Connect with us

    LATEST NEWS

    ನಾನ್ ವೆಜ್ ಪ್ರಿಯರಿಗೆ ಬ್ಯಾಡ್ ನ್ಯೂಸ್….ಶೀಘ್ರದಲ್ಲೇ ಶವರ್ಮಾ ಬ್ಯಾನ್!?

    Published

    on

    ಮಂಗಳೂರು : ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಡೆಸಿದ ಟೆಸ್ಟ್​ನಲ್ಲಿ ಗೋಬಿ ಮಂಚೂರಿ, ಕಬಾಬ್​​, ಪಾನಿಪುರಿಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿತ್ತು. ಇದೀಗ ಶವರ್ಮಾಕ್ಕೂ ಕಂಟಕ ಎದುರಾಗಿದೆ. ಹೌದು, ಗೋಬಿ, ಕಬಾಬ್, ಪಾನಿಪುರಿ ಬಳಿಕ ಶವರ್ಮಾ ಬ್ಯಾನ್​ಗೆ ಆಹಾರ ಮತ್ತು ಗುಣಮಟ್ಟ ಇಲಾಖೆ (FASSAI) ಚಿಂತನೆ ನಡೆಸಿದೆ.


    ಆಹಾರ ಮತ್ತು ಗುಣಮಟ್ಟ ಇಲಾಖೆಯು ರಾಜ್ಯದ ವಿವಿಧೆಡೆಯಿಂದ 17 ಶವರ್ಮಾ ಮಾದರಿ ಪರೀಕ್ಷೆ ನಡೆಸಿದೆ 17ರ ಪೈಕಿ 8 ಮಾದರಿಯಲ್ಲಿ ಬ್ಯಾಕ್ಟೀರಿಯಾ ಈಸ್ಟ್ ಪತ್ತೆಯಾಗಿದೆ. ಸರಿಯಾದ ರೀತಿಯಲ್ಲಿ ಆಹಾರ ತಯಾರಿಸದ ಕಾರಣ ಬಾಕ್ಟೀರಿಯಾಗಳು ಪತ್ತೆಯಾಗಿವೆ. ಈಗಾಗಲೇ ಅಸುರಕ್ಷಿತ ಶವರ್ಮಾ ನೀಡಿರುವ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

    ಎಲ್ಲಾ ಶವರ್ಮಾ ಮಾರಾಟಗಾರರಿಗೆ FSSAI ನೋಂದಣಿ ಕಡ್ಡಾಯಗೊಳಿಸಲಾಗಿದೆ. ನೋಂದಣಿ ಪತ್ರ ಪ್ರದರ್ಶನ ಮಾಡದಿದ್ರೆ, ಮಾರಾಟಕ್ಕೆ ಬ್ಯಾನ್ ಮಾಡುವ ಎಚ್ಚರಿಕೆ ನೀಡಲಾಗಿದೆ. ಶವರ್ಮಾ ತಯಾರಿಕೆ ವೇಳೆ ಶುಚಿತ್ವ ಕಾಪಾಡುವಂತೆ ಸೂಚನೆ ನೀಡಲಾಗಿದೆ. ಶುಚಿತ್ವ ನಿರ್ವಹಣೆ, ನೋಂದಣಿ ಮಾಡಿಸದಿದ್ರೆ, ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ.

    ಕಬಾಬ್‌ ತಯಾರಿಕೆಯಲ್ಲಿ ಬಳಸಲಾಗುವ ಕೃತಕ ಬಣ್ಣದಲ್ಲಿ ಅಪಾಯಕಾರಿ ಅಂಶ ಪತ್ತೆಯಾದ ಹಿನ್ನೆಲೆ ಬಣ್ಣ ಬಳಸಬಾರದು ಎಂದು ಕರ್ನಾಟಕ ಆರೋಗ್ಯ ಇಲಾಖೆ ಇತ್ತೀಚಿಗೆ ಆದೇಶ ಹೊರಡಿಸಿದೆ. ಇದರೊಂದಿಗೆ ಗೋಬಿ ಮಂಚೂರಿ, ಕಾಟನ್‌ ಕ್ಯಾಂಡಿಗೂ ಬಣ್ಣ ಬಳಸದಂತೆ ಸೂಚಿಸಿದೆ.

    ಇದನ್ನೂ ಓದಿ : ಶಂಕರನಾರಾಯಣ ಗೋ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

    ಈಗ ಶವರ್ಮಾದಲ್ಲೂ ಆರೋಗ್ಯಕ್ಕೆ ಹಾನಿಯುಂಟುಮಾಡುವ ಅಂಶ ಇರುವುದು ಬಹಿರಂಗವಾಗಿದೆ. ಬೆಂಗಳೂರಿನ ಎಫ್‌ಎಸ್‌ಎಸ್‌ಎಐ ಪರೀಕ್ಷೆಯಲ್ಲಿ ಶವರ್ಮಾಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಯೀಸ್ಟ್ ಅಂಶವಿರೋದು ಪತ್ತೆಯಾಗಿದೆ. ಈ ಹಿಂದೆಯೂ ಶವರ್ಮಾ ಸೇವಿಸಿ ಮೃತಪಟ್ಟ ಹಾಗೂ ಆರೋಗ್ಯ ಹಾಳು ಮಾಡಿಕೊಂಡು ಆಸ್ಪತ್ರೆ ಪಾಲಾಗಿರುವ ಘಟನೆಗಳು ನಡೆದಿವೆ.

    LATEST NEWS

    WATCH VIDEO : ಮದುವೆ ಮನೆಗೆ ಎಂಟ್ರಿ ಕೊಟ್ಟ ಕಪಿರಾಯ; ಮಾಡಿದ್ದೇನು ನೋಡಿ

    Published

    on

    ಹಾಸನ : ಮದುವೆ ಅಂದ್ರೆ ಸಂಬಂಧಿಕರು, ನೆರೆ ಹೊರೆಯರು, ಆಪ್ತರು ಬರೋದು ಸಾಮಾನ್ಯ. ಆದ್ರೆ ಇಲ್ಲಿ ಕಪಿರಾಯ ಮದುವೆ ಮನೆಗೆ ಎಂಟ್ರಿ ಕೊಟ್ಟಿದ್ದಾನೆ. ಸುಮ್ಮನೆ ಮದುವೆ ನೋಡಿ ಹೋಗಿಲ್ಲ. ರಂಪಾಟ ಮಾಡಿದ್ದಾನೆ. ಈ ಘಟನೆ ನಡೆದಿರೋದು ಚೆನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದಲ್ಲಿ.


    ಹಿರಿಸಾವೆಯ ನುಗ್ಗೆಹಳ್ಳ ರಸ್ತೆಯಲ್ಲಿನ ಕಲ್ಯಾಣ ಮಂಟಪದಲ್ಲಿ ಸೋಮವಾರ(ಜು.1) ಮದುವೆ (Marriage) ಸಮಾರಂಭ ನಡೆಯುತ್ತಿತ್ತು. ಈ ವೇಳೆ ಕೋತಿಯೊಂದು ಮದುವೆ ಮನೆಗೆ ಎಂಟ್ರಿ ಕೊಟ್ಟಿದೆ. ಈ ಕೋತಿ ವರನ ಪಕ್ಕದಲ್ಲಿ ಕುಳಿತು ಮದುವೆಗೆ ಅಡ್ಡಿ ಪಡಿಸಿದೆ.
    ಅಷ್ಟೇ ಅಲ್ಲ, ಊಟದ ಹಾಲ್ ಗೂ ಹೋಗಿ ತೊಂದರೆ ಕೊಟ್ಟಿದ್ದು ಮಾತ್ರವಲ್ಲದೇ, 8 ಮಂದಿಗೆ ಕಚ್ಚಿದೆ. ಮದುವೆ ಸಂಭ್ರಮಕ್ಕೆ ಬಂದಿದ್ದ ಮಂದಿದ್ದ ಮಂದಿ ಗಾಯಗೊಂಡು ಆಸ್ಪತ್ರೆ ದರ್ಶನ ಪಡೆಯುವಂತೆ ಕಪಿರಾಯ ಮಾಡಿದ್ದಾನೆ.

    ಇದನ್ನೂ ಓದಿ : ಮನೆಯೊಳಗೆ ಈ ಪ್ರಾಣಿ ಪಕ್ಷಿಗಳು ಬರಬಾರದಂತೆ, ಯಾವುದು? ಯಾಕೆ ಗೊತ್ತಾ?

    ಇನ್ನು, ಈ ಹಳ್ಳಿಯ ಜನರಿಗೆ ಮಂಗನ ಕಾಟ ಯಾವಾಗಲೂ ಇದೆಯಂತೆ. ಈ ಬಾರಿ ಮದುವೆ ಮನೆಯಲ್ಲೂ ಕಪಿ ಚೇಷ್ಠೆ ಮಾಡಿದೆ. ಇದರಿಂದ ಕೋತಿಯನ್ನು ಸ್ಥಳಾಂತರ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

    Continue Reading

    LATEST NEWS

    ಬಾವನಿಂದಲೇ ಬಾಮೈದನ ಹ*ತ್ಯೆ..! ಮಗನ ಅಗಲಿಕೆ ನೋವಿನಿಂದ ತಾಯಿ ಆತ್ಮಹ*ತ್ಯೆ..!!

    Published

    on

    ಮೈಸೂರು/ಮಂಗಳೂರು: ಜಗಳ ಬಿಡಿಸಲು ಹೋದ ಭಾವಮೈದ ಭಾವನಿಂದಲೇ ಹತ್ಯೆಗೀಡಾದ ಘಟನೆ  ಮೈಸೂರಿನಲ್ಲಿ ನಡೆದಿದೆ. ಮುದ್ದಾಗಿ ಸಾಕಿದ್ದ ಮಗಳನ್ನು ರವಿಚಂದ್ರನ್ ಎಂಬಾತನಿಗೆ ಮದುವೆ ಮಾಡಿ ಕೊಟ್ಟಿದ್ದರು. ಆದರೆ ಆತ ದಿನನಿತ್ಯ ವರದಕ್ಷಿಣೆಗಾಗಿ ತಂಗಿಗೆ ಪೀಡಿಸುತ್ತಿದ್ದ ಎನ್ನಲಾಗಿದೆ.  ತಂಗಿ ಮೇಲೆ ಹಲ್ಲೆ ನಡೆಸುತ್ತಿದ್ದಾಗ ಬಿಡಿಸಲು ಹೋದ ಅಭಿಷೇಕ್ ಮೇಲೆ ರವಿಚಂದ್ರನ್ ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾನೆ.

    ಮಗನ ಅಗಲಿಕೆಯಿಂದ ತಾಯಿಯೂ ಆತ್ಮಹ*ತ್ಯೆ..!

    ಮಂಗಳೂರು ಸಬ್ ಜೈಲಿನಲ್ಲಿ ಮಾರಾಮಾರಿ..! ಇಬ್ಬರು ಆಸ್ಪತ್ರೆಗೆ ದಾಖಲು

    ಜೂ.9ರಂದು ಕುವೆಂಪು ನಗರದಲ್ಲಿ ಈ ದುರ್ಘಟನೆ ನಡೆದಿತ್ತು. ಮಗನ ಅಗಲುವಿಕೆಯ ನೋವಿನಿಂದ ಬೇಸೊತ್ತ ತಾಯಿ ಭಾಗ್ಯಮ್ಮ ಖಿನ್ನತೆಗೆ ಜಾರಿದ್ದರು. ಆದರೆ ಮಗನ ಅಗಲಿಕೆಯ ನೋವು ತಾಳಲಾರದೆ ಜು.1ರಂದು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಪೊಲೀಸ್ ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

    Continue Reading

    DAKSHINA KANNADA

    ಉಳ್ಳಾಲ : ಟಿಪ್ಪರ್‌ – ಸ್ಕೂಟರ್‌ ಅಪಘಾ*ತ; ಚಿಕಿತ್ಸೆ ಫಲಕಾರಿಯಾಗದೆ ಸವಾರ ಸಾ*ವು

    Published

    on

    ಉಳ್ಳಾಲ : ಟಿಪ್ಪರ್‌ ಹಾಗೂ ಸ್ಕೂಟರ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂ*ಭೀರ ಗಾ*ಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸ್ಕೂಟರ್ ಸವಾರ ಇಹಲೋಕ ತ್ಯಜಿಸಿದ್ದಾರೆ. ಪಾವೂರು ಮಲಾರು ಅಕ್ಷರನಗರ ನಿವಾಸಿ ವಿಶ್ವನಾಥ್‌ ಆಚಾರ್ಯ ಎಂಬವರ ಪುತ್ರ ಗಣೇಶ್‌ ಆಚಾರ್ಯ ( 27) ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊ*ನೆಯುಸಿರೆಳೆದಿದ್ದಾರೆ.

    ಫಸ್ಟ್‌ ನ್ಯುರೋ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯಲು ಸಹಕರಿಸಿದ ಹಿತೈಷಿಗಳ, ಸಂಬಂಧಿಕರ, ಸ್ನೇಹಿತರ ಪ್ರಾರ್ಥನೆ ಕೊನೆಗೂ ಈಡೇರಲಿಲ್ಲ.

    ಜೂ.೨೮ ರಂದು ಗಣೇಶ ಪಾವೂರು ಹರೇಕಳ ಕಡೆಯಿಂದ ಕೊಣಾಜೆ ಕಡೆಗೆ ತೆರಳುವ ಸಂದರ್ಭ ಬೆಳಿಗ್ಗೆ ೧೧.೫೦ರ ವೇಳೆಗೆ ಹರೇಕಳ ಗ್ರಾಮ ಪಂಚಾಯತ್‌ ಕಚೇರಿಯ ಎದುರುಗಡೆ ಅಪ*ಘಾತ ಸಂಭವಿಸಿದೆ. ಟಿಪ್ಪರ್‌ ವಾಹನ ಚಾಲಕನ ದುಡುಕುತನ ಹಾಗೂ ನಿರ್ಲಕ್ಷ್ಯತನದ ಚಾಲನೆ ನಡೆಸಿ ಹಠಾತ್‌ ಬ್ರೇಕ್‌ ಹಾಕಿದ ಪರಿಣಾಮ ಹಿಂಬದಿಯಲ್ಲಿದ್ದ ಸ್ಕೂಟರ್‌ ಡಿ*ಕ್ಕಿ ಹೊಡೆದು ಸ್ಕೂಟರ್‌ ಸಮೇತ ಸವಾರ ರಸ್ತೆಗೆಸೆಯಲ್ಪಟ್ಟು ಗಂಭೀ*ರವಾಗಿ ಗಾ*ಯಗೊಂಡಿದ್ದರು.

    ಗಾ*ಯಾಳುವನ್ನು ತಕ್ಷಣ ಟಿಪ್ಪರ್‌ ಚಾಲಕ ಸೇರಿದಂತೆ ಸ್ಥಳೀಯರು ನಾಟೆಕಲ್‌ ಕಣಚೂರು ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಅಡ್ಯಾರ್‌ ಫಸ್ಟ್‌ ನ್ಯುರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಮಂಗಳೂರಿನಲ್ಲಿ ಎ.ಸಿ ಮೆಕ್ಯಾನಿಕ್‌ ಆಗಿದ್ದ ಗಣೇಶ್‌, ಮನೆಯ ಹಿರಿಯ ಪುತ್ರನಾಗಿದ್ದು, ಜೀವನಾಧಾರವಾಗಿದ್ದರು. ಮೃ*ತರು ತಾಯಿ, ತಂದೆ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.

    ಇದನ್ನೂ ಓದಿ : ಮಂಗಳೂರು ಸಬ್ ಜೈಲಿನಲ್ಲಿ ಮಾರಾಮಾರಿ..! ಇಬ್ಬರು ಆಸ್ಪತ್ರೆಗೆ ದಾಖಲು

    ಟಿಪ್ಪರ್‌ ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಮೃ*ತ ಗಣೇಶ್‌ ಆಚಾರ್ಯ ಶಸ್ತ್ರಚಿಕಿತ್ಸೆಗೆ ರೂ.10 ಲಕ್ಷ ಖರ್ಚಾಗುವುದರಿಂದ ಸ್ನೇಹಿತರು ವಾಟ್ಸ್ಯಾಪ್‌ ಮೂಲಕ ದಾನಿಗಳ ಸಹಕಾರವನ್ನು ಕೋರಿದ್ದರು.

    Continue Reading

    LATEST NEWS

    Trending