Friday, July 1, 2022

ಮಂಗಳೂರು: ನಾಪತ್ತೆಯಾದ ರಿಕ್ಷಾ ಹುಡುಕಿ ಕೊಡಲು ಚಾಲಕನಿಂದ ಮನವಿ

ಮಂಗಳೂರು: ಮಂಗಳೂರು ನಗರದಲ್ಲಿ ಪಾರ್ಕಿಂಗ್ ಮಾಡಿದ್ದ ಆಟೋರಿಕ್ಷಾವೊಂದನ್ನು ಯಾರೋ ಕಳವು ಮಾಡಿದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದ್ದು ರಿಕ್ಷಾವನ್ನು ಹುಡುಕಿ ಕೊಡುವಂತೆ ವಿಡಿಯೋ ಸಂದೇಶದ ಮೂಲಕ ಚಾಲಕ ಮನವಿ ಮಾಡಿದ್ದಾರೆ.


ರಾಮಚಂದ್ರ ಎಂಬವರು ತಮ್ಮ KA19AB6333 ನೋಂದಣಿಯ ರಿಕ್ಷಾವನ್ನು ಸಂಬಂಧಿಕರ ಮನೆಯ ಭೂತ ಕಾರ್ಯಕ್ಕೆ ಎಂದು ಹೋಗುವ ಸಂದರ್ಭದಲ್ಲಿ ಮಂಗಳೂರಿನ ಪಾಂಡೇಶ್ವರದ ಓಲ್ಡ್‌ ಕೆಂಟ್ ರಸ್ತೆ ಬಳಿ ಸಂಜೆ 7.20ರ ಹೊತ್ತಿಗೆ ಪಾರ್ಕ್ ಮಾಡಿದ್ದ ಒಂದು ಗಂಟೆಯ ಒಳಗೆ ನಾಪತ್ತೆಯಾಗಿದೆ.

ಈ ಬಗ್ಗೆ ಯಾರಿಗಾದರೂ ಸುಳಿವು ಸಿಕ್ಕಿದಲ್ಲಿ ಕರೆ ಮಾಡಿ ತಿಳಿಸಲು ಆಟೊ ರಿಕ್ಷಾ ಚಾಲಕ ಎಂಬವರು ಮನವಿ ಮಾಡಿದ್ದಾರೆ. ತಾನು ಆಟೋರಿಕ್ಷಾದಿಂದಲೇ ಜೀವನ ನಿರ್ವಹಿಸಬೇಕಾಗಿದ್ದು, ಬದುಕು ಕಷ್ಟಕರವಾಗಿದೆ.

ಆದ್ದರಿಂದ ಆಟೋರಿಕ್ಷಾ ಹುಡುಕಿ ಕೊಡಲು ನೆರವಾಗಿ ಎಂದು ಅವರು ಮನವಿ ಮಾಡಿದ್ದಾರೆ. ಈ ಬಗ್ಗೆ ಅವರು ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ನೀಡಿದ್ದಾರೆ.

 

 

LEAVE A REPLY

Please enter your comment!
Please enter your name here

Hot Topics

ಆಂಧ್ರದಲ್ಲಿ ಘೋರ ದುರಂತ: ಕೆಲಸಕ್ಕೆ ಹೋಗುತ್ತಿದ್ದ ಐವರು ಕಾರ್ಮಿಕರ ಸಜೀವ ದಹನ

ಆಂಧ್ರಪ್ರದೇಶ: ಚಲಿಸುತ್ತಿದ್ದ ಆಟೋ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡು ಐದು ಮಂದಿ ಸಜೀವ ದಹನವಾಗಿರುವ ಘಟನೆ ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ತಾಡಿಮರ್ರಿ ವಲಯದಲ್ಲಿ ನಡೆದಿದೆ.ಗುಡಂಪಲ್ಲಿಯಿಂದ ಚಿಲ್ಲಕೊಂಡಯ್ಯಪಲ್ಲಿಗೆ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನಲೆ : ನಾಳೆ (ಜುಲೈ1) ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ..!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆy ಹಿನ್ನಲೆಯಲ್ಲಿ ನಾಳೆ (ಜುಲೈ1) ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಮತ್ತೆ ಕೊರೋನಾ ಸ್ಫೋಟ: 1,249 ಮಂದಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕು ಪ್ರಕರಣಗಲು ಹೆಚ್ಚುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ 25,753 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 1,249 ಮಂದಿಗೆ ಸೋಂಕು ದೃಢಪಟ್ಟಿದೆ.1,154 ಮಂದಿ ಡಿಸ್ಚಾರ್ಜ್...