BANTWAL
ಬಂಟ್ವಾಳ: ಮೇಗಿನ ಕುರಿಯಾಳದಲ್ಲಿ 13ನೇ ಶತಮಾನದ ಶಾಸನ ಪತ್ತೆ
Published
3 years agoon
By
Adminಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೇಗಿನ ಕುರಿಯಾಳದಲ್ಲಿ 13 ನೇ ಶತಮಾನದ ಎನ್ನಲಾದ ಶಾಸನವೊಂದು ಪತ್ತೆಯಾಗಿದೆ.
ಪ್ರಾಚ್ಯಸಂಚಯ ಸಂಶೋಧನ ಕೇಂದ್ರ-ಉಡುಪಿ,(ಎನ್.ಟಿ.ಸಿ.-ಎ.ಒ.ಎಂ-ನ ಅಂಗ ಸಂಸ್ಥೆ) ಇದರ ಅಧ್ಯಯನ ನಿರ್ದೇಶಕ ಪ್ರೊ.ಎಸ್.ಎ.ಕೃಷ್ಣಯ್ಯ ಅವರು ಇತ್ತೀಚೆಗೆ ಪತ್ತೆ ಮಾಡಿದ ಶಾಸನವನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಓದಿ ಅರ್ಥೈಸಿದ್ದಾರೆ.
ಗ್ರಾನೈಟ್ (ಕಣ)ಶಿಲೆಯಲ್ಲಿ ಕೊರೆಯಲ್ಪಟ್ಟ ಈ ಶಾಸನವು ಕನ್ನಡ ಲಿಪಿ ಮತ್ತು ಭಾಷೆಯಲ್ಲಿದ್ದು 25 ಸಾಲುಗಳನ್ನು ಹೊಂದಿದೆ. ಶಾಸನವು 178 ಸೆಂ.ಮೀ ಎತ್ತರ ಮತ್ತು 78 ಸೆಂ.ಮೀ ಅಳತೆಯನ್ನು ಹೊಂದಿರುತ್ತದೆ.
ಶಕವರುಷ 1286 ನೇ ಕ್ರೋಧಿ ಸಂವತ್ಸರದ ಮೇಷ ಮಾಸ 13 (ಕ್ರಿ.ಶ 1364 ಎಪ್ರಿಲ್ 27 – ಶುಕ್ರವಾರ)ಲು ಪಾಂಡೇಶ್ವರ ದೇವರು ಹಾಗೂ ದೇವರಾಜಮ(ಯ)ತಿ ಶ್ರೀಪಾದಂಗಳ ಸಮ್ಮುಖದಲ್ಲಿ ಮಿತ್ತ ಕೂರ್ಯ್ಯಳ ಮತ್ತು ಚಿಳ್ತ ಕೂರ್ಯ್ಯಳ (ಪ್ರಸ್ತುತ ಮೇಗಿನ ಕುರಿಯಾಳ ಮತ್ತು ತಿರ್ತ ಕುರಿಯಾಳ) ವಾಸಿಗಳು ಅಕ್ಕಿ ಮುಡಿ ಮತ್ತು ಗದ್ಯಾಣಗಳನ್ನು ಪಾಂಡೇಶ್ವರ ದೇವರಿಗೆ ಮಂಗಳೂರು ರಾಜ್ಯಪಾಲ ಮಾದರಸ ಒಡೆಯನ (ಕ್ರಿ. ಶ 1364) ಮೂಲಕ ದಾನ ಮಾಡಿದ ಉಲ್ಲೇಖ ಈ ಶಾಸನದಲ್ಲಿದೆ.
ಮಿತ್ತ ಕೂರ್ಯ್ಯಲದ ರಾಜು ಎಂಬಳಿಯ ವಂಜುಕಡಿತಲೆಯನ ತಮ್ಮ ಹಲಯಬರ, ಆರ್ಯ ಬಳಿಯ ಕೊರತಿ ಸೆಟ್ಟಿತಿಯ ತಮ್ಮ ಬಂಕಿಯಣ, ಬಡಲೆ ಮಾಳಗೌಡರ ಭೂಮಿಯಿಂದ ಹಾಗೂ ಚಿಳ್ತ ಕೂರ್ಯ್ಯಲದ ಪುಂಣ್ಯಂ ಕುಂದಯ ಸಂಬು ಮತ್ತನವರ ಭೂಮಿಯಿಂದ ಅರಸನಿಗೆ ಪ್ರತಿ ವರ್ಷ 34 ಗದ್ಯಾಣಗಳು ಮತ್ತು 30 ಮುಡಿ ಭತ್ತವನ್ನು ಪಾಂಡೇಶ್ವರ ದೇವರ ರಕ್ಷೋಭೋಗವಾಗಿ ಮಾದರಸ ಒಡೆಯರ ಮೂಲಕವಾಗಿ ನೀಡಿದ ಉಲ್ಲೇಖವಿದೆ.
ಈ ಧರ್ಮಕ್ಕೆ ಯಾರೊಬ್ಬರು ತಪ್ಪಿದರೆ ಅರಸನಿಗೆ 1000 ಗದ್ಯಾಣವನ್ನು ತೆರಬೇಕೆಂದು ತಿಳಿಸಲಾಗಿದೆ.
ಶಾಸನದ ಕೊನೆಯಲ್ಲಿ ಶಾಪಾಶಯ ವಾಕ್ಯವಿದ್ದು, ಕೊನೆಯಲ್ಲಿ ಈ ಶಾಸನವನ್ನು ಬರೆದವ ಅಲುಪಭೋವ (?) ಎಂಬ ಉಲ್ಲೇಖವಿದೆ.
ಕ್ಷೇತ್ರಕಾರ್ಯ ಶೋಧನೆಯ ಸಂದರ್ಭದಲ್ಲಿ ತುಳು ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಳ್ ಸಾರ್, ಗಣೇಶ್ ಆಚಾರ್ಯ, ಸದಾಶಿವ ಆಚಾರ್ಯ, ಗುರುವಪ್ಪ ಪೂಜಾರಿ, ಕಿಶನ್ ಕುಮಾರ್ ಮೂಡುಬೆಳ್ಳೆ ಅವರು ಸಹಕಾರ ನೀಡಿರುತ್ತಾರೆ.
ಬಂಟ್ವಾಳ: ಅಕ್ರಮವಾಗಿ ಮನೆಯಲ್ಲಿ ಜುಗಾರಿ ಆಟ ಆಡುತ್ತಿದ್ದ ವೇಳೆ ಬಂಟ್ವಾಳ ಪೊಲೀಸರು ದಾಳಿ ನಡೆಸಿ ಒಟ್ಟು 33 ಜನರನ್ನು ಹಾಗೂ ಬರೋಬ್ಬರಿ ಏಳು ಲಕ್ಷಕ್ಕೂ ಅಧಿಕ ಮೌಲ್ಯದ ನಗದು ವಶಪಡಿಸಿಕೊಂಡ ಘಟನೆ ನಿನ್ನೆ (ಡಿ.17) ಮುಂಜಾನೆ ವೇಳೆ ಬಂಟ್ವಾಳ ತಾಲೂಕು, ಬಡಗಬೆಳ್ಳೂರು ಗ್ರಾಮದ, ಬಡಗಬೆಳ್ಳೂರು ಎಂಬಲ್ಲಿ ನಿಶಾಂತ್ ಎಂಬವರ ಮನೆಯಲ್ಲಿ ನಡೆದಿದೆ.
ಅಕ್ರಮವಾಗಿ ಜುಗಾರಿ ಆಟ ಆಡುತ್ತಿದ್ದಾಗ, ಬಂಟ್ವಾಳ ಡಿವೈಎಸ್‌ಪಿ ವಿಜಯ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶಿವಕುಮಾರ ಬಿ, ಸಬ್ ಇನ್ಸ್ಪೆಕ್ಟರ್ ಹರೀಶ್ ಹಾಗೂ ಪೊಲೀಸ್ ಸಿಬ್ಬಂದಿಗಳ ತಂಡ ದಾಳಿ ನಡೆಸಿ ಕಾರ್ಯದಕ್ಷತೆ ಮೆರೆದಿದ್ದಾರೆ. ದಾಳಿ ವೇಳೆ ಸದ್ರಿ ಸ್ಥಳದಲ್ಲಿ ಅಕ್ರಮವಾಗಿ “ಉಲಾಯಿ-ಪಿದಾಯಿ” ಜುಗಾರಿ ಆಟ ಆಡುತ್ತಿರುವುದು ಕಂಡುಬಂದಿರುತ್ತದೆ. ದಾಳಿ ವೇಳೆ ಜುಗಾರಿ ಆಟ ಆಡಿಸುತ್ತಿದ್ದ ಆರೋಪಿತ ನಿಶಾಂತ್ ತಪ್ಪಿಸಿಕೊಂಡಿದ್ದು, ಆಟದಲ್ಲಿ ನಿರತರಾಗಿದ್ದ ಒಟ್ಟು 33 ಜನರನ್ನು ವಶಕ್ಕೆ ಪಡೆದುಕೊಂಡು, ಅಪಾದಿತರಿಂದ ಜುಗಾರಿ ಆಟಕ್ಕೆ ಬಳಸಿದ ನಗದು ರೂ. 7,81,420/-, ಇಸ್ಪೀಟ್ ಎಲೆಗಳು, ಸ್ಟೀಲ್ ಟೇಬಲ್, ಪ್ಲಾಸ್ಟಿಕ್ ಚೆಯರ್ ಹಾಗೂ ಇತರೆ ಸೊತ್ತುಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು :
ರಾಜೇಶ್ (35 ವರ್ಷ), ಆನಂದ ಡಿ.ಸೋಜ (46 ವರ್ಷ), ಚೇತನ್ (39 ವರ್ಷ), ನಿತಿನ್ (34 ವರ್ಷ), ಪುಷ್ಪರಾಜ್ ಬಳ್ಳಾಲ್ (52 ವರ್ಷ) ನೌಷಾದ್ (37 ವರ್ಷ), ನಾಗೇಶ್ (36 ವರ್ಷ), ಅಬ್ದುಲ್ ಮಜೀದ್ (37 ವರ್ಷ), ಹರೀಶ್ (45 ವರ್ಷ), ಉಮೇಶ್ (52 ವರ್ಷ), ವಿನಾಯಕ (47 ವರ್ಷ), ಅಜಿತ್ ಕುಮಾರ್ (36 ವರ್ಷ), ರಾಘವೇಂದ್ರ (34 ವರ್ಷ), ಪ್ರವೀಣ್ ಕುಮಾರ್ (58 ವರ್ಷ), ಚೆನ್ನಕೇಶವ (42 ವರ್ಷ), ಭಾಸ್ಕರ (36 ವರ್ಷ), ವಿಘ್ನೇಶ (42 ವರ್ಷ), ಸಂಕೇತ್ (35 ವರ್ಷ), ಪವನ್ ರಾಜ್ (37 ವರ್ಷ), ಲೋಹಿತ್ (42 ವರ್ಷ), ಸತೀಶ್ ಇ., ಧೀರಜ್ ಕುಮಾರ್ (28 ವರ್ಷ), ಚಿದಾನಂದ (30 ವರ್ಷ), ಪ್ರಸಾದ್ (37 ವರ್ಷ), ಸಂದೀಪ್ (34 ವರ್ಷ), ಅನಿಲ್ ಕುಮಾರ್ (30 ವರ್ಷ), ನಿತೀಶ್ (21 ವರ್ಷ), ಸತೀಶ್ (36 ವರ್ಷ), ಮುಸ್ತಾಫ ಕೆ.ಪಿ. (33 ವರ್ಷ), ಅರುಣ್ ಡಿ.ಸೋಜ (50 ವರ್ಷ), ರೋಹಿತಾಶ್ವ ಪೂಜಾರಿ (46 ವರ್ಷ), ವಿಜೇತ್ ಕುಮಾರ್ (39 ವರ್ಷ), ನಿಖಿಲ್ (34 ವರ್ಷ), ನಿಶಾಂತ್ ಪರಾರಿಯಾದ ವ್ಯಕ್ತಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಎ.ಸಿ.ಜೆ. & ಜೆ.ಎಂ.ಎಫ್. ಸಿ. ನ್ಯಾಯಾಲಯ, ಬಂಟ್ವಾಳ ಅವರ ಡಿಸ್ ನಂ: 1770 /2024 ರ ಆದೇಶದಂತೆ ಪ್ರಕರಣ ದಾಖಲಾಗಿದೆ.
ಸ್ವಾಧೀನಪಡಿಸಿದ ಸ್ವತ್ತುಗಳ ಒಟ್ಟು ಮೌಲ್ಯ ರೂ.7,90,220/- ಆಗಿರುತ್ತದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 112/2024 ಕಲಂ: 79,80 ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
BANTWAL
ಡಿ.19 ರಂದು ಕಡ್ತಾಲಬೆಟ್ಟು ದ.ಕ ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ
Published
5 days agoon
18/12/2024By
NEWS DESK2ಬಂಟ್ವಾಳ: ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಕಡ್ತಾಲಬೆಟ್ಟು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಇದರ ಸಹಯೋಗದಲ್ಲಿ ಶಾಲಾ ವಾರ್ಷಿಕೋತ್ಸವವು ಡಿಸೆಂಬರ್ 19 ರಂದು ಸಂಸ್ಥೆಯ ಆವರಣದಲ್ಲಿ ನಡೆಯಲಿದೆ.
ಬೆಳಿಗ್ಗೆ 9 ಗಂಟೆಗೆ ಪ್ರಗತಿಪರ ಕೃಷಿಕರು ಮತ್ತು ಉದ್ಯಮಿಗಳು ಆದ ಜಯಪ್ರಕಾಶ್ ಶೆಟ್ಟಿ ಬುಳೇರಿ ಉದ್ಘಾಟನೆಯನ್ನು ಮಾಡಲಿದ್ದಾರೆ. ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಭಾರತಿ ರಾಜೇಂದ್ರ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಗತಿಪರ ಕೃಷಿಕ ಕೃಷ್ಣ ಶೆಟ್ಟಿ ಗೋಂಜಗುತ್ತು ಧ್ವಜಾರೋಹಣ ಮಾಡಲಿದ್ದು, ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ಸದಸ್ಯೆ ಮುತ್ತಮ್ಮ, ಪುಷ್ಪಾವತಿ ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 6.30 ಕ್ಕೆ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಆ ಬಳಿಕ ಶ್ರೀ ವಿಠಲ ನಾಯಕ್ ಮತ್ತು ಬಳಗದವರಿಂದ ನಿತ್ಯ ನೂತನ ಕಾರ್ಯಕ್ರಮ ಗೀತಾ ಸಾಹಿತ್ಯ ಸಂಭ್ರಮ, ಹಳೇ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶಾಲಾ ಹಳೇ ವಿದ್ಯಾರ್ಥಿ ಭರತ್ ರಾಜ್ ಶೆಟ್ಟಿ ಮತ್ತು ಬಳಗದವರಿಂದ ಯಕ್ಷ-ಗಾನ-ವೈಭವ ನಡೆಯಲಿದೆ.
BANTWAL
ಗರ್ಭಿಣಿ ವಾಸವಿದ್ದ ಮನೆಗೆ ಪುರಸಭೆ ಸದಸ್ಯನ ಗ್ಯಾಂ*ಗ್‌ನಿಂದ ಹ*ಲ್ಲೆ; ಪ್ರಕರಣ ದಾಖಲು!!
Published
1 week agoon
14/12/2024ಬಂಟ್ವಾಳ : ಗರ್ಭಿಣಿ ಇರುವ ಮನೆಗೆ ನುಗ್ಗಿ ಗೂಂಡಾಗಿರಿ ನಡೆಸಿದ್ದಾರೆಂಬ ಆ*ರೋಪ ಬಂಟ್ವಾಳದ ಮೂಡ ಗ್ರಾಮದ ಕಾಂಗ್ರೆಸ್ ಪುರಸಭೆ ಸದಸ್ಯ ಪಟಾಲಂ ವಿರುದ್ಧ ಕೇಳಿಬಂದಿದೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಾಗಿದೆ.
ಬಂಟ್ವಾಳ ಪುರಸಭೆ ಸದಸ್ಯ, ರೌ*ಡಿಶೀಟರ್ ಆಗಿರೊ ಅಸೈನರ್ ತಂಡದಿಂದ ಈ ದಾಂಧಲೆ ನಡೆದಿದ್ದು ಮನೆ ಬಾಡಿಗೆ ವ್ಯಾಜ್ಯ ಸಂಬಂಧ ಮ*ಧ್ಯರಾತ್ರಿ ಗರ್ಭಿಣಿ ಮನೆಗೆ ನುಗ್ಗಿ ಹ*ಲ್ಲೆ ಮಾಡಲಾಗಿದೆ. ಸಾಹುಲ್ ಹಮೀದ್ ಎಂಬುವವರ ಮನೆಗೆ ಮಧ್ಯರಾತ್ರಿ ನುಗ್ಗಿ ಅಸೈನರ್ ಹ*ಲ್ಲೆ ಮಾಡಿದ್ದಾನೆ ಎಂದು ಗಂ*ಭೀರ ಆರೋಪ ಕೇಳಿಬಂದಿದೆ.
ಈ ಘಟನೆ ವೇಳೆ ಮನೆಯವರು 112ಗೆ ಕರೆ ಮಾಡಿದ್ದು, ಇದರಿಂದ ಪೊಲೀಸರು ಬಂದಿದ್ದರಿಂದ ಅ*ನಾಹುತ ತಪ್ಪಿದೆ. ಹ*ಲ್ಲೆಯಿಂದ ಕೆಲವರಿಗೆ ಗಾ*ಯಗಳಾಗಿದ್ದು, ಬಂಟ್ವಾಳ ಟೌನ್ ಠಾಣೆಯಲ್ಲಿ ಎರಡು ಕಡೆಯಿಂದ ದೂರು-ಪ್ರತಿದೂರು ದಾಖಲಾಗಿದೆ. ಪೊಲೀಸರು ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್.ಐ.ಆರ್. ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರೋ ಆರೋಪಿಗಳಿಗಾಗಿ ತನಿಖೆ ನಡೆಸಿದ್ದಾರೆ.
LATEST NEWS
ದಿ*ಢೀರ್ ಹ*ಚ್ಚಿಕೊಂಡ ಬೆಂ*ಕಿ; ಆರು ಅಂಗಡಿಗಳು ಅ*ಗ್ನಿಗಾ*ಹುತಿ !!
ಮೊಹಾಲಿ ಕಟ್ಟಡ ಕು*ಸಿತ ಪ್ರಕರಣ; ಎರಡು ಸಾ*ವು, ಹಲವರು ಕಟ್ಟಡದಡಿ ಇರುವ ಶಂಕೆ !!
ಮೆಲ್ಬೋರ್ನ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಗಾಯಾಳುಗಳ ಬರೆ !
ಮಹಾರಾಷ್ಟ್ರ ಸರ್ಕಾರದ ನೂತನ ಸಚಿವರಿಗೆ ಖಾತೆ ಹಂಚಿಕೆ; ಯಾರಿಗೆ ಯಾವ ಖಾತೆ ?
ಬಾಂಗ್ಲಾ ಹಿಂದೂಗಳ ಮೇಲೆ ದಾ*ಳಿ ; ಭಾರತೀಯರ ಮುಗಿಸಲು ಉ*ಗ್ರರ ಸಂಚು!
ಮಹತ್ವದ ನಿರ್ಧಾರ ಕೈಗೊಂಡ ಬೈಡನ್: 4.3 ಶತಕೋಟಿ ಡಾಲರ್ ವಿದ್ಯಾರ್ಥಿ ಸಾಲ ಮನ್ನಾ
Trending
- BIG BOSS7 days ago
ಡ್ರೋನ್ ಪ್ರತಾಪ್ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯ; ವಿಚಾರಣೆಯಲ್ಲಿ ಪೊಲೀಸರಿಗೆ ಸಿಕ್ತು ಮಹತ್ವದ ಮಾಹಿತಿ
- LATEST NEWS5 days ago
ದಹಿ ಪುರಿ ಚಾಟ್ಸ್ ಬದಲು ಪೂರಿ, ಮೊಸರು ಕಳುಹಿಸಿಕೊಟ್ಟ ರೆಸ್ಟೋರೆಂಟ್
- BIG BOSS3 days ago
ಚೈತ್ರಾ ಕುಂದಾಪುರಗೆ ಮತ್ತೆ ಜೈಲು.. ಮುಂದಿನ ವಾರಕ್ಕೆ ಕ್ಯಾಪ್ಟನ್ ಯಾರೆಂದು ರಿವೀಲ್..!
- DAKSHINA KANNADA6 days ago
ಸಾವಿರ ಕಂಬದ ಬಸದಿಗೆ ಜಪಾನ್ನಿಂದ ಬಂದ ಅತಿಥಿಗಳು