಫೋಟಗಳಲ್ಲಿ ಬಳಸಲಾದ ಪೇಜರ್‌ಗಳನ್ನು ತೈವಾನ್‌ನ ಗೋಲ್ಡ್ ಅಪೊಲೊ ತಯಾರಿಸಿಲ್ಲ ಎಂದು ಕಂಪನಿ ಸಂಸ್ಥಾಪಕ ಸು ಚಿಂಗ್-ಕುವಾಂಗ್ ಮಾದ್ಯಮಕ್ಕೆ ತಿಳಿಸಿದ್ದಾರೆ. ಅದು ನಮ್ಮ ಉತ್ಪನ್ನವಲ್ಲ, ಅದು ನಮ್ಮ ಬ್ರಾಂಡ್ ಲೋಗೋವನ್ನು ಹೊಂದಿತ್ತು” ಎಂದು ಸು ಚಿಂಗ್-ಕುವಾಂಗ್ ಹೇಳಿದ್ದಾರೆ.

    Continue Reading

    LATEST NEWS

    Trending