Connect with us

DAKSHINA KANNADA

Bantwal : ಮತದಾನದ ಜಾಗೃತಿ ಮೂಡಿಸುತ್ತಿರುವ ಬಾಲೆ; ಚುನಾವಣಾ ಆಯೋಗದಿಂದ ಬಂತು ಮೆಚ್ಚುಗೆಯ ಓಲೆ!

Published

on

ಬಂಟ್ವಾಳ : ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಜಾಗೃತಿ ಮೂಡಿಸಿ ಗಮನ ಸೆಳೆದಿರುವ ದಕ್ಷಿಣ ಕನ್ನಡದ ಮಾಣಿಯ 4ನೇ ತರಗತಿ ವಿದ್ಯಾರ್ಥಿನಿ ಸನ್ನಿಧಿಗೆ ಕೇಂದ್ರ ಚುನಾವಣಾ ಆಯೋಗವು ಶಹಬ್ಬಾಸ್‌ಗಿರಿ ನೀಡಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶೇ.100 ಮತದಾನದ ಅರಿವು ಮೂಡಿಸುವ ಆಕೆಯ ಉದ್ದೇಶಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಕಳೆದ ಚುನಾವಣೆಯಲ್ಲಿ ತಾನು ಮಾಡಿದ ಮತದಾನ ಜಾಗೃತಿಯ ದಾಖಲೆಗಳನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಸನ್ನಿಧಿ ಇಮೇಲ್ ಮೂಲಕ ಕಳುಹಿಸಿದ್ದಳು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಶೇ.100ರಷ್ಟು ಮತದಾನ ನಡೆಯಲು ಜಾಗೃತಿ ಮೂಡಿಸುವ ಉದ್ದೇಶ ಹೊಂದಿದ್ದು, ಅದಕ್ಕಾಗಿ ಸಹಕಾರ ಕೋರಿದ್ದಳು. ಇನ್ನು ಇದೀಗ ಸನ್ನಿಧಿಯ ಪತ್ರಕ್ಕೆ ಇದೀಗ ಆಯೋಗದಿಂದ ಪ್ರತಿಕ್ರಿಯೆ ಬಂದಿದೆ.

‘ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವುದಕ್ಕೆ ಧನ್ಯವಾದಗಳು. ಆಯೋಗವು ನಿಮ್ಮ ಮೌಲಿಕ ಅಭಿಪ್ರಾಯಗಳನ್ನು ಗುರುತಿಸಿದೆ. ಉತ್ತಮ ಚುನಾವಣಾ ಪ್ರಕ್ರಿಯೆ ನಡೆಯಲು ಪೂರಕವಾಗಿ ನಿಮ್ಮ ಅಭಿಪ್ರಾಯ, ಕಾರ್ಯಗಳನ್ನು ಪ್ರಶಂಸಿಸುತ್ತೇವೆ’ ಎಂದು ಪ್ರತಿಕ್ರಿಯೆಯಲ್ಲಿ ತಿಳಿಸಿದೆ.

ಪ್ರಶಂಸೆ ಪಡೆದಿದ್ದ ಬಾಲಕಿ :

ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕಶೆಕೋಡಿ ನಿವಾಸಿಯಾಗಿರುವ ಸನ್ನಿಧಿ, ಮಾಣಿ ಪೆರಾಜೆ ಬಾಲವಿಕಾಸ ಇಂಗ್ಲಿಷ್ ಮಾಧ್ಯಮ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ಸನ್ನಿಧಿ ತನ್ನ ನಾಲ್ಕೈದು ಮಂದಿ ಪುಟ್ಟ ಸಹಪಾಠಿಗಳೊಂದಿಗೆ ಮನೆ, ಅಂಗಡಿಗಳು, ಸಾರ್ವಜನಿಕ ಪ್ರದೇಶಗಳಲ್ಲಿ ಮತದಾನ ಜಾಗೃತಿ ಕಾರ್ಯದಲ್ಲಿ ತೊಡಗಿದ್ದಳು.
ಮತದಾನ ಮಾಡುವ ಜತೆಗೆ ಪಕ್ಷಾತೀತವಾಗಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಪ್ರೇರಣೆ ನೀಡಿದ್ದಳು. ದ.ಕ. ಜಿಲ್ಲಾಧಿಕಾರಿ ಈಕೆಯ ಕಾರ್ಯವನ್ನು ಗುರುತಿಸಿ ಪ್ರಶಂಸಿಸಿದ್ದರು.

ಬೇರೆ ರಾಜ್ಯಕ್ಕೆ ಹೋಗೋ ಆಸಕ್ತಿ :

‘ಲೋಕಸಭೆ ಚುನಾವಣೆ ಸಂದರ್ಭ ಬೇರೆ ರಾಜ್ಯಕ್ಕೂ ಹೋಗಿ ಅಲ್ಲಿನ ಭಾಷೆಯಲ್ಲೇ ಜಾಗೃತಿ ಮೂಡಿಸುವ ಆಸಕ್ತಿಯಿದೆ. ಸಂಗೀತ, ನೃತ್ಯ ಮಾಧ್ಯಮದ ಮೂಲಕ ಮತದಾನ ಜಾಗೃತಿ ಸಾಧ್ಯವೋ ಎಂಬ ಬಗ್ಗೆ ಚಿಂತನೆ ನಡೆಸಿದ್ದೇನೆ. ಮತದಾನ ಕಡ್ಡಾಯವಾಗಿ ಮಾಡುವವರಿಗೆ ಮಾತ್ರ ಸರ್ಕಾರಿ ಸೌಲಭ್ಯ ನೀಡಬೇಕು. ಆಗ ಮಾತ್ರ ಮತದಾನ ಜಾಸ್ತಿ ಆಗಬಹುದು’ ಎಂದು ಸನ್ನಿಧಿ ಹೇಳುತ್ತಾಳೆ.

Click to comment

Leave a Reply

Your email address will not be published. Required fields are marked *

DAKSHINA KANNADA

ಕುಟುಂಬ ಸದಸ್ಯರ ಮಾರಣ ಹೋಮ..! ಆರು ಜೀವಗಳು ಬಲಿ..!

Published

on

ಮಂಗಳೂರು ( ಉತ್ತರ ಪ್ರದೇಶ ) : ಮದರ್ ಡೇ ದಿನವೇ ತಾಯಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪಾಪಿ ಮಗ ತನ್ನ ಇಡೀ ಕುಟುಂಬದವರನ್ನು ಸಾಯಿಸಿದ್ದಾನೆ. ತಾಯಿ, ಪತ್ನಿ ಹಾಗೂ ಮೂವರು ಮಕ್ಕಳನ್ನು ಬರ್ಭರವಾಗಿ ಹ*ತ್ಯೆಮಾಡಿದ ಆರೋಪಿ ಬಳಿಕ ತಾನೂ ಕೂಡಾ ಗುಂಡು ಹಾರಿಸಿ ಜೀವಾಂತ್ಯಗೊಳಿಸಿದ್ದಾನೆ.

ಈ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ. ಆರೋಪಿ ಅನುರಾಗ್ ಸಿಂಗ್ ಎಂಬಾತ ತನ್ನ ಪತ್ನಿಯ ತಲೆಗೆ ಹ್ಯಾಮರ್‌ನಿಂದ ಹೊಡೆದಿದ್ದು, ತಾಯಿಗೆ ಗುಂಡು ಹೊಡೆದು ಸಾ*ಯಿಸಿದ್ದಾನೆ. ಬಳಿಕ ತನ್ನ ಮೂವರು ಮಕ್ಕಳನನ್ನು ಮಹಡಿಯಿಂದ ಕೆಳಕ್ಕೆ ಎಸೆದಿದ್ದಾನೆ. ಅನುರಾಗ್ ಸಿಂಗ್ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಎಂಬುದಾಗಿ ಮಾಹಿತಿ ಲಭ್ಯವಾಗಿದೆ. ಆದ್ರೆ ವಿಪರೀತವಾಗಿ ಮದ್ಯ ಸೇವನೆಯ ಚಟ ಹೊಂದಿದ್ದ ಅಂತಾನೂ ಪೊಲೀಸರು ತಿಳಿಸಿದ್ದಾರೆ. ಇದೇ ಕಾರಣದಿಂದ ತಾಯಿ , ಪತ್ನಿ, ಹಾಗೂ ಮೂವರು ಮಕ್ಕಳು ಹ*ತ್ಯೆ ಮಾಡಿದ್ದಾನೆ ಎನ್ನಲಾಗಿದೆ.

62 ವರ್ಷ ಪ್ರಾಯದ ಸಾವಿತ್ರಿ ಸಿಂಗ್, 40 ವರ್ಷ ಪ್ರಾಯದ ಪ್ರಿಯಾಂಕ, ಮಕ್ಕಳಾದ 12 ವರ್ಷದ ಅಸ್ವಿ, 8 ವರ್ಷದ ಅರ್ನಾ, ಹಾಗೂ 4 ವರ್ಷದ ಅದ್ವಿಕ್‌ ಅನುರಾಗ್ ಸಿಂಗ್ ಕೈನಿಂದ ಹತರಾದವರಾಗಿದ್ದಾರೆ. ಬಳಿಕ ಆರೋಪಿ ಕೂಡಾ ಗುಂಡು ಹಾರಿಸಿ ಸ್ವಯಂ ಹ*ತ್ಯೆ ಮಾಡಿಕೊಂಡಿದ್ದಾನೆ.

 

Continue Reading

DAKSHINA KANNADA

MANGALURU : ಜಸ್ಟ್‌ ಪಾಸ್ ಆದ ಬ್ರೂಸ್ಲಿ, ಬ್ಯಾನರ್ ಹಾಕಿ ಸಂಭ್ರಮಿಸಿದ ಗೆಳೆಯರು; ವೈರಲ್ ಆಯ್ತು ಬ್ಯಾನರ್ ಫೋಟೋ

Published

on

ಮಂಗಳೂರು : ಎಸ್ ಎಸ್ ಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದೆ. ಪಾಸಾದವರಿಗಂತೂ ಸಂಭ್ರಮವೋ ಸಂಭ್ರಮ…ಸಹಜವಾಗಿ ನಾವೆಲ್ಲ ರ್ಯಾಂಕ್‌, ಡಿಸ್ಟಿಂಕ್ಷನ್‌, ಟಾಪರ್‌ ಆಗಿ ಬಂದವರಿಗೆ ಹಾರಾರ್ಪಣೆ, ತುರಾಯಿ, ಸಿಹಿ ಹಂಚಿ ಸಂಭ್ರಮಿಸುವುದನ್ನು ನಾವು ನೋಡಿದ್ದೇವೆ. ಆದರೆ ನೀವೆಲ್ಲಾದರೂ ಕನಿಷ್ಟ ಪಾಸ್ ಆದವರಿಗೆ ಬ್ಯಾನರ್ ಹಾಕಿ ಸಂಭ್ರಮಿಸುವುದನ್ನು ನೋಡಿದ್ದೀರಾ..? ನೋಡಿಲ್ಲಾಂದರೆ ಇಲ್ಲೊಂದು ಸುದ್ದಿ ಇದೆ. ಕೇಳಿ. ಈತ ಬ್ರ್ರೂಸ್ಲಿ. ಈತನ ನಿಜ ನಾಮಧೇಯ ಹ್ಯಾಸ್ಲಿನ್‌. ಈತನಿಗೆ ಮಂಗಳೂರಿನ ಕುಡುಪು ಮಂಗಳನಗರದ ಯುವ ಫ್ರೆಂಡ್ಸ್‌ನ ಗೆಳೆಯರು ಹಿತೈಷಿಗಳು ಬ್ಯಾನರ್‌ ಹಾಕಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಬ್ಯಾನರ್ ನಲ್ಲಿ ಏನಿದೆ?

ಬ್ಯಾನರ್‌ನಲ್ಲಿ ಆತನ ಫೋಟೋ ಹಾಕಿ ಅಭಿನಂದನೆಗಳನ್ನು ಹಾಕಿ ಪಕ್ಕದಲ್ಲೇ ಸಂಭ್ರಮಿಸುವ ಇಮೋಜಿ ಹಾಕಲಾಗಿದೆ. ಬ್ಯಾನರ್‌ನಲ್ಲಿ ಹೀಗೆ ಬರೆಯಲಾಗಿದೆ. “ಅಪ್ಪ ಅಮ್ಮನ ಆಶೀರ್ವಾದದಿಂದ, ಊರವರ ಬೈಗುಳದಿಂದ ಊರವರ ಪ್ರೋತ್ಸಾಹದಿಂದ, ಟ್ಯೂಶನ್‌ ಮಹಾತ್ಮೆಯಿಂದ, ಶಾಲೆಯ ಕಿರಿಕಿರಿಯಿಂದ, ಶಿಕ್ಷಕರ ಬೋಧನೆಯಿಂದ.. ಸೈಕಲ್ , ಕ್ರಾಕ್ಸ್‌, ಪಿಯುಸಿ, ಫೀಸ್ ಆಮಿಷದಿಂದ ಎಲ್ಲರ ಕುತೂಹಲ, ಬ್ರೂಸ್ಲಿ ಪಾಸೋ ಫೇಲೋ ಇಂದು ಆ ಚರ್ಚೆಗೆ ತೆರೆ ಬಿದ್ದಿದೆ. ತೋಚಿದ್ದು, ಗೀಚಿ ಫೈಲ್ ಆಗುವವನು ಹರಕೆ ಬಲದಿಂದ, ಪ್ರಯತ್ನದ ಫಲದಿಂದ ಹೇಗೂ ಒಟ್ಟಾರೆ ನಮ್ಮ ಬ್ರೂಸ್ಲಿ ಜಸ್ಟ್‌ ಪಾಸಾಗಿರೋದೇ ನಮಗೆಲ್ಲ ಸಂಭ್ರಮ. ಎಸ್ ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ 300 ಅಂಕ ಪಡೆದ ಉತ್ತೀರ್ಣನಾದ ಹ್ಯಾಸ್ಲಿನ್‌ ನಿಮಗೆ ಅಭಿನಂದನೆಗಳು ಎಂದು ಹರ್ಷ ವ್ಯಕ್ತಪಡಿಸುವ ಇಮೋಜಿ ಕೂಡಾ ಹಾಕಲಾಗಿದೆ. ಇದೀಗ ಹೀಗೊಂದು ಬ್ಯಾನರ್ ಹಾಕುವ ಮೂಲಕ ಜಸ್ಟ್‌ ಪಾಸ್‌ ಆದವನ ಸಂಭ್ರಮವನ್ನು ಇಮ್ಮಡಿಗೊಳಿಸಲಾಗಿದೆ. ಈ ನಡುವೆ ಬ್ಯಾನರ್‌ ಕೂಡಾ ಭಾರೀ ವೈರಲ್‌ ಆಗುತ್ತಿದೆ.

Continue Reading

DAKSHINA KANNADA

ಕಡಬ: ರೈಲು ಡಿಕ್ಕಿ ಹೊಡೆದು ವ್ಯಕ್ತಿ ಸಾ*ವು

Published

on

ಕಡಬ: ರೈಲು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಎಡಮಂಗಲ ರೈಲು ನಿಲ್ದಾಣ ಸಮೀಪ ಶನಿವಾರ(ಮೇ.11) ಸಂಜೆ ನಡೆದಿದೆ.

rail dikki

ಮುಂದೆ ಓದಿ..; ಬಯಲಾಯ್ತು ಅಕ್ರಮ ಸಂಬಂಧ; ನೇಣಿಗೆ ಶರಣಾದ ವಿವಾಹಿತ!

ಮೃತ ವ್ಯಕ್ತಿಯನ್ನು ಎಡಮಂಗಲ ಗ್ರಾಮದ ಡೆಕ್ಕಳ ನಿವಾಸಿ ಮಹಾಲಿಂಗ ನಾಯ್ಕ್(60) ಎಂದು ಗುರುತಿಸಲಾಗಿದೆ. ಶನಿವಾರ ಸಂಜೆ ವೇಳೆಗೆ ರೈಲ್ವೇ ಹಳಿಯಲ್ಲಿ ಮಹಾಲಿಂಗ ನಾಯ್ಕರು ನಡೆದುಕೊಂಡು ಹೋಗುತ್ತಿದ್ದ ವೇಳೆ ರೈಲು ಡಿಕ್ಕಿಯಾಗಿರಬಹುದೆಂದು ಶಂಕಿಸಲಾಗಿದೆ.  ಈ ಬಗ್ಗೆ ಕಡಬ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Continue Reading

LATEST NEWS

Trending