Thursday, October 21, 2021

ಕರಾವಳಿಯಲ್ಲಿ ಆಯುಧ ಪೂಜಾ ಸಂಭ್ರಮ

ಮಂಗಳೂರು: ಕರಾವಳಿಯಲ್ಲಿ ಇಂದು ಆಯುಧ ಪೂಜಾ ಸಂಭ್ರಮ. ಶರನ್ನವರಾತ್ರಿಯ 9ನೇ ದಿನ ವಿಶೇಷವಾದ ಪೂಜೆ ಆಯುಧ ಪೂಜಾ ದಿನ. ಆದರೆ ಈ ಬಾರಿ 8ನೇ ದಿನದಂದು ಆಯುಧ ಪೂಜಾ ಕಾರ್ಯಕ್ರಮಗಳು ನಡೆದವು.

ರಕ್ಕಸರನ್ನು ಸಂಹಾರ ಮಾಡುವ ಶ್ರೀ ಆದಿಶಕ್ತಿ ದೇವಿಯನ್ನು ಆರಾಧನೆ ಮಾಡುವ 9ನೇ ದಿನದ ವಿಶೇಷವಾಗಿದ್ದು, ಕೊನೆಯ ದಿನ ಎಲ್ಲರೂ ಶ್ರೀ ದೇವಿಯ ಬಳಿ ತಮ್ಮೆಲ್ಲಾ ಆಯುಧಗಳನ್ನು ಇಟ್ಟು ದೇವಿ ಆರಾಧನೆ ಮಾಡುತ್ತಿರುವ ವಿಶೇಷ ದಿನವೇ ಇದಾಗಿದೆ.

ಇಂದು ಶಿವಶಕ್ತಿ ಕ್ಷೇತ್ರ ಸಹಿತ ಶರವು ಮಹಾಗಣಪತಿ, ಕಾವು ಶ್ರೀ ಪಂಚಲಿಂಗೇಶ್ವರ, ಕದ್ರಿ ದೇವಸ್ಥಾನ ಸಹಿತ ಎಲ್ಲೆಡೆ ಆಯುಧ ಪೂಜೆ ಸಂಭ್ರಮ ನಡೆಯಿತು. ಎಲ್ಲರೂ ವಾಹನಗಳನ್ನು ತೊಳೆದು ವಿಶೇಷವಾಗಿ ಹೂಗಳಿಂದ ಅಲಂಕೃತಗೊಳಿಸಿ ದೇಗುಲದ ಮುಂಭಾಗಕ್ಕೆ ತಂದು ಅರ್ಚಕರಿಂದ ಪೂಜೆ ನಡೆಸಿ ತೆಂಗಿನ ಕಾಯಿ ಒಡೆಸಿದರು.

ಕ್ಷೇತ್ರದ ಆಯುಧ ಪೂಜೆ ಕುರಿತು ಶರವು ದೇವಸ್ಥಾನದ ಅರ್ಚಕ ರಾಹುಲ್‌ ಶಾಸ್ತ್ರಿ ನಮ್ಮ ಕುಡ್ಲ ವಾಹಿನಿಗೆ ಮಾಹಿತಿ ನೀಡಿದರು.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...