ಬಂಟ್ವಾಳ: ವಾಹನದಲ್ಲಿ ಪಾರ್ಸೆಲ್ ನೀಡಲು ಬಂದಿದ್ದ ಅಯ್ಯಪ್ಪ ವೃತಧಾರಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವಬೆದರಿಕೆ ಹಾಕಿದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇಲ್ಲಿನ ಬಿ.ಮೂಡ ಗ್ರಾಮದ ಗೂಡಿನಬಳಿ ನಿವಾಸಿ, ಮೀನು ವ್ಯಾಪಾರಿ ಇಕ್ಬಾಲ್ ಎಂಬಾತನ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೋಲಿಸರು ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಯಶ್ವಿತ್ ಎಂಬಾತ ಅಯ್ಯಪ್ಪ ಮಾಲಾಧಾರಿಯಾಗಿದ್ದು, ಸ್ನೇಹಿತನ ಜೊತೆ ರಿಕ್ಷಾ ಟೆಂಪೋದಲ್ಲಿ ಪಾರ್ಸೆಲ್ ಸರ್ವೀಸ್ ಮಾಡುವ ಸಂದರ್ಭದಲ್ಲಿ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗೂಡಿನಬಳಿ ಸಮೀಪ ಪಾರ್ಸೆಲ್ ಒಂದನ್ನು ನೀಡಲು ತೆರಳಿದ ವೇಳೆ ಆರೋಪಿ ಇಕ್ಬಾಲ್ ಇದು ನಮ್ಮ ಏರಿಯಾ, ಈ ಭಾಗಕ್ಕೆ ಹಿಂದೂಗಳು ಬರಬಾರದು ಎಂಬ ಮಾತನ್ನು ಹೇಳಿದ್ದಲ್ಲದೆ, ಅಯ್ಯಪ್ಪ ವೃತಧಾರಿಗಳ ಬಗ್ಗೆ ನಿಂದನೆಯ ಮಾತುಗಳನ್ನು ಆಡಿದ್ದಾನೆ.
ಜೊತೆಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.