Connect with us

    DAKSHINA KANNADA

    ಗುಂಡಿಗೆ ಬಿದ್ದು ಅಟೋ ಚಾಲಕ ಸಾವು..! MCC ಅಧಿಕಾರಿಗಳ ಮೇಲೆ FIR..!

    Published

    on

    ಮಂಗಳೂರು:  ಶುಕ್ರವಾರ ತಡರಾತ್ರಿಯಲ್ಲಿ ಅಟೋ ರಿಕ್ಷಾವೊಂದು ಕೊಟ್ಟಾರ ಬಳಿಯಲ್ಲಿನ ರಸ್ತೆಯಲ್ಲಿದ್ದ ಗುಂಡಿಗೆ ಬಿದ್ದು ಚಾಲಕ ಮೃ*ತ ಪಟ್ಟ ಘಟನೆ ನಡೆದಿದೆ.

    ಅಟೋ ರಿಕ್ಷ ಚಾಲಕ ದೀಪಕ್ ಆಚಾರ್ಯ ಎಂಬವರು ಅಟೋ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಈ ಅಪಘಾತ ನಡೆದಿತ್ತು. ರಾತ್ರಿ ಧಾರಕಾರವಾಗಿ ಮಳೆ ಸುರಿಯುತ್ತಿದ್ದ ಕಾರಣ ಅಟೋ ಚಾಲಕ ರಸ್ತೆಯಲ್ಲಿದ್ದ ಗುಂಡಿಯನ್ನು ಗಮನಿದೆ ಅಟೋ ಸಹಿತ ಗುಂಡಿಗೆ ಬಿದ್ದಿದ್ದರು. ಕೊಟ್ಟಾರದ ಯಮುನಾ ಪ್ಯಾರಡೈಸ್ ಅಪಾರ್ಟ್‌ಮೆಂಟ್‌ ಬಳಿ ಈ ದುರ್ಘಟನೆ ನಡೆದಿದ್ದು ಚಾಲಕ ದೀಪಕ್ ಆಚಾರ್ಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.

    Read More; ಮಂಗಳೂರಿನಲ್ಲಿ ಮೊದಲ ಮಳೆಗೆ ಜೀವ ಬ*ಲಿ; ಆಟೋರಿಕ್ಷಾ ತೋಡಿಗೆ ಬಿದ್ದು ಚಾಲಕ ಸಾ*ವು

    ಈ ಬಗ್ಗೆ ಹೇಮಲತಾ ಎಂಬವರು ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಗರ ಪಾಲಿಕೆಯ ಸಂಬಂಧಿತ ಅಧಿಕಾರಿಗಳು ದೀಪಕ್ ಆಚಾರ್ಯ ಅವರ ಸಾವಿಗೆ ಕಾರಣ ಎಂದು ದೂರಿದ್ದಾರೆ. ರಸ್ತೆಯಲ್ಲಿ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಮಾಡದೇ ಇದ್ದ ಕಾರಣ ಮಳೆಯಲ್ಲಿ ಈ ಅಪಘಾತವಾಗಿದ್ದು , ಜೀವ ಹಾನಿಗೆ ನಗರಪಾಲಿಕೆ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಕೊಟ್ಟಾರ : ಉಚಿತ ವೈದ್ಯಕೀಯ ತಪಾಸಣಾ ಶಿಬಿರ

    Published

    on

    ಮಂಗಳೂರು : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಕೊಟ್ಟಾರ ಶಾಖೆಯ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಯುವವಾಹಿನಿ (ರಿ.) ಮಂಗಳೂರು ಘಟಕ, ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕ , ಪ್ರಗತಿ ಮಹಿಳಾ ಮಂಡಲ (ರಿ.) ಉರ್ವಸ್ಟೋರ್ ಹಾಗೂ ಬ್ರಹ್ಮ ಕುಮಾರೀಸ್ ಮಂಗಳೂರು, ಇವರುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಮತ್ತು ಸಾಮಾನ್ಯ ವೈದ್ಯಕೀಯ ಶಿಬಿರವು ಪ್ರಗತಿ ಮಹಿಳಾ ಮಂಡಲ (ರಿ.) ಶ್ರೀ ಮಹಾಗಣಪತಿ ದೇವಸ್ಥಾನದ ಹತ್ತಿರ ಉರ್ವಸ್ಟೋರ್ ನಲ್ಲಿ ಜರುಗಿತು.


    ಈ ಕಾರ್ಯಕ್ರಮವನ್ನು ಬ್ರಹ್ಮಕುಮಾರಿ ಜಯಶ್ರೀ ಉದ್ಘಾಟಿಸಿ ಮಾತನಾಡಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಿ ತುಂಬಾ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಬರುತ್ತಿದೆ. ಪ್ರತಿಯೊಬ್ಬರಿಗೂ ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳು ಇರುವ ಸಂದರ್ಭದಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸುವ ಮೂಲಕ ಸ್ವಸ್ಥ ಆರೋಗ್ಯ ಪೂರ್ಣ ಸಮಾಜಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡುತ್ತಿದೆ. ಶಾರೀರಿಕ ಆರೋಗ್ಯದ ಜೊತೆಗೆ ಮನಸ್ಥಿತಿಯು ಚೆನ್ನಾಗಿರಬೇಕು. ಈ ನಿಟ್ಟಿನಲ್ಲಿ ಧ್ಯಾನವು ತುಂಬಾ ಪ್ರಯೋಜನಕಾರಿಯಾಗಿದೆ. ಉತ್ತಮ ಆರೋಗ್ಯಕ್ಕಾಗಿ ಔಷಧಿಗಳ ಜೊತೆಗೆ ಪ್ರತಿ ದಿನ ಧ್ಯಾನ ಮಾಡುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.

    ನಿಧಿಲ್ಯಾಂಡ್ ಇನ್‌ಪ್ರಾಷ್ಟ್ರಕ್ಟರ್ ಡೆವಲಪರ್ಸ್ ಇಂಡಿಯಾ ಪ್ರೈ. ಲಿಮಿಟೆಡ್‌ನ ಆಡಳಿತ ನಿರ್ದೇಶಕ ಪ್ರಶಾಂತ್ ಕುಮಾರ್ ಸನಿಲ್‌  ಮಾತನಾಡಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅಧ್ಯಕ್ಷ, ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್‌ರವರ ಮುಂದಾಳತ್ವದಲ್ಲಿ ಆಯೋಜಿಸುತ್ತಿರುವ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಶ್ಲಾಘನೀಯ ಎಂದು ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

    ಯುವವಾಹಿನಿ (ರಿ.) ಮಂಗಳೂರು ಘಟಕದ ಅಧ್ಯಕ್ಷ ನಾಗೇಶ್ ಅಮೀನ್ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದಂತೆ ಕಾರ್ಯಚರಿಸುತ್ತಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಆಯೋಜಿಸುತ್ತಿರುವ ಇಂತಹ ಆರೋಗ್ಯ ಶಿಬಿರದಲ್ಲಿ ಸಹಕಾರ ನೀಡಿರುವುದು ತುಂಬಾ ಸಂತೋಷವಾಗುತ್ತಿದೆ ಎಂದರು.

    ಪ್ರಗತಿ ಮಹಿಳಾ ಮಂಡಲ (ರಿ.) ಉರ್ವಸ್ಟೋರ್ ಅಧ್ಯಕ್ಷೆ ಪುಷ್ಪವತಿ ಕೆ. ಎ ಅವರು ಮಾತನಾಡಿ ಬಡವರ್ಗದ ಜನರಿಗೆ ಉಪಯೋಗವಾಗುವ ಇಂತಹ ಆರೋಗ್ಯ ಶಿಬಿರಗಳನ್ನು ನಮ್ಮ ಸಂಘದಲ್ಲಿ ನಡೆಸಲು ಅವಕಾಶ ಕಲ್ಪಿಸಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಹಾಗೂ ಇತರ ಸಂಘ-ಸಂಸ್ಥೆಗಳಿಗೆ ಧನ್ಯವಾದಗಳನ್ನು ಸಲ್ಲಿಸಿದರು.

    ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಶುಭ ರಾಜೇಂದ್ರರವರು ಮಾತನಾಡಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅಲ್ಪಾವಧಿಯಲ್ಲಿ ಹಲವಾರು ಶಾಖೆಗಳನ್ನು ತೆರೆದು ಗ್ರಾಹಕರಿಗೆ ಉತ್ತಮ ಸೇವೆಗಳನ್ನು ನೀಡುತ್ತಿದೆ. ಇದರ ಜೊತೆಯಲ್ಲಿ ಉಚಿತ ಆರೋಗ್ಯ ಶಿಬಿರ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸ್ಮರ್ದಾತಕ ಪರೀಕ್ಷೆ ಎದುರಿಸಲು ಮಾರ್ಗದರ್ಶನ, ಬಡವರಿಗೆ ಉಚಿತ ಮನೆ ನಿರ್ಮಾಣ, ಬಸ್ಸು ತಂಗುದಾಣ ನಿರ್ಮಾಣ, ಮುಂತಾದ ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.

    ಕೆ.ಎಂ.ಸಿ. ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹರ್ಬಟ್ ಪಿರೈರಾ ಮಾತನಾಡಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಹಯೋಗದೊಂದಿಗೆ ಕೆ.ಎಂ.ಸಿ. ಆಸ್ಪತ್ರೆಯು ಸುಮಾರು ೪೦ಕ್ಕೂ ಮಿಕ್ಕಿ ಉಚಿತ ಶಿಬಿರಗಳನ್ನು ಆಯೋಜನೆ ಮಾಡಿದ್ದು, ಈ ಶಿಬಿರದಲ್ಲಿ ಉಚಿತ ಕಣ್ಣಿನ ತಪಾಸಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ ಶಸ್ತçಚಿಕಿತ್ಸೆಯನ್ನು ಮಾಡಲಾಗುವುದು, ಬಿ.ಪಿ. ಮತ್ತು ಮದುಮೇಹ ತಪಾಸಣೆ, ಎಲುಬು, ಕೀಲು, ಕಿವಿ, ಮೂಗು, ಗಂಟಲು ತಪಾಸಣೆ, ಜನರಲ್ ವೈದ್ಯಕೀಯ ಸಮಾಲೋಚನೆ, ಉಚಿತ ಔಷಧಿ ವಿತರಣೆಯನ್ನು ನೀಡಲಾಗುವುದು ಎಂದರು.

    ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಪ್ರತೀ ವರ್ಷ ಶಾಖೆಗಳ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ನಿರಂತರವಾಗಿ ಆರೋಗ್ಯ ಶಿಬಿರವನ್ನು ಏರ್ಪಡಿಸುತ್ತಾ ಬಂದಿದ್ದು, ಇದು ಸಂಘದ ೬೮ನೇ ಉಚಿತ ವೈದ್ಯಕೀಯ ಶಿಬಿರವಾಗಿದೆ. ಈ ಕಾರ್ಯಕ್ರಮವು ಬಡವರ್ಗದ ಜನರಿಗೆ ಮಾತ್ರವಲ್ಲದೇ ಶ್ರೀಮಂತ ವರ್ಗದ ಜನರಿಗೂ ಕೂಡ ತುಂಬಾ ಪ್ರಯೋಜನಕಾರಿಯಾಗಿದೆ. ಇದರಿಂದ ಸಾರ್ವಜನಿಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಲ್ಲಿ ನಮ್ಮ ಸಹಕಾರಿ ಸಂಘವು ಮುಖ್ಯ ಪಾತ್ರ ವಹಿಸಿದೆ. ಸಂಘವು ಶಿಬಿರವನ್ನು ಆಯೋಜಿಸಲು ಸಹಕಾರ ನೀಡಿದ ಯುವವಾಹಿನಿ (ರಿ.) ಮಂಗಳೂರು ಘಟಕ, ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕ , ಪ್ರಗತಿ ಮಹಿಳಾ ಮಂಡಲ (ರಿ.) ಹಾಗೂ ಬ್ರಹ್ಮ ಕುಮಾರೀಸ್ ಮಂಗಳೂರು, ಇದರ ಸರ್ವ ಪದಾಧಿಕಾರಿಗಳಿಗೆ ಕ್ರತಜ್ಞತೆಯನ್ನು ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನೂ ಇಂತಹ ಶಿಬಿರಗಳನ್ನು ಆಯೋಜಿಸಲು ಸಹಕಾರವನ್ನು ಕೋರಿದರು.

    ಅದೇ ರೀತಿ ಇಂತಹ ಆರೋಗ್ಯ ಶಿಬಿರವನ್ನು ಏರ್ಪಡಿಸಲು ಸಹಕರಿಸುತ್ತಿರುವ ಕೆ.ಎಂ.ಸಿ. ಆಸ್ಪತ್ರೆಯ ಆಡಳಿತ ವರ್ಗ, ವೈದ್ಯರು ಹಾಗೂ ಸಿಬ್ಬಂದಿವರ್ಗದವರಿಗೂ ಕ್ರತಜ್ಞತೆಯನ್ನು ಸಲ್ಲಿಸಿದರು. ಸಂಘವು ದಿನಾಂಕ ೨೩.೦೬.೨೦೨೪ ರಂದು ಉಚಿತ ಆರೋಗ್ಯ ಶಿಬಿರವನ್ನು ಪಡುಬಿದ್ರೆಯಲ್ಲಿ ಆಯೋಜಿಸಿದ್ದು, ಅತೀ ಶೀಘ್ರದಲ್ಲಿ ಸಂಘದ ೩೩ನೇ ನೂತನ ಕೃಷ್ಣಾಪುರ ಶಾಖೆಯು ತನ್ನ ಸ್ವಂತ ಕಟ್ಟಡದಲ್ಲಿ ಕಾರ್ಯಾರಂಭಗೊಳ್ಳಲಿದೆ ಎಂದು ತಿಳಿಸಿದರು.

    ಈ ಕಾರ್ಯಕ್ರಮದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ. ನಿರ್ದೇಶಕ ಜಿ. ಪರಮೇಶ್ವರ ಪೂಜಾರಿ, ರಮನಾಥ್ ಸನಿಲ್, ಚಂದ್ರಹಾಸ ಮರೋಳಿ, ಮುದ್ದು ಮೂಡುಬೆಳ್ಳೆ, ಗೋಪಾಲ್ ಎಮ್., ಉಮಾವತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಸಲಹೆಗಾರರಾದ ಅಶೋಕ್ ಕುಮಾರ್, ಕೆ.ಎಂ.ಸಿ. ಆಸ್ಪತ್ರೆಯ ಕಣ್ಣಿನ ವೈದ್ಯ ಡಾ. ಉರ್ಜಾ ಶರ್ಮ, ಯುವವಾಹಿನಿ (ರಿ.) ಮಂಗಳೂರು ಘಟಕದ ಆರೋಗ್ಯ ನಿರ್ದೇಶಕ ಅರುಣ್ ಕೋಟ್ಯಾನ್, ಯುವವಾಹಿನಿ (ರಿ.) ಮಂಗಳೂರು ಘಟಕ, ಮಹಿಳಾ ಘಟಕ , ಪ್ರಗತಿ ಮಹಿಳಾ ಮಂಡಲ ಹಾಗೂ ಬ್ರಹ್ಮ ಕುಮಾರೀಸ್ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಇದನ್ನೂ ಓದಿ : ದೇವಸ್ಥಾನದ ಗೋಶಾಲೆಯಿಂದ ಗೋ ಕಳವಿಗೆ ಯತ್ನ..!

    ಕಾರ್ಯಕ್ರಮದಲ್ಲಿ ಸುಮಾರು ೨೫೦ಕ್ಕೂ ಶಿಬಿರಾರ್ಥಿಗಳಿಗೆ ಆರೋಗ್ಯ ತಪಾಸಣೆ, ಉಚಿತ ಔಷಧಿ ವಿತರಣೆ ಹಾಗೂ ನೇತ್ರ ತಪಾಸಣೆಯನ್ನು ನಡೆಸಲಾಯಿತು.

    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಹಿರಿಯ ಶಾಖಾಧಿಕಾರಿ ಸಚಿನ್ ಸ್ವಾಗತಿಸಿ, ಶಾಖಾಧಿಕಾರಿ ಸುಜಾತ ಧನ್ಯವಾದವಿತ್ತರು. ಕಾರ್ಯಕ್ರಮದ ನಿರೂಪಣೆಯನ್ನು ಹಿರಿಯ ಶಾಖಾಧಿಕಾರಿಯಾದ ಸ್ವಾತಿ ಮಾಡಿದರು. ನೇತ್ರ ತಪಾಸಣಾ ಮತ್ತು ಸಾಮಾನ್ಯ ವೈದ್ಯಕೀಯ ಶಿಬಿರದ ಸಂಯೋಜನೆಯನ್ನು ಪ್ರಭಾರ ಶಾಖಾಧಿಕಾರಿಗಳಾದ ಸುಮನಾ ಹಾಗೂ ಆಶಾ ನಡೆಸಿದರು.

    Continue Reading

    BELTHANGADY

    ಅನಂತಪದ್ಮನಾಭ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಕೊಕ್ಕಡ ಸತ್ಯನಾರಾಯಣ ತೋಡ್ತಿಲ್ಲಾಯ

    Published

    on

    ಬೆಳ್ತಂಗಡಿ:  ದೇಶದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಕೇರಳದ ತಿರುವನಂತಪುರದ ಪ್ರಸಿದ್ಧ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಮುಖ್ಯ ಅರ್ಚಕರಾಗಿ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸತ್ಯನಾರಾಯಣ (ನಾಗೇಶ) ತೋಡ್ತಿಲ್ಲಾಯ ಜೂ.16ರಂದು ನೇಮಕಗೊಂಡಿದ್ದಾರೆ.

    ಇವರು ಮೂಲತಃ ಕೊಕ್ಕಡ ಗ್ರಾಮದ ಬಡೆಕ್ಕರ ನಿವಾಸಿಯಾಗಿದ್ದು, ದಿ. ಸುಬ್ರಾಯ ತೋಡ್ತಿಲ್ಲಾಯ ಮತ್ತು ದಿ.ಯಶೋಧ ದಂಪತಿ ಪುತ್ರರಾಗಿದ್ದಾರೆ. ಹಿಂದೆ ಸುಬ್ರಾಯ ತೋಡ್ತಿಲ್ಲಾಯರು ಕೂಡ ಇದೇ ದೇವಸ್ಥಾನದಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
    ಅವರ ಅಜ್ಜ ದಿ.ನಾರಾಯಣ ತೋಡ್ತಿಲ್ಲಾಯರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹಲವು ವರ್ಷಗಳ ಕಾಲ ಪೂಜಾ ಸೇವೆಯನ್ನು ಸಲ್ಲಿಸಿದ್ದರು.

    Read More..; ದೇವಸ್ಥಾನದ ಗೋಶಾಲೆಯಿಂದ ಗೋ ಕಳವಿಗೆ ಯತ್ನ..!

    ಪಾಲಾಲೆ ದಿ. ಸತೀಶ ಯಡಪಡಿತ್ತಾಯರಲ್ಲಿ ವೇದ ಅಭ್ಯಾಸವನ್ನು ಮಾಡಿದ್ದ ಸತ್ಯನಾರಾಯಣ ತೋಡ್ತಿಲ್ಲಾಯರು ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಪೂಜಾ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪತ್ನಿ ಸ್ನೇಹ ಹಾಗೂ ಪುತ್ರ ಸೌರಭ್ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ.

    ಅಕ್ಕರ ದೇಸಿ ಸಮುದಾಯ ಸಂಘವು ಸತ್ಯನಾರಾಯಣರವರ ನೇಮಕಕ್ಕೆ ಶಿಫಾರಸು ಮಾಡಿತ್ತು. ಕೊಕ್ಕಡದ ಎಡಪಡಿತ್ತಾಯ, ಬಾಳ್ತಿಲ್ಲಾಯ, ಶಬರಾಯ, ಉಪ್ಪಾರ್ಣ, ತೋಡ್ತಿಲ್ಲಾಯ ಕುಲದ ಸದಸ್ಯರಿಗೆ ಈ ಹಿಂದಿನಿಂದಲೂ ಶ್ರೀಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುವ ಹಕ್ಕು ಇದೆ.

    Continue Reading

    DAKSHINA KANNADA

    ಪುತ್ತೂರಿನಲ್ಲಿ ಭೀಕರ ಅಪಘಾತ; ಇಬ್ಬರು ಸಾ*ವು

    Published

    on

    ಪುತ್ತೂರು : ಆಕ್ಟಿವಾ- ಬೊಲೆರೋ-ಆಲ್ಟೋ ಕಾರುಗಳ ನಡುವೆ ಸರಣಿ ಅಪಘಾ*ತ ಸಂಭವಿಸಿ ಇಬ್ಬರು ಸ್ಥಳದಲ್ಲಿಯೇ ಮೃ*ತಪಟ್ಟ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರ ಸಮೀಪದ ಶೇಖಮಲೆ ಎಂಬಲ್ಲಿ ರವಿವಾರ ಸಂಜೆ ನಡೆದಿದೆ.

    ಲೋಕೇಶ್(48), ರವೀಂದ್ರ(57) ಮೃತಪಟ್ಟವರು. ಮೃತರು  ಸೋಮವಾರಪೇಟೆಯ ತ್ಯಾಗತೂರಿನವರು. ಮೃತ ರವೀಂದ್ರ ಅವರು ಟ್ಯಾಂಕರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಮಂಗಳೂರಿನ ಬಾಡಿಗೆ ರೂಂ ನ್ನು ಖಾಲಿ ಮಾಡಿ ಮಡಿಕೇರಿಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ.

    ಇದನ್ನೂ ಓದಿ : ನಕಲಿ ವೈದ್ಯನಿಂದ ಭ್ರೂಣ ಹ*ತ್ಯೆ ..! ತನಿಖೆ ವೇಳೆ ವೈದ್ಯನ ಕರಾಳ ಮುಖ ಬಯಲು..!!

    ಆಕ್ಟಿವಾಗೆ ಆಲ್ಟೋ ಡಿ*ಕ್ಕಿ ಹೊಡೆದು ಬಳಿಕ ಮುಂಭಾಗದಲ್ಲಿದ್ದ ಬೊಲೆರೋ ಡಿ*ಕ್ಕಿ ಹೊಡೆದು ಈ ದುರಂ*ತ ನಡೆದಿದೆ. ಇನ್ನಿಬ್ಬರು ಗಾಯಗೊಂಡಿದ್ದು ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    Trending