Connect with us

    DAKSHINA KANNADA

    ಅಯೋಧ್ಯೆ ರಾಮಲಲ್ಲಾ ಪ್ರತಿಷ್ಠೆಯ ದಿನ ನೌಕರರಿಗೆ ರಜೆ ನೀಡಲಿ- ವಿಹೆಚ್‌ಪಿ ಮನವಿ

    Published

    on

    ಮಂಗಳೂರು: ಅಯೋಧ್ಯೆಯಲ್ಲಿ ಜ.22ರಂದು ರಾಮಲಲ್ಲಾನ ಪ್ರಾಣಪ್ರತಿಷ್ಠೆ ಹಿನ್ನೆಲೆ ರಜೆ ನೀಡುವಂತೆ ವಿಶ್ವ ಹಿಂದೂ ಪರಿಷತ್ ಮನವಿ ಮಾಡಿದೆ.

    ಜಿಲ್ಲೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಲು ಅವಕಾಶ ಕಲ್ಪಿಸಲು ರಜೆ ಘೋಷಣೆ ಮಾಡಬೇಕು ಎಂದು ವಿ‌.ಎಚ್.ಪಿ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್ ಮನವಿ ಮಾಡಿದ್ದಾರೆ. ಜ. 22 ರ ಬೆಳಗ್ಗೆ 10 ರಿಂದ ಮದ್ಯಾಹ್ನ 2 ಘಂಟೆ ಅವಧಿಯಲ್ಲಿ ವ್ಯಾಪಾರ ಮಳಿಗೆಗಳು, ಹೊಟೇಲ್ ಉದ್ಯಮಿಗಳು , ಫ್ಯಾಕ್ಟರಿಗಳು, ಶಾಲಾಕಾಲೇಜು ಸಂಘ ಸಂಸ್ಥೆಗಳು ಹಾಗೂ ಉದ್ಯಮಿಗಳು ತಮ್ಮ ಸಿಬ್ಬಂದಿಗೆ ರಜೆ ಘೋಷಿಸುವಂತೆ ಮನವಿ ಮಾಡಿದ್ದಾರೆ. ರಾಮದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ದೇಶಕ್ಕೆ ಶುಭ ದಿನವಾಗಿದ್ದು, ರಾಮಲಲ್ಲಾನ ಪ್ರಾಣಪ್ರತಿಷ್ಠೆ ದಿನವನ್ನು ಸಂಭ್ರಮದಿಂದ ಆಚರಿಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ವಿವಿಧ ಮಂದಿರಗಳಲ್ಲಿ ಹೋಮ, ಪೂಜೆ,ಪ್ರವಚನ ನಡೆಯಲಿದೆ ಅಲ್ಲದೆ ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮದ ನೇರಪ್ರಸಾರದ ವ್ಯವಸ್ಥೆ ಇರಲಿದೆ. ಹೀಗಾಗಿ ಜನರಿಗೆ ಭಾಗವಹಿಸಲು ಅನುಕೂಲವಾಗುವಂತೆ ತಮ್ಮಲ್ಲಿ ಕೆಲಸ ಮಾಡುವವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವಂತೆ ವಿನಂತಿ ಎಂದು ಶರಣ್ ಪಂಪ್‌ವೆಲ್‌ ಮನವಿ ಮಾಡಿದ್ದಾರೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಸುಳ್ಯ – ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ, ಕೊಲೆ ಯತ್ನ; ಮಹಿಳೆ ಸ್ಥಿತಿ ಗಂಭೀರ

    Published

    on

    ಸುಳ್ಯ:  ರಾತ್ರಿ ಮಲಗಿರುವಾಗ ಮಹಿಳೆ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ, ಕೊಲೆಗೆ ಯತ್ನಿಸಿರುವ ಘಟನೆ ನಡೆದಿರುವುದು ತಿಳಿದು ಬಂದಿದೆ.


    ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಕಲ್ಲರ್ಪೆ ಜಯಭಾರತಿ (56) ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಮಹಿಳೆಯ ಭಾವ ಶಂಕರ ಅವರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
    ಗಂಭೀರ ಗಾಯಗೊಂಡ ಮಹಿಳೆಯನ್ನು ಸಂಬಂಧಿಕರು ಸುಳ್ಯದ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಬೆಂಕಿ ಹಚ್ಚಿರುವ ವ್ಯಕ್ತಿಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೌಟುಂಬಿಕ ವಿವಾದದ ಹಿನ್ನಲೆಯಲ್ಲಿ ಕೃತ್ಯ ಎಸಗಿರುವ ಬಗ್ಗೆ ಶಂಕಿಸಲಾಗಿದೆ.
    ಬೆಳ್ಳಾರೆ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಅಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

    Continue Reading

    DAKSHINA KANNADA

    ಕಟೀಲು, ಕುದ್ರೋಳಿ ಕ್ಷೇತ್ರಕ್ಕೆ ನಟ ಸಂಜಯ್ ದತ್ ಭೇಟಿ

    Published

    on

    ಮಂಗಳೂರು : ಮಂಗಳೂರು ದಸರಾ ಬಲು ಸುಂದರ. ಪ್ರತೀ ವರ್ಷ ಅಬ್ಬರದಿಂದ ನಡೆವ ಮಂಗಳೂರು ದಸರಾಗೆ ಮನಸೋಲದವರಿಲ್ಲ. ವೈಭವದ ಸಂಭ್ರಮಕ್ಕೆ ಪ್ರತಿ ವರ್ಷ ಸಿನಿತಾರೆಯರು ಮೆರುಗು ನೀಡುತ್ತಾರೆ. ಈ ಬಾರಿ ಬಾಲಿವುಡ್ ನಟ ಸಂಜಯ್ ದತ್ ಬಂದಿದ್ದರು.  ಮೊದಲು ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿಯ ದರ್ಶನ ಪಡೆದ ಅವರು, ಬಳಿಕ ಕುದ್ರೋಳಿ ದೇವಸ್ಥಾನಕ್ಕೆ ಭೇಟಿ ನೀಡಿದರು. ದರ್ಬಾರ್ ಹಾಲ್ ಗೆ ತೆರಳಿ ದೇವಿಯರ ವಿಗ್ರಹ ಕಣ್ತುಂಬಿಕೊಂಡರು. ಶಾರದೆ ಮಾತೆಗೆ ನಮಿಸಿದರು.

    ಎರಡೂ ದೇವಸ್ಥಾನದಲ್ಲಿ ಸಂಜಯ್ ದತ್ ರಿಗೆ ದೇವರ ಶೇಷ ವಸ್ತ್ರ ಮತ್ತು ಪ್ರಸಾದ ನೀಡಿ ಗೌರವಿಸಲಾಯಿತು.

    ಬಳಿಕ ಅವರು ಹುಲಿ ಕುಣಿತದ ಊದು ಪೂಜೆಯಲ್ಲಿ ಭಾಗಿಯಾದರು.  ಪಿಲಿ ನಲಿಕೆ ನೋಡಿ ಆನಂದಿಸಿದರು. ಬಳ್ಳಾಲಭಾಗ್‌ ನಲ್ಲಿ ನಡೆದಿದ್ದ ಈ ಊದು ಪೂಜೆ ಕಾರ್ಯಕ್ರಮಕ್ಕೆ ನಟ ಸಂಜಯತ್ ದತ್ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಮುತ್ತಿಕೊಂಡರು. ತಮ್ಮ ಮೊಬೈಲ್‌ ನಲ್ಲಿ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದ್ದರು.

     

     

    Continue Reading

    DAKSHINA KANNADA

    ‘ಮಂಗಳೂರು ದಸರಾ’ ವೈಭವದ ಶೋಭಾಯಾತ್ರೆಗೆ ಕ್ಷಣಗಣನೆ….!!

    Published

    on

    ಮಂಗಳೂರು; ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಆಚರಿಸಲಾಗುತ್ತಿರುವ ‘ಮಂಗಳೂರು ದಸರಾ’ ಸಂಭ್ರಮದ ಬೃಹತ್ ಶೋಭಾಯಾತ್ರೆ ಇಂದು (ಅ.13) ಸಂಜೆ 4 ಗಂಟೆಗೆ ಆರಂಭವಾಗಿ ನಾಳೆ (ಅ.14) ಮುಂಜಾನೆ ಶಾರದೆಯ ಜಲಸ್ತಂಭನದ ಮೂಲಕ ಸಮಾಪನಗೊಳ್ಳಲಿದೆ.


    ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ. ಜನಾರ್ಧನ ಪೂಜಾರಿ ನೇತೃತ್ವದಲ್ಲಿ ನಡೆಯುವ ಶೋಭಾಯಾತ್ರೆಯಲ್ಲಿ ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಶ್ರೀ ಮಹಾಗಣಪತಿ, ನವದುರ್ಗೆಯರ ಹಾಗೂ ಶಾರದಾ ಮಾತೆಯ ವರ್ಣರಂಜಿತ ಬೃಹತ್ ದಸರಾ ಶೋಭಾಯಾತ್ರೆ, ಅತ್ಯಾಕರ್ಷಕ ವಿದ್ಯುತ್ ದೀಪದ ಅಲಂಕೃತ ಮಂಟಪದೊಂದಿಗೆ ಹೊರಡಲಿದೆ.


    ಶೋಭಾಯಾತ್ರೆಗೆ ಹಲವು ಸ್ತಬ್ಧಚಿತ್ರಗಳು, ರಾಜ್ಯದ ವಿವಿಧ ಕಡೆಗಳಿಂದ ಆಗಮಿಸುವ ಕಲಾತಂಡಗಳು ಹುಲಿ ವೇಷ ಸಹಿತ ಇತರ ವೇಷಗಳು, ಚೆಂಡೆ ತಂಡಗಳು ಮೆರುಗು ನೀಡಲಿದೆ.

    ಊದು ಪೂಜೆ ಸಹಿತ ಭಾರೀ ವೈಭವದಿಂದ ಜರುಗುವ ಶಾಭಾಯಾತ್ರೆಯನ್ನು ಕಣ್ತುಂಬಿಕೊಳ್ಳಲು ಉರು ಮಾತ್ರವಲ್ಲದೆ ಪರವೂರಿನಿಂದಲೂ ಲಕ್ಷಾಂತರ ಮಂದಿ ಆಗಮಿಸಲಿದ್ದಾರೆ. ಗಣ್ಯಾತಿಗಣ್ಯರು ಹಾಜರಾಗಲಿದ್ದು, ಸಂಭ್ರಮ ದುಪ್ಪಟ್ಟಾಗುವ ನಿರೀಕ್ಷೆಯಿದ್ದು, ಇನ್ನೇನು ಕೆಲವೇ ಕ್ಷಣಗಳಷ್ಟೇ ಉಳಿದಿದೆ.

    Continue Reading

    LATEST NEWS

    Trending