Connect with us

    DAKSHINA KANNADA

    ಬಂಟರ ಸಂಘ ಬಜಪೆ ವಲಯದ 12 ನೇ ವಾರ್ಷಿಕ ಮಹಾಸಭೆ : ಪ್ರತಿಭಾ ಪುರಸ್ಕಾರ, ಅಶಕ್ತರಿಗೆ ನೆರವು

    Published

    on

    ಮಂಗಳೂರು : ಬಂಟರ ಸಂಘ ಬಜಪೆ ವಲಯದ 12 ನೇ ವಾರ್ಷಿಕ ಮಹಾಸಭೆ ಸಂಜೀವ ಶೆಟ್ಟಿ ಸಭಾಭವನದಲ್ಲಿ ನಡೆಯಿತು. ಬಂಟರ ಸಂಘ ಬಜಪೆ ವಲಯದ ಅಧ್ಯಕ್ಷ ಬಾಬು ಶೆಟ್ಟಿ ಪೆರಾರ ಅಧ್ಯಕ್ಷತೆ ವಹಿಸಿದ್ದರು.

    ಈ ಸಂದರ್ಭ 2023-24 ನೇ ಸಾಲಿನ ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ಮತ್ತು 2023-24 ನೇ ಸಾಲಿನ ಲೆಕ್ಕ ಪತ್ರ ಮಂಡನೆಯನ್ನು ಕೋಶಾಧಿಕಾರಿ ಸುರೇಶ್ ಶೆಟ್ಟಿ ಅರೆಕಲ್ಲು ಮಂಡಿಸಿ ಅನುಮೋದನೆ ಪಡೆದರು.

    ಈ ಸಂದರ್ಭ 50 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಶೇ. 90ಕ್ಕಿಂತ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಆಶಕ್ತರಿಗೆ ನೆರವಾಗುವ ‘ಹೊಸಬೆಳಕು ಯೋಜನೆ’ಯಡಿಯಲ್ಲಿ 4 ಜನ ಬಂಟ ಸಮಾಜ ಮತ್ತು ಇತರ ಸಮಾಜದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ನೀಡಲಾಯಿತು. ಈ ಸಂದರ್ಭ 5 ಮಂದಿ ವಿಶಿಷ್ಟ ಸಾಧಕರನ್ನು ಗುರುತಿಸಿ, ಸನ್ಮಾನಿಸಲಾಯಿತು.

    ಇದನ್ನೂ ಓದಿ : ಕೊನೆಗೂ ಮೌನ ಮುರಿದ್ರಾ ಸುಮಲತಾ..! ವೈರಲ್ ಪೋಸ್ಟ್‌ನಲ್ಲಿ ಏನಿದೆ ಗೊತ್ತಾ?

    ಕಾರ್ಯಕ್ರಮದಲ್ಲಿ ಸುಕೇಶ ಮಾನೈ, ನಿಟ್ಟೆ ಗುತ್ತು ರವಿರಾಜ್ ಶೆಟ್ಟಿ, ವಸಂತ ಶೆಟ್ಟಿ, ಗಿರೀಶ್ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಉದ್ಯಮಿ ಶಿವಪ್ರಸಾದ್ ಹೆಗ್ಡೆ, ಸುನಿಲ್ ಭಂಡಾರಿ, ವಿದ್ಯಾಧರ್ ಹೆಗ್ಡೆ, ಪ್ರವೀಣ್ ಆಳ್ವ, ರತ್ನಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

    ಸುಕೇಶ್ ಶೆಟ್ಟಿ ಮುಂಡರು ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ವಂದಿಸಿದರು. ಸತೀಶ್ ಶೆಟ್ಟಿ ಕಂದಾವರ ಕಾರ್ಯಕ್ರಮ ನಿರೂಪಿಸಿದರು.

     

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಮುಲ್ಕಿ : ಮನೆಗೆ ನುಗ್ಗಿ ನಗ ನಗದು ಕಳವು

    Published

    on

    ಮುಲ್ಕಿ : ಮನೆಮಂದಿ ಒಳಗಿದ್ದಾಗಲೇ, ಮನೆಗೆ ನುಗ್ಗಿ ನಗ ನಗದು ಕಳವುಗೈದ ಘಟನೆ ಮೂಲ್ಕಿ ಠಾಣಾ ವ್ಯಾಪ್ತಿಯ ಬಳ್ಕುಂಜೆ ನೀರಳಿಕೆಯಲ್ಲಿ ಇಂದು(ಜು.4) ಮುಂಜಾನೆ ನಡೆದಿದೆ. ಬಳ್ಕುಂಜೆ ನೀರಳಿಕೆ ನಿವಾಸಿ ಶೇಖಬ್ಬ ಪತ್ನಿ ಮತ್ತು ಮಕ್ಕಳು ರಾತ್ರಿ ಮಲಗಿದ್ದು ಶೇಖಬ್ಬ ಅವರ ಮಗಳ ಗಂಡ ರಾತ್ರಿ 1.00 ಗಂಟೆಗೆ ಕರೆ ಮಾಡಿದ್ದು ಕರೆ ಸ್ವೀಕರಿಸಿ ಮಲಗಿದ್ದರು. ಆದರೆ, ಆ ಸಂದರ್ಭ ಕಳ್ಳತನ ನಡೆದಿಲ್ಲ.


    ಮುಂಜಾನೆ 4.30 ಕ್ಕೆ ಶೇಕಬ್ಬ ಅವರ ಮಗಳು ಶೌಚಾಲಯಕ್ಕೆ ತೆರಳಲು ಏಳುವಾಗ ಘಟನೆ ಬೆಳಕಿಗೆ ಬಂದಿದೆ. ಮನೆ ಮಂದಿ ಮನೆಯ ಚಾವಡಿಯಲ್ಲಿ ಮಲಗಿದ್ದು, ಕಳ್ಳರು ಮನೆಯ ಮುಂಭಾಗದ ಚಿಲಕ ಹಾಕಿ ಹಿಂಬಾಗಿಲಿನ ಬಾಗಿಲ ಒಳಬಾಗದ ಚಿಲಕವನ್ನು ರಾಡ್ ನಿಂದ ಒಡೆದು ಕಳ್ಳರು ಒಳನುಗ್ಗಿದ್ದಾರೆ. ಮನೆಯಲ್ಲಿ ಜಾಲಾಡಿದ್ದಾರೆ.

    ಹಾಸಿಗೆಯ ಅಡಿಯಲ್ಲಿ ಕಪಾಟಿನ ಕೀಲಿಕೈ ಇದ್ದು, ಅದರಿಂದ ಕಪಾಟಿನ ಬೀಗ ತೆಗೆದು ಕಪಾಟನ್ನು ಜಾಲಾಡಿ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಸುಮಾರು 5000 ರೂಪಾಯಿ ನಗದು ದೋಚಿದ್ದಾರೆ.
    ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನ ದಳ, ಮುಲ್ಕಿ ಪೋಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.

    ಇದನ್ನೂ ಓದಿ : ಬಾಡಿಗೆ ಗೆಳತಿ ಜೊತೆ ಡೇಟಿಂಗ್..! ದುಬಾರಿ ಬಿಲ್‌ ನೋಡಿ ಯುವಕ ಶಾ*ಕ್‌..!

    Continue Reading

    DAKSHINA KANNADA

    ದ.ಕ.ಜಿಲ್ಲೆಯ ನೂತನ ಎಸ್ ಪಿಯಾಗಿ ಯತೀಶ್. ಎನ್ ಅಧಿಕಾರ ಸ್ವೀಕಾರ‌‌

    Published

    on

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಯತೀಶ್ ಎನ್‌ ಅವರು ಅಧಿಕಾರ ಸ್ವೀಕರಿಸಿದ್ದಾರೆ.

    ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿದ ಎಸ್‌ಪಿ ಯತೀಶ್ ಎನ್‌ ಅವರಿಗೆ ಗೌರವ ರಕ್ಷೆ ನೀಡುವ ಮೂಲಕ ಸ್ವಾಗತ ಕೋರಲಾಯಿತು. ಬಳಿಕ ಕಛೇರಿಯಲ್ಲಿ ನಿರ್ಗಮಿತ ಎಸ್‌ಪಿ ರಿಶ್ಯಂತ್ ಅವರಿಂದ ಯತೀಶ್ ಎನ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.

    ರಿಶ್ಯಂತ್ ಅವರಿಗೆ ಬೆಂಗಳೂರು ವೈರ್‌ಲೆಸ್‌ ವಿಭಾಗದ ಎಸ್‌ಪಿಯಾಗಿ ವರ್ಗಾವಣೆಯಾಗಿದ್ದು, ಮಂಡ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯತೀಶ್ ಎನ್‌ ಅವರನ್ನು ದಕ್ಷಿಣ ಕನ್ನಡ ಎಸ್‌ಪಿಯಾಗಿ ವರ್ಗಾವಣೆ ಮಾಡಲಾಗಿತ್ತು.

    Continue Reading

    DAKSHINA KANNADA

    ಫ್ರಿಡ್ಜ್​​​ ಮುಟ್ಟುವ ಮುನ್ನ ಹುಷಾರ್.. ವಿದ್ಯುತ್ ಶಾಕ್ ಹೊಡೆದು ತಾಯಿ-ಮಗಳು ಸಾವು

    Published

    on

    ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ದಾರುಣ ಘಟನೆ ನಡೆದಿದ್ದು, ವಿದ್ಯುತ್ ಸ್ಪರ್ಶಿಸಿ ತಾಯಿ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    55 ವರ್ಷದ ಶೈದಾ ಅವರು ಫ್ರಿಡ್ಜ್​​​ನಲ್ಲಿಟ್ಟಿದ್ದ ಮಾವಿನ ಹಣ್ಣು ಹೊರತೆಗೆಯಲು ಹೋಗಿದ್ದರು. ಆಗ ವಿದ್ಯುತ್ ಶಾಕ್ ಹೊಡೆದಿದೆ. ಇದನ್ನು ಗಮನಿಸಿದ ಮಗಳು ಅಮ್ಮನ ರಕ್ಷಣೆಗೆ ಓಡಿ ಬಂದಿದ್ದಾಳೆ. ಈ ವೇಳೆ ಆಕೆಯೂ ವಿದ್ಯುತ್ ಶಾಕ್ ಹೊಡೆದಿದ್ದು, ಮಗಳು ಅಫ್ಸನಾ ಕಾತೂನ್ ಕೂಡ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ.

    ಮೃತ ವ್ಯಕ್ತಿಯ ಮನೆಯಲ್ಲಿ ಮದುವೆ ಸಮಾರಂಭ ಇತ್ತು. ತಂಗಿಯ ಮದುವೆಯಲ್ಲಿ ಭಾಗಿಯಾಗಲು ತಾಯಿ ಮನೆಗೆ ಅಫ್ಸನಾ ಬಂದಿದ್ದಳು. ಬುಧವಾರ ನಡೆದ ಘಟನೆಯಲ್ಲಿ ತಾಯಿ ಮಗಳು ಸಾವನ್ನಪ್ಪಿದ್ದಾರೆ.

    ವಿಷಯ ತಿಳಿದು ಪೊಲೀಸರು ಮನೆಗೆ ಭೇಟಿ ನೀಡಿದ್ದರು. ಆದರೆ ಕುಟುಂಬಸ್ಥರು ಮರಣೋತ್ತರ ಪರೀಕ್ಷೆ ನಡೆಸಲು ನಿರಾಕರಿಸಿದ್ದಾರೆ. ಹೀಗಾಗಿ ಪೊಲೀಸರು ಪಂಚನಾಮೆ ನಡೆಸಿ ತಾಯಿ ಹಾಗೂ ಮಗಳ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.

    Continue Reading

    LATEST NEWS

    Trending