Connect with us

    DAKSHINA KANNADA

    ಪೆರಿಯಡ್ಕದಲ್ಲಿ ಕಳ್ಳತನಕ್ಕೆ ಪ್ರಯತ್ನ: ಬೆನ್ನಟ್ಟಿದಾಗ ಪರಾರಿಯಾದ ಖದೀಮ

    Published

    on

    ಉಪ್ಪಿನಂಗಡಿ:  ಕಳ್ಳನೊಬ್ಬನ ಚಟುವಟಿಕೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ ಘಟನೆ ಭಾನುವಾರ (ಅ.13) ರಾತ್ರಿ ಉಪ್ಪಿನಂಗಡಿ ಸಮೀಪ ಪೆರಿಯಡ್ಕದಲ್ಲಿ ನಡೆದಿದೆ.


    ಕಳೆದ ಕೆಲವು ಸಮಯದಿಂದ ಈ ಭಾಗದ ಮನೆಗಳಲ್ಲಿ ಕಳ್ಳತನದ ಪ್ರಕರಣಗಳು ನಡೆದಿದ್ದು, ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗಿತ್ತು. ಆದರೆ ಕಳ್ಳನ ಪತ್ತೆ ಮಾತ್ರ ನಡೆದಿಲ್ಲ.


    ಈ ನಡುವೆ ಕಳ್ಳತನಕ್ಕಾಗಿ ರಾತ್ರಿ ಹೊಂಚು ಹಾಕುತ್ತಿದ್ದ ವ್ಯಕ್ತಿಯೊಬ್ಬನ ಚಟುವಟಕೆ ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದ್ದು, ಇದರಿಂದ ಇಲ್ಲಿನ ಜನರು ಆತಂಕಗೊಂಡಿದ್ದಾರೆ. ಪೆರಿಯಡ್ಕ ಸಹಕಾರಿ ಸಂಘದ ಶಾಖಾ ಕಟ್ಟಡದ ಮುಂಭಾಗದಲ್ಲಿ ಈತ ಕಾಣಿಸಿಕೊಂಡಿದ್ದಾನೆ. ಇಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಇದು ದಾಖಲಾಗಿದೆ. ಈ ಸಂದರ್ಭ ಸ್ಥಳೀಯ ಕೆಲ ಯುವಕರು ಈತನ ಚಲನವಲನವನ್ನು ದೂರದಿಂದ ನೋಡಿದ್ದಾರೆ. ಬಳಿಕ ಅವರು ಹತ್ತಿರ ಬರುತ್ತಿದ್ದಂತೆ ಪರಾರಿಯಾಗಿದ್ದಾನೆ.

    ಕಡಬ ರಸ್ತೆಯಲ್ಲಿಯೇ ಓಡಿರುವ ಈತನನ್ನು ಬೆನ್ನಟ್ಟುವ ಕೆಲಸವೂ ಸ್ಥಳೀಯ ಯುವಕರಿಂದಾಗಿದೆ. ಆದರೆ ಯುವಕರ ಕೈಗೆ ಸಿಕ್ಕದೆ ಪರಅರಿಯಾಗಿದ್ದಾನೆ. ಆದರೆ ಸಿಸಿ ಕ್ಯಾಮರಾದಲ್ಲಿ ಈತನ ಮುಖದ ಚಿತ್ರಣ ಸ್ಪಷ್ಟವಾಗಿ ಕಂಡುಬರದ ಹಿನ್ನಲೆಯಲ್ಲಿ ಕಳ್ಳನ ಪತ್ತೆಯ ಕಾರ್ಯಕ್ಕೆ ತಡೆಯಾಗಿದೆ ಎಂದು ತಿಳಿದುಬಂದಿದೆ. ಸ್ಥಳೀಯರ ಪ್ರಕಾರ ಈತ ಬೇರೆ ಊರಿನ ವ್ಯಕ್ತಿ. ಪೂರ್ತಿಯಾಗಿ ರೈನ್ ಕೋಟ್ ಹಾಕಿರುವ ಕಾರಣ ಈತನ ಮುಖ ಸ್ಪಷ್ಟವಾಗಿ ಕಂಡುಬರಲಿಲ್ಲ.

    ಈ ಘಟನೆ ಕುರಿತು ಉಪ್ಪಿನಂಗಡಿ ಪೊಲೀಸರಿಗೂ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.

    DAKSHINA KANNADA

    WATCH : ಓವರ್ ಟೇಕ್ ಮಾಡಲು ಹೋಗಿ ಬೈಕ್ ಗಳ ನಡುವೆ ಅಪಘಾ*ತ; ಭ*ಯಾನಕ ವೀಡಿಯೋ ವೈರಲ್

    Published

    on

    ಬೆಳ್ತಂಗಡಿ : ಗುರುವಾಯನ ಕೆರೆಯ ಬಳಿ ಇರುವ ಶೆಣೈ ಹೊಟೇಲ್ ಮುಂಭಾಗದಲ್ಲಿ ಎರಡು ಬೈಕ್ ನಡುವೆ ಅಪಘಾ*ತ ಸಂಭವಿಸಿದೆ.  ಓವರ್ ಟೇಕ್ ಮಾಡಲು ಹೋಗಿ ಈ ದುರಂ*ತ ನಡೆದಿದೆ.

    ಘಟನೆಯಲ್ಲಿ ಇಬ್ಬರಿಗೆ ಗಾ*ಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾ*ತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

     

    Continue Reading

    DAKSHINA KANNADA

    ಜಿಲ್ಲೆಗಳಲ್ಲಿ ಬೆಲೆ ಇಳುವರಿ ಕುಸಿತ: ಕರಾವಳಿಗೆ ಹೊರ ರಾಜ್ಯದ ಅಕ್ಕಿ ಅನಿವಾರ್ಯ

    Published

    on

    ಉಡುಪಿ/ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಹವಮಾನದ ಬದಲಾವಣೆಗಳಿಂದಾಗಿ ಉತ್ಪಾದನೆಯ ಮೇಲೆ ಭಾರೀ ಹೊಡೆತ ಬಿದ್ದಿದೆ. ಹೊರ ರಾಜ್ಯದ ಅಕ್ಕಿ ಅನಿವಾರ್ಯವಾಗುವ ಸ್ಥಿತಿ ಉದ್ಭವಿಸಿದೆ. ಇದರಿಂದ ಸ್ಥಳೀಯ ಕುಚ್ಚಲಕ್ಕಿ ದರ ಏರಿಕೆಯೂ ಉಂಟಾಗಬಹುದು ಎಂದು ವರದಿಯಅಗಿದೆ.

     

    2023ರ ಮುಂಗಾರಿನಲ್ಲಿ ಜಿಲ್ಲಾದ್ಯಂತ 38 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡಲಾಗಿತ್ತು. ಸಕಾಲದಲ್ಲಿ ಮಳೆ ಬಾರದೇ ಇದ್ದುದ್ದರಿಂದ ರೈತರು ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಪಡೆದಿರಲಿಲ್ಲ. ಈ ವರ್ಷ ಮಳೆ ಚೆನ್ನಾಗಿ ಬಂದಿದ್ದರೂ ಬಿತ್ತನೆ 35 ಸಾವಿರ ಹೆಕ್ಟೇರ್‌ ದಾಟಿರಲಿಲ್ಲ. ಕಳೆದ ವರ್ಷಕ್ಕಿಂತ ಸುಮಾರು 3 ಸಾವಿರ ಹೆ. ಪ್ರದೇಶದಲ್ಲಿ ಬಿತ್ತನೆ ಕಡಿಮೆಯಾಗಿದೆ. ಹಿಂಗಾರಿನಲ್ಲಿ ಕಳೆದ ವರ್ಷ 5000 ಹೆ. ಬಿತ್ತನೆ ಮಾಡಲಾಗಿತ್ತು. ಈ ವರ್ಷ 5179 ಹೆ. ಏರಿಕೆಯಾಗಿದೆ.

     

    ಇಳುವರಿ ಕುಸಿತ :

    ಮುಂಗಾರು ಮತ್ತು ಹಿಂಗಾರು ಸೇರಿಸಿ ಕಳೆದ ವರ್ಷ 43 ಸಾವಿರ ಹೆ. ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಈ ವರ್ಷ ಅದು 40191 ಹೆ. ಇಳಿದಿದೆ. ಕಳೆದ ವರ್ಷ ಮುಂಗಾರಿನಲ್ಲಿ 1.52 ಲಕ್ಷ ಟನ್‌ ಹಾಗೂ ಹಿಂಗಾರಿನಲ್ಲಿ 0.2 ಲಕ್ಷ ಟನ್‌ ಭತ್ತದ ಇಳುವರಿ ಪಡೆಯಲಾಗಿತ್ತು. ಈ ವರ್ಷ ಮುಂಗಾರಿನಲ್ಲಿ 1.40 ಲಕ್ಷ ಟನ್‌ ಹಾಗೂ ಹಿಂಗಾರಿನಲ್ಲಿ 0.21 ಲಕ್ಷ ಮೆಟ್ರಿಕ್‌ ಇಳುವರಿ ಅಂದಾಜಿಸಲಾಗಿದೆ. ಒಟ್ಟಾರೆಯಾಗಿ ಕಳೆದ ವರ್ಷ 1.72 ಲಕ್ಷ ಟನ್‌ ಭತ್ತದ ಉತ್ಪಾದನೆಯಾಗಿತ್ತು. ಈ ಬಾರಿ 1.61 ಲಕ್ಷ ಟನ್‌ಗೆ ಇಳಿಯುವ ಸಾಧ್ಯತೆಯಿದೆ. ಸುಮಾರು 11 ಲಕ್ಷ ಟನ್‌ ಇಳುವರಿ ಕಡಿಮೆಯಾಗಲಿದೆ ಎನ್ನುತ್ತದೆ ಕೃಷಿ ಇಲಾಖೆ ಲೆಕ್ಕಾಚಾರ.

    ಅಕ್ಕಿ ಉತ್ಪಾದನೆ ಇಳಿಕೆ:

    ಭತ್ತದ ಒಟ್ಟು ಉತ್ಪಾದನೆಯ ಸರಿ ಸುಮಾರು ಶೇ.65ರಷ್ಟು ಅಕ್ಕಿಯಾಗಲಿದೆ. ಉಳಿದ ಶೇ.35ರಷ್ಟು ಕಚ್ಚಾ ರೂಪದಲ್ಲಿ ಸಿಗಲಿದ್ದು, ಪಶು ಆಹಾರಕ್ಕೆ ಹೆಚ್ಚು ಬಳಸಲಾಗುತ್ತದೆ. ಕಳೆದ ವರ್ಷದ ಒಟ್ಟು ಭತ್ತದ ಉತ್ಪಾದನೆಯಲ್ಲಿ 0.98 ಲಕ್ಷ ಟನ್‌ ಅಕ್ಕಿ ಲಭ್ಯವಾಗಿತ್ತು. ಈ ವರ್ಷದ ಅಂದಾಜಿನಲ್ಲಿ 91 ಲಕ್ಷ ಟನ್‌ ಅಕ್ಕಿ ದೊರೆಯಲಿದೆ. ಅಂದರೆ ಅಕ್ಕಿ ಉತ್ಪಾದನೆಯಲ್ಲೂ ಸರಿ ಸುಮಾರು 7 ಲಕ್ಷ ಟನ್‌ ಕಡಿಮೆಯಾಗಲಿದೆ.

    Continue Reading

    DAKSHINA KANNADA

    ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ: 2024ನೇ ಸಾಲಿನ ಗೌರವ ಪ್ರಶಸ್ತಿ , ಪುಸ್ತಕ ಪುರಸ್ಕಾರ

    Published

    on

    ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಸಾಹಿತ್ಯ, ಕಲೆ, ಜಾನಪದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪುರಸ್ಕಾರ ನೀಡುತ್ತಿದ್ದು, 2024ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ನ. 10ರಂದು ಹೊನ್ನಾವರದ ಕಾಸರಕೋಡಿನಲ್ಲಿ ನಡೆಯಲಿದೆ.


    ಮೀನುಗಾರಿಕೆ ಸಚಿವ ಮಂಕಾಳ ಎಸ್‌.ವೈದ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶಾಸಕರಾದ ಸತೀಶ್‌ ಸೈಲ್‌, ದಿನಕರ ಶೆಟ್ಟಿ, ಕಾಸರಕೋಡು ಪಂಚಾಯತ್‌ ಅಧ್ಯಕ್ಷರಾದ ಮಂಕಾಳಿ ಪ್ರಕಾಶ್‌ ಹರಿಜನ್‌ ಭಾಗವಹಿಸಲಿದ್ದಾರೆ.

     

    ಪ್ರಶಸ್ತಿ ಪುರಸ್ಕೃತ ಸಾಧಕರು :

    ಕೊಂಕಣಿ ಸಾಹಿತ್ಯ ವಿಭಾಗ-ಮಾರ್ಸೆಲ್‌ ಎಂ. ಡಿ’ಸೋಜಾ ಮಂಗಳೂರು, ಕಲಾ ವಿಭಾಗ-ಹ್ಯಾರಿ ಫೆರ್ನಾಂಡಿಸ್‌ ಮುಂಬಯಿ, ಜಾನಪದ-ಅಶೋಕ್‌ ದಾಮು ಕಾಸರಕೋಡ ಆಯ್ಕೆಯಾಗಿದ್ದಾರೆ. ಪುಸ್ತಕ ಪುರಸ್ಕಾರಕ್ಕಾಗಿ ಕವನ ವಿಭಾಗ-ಬಂಟ್ವಾಳದ ಮೇರಿ ಸಲೋಮಿ ಡಿ’ಸೋಜಾ ಅವರ “ಅಟ್ವೋ ಸುರ್‌’, ಸಣ್ಣಕತೆ ವಿಭಾಗ-ಫಾ| ರೊಯ್ಸನ್‌ ಫೆರ್ನಾಂಡಿಸ್‌ ಹಿರ್ಗಾನ್‌ ಅವರ “ಪಯ್ಲಿ ಭೆಟ್‌’ ಹಾಗೂ ಭಾಷಾಂತರ ವಿಭಾಗ-ಸ್ಟೀಫನ್‌ ಮಸ್ಕರೇನ್ಹಸ್‌(ಹೇಮಾಚಾರ್ಯ) ಅವರ “ಎಕ್ಲೊ ಎಕ್ಸುರೊ’ ಕೃತಿಗಳು ಆಯ್ಕೆಯಾಗಿವೆ. ಗೌರವ ಪ್ರಶಸ್ತಿ 50,000 ರೂ. ಹಾಗೂ ಪುಸ್ತಕ ಪುರಸ್ಕಾರ 25,000 ರೂ. ನಗದು ಒಳಗೊಂಡಿದೆ.

    Continue Reading

    LATEST NEWS

    Trending