DAKSHINA KANNADA
ಹಿರಿಯ ವೈದ್ಯ ಡಾ. ಬಿ ಎಂ ಹೆಗ್ಡೆಗೆ ಒಲಿಯಿತು ದೇಶದ ಎರಡನೇ ಅತ್ಯುನ್ನತ ಗೌರವ..!
Published
4 years agoon
By
Admin
ಹಿರಿಯ ವೈದ್ಯ ಡಾ. ಬಿ ಎಂ ಹೆಗ್ಡೆಗೆ ಒಲಿಯಿತು ದೇಶದ ಎರಡನೇ ಅತ್ಯುನ್ನತ ಗೌರವ..!
B.M Hegde, Senior physician awarded the Nation’s second highest national award..!
ಮಂಗಳೂರು: ನಾಡಿನ ಹೆಸರಾಂತ ವೈದ್ಯ ಬೆಳ್ಳೆ ಮೋನಪ್ಪ ಹೆಗ್ಡೆ , ಡಾ.ಬಿ.ಎಂ. ಹೆಗ್ಡೆ ಅವರು ದೇಶದ ಎರಡನೇ ರಾಷ್ಟ್ರೀಯ ಅತ್ಯುನ್ನತ ಪ್ರಶಸ್ತಿಯಾದ ಪದ್ಮ ವಿಭೂಷಣಕ್ಕೆ ಆಯ್ಕೆಯಾಗಿದ್ದಾರೆ.
ಹೃದ್ರೋಗ ತಜ್ಞರು, ವೈದ್ಯರಾಗಿ, ಅಧ್ಯಾಪಕರಾಗಿ, ಪರೀಕ್ಷಕರಾಗಿ, ಸಂಶೋಧಕರಾಗಿ, ಬರಹಗಾರರಾಗಿ, ಲೇಖಕರಾಗಿ, ಶಿಕ್ಷಣ ತಜ್ಞರಾಗಿ, ಉಪಕುಲಪತಿಗಳಾಗಿ, ವೈದ್ಯಕೀಯ ಕ್ಷೇತ್ರದಲ್ಲಿ ಅಗಾಧ ಸೇವೆ ಸಲ್ಲಿಸಿದ್ದಕ್ಕೆ ಹಲವು ಪ್ರಶಸ್ತಿಗಳು ಹೆಗ್ಡೆ ಅವರನ್ನು ಹುಡುಕಿಕೊಂಡು ಬಂದಿವೆ.2010ರಲ್ಲಿ ರಾಷ್ಟ್ರೀಯ ಅತ್ಯುನ್ನತ ಪ್ರಶಸ್ತಿಯಾದ ಪದ್ಮ ಭೂಷಣ ಲಭಿಸಿತ್ತು. ಈ ಬಾರಿ ಪದ್ಮ ವಿಭೂಷಣ ಪ್ರಶಸ್ತಿ ಲಭಿಸಿರುವುದು ಅವರ ಸೇವೆಗೆ ಸಂದ ಫಲವಾಗಿದೆ.
ಡಾ ಬಿ.ಎಂ. ಹೆಗ್ಡೆ 1938ರ ಆಗಸ್ಟ್ 18ರಂದು ಉಡುಪಿಯ ಬೆಳ್ಳೆ ಗ್ರಾಮದಲ್ಲಿ ಜನಿಸಿದರು. ಉಡುಪಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು.
ಹಿರಿಯಡ್ಕದ ಬೋರ್ಡ್ ಹೈಸ್ಕೂಲ್‌ನಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿ, ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಶಿಕ್ಷಣವನ್ನು ಪೂರೈಸಿ, ಮದ್ರಾಸ್ ವಿಶ್ವವಿದ್ಯಾನಿಲಯದಿಂದ ವೈದ್ಯ ಪದವಿಯನ್ನು 1960ರಲ್ಲಿ ಪಡೆದರು.
ಪ್ರೊ. ಬೆರ್ನಾರ್ಡ್ ನಂತಹ ನೋಬೆಲ್ ಪಾರಿತೋಷಕ ಪುರಸ್ಕೃತ ವೈದ್ಯರ ಜೊತೆ ಕೆಲಸ ಮಾಡಿದ ಹೆಗ್ಡೆಯವರು ಲಂಡನ್ನಿನ ಕಾಲೇಜುಗಳ ಎಂಆರ್‌ಸಿಪಿ ಪರಿವೀಕ್ಷಕರಾಗಿ ಆಯ್ಕೆಯಾದ ಪ್ರಥಮ ಭಾರತೀಯರಾಗಿದ್ದಾರೆ.
ಸ್ನಾತಕ, ಸ್ನಾತಕೋತ್ತರ ಹಾಗೂ ಪಿಎಚ್‌ಡಿ ಪರಿವೀಕ್ಷಕರಾಗಿ ದಕ್ಷಿಣ ಅಮೆರಿಕ ಒಂದನ್ನು ಬಿಟ್ಟು ಜಗತ್ತಿನ ಉಳಿದ ಎಲ್ಲ ಖಂಡಗಳ ಪ್ರಮುಖ ವಿ.ವಿ.ಗಳಿಗೆ ತೆರಳಿದ ಸಾಧನೆ ಬಿ.ಎಂ. ಹೆಗ್ಡೆ ಅವರ ಹೆಸರಲ್ಲಿದೆ.
1982ರಿಂದ ಲಂಡನ್ ವಿವಿಯ ಶಾಶ್ವತ ಸಂದರ್ಶನ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿರುವ ಗಣ್ಯರು, ಕಸ್ತೂರ್ಬಾ ವೈದ್ಯಕೀಯ ವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ, ಪ್ರಾಚಾರ್ಯರಾಗಿ, ಡೀನ್ ಆಗಿ ಕೊನೆಗೆ ಮಣಿಪಾಲ ಉನ್ನತ ಶಿಕ್ಷಣ ಸಂಸ್ಥೆಯ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿ ಈಗ ಮಂಗಳೂರಿನಲ್ಲಿ ಸಂತೃಪ್ತಿಯ ನಿವೃತ್ತ ಜೀವನವನ್ನು ನಡೆಸುತ್ತಿದ್ದಾರೆ.
1997ರಲ್ಲಿ ಕರ್ನಾಟಕ ರಾಜ್ಯೋತ್ಸವರ ಪ್ರಶಸ್ತಿ ಲಭಿಸಿದೆ. ವೈದ್ಯ ಲೋಕದ ಅತ್ಯುನ್ನತ ‘ಡಾ.ಬಿ.ಸಿ.ರಾಯ್’ ಪ್ರಶಸ್ತಿಯನ್ನು 1999ರಲ್ಲಿ ಪಡೆದಿದ್ದರು.
ಗಣರಾಜ್ಯದ ದಿನದಂದು ಮಂಗಳೂರಿನ ಹ್ಯಾಟ್ ಹಿಲ್ ನಲ್ಲಿರುವ ಡಾ। ಬಿ.ಎಂ ಹೆಗ್ಡೆಯವರ ಮನೆಯಲ್ಲಿ ದೇಶದ ಅತ್ಯುನ್ನತ ಪದ್ಮವಿಭೂಷಣ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ನೇತೃತ್ವದಲ್ಲಿ ಪ್ರಧಾನಿಸಲಾಯಿತು.
ಪದ್ಮವಿಭೂಷಣ ಪ್ರಶಸ್ತಿ ಬಂದಿರುವುದಕ್ಕೆ ಡಾ ಬಿ ಎಂ ಹೆಗ್ಡೆ ಅವರು ಮಾಧ್ಯಮಗಳ ಮುಂದೆ ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ..
ಡಾ. ಬಿ.ಎಂ ಹೆಗ್ಡೆಯವರಿಗೆ ಅಭಿನಂದಿಸಿದ ಸಂಸದ ಕಟೀಲ್- ಶಾಸಕ ವೇದವ್ಯಾಸ್..
ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾದ ಡಾ. ಬಿ.ಎಂ ಹೆಗ್ಡೆ ಅವರನ್ನು ಸಂಸದರೂ ಬಿಜೆಪಿ ರಾಜ್ಯ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಮಂಗಳೂರು ನಗರ ದಕ್ಷಿಣ ಶಾಸಕರಾದ ಡಿ.ವೇದವ್ಯಾಸ್ ಕಾಮತ್ ಅವರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ದಿವಾಕರ್ ಪಾಂಡೇಶ್ವರ, ಪಾಲಿಕೆ ಮುಖ್ಯ ಸಚೇತಕರಾದ ಪ್ರೇಮಾನಂದ ಶೆಟ್ಟಿ, ಪಾಲಿಕೆ ಸ್ಥಾಯಿ ಸಮಿತಿ ಅದ್ಯಕ್ಷರಾದ ಪೂರ್ಣಿಮಾ, ಜಗದೀಶ್ ಶೆಟ್ಟಿ ಬೋಳೂರು, ಶರತ್ ಕುಮಾರ್, ಪಾಲಿಕೆ ಸದಸ್ಯರಾದ ಸುಧೀರ್ ಶೆಟ್ಟಿ, ಮನೋಹರ್ ಶೆಟ್ಟಿ ಕದ್ರಿ, ಸಂಧ್ಯಾ ಮೋಹನ್ ಆಚಾರ್, ಬಿಜೆಪಿ ಮುಖಂಡರಾದ ಸುದರ್ಶನ್ ಮೂಡಬಿದಿರೆ, ವಿಜಯ್ ಕುಮಾರ್ ಶೆಟ್ಟಿ,ನಿತಿನ್ ಕುಮಾರ್, ಸಂತೋಷ್ ರೈ ಬೋಳಿಯಾರು, ರಾಧಾಕೃಷ್ಣ, ರಾಮಚಂದ್ರ ಬೈಕಂಪಾಡಿ ಮುಂತಾದವರು ಉಪಸ್ಥಿತರಿದ್ದರು.
DAKSHINA KANNADA
ಮೂಲ್ಕಿ: ವಿವಿಧ ರಂಗಗಳ ಸಾಧಕರಿಗೆ ‘ಅರಸು ಕಂಬಳ’ ಪ್ರಶಸ್ತಿ ಪ್ರದಾನ
Published
3 hours agoon
21/12/2024ಮೂಲ್ಕಿ: ಮೂಲ್ಕಿ ಅರಸು ಕಂಬಳ ಸಂದರ್ಭ ಮೂಲ್ಕಿ ಸೀಮೆ ವ್ಯಾಪ್ತಿಯ ವಿವಿಧ ರಂಗಗಳ 14 ಮಂದಿ ಸಾಧಕರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಅರಮನೆಯ ಧರ್ಮ ಚಾವಡಿಯಲ್ಲಿ ಅರಸು ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯಕ್ರಮ ಡಿ. 22ರಂದು ಮಧ್ಯಾಹ್ನ 12ಕ್ಕೆ ನಡೆಯಲಿದೆ ಎಂದು ಅರಸರಾದ ದುಗ್ಗಣ್ಣ ಸಾವಂತರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೂಲ್ಕಿ ಅರಮನೆ ಟ್ರಸ್ಟ್ ಮತ್ತು ಹಳೆಯಂಗಡಿಯ ಪ್ರಿಯ ದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಸಹಭಾಗಿತ್ವದಲ್ಲಿ ಕಾಠ್ಯಕ್ರಮ ನಡೆ. ಯಲಿದೆ. ಶ್ರೀ ಅರುಣಾನಂದ ತೀರ್ಥ ಸ್ವಾಮೀ ಜಿ (ಸಾಧನಾ ಪ್ರಶಸ್ತಿ) ದಿ। ಎಚ್. ನಾರಾಯಣ ಸನಿಲ್ (ಮರಣೋತ್ತರ-ಸಮಾಜ ಸೇವೆ ಮತ್ತು ಶಿಕ್ಷಣ, ಸಹಕಾರಿ) ದಿ। ಎನ್. ಬಾಬು ಶೆಟ್ಟಿ (ಮರಣೋತ್ತರ-ಸಮಾಜ ಸೇವೆ), ಮೀರಾ ಬಾಯಿ ಕೆ. (ಶಿಕ್ಷಣ), ಎಚ್. ಶಕುಂತಳಾ ಭಟ್ (ಸಾಹಿತ್ಯ) ವಾಲ್ಟರ್ ಡಿ’ಸೋಜಾ (ಕೃಷಿ ಮತ್ತು ಪರಿಸರ), ಡಾ। ಹಸನ್ ಮುಬಾರಕ್ (ವೈದ್ಯಕೀಯ), ಸೀತಾರಾಮ್ ಕುಮಾರ್ ಕಟೀಲು (ಯಕ್ಷಗಾನ), ಪರಮಾನಂದ ಸಾಲ್ಯಾನ್ (ಸಾಹಿತ್ಯ), ಶಿವ ಸಂಜೀವಿನಿ ಸುರಗಿರಿ (ಸಂಘ ಸಂಸ್ಥೆ), ಮಾಧವ ಶೆಟ್ಟಿಗಾರ್ ಮತ್ತು ಚಂದ್ರಕುಮಾರ್ (ಸಾಮಾಜಿಕ ಕ್ಷೇತ್ರ) ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು (ಸಂಘಸಂಸ್ಥೆ) ವಿನಾಯಕಯಕ್ಷಗಾನ ಫೌಂಡೇಶನ್ ಕೆರೆಕಾಡು (ಯಕ್ಷಗಾನ ತಂಡ) ಇವರಿಗೆ ಪ್ರಶಸ್ತಿ ನೀಡಲಾಗುವುದು.
ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಆಳದಂಗಡಿ ಅರಮನೆಯ ತಿಮ್ಮಣ್ಣ ಅರಸರಾದ ಡಾ। ಪದ್ಮಪ್ರಸಾದ್ ಅಜಿಲರು, ದ.ಕ. ಕೇಂದ್ರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿವೃತ್ತ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ಪಿ. ಮುಂತಾದವರು ಉಪಸ್ಥಿತರಿರುವರು ಎಂದರು. ಅರಮನೆಟ್ರಸ್ಟ್‌ನ ಗೌತಮ್ ಜೈನ್, ಪ್ರಿಯದರ್ಶಿನಿ ಸೊಸೈಟಿಯ ಅಧ್ಯಕ್ಷ ವಸಂತ್ ಬೆರ್ನಾಡ್ ಹಾಗೂ ಸಿಇಒ ಸುದರ್ಶನ್ ಉಪಸ್ಥಿತರಿದ್ದರು.
DAKSHINA KANNADA
ಅತಿ ವೇಗ ತಂದಿಟ್ಟ ಪ್ರಾ*ಣಾಪಾಯ; ಬಸ್‌ಗೆ ಡಿ*ಕ್ಕಿ ಹೊ*ಡೆದು ಬೈಕ್ ಸವಾರ ಸಾ*ವು
Published
8 hours agoon
21/12/2024ಮಂಗಳೂರು: ಹೆಲ್ಮೆಟ್ ಧರಿಸದ ದ್ವಿಚಕ್ರ ಸವಾರರೊಬ್ಬರು ರಸ್ತೆ ಅ*ಪಘಾ*ತದಲ್ಲಿ ಮೃ*ತಪಟ್ಟ ಘಟನೆ ಕಾನ ಕುಳಾಯಿ ಗುಡ್ಡೆ ಜಂಕ್ಷನ್‌ನಲ್ಲಿ ನನ್ನೆ (ಡಿ.20) ರಾತ್ರಿ ನಡೆದಿದೆ.
ಮೃ*ತರನ್ನು ಕಾನ ನಿವಾಸಿ ರೆಮ್ಮಿ (38) ಎಂದು ಗುರುತಿಸಲಾಗಿದೆ.
ಕುಳಾಯಿಯಲ್ಲಿ ಟ್ಯೂಶನ್‌ಗೆ ತೆರಳಿದ್ದ ಮಗಳನ್ನು ಕರೆತರಲೆಂದು ರೆಮ್ಮಿ ತನ್ನ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದ. ಕುಳಾಯಿಗುಡ್ಡೆ ಜಂಕ್ಷನ್ ಬಳಿ ವಾಹನಗಳ ತಪಾಸಣೆಯಲ್ಲಿ ನಿರತರಾಗಿದ್ದ ಮಂಗಳೂರು ಉತ್ತರ ಸಂಚಾರ ಪೊಲೀಸರು ರೆಮ್ಮಿಯನ್ನು ಎಚ್ಚರಿಸಿದ್ದರೂ ಗಮನಿಸದ ರೆಮ್ಮಿ ಸುರತ್ಕಲ್ ಕಡೆಗೆ ಅತಿ ವೇಗದಿಂದ ತನ್ನ ದ್ವಿಚಕ್ರ ವಾಹನವನ್ನು ತಿರುಗಿಸಿದಾಗ ಎದುರುರಿನಿಂದ ಬರುತ್ತಿದ್ದ ಖಾಸಗಿ ಸಿಟಿ ಬಸ್ ಡಿ*ಕ್ಕಿ ಹೊಡೆದಿತ್ತು.
ಇದನ್ನೂ ಓದಿ : ಪುತ್ತೂರು: ಬಸ್-ಬೈಕ್ ಅಪಘಾತ, ಬೈಕ್ ಸವಾರ ಸಾ*ವು
ಅ*ಪಘಾ*ತದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ರೆಮ್ಮಿ ಗಂ*ಭೀರ ಗಾ*ಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃ*ತಪಟ್ಟಿದ್ದಾರೆ. ಅ*ಪಘಾ*ತ ನಡೆದ ಬೆನ್ನಲ್ಲೇ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಪೊಲೀಸರ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.
DAKSHINA KANNADA
ಮೂಲ್ಕಿ : ಭೀ*ಕರ ಕೊ*ಲೆ ಪ್ರಕರಣ; ಆರೋಪಿಗಳಿಬ್ಬರು ಅರೆಸ್ಟ್
Published
9 hours agoon
21/12/2024ಮೂಲ್ಕಿ : ನಗರ ಸಮೀಪ ಶರಣಪ್ಪ (31) ಎಂಬವರ ಭೀಕರ ಕೊ*ಲೆಯಾಗಿದ್ದು, ಮುಲ್ಕಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 09/2020 ಕಲಂ 302 r/w 34 ಐಪಿಸಿಯಡಿ ಆರೋಪಿಗಳನ್ನು ಬಂಧಿಸಲಾಗಿದೆ.
ದಿನಾಂಕ 30/01/2020 ರಂದು ರಾತ್ರಿ ಸುಮಾರು 10-00 ಗಂಟೆಗೆ ಮುಲ್ಕಿ ತಾಲ್ಲೂಕ್ ಕಾರ್ನಾಡ್ ಗ್ರಾಮದ ವನಭೋಜನ ಎಂಬಲ್ಲಿ ಬಿಹಾರ ಮೂಲದ ಸನ್ನಿಬಾಬು ಮತ್ತು ಗಲ್ಲುರಾಮ ಅಲಿಯಾಸ್ ಸಚಿನ್ ಅಲಿಯಾಸ್ ನವೀನ ಶರಣಪ್ಪನನ್ನು ಕೊ*ಲೆಗೈದ ಆರೋಪದಡಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಶರಣಪ್ಪನು ಆರೋಪಿಗಳಿಗೆ ಹಾಗೂ ಆರೋಪಿಗಳ ತಂದೆ -ತಾಯಿಗೆ ಬೇಡದ ಕೆ*ಟ್ಟ ಮಾತಿನಿಂದ ಬೈ*ದ ಎಂಬ ಕೋಪದಿಂದ ಶರಣಪ್ಪನ ಕುತ್ತಿಗೆಗೆ ಚೂ*ರಿಯಿಂದ ಚು*ಚ್ಚಿ-ಚು*ಚ್ಚಿ ಕೊ*ಯ್ದು ಕೊ*ಲೆ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ದಿನಾಂಕ 20/12/2024 ರಂದು ಮಾನ್ಯ 6 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಕಾಂತರಾಜು ಎಸ್.ವಿ ರವರು ಆರೋಪಿಗಳಿಗೆ ಕಲಂ 302 ಐಪಿಸಿ ಗೆ ಜೀವಾವಧಿ ಶಿಕ್ಷೆ ಮತ್ತು ತಲಾ 10000 ದಂಡ, ಹಾಗೂ 341ಐಪಿಸಿ ಗೆ 01 ತಿಂಗಳ ಸಾಧ ಸಜೆ ತಲಾ 500 ದಂಡ ವಿಧಿಸಿದೆ.
ಮಾನ್ಯ ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿಯನ್ನು ಮುಲ್ಕಿ ಠಾಣಾ ಪಿ ಐ ಜಯರಾಮ್ ಗೌಡ ರವರು ಸಲ್ಲಿಸಿದ್ದು ತನಿಖಾ ಸಹಾಯಕರಾಗಿ ASI ಉಮೇಶ್ ರವರು ಸಹಕರಿಸಿದ್ದು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಮೊತಿಲಾಲ್ ಚೌದರಿರವರು ಸಾಕ್ಷಿಗಳನ್ನು ಸಾಕ್ಷಿ ವಿಚಾರಣೆ ಮಾಡಿ ವಾದ ಮಂಡಿಸಿರುತ್ತಾರೆ.
LATEST NEWS
3 ಮಕ್ಕಳ ತಾಯಿಗೆ, 2 ಮಕ್ಕಳ ತಂದೆ ಜೊತೆ ಅ*ಫೇರ್; ಜೋಡಿಗೆ ಭರ್ಜರಿ ಮರುವಿವಾಹ
BBK11: ಆಟದ ದಿಕ್ಕು, ದಾರಿ ತಪ್ಪಿಸಿದ್ರಾ ಚೈತ್ರಾ ಕುಂದಾಪುರ? ಕಿಚ್ಚ ಸುದೀಪ್ ಖಡಕ್ ಕ್ಲಾಸ್!
ಟಿವಿ ರಿಮೋಟ್ ಕೊಡದಿದ್ದಕ್ಕೆ ಬಾಲಕಿ ಆತ್ಮಹ*ತ್ಯೆ
ಉಡುಪಿಯ ರೆಸಾರ್ಟ್ ನಲ್ಲಿ ಭಾರಿ ಅಗ್ನಿ ಅವಘಡ : ಪ್ರಾಣಾಪಾಯದಿಂದ ಪಾರಾದ ಪ್ರವಾಸಿಗರು!
ಮೂಲ್ಕಿ: ವಿವಿಧ ರಂಗಗಳ ಸಾಧಕರಿಗೆ ‘ಅರಸು ಕಂಬಳ’ ಪ್ರಶಸ್ತಿ ಪ್ರದಾನ
ಬಿಗ್ಬಾಸ್ ಮನೆಯಲ್ಲಿ ದೆವ್ವ, ಭೂತಗಳ ಓಡಾಟ
Trending
- BIG BOSS5 days ago
ಡ್ರೋನ್ ಪ್ರತಾಪ್ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯ; ವಿಚಾರಣೆಯಲ್ಲಿ ಪೊಲೀಸರಿಗೆ ಸಿಕ್ತು ಮಹತ್ವದ ಮಾಹಿತಿ
- DAKSHINA KANNADA6 days ago
ಕ್ಯಾಟ್ಕದ ನೂತನ ಅಧ್ಯಕ್ಷರಾಗಿ ಲಂಚುಲಾಲ್ ಅವಿರೋಧವಾಗಿ ಆಯ್ಕೆ
- BIG BOSS6 days ago
ದಿಢೀರ್ ನಿರ್ಧಾರ ಕೈಗೊಂಡ ಗೋಲ್ಡ್ ಸುರೇಶ್; ಕಿಚ್ಚ ಸುದೀಪ್ ಶಾಕ್ !
- LATEST NEWS3 days ago
ದಹಿ ಪುರಿ ಚಾಟ್ಸ್ ಬದಲು ಪೂರಿ, ಮೊಸರು ಕಳುಹಿಸಿಕೊಟ್ಟ ರೆಸ್ಟೋರೆಂಟ್