DAKSHINA KANNADA
ಗುರುಪುರ ಸೇತುವೆ ತಡೆಗೋಡಿ ಏರಿ ಮಗುವಿನೊಂದಿಗೆ ಆ*ತ್ಮಹತ್ಯೆಗೆ ಯತ್ನ; ಸ್ಥಳೀಯರಿಂದ ರಕ್ಷಣೆ
ಮಂಗಳೂರು : ಗುರುಪುರ ಸೇತುವೆ ಮೇಲಿಂದ ವ್ಯಕ್ತಿಯೊಬ್ಬ 2 ವರ್ಷದ ಮಗುವಿನ ಜೊತೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು (ನ।10) ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಕೈಕಂಬ ನಿವಾಸಿ ಸಂದೀಪ್ ಎಂದು ಗುರುತಿಸಲಾಗಿದೆ. ಸೇತುವೆಯ ತುದಿಭಾಗದಲ್ಲಿ ಮಗುವಿನ ಜೊತೆ ಆತ್ಮಹತ್ಯೆಗೆ ಯತ್ನಿಸಿದ್ದು ವಾಹನ ಸವಾರರು ತಡೆಹಿಡಿದು ರಕ್ಷಿಸಿ ಥಳಿಸಿದ್ದಾರೆ.
ಮೊದಲಿಗೆ ಕೆಲ ಮುಸ್ಲಿಂ ಯುವಕರು ಸಂದೀಪ್‌ನ ಮನವೊಲಿಸುವ ಪ್ರಯತ್ನ ಮಾಡಿದ್ದಾಗ ಅವನು ಯಾರನ್ನೂ ಸಮೀಪಕ್ಕೆ ಬಿಟ್ಟುಕೊಂಡಿಲ್ಲ. ಈ ವೇಳೆ ಅವನು ನದಿಗೆ ಹಾರಿದ್ದೇ ಆದಲ್ಲಿ ರಕ್ಷಣೆ ಮಾಡಲು ಸಹ ಕೆಲ ಯುವಕರು ಸಿದ್ದರಾಗಿ ನಿಂತಿದ್ದರು.
ಆದರೂ, ಕೊನೆಗೆ ನದಿಗೆ ಹಾರಲು ಸಂದೀಪ್ ಯತ್ನಿಸಿದಾತ ಆಯತಪ್ಪಿ ಸೇತುವೆಯ ಮೇಲೆ ಬಿದ್ದಿದ್ದಾನೆ. ತಕ್ಷಣವೇ ಆತನನ್ನು ಹಿಡಿದು ಮಗುವನ್ನ ರಕ್ಷಣೆ ಮಾಡಿ ಆತ್ಮಹತ್ಯೆ ಮಾಡಲು ಮುಂದಾದವನಿಗೆ ಯುವಕರು ಎರಡೇಟು ನೀಡಿ ಬುದ್ದಿ ಕಲಿಸಿದ್ದಾರೆ.
ಕೌಟುಂಬಿಕ ಕಲಹದ ಹಿನ್ನೆಲೆ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದಿದೆ. ಸ್ಥಳಕ್ಕೆ ಬಜ್ಪೆ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಯಾಕಾಗಿ ಹಾಗೆ ಮಾಡಿದ? ಏನು ವಿಷಯ? ಎಂಬ ಸಂಪೂರ್ಣ ಮಾಹಿತಿ ತಿಳಿದು ಬರಬೇಕಷ್ಟೇ.
DAKSHINA KANNADA
ಪಕ್ಷಿಕೆರೆ ಮೂವರ ಸಾ*ವಿನ ಪ್ರಕರಣ; ಕಾರ್ತಿಕ್ ಭಟ್ಟನ ಅವ್ಯವಹಾರ ಬಯಲು
ಕಿನ್ನಿಗೋಳಿ: ಪಕ್ಷಿಕೆರೆಯಲ್ಲಿ ನಡೆದ ಕೊ*ಲೆ ಮತ್ತು ಆ*ತ್ಮಹತ್ಯೆಗೆ ಸಂಬಂಧಿಸಿದಂತೆ ಕಾರ್ತಿಕ್ ಭಟ್ಟನ ಮತ್ತೊಂದು ಅವ್ಯವಹಾರ ಪ್ರಕರಣ ಬೆಳಕಿಗೆ ಬಂದಿದೆ. ಕಾರ್ತಿಕ್ ಭಟ್ ತನ್ನ 10 ಪವನ್ ಚಿನ್ನವನ್ನು ಎಗರಿಸಿದ್ದಾನೆ ಎಂದು ಪಕ್ಷಿಕೆರೆ ಹೊಸಕಾಡು ನಿವಾಸಿ ಮಹಮ್ಮದ್ ಆರೋಪಿಸಿದ್ದಾರೆ.
ಎರಡು ವರ್ಷದ ಹಿಂದೆ ಪಕ್ಷಿಕೆರೆ ಬ್ಯಾಂಕ್ ವೊಂದರಲ್ಲಿ ತನ್ನ 10 ಪವನ್ ಚಿನ್ನವನ್ನು ಅಡವಿಟ್ಟು 1 ಲಕ್ಷ 60 ಸಾವಿರ ಸಾಲ ಪಡೆದಿದ್ದ ಮಹಮ್ಮದ್ ಅವರಿಗೆ ಇನ್ನೂ ಹೆಚ್ಚಿನ ಸಾಲದ ಅಗತ್ಯವಿದೆ ಎಂದು ಅರಿತ ಕಾರ್ತಿಕ್ ಭಟ್ ತಾನೂ ಮ್ಯಾನೇಜರ್ ಆಗಿರುವ ಸುಬ್ರಹ್ಮಣ್ಯ ಸಹಕಾರಿ ಸಂಘದಲ್ಲಿ ಅಡವಿಟ್ಟರೆ ಹೆಚ್ಚಿನ ಸಾಲ ನೀಡುವುದಾಗಿ ಭರವಸೆ ನೀಡಿದ್ದ. ಹೀಗಾಗಿ ಮಹಮ್ಮದ್ ಅವರು ಪಕ್ಷಿಕೆರೆ ಬ್ಯಾಂಕ್ ನಲ್ಲಿ ಅಡವಿಟ್ಟ ಚಿನ್ನವನ್ನು ಬಿಡಿಸಿ, ಕಾರ್ತಿಕ್ ಬ್ರಾಂಚ್ ಮ್ಯಾನೇಜರ್ ಆಗಿರುವ ಬ್ಯಾಂಕ್ ನಲ್ಲಿ ಇರಿಸಿ 3 ಲಕ್ಷ 4 ಸಾವಿರ ಸಾಲ ಪಡೆದಿದ್ದರು.
ಈ ನಡುವೆ ವೈಯಕ್ತಿಕ ಸಮಸ್ಯೆಯಿಂದ ಮಹಮ್ಮದ್ ಅವರು ಊರಲ್ಲಿ ಇರದ ಕಾರಣ ಬ್ಯಾಂಕ್ ಗೆ ಸರಿಯಾಗಿ ಭೇಟಿ ನೀಡಿರಲಿಲ್ಲ. ಕಾರ್ತಿಕ್ ಅತ್ಮಹತ್ಯೆ ಮಾಡಿದ ಕಾರಣ ಸಂಶಯಗೊಂಡ ಮಹಮ್ಮದ್ ಅವರು ಈ ಬಗ್ಗೆ ಬ್ಯಾಂಕಿನಲ್ಲಿ ವಿಚಾರಿಸಿದಾಗ 4 ತಿಂಗಳಲ್ಲೇ ಅಡವಿಟ್ಟ ಬಂಗಾರ ಬಿಡಿಸಿದ ಬಗ್ಗೆ ಬ್ಯಾಂಕ್ ಅಧಿಕಾರಿಗಳು ವಿವರ ನೀಡಿದ್ದಾರೆ.
ಇದನ್ನೂ ಓದಿ : ಪಕ್ಷಿಕೆರೆಯಲ್ಲಿ ಕೊ*ಲೆ ಪ್ರಕರಣ; ಕಾರ್ತಿಕ್ ಭಟ್ ತಾಯಿ, ಸಹೋದರಿಯ ಬಂಧನ
ಕಾರ್ತಿಕ್ ಈ ಬಂಗಾರವನ್ನು ಅಲ್ಲಿಂದ ಎಗರಿಸಿ ಅದರ ಮೂಲ ಬೆಲೆಗೆ ಮಾರಿದ್ದಾನೆ ಎಂದು ಬಂಗಾರದ ಒಡವೆ ಕಳಕೊಂಡ ಮಹಮದ್ ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
BELTHANGADY
ಉಜಿರೆ: ಕಬಡ್ಡಿ ಕ್ರೀಡಾಪಟುವಾಗಿದ್ದ ಕಾಲೇಜು ವಿದ್ಯಾರ್ಥಿ ಅಸೌಖ್ಯದಿಂದ ಮೃ*ತ್ಯು
ಉಜಿರೆ : ಅಲ್ಪಕಾಲದ ಅಸೌಖ್ಯದಿಂದ ಉಜಿರೆ ಖಾಸಗಿ ಕಾಲೇಜಿನ ವಿದ್ಯಾರ್ಥಿ ಚಿನ್ಮಯ್ ಗೌಡ ಪಿ.ಕೆ ನಿನ್ನೆ (ನ.12) ನಿ*ಧನರಾಗಿದ್ದಾರೆ.
ಮಂಡ್ಯ ಮೂಲದ ಚಿನ್ಮಯ್ ಗೌಡ, ಹಾಸ್ಟೆಲ್‌ನಲ್ಲಿ ವಾಸವಿದ್ದು, ಅಲ್ಲಿಂದಲೇ ಕಾಲೇಜಿಗೆ ಹೋಗುತ್ತಿದ್ದರು.
ಉತ್ತಮ ಕಬಡ್ಡಿ ಕ್ರೀಡಾಪಟುವಾಗಿದ್ದ ಚಿನ್ಮಯ್ , ಕಾಲೇಜಿಗೆ ಹಲವಾರು ಪ್ರಶಸ್ತಿಗಳನ್ನು ತಂದುಕೊಟ್ಟಿದ್ದರು.
ಕಳೆದ ಕೆಲವು ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಚಿನ್ಮಯ್ ಮಂಡ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದರೂ, ಚಿಕಿತ್ಸೆ ಫಲಕಾರಿಯಾಗದೆ ಸಾ*ವನ್ನಪ್ಪಿದ್ದಾರೆ.
DAKSHINA KANNADA
ತಾಲೂಕು ಮಟ್ಟದ ಪ್ರತಿಭಾ ಕಾರಂಜಿ : ಮಾಣಿ ಬಾಲವಿಕಾಸ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ
ವಿಟ್ಲ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ, ಕ್ಷೇತ್ರ ಸಮಯನ್ವಯಾಧಿಕಾರಿಯವರ ಕಚೇರಿ, ಬಂಟ್ವಾಳ ಮತ್ತು ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ, ಅಳಿಕೆ, ಬಂಟ್ವಾಳ ತಾಲೂಕು ಇವರ ಸ0ಯುಕ್ತ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ 2024-25 ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆಯಲ್ಲಿ ಜರುಗಿತು.
ಮಾಣಿ ವಿದ್ಯಾನಗರ ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಪ್ರಗತಿ (9ನೇ ತರಗತಿ ), ಪ್ರೌಢ ಶಾಲಾ ಮಟ್ಟದ ಕನ್ನಡ ಆಶು ಭಾಷಣ ಮತ್ತು ಚರ್ಚಾ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅದೇ ರೀತಿ ಪ್ರಾಥಮಿಕ ವಿಭಾಗದಲ್ಲಿ ದಿಶಾ (4ನೇ ತರಗತಿ) ಕಥೆ ಹೇಳುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ : ಬಸ್ ಹತ್ತುವಾಗ ಕಾಲು ಜಾರಿ ಬಿದ್ದು ವಿದ್ಯಾರ್ಥಿ ಸ್ಥಳದಲ್ಲೇ ಸಾ*ವು!
ಪ್ರೌಢ ಶಾಲಾ ವಿಭಾಗದಲ್ಲಿ ಸ್ವಸ್ತಿ ಎಸ್ ಭಟ್ ( 10ನೇ ತರಗತಿ ) ಭಾವಗೀತೆಯಲ್ಲಿ ದ್ವಿತೀಯ ಮತ್ತು ಸಂಸ್ಕೃತ ಧಾರ್ಮಿಕ ಪಠಣದಲ್ಲಿ ತೃತೀಯ, ವೈಷ್ಣವಿ (10ನೇ ತರಗತಿ) ಗಝಲ್ ನಲ್ಲಿ ತೃತೀಯ, ಪೂರ್ವಿ ಎ ಭಾರಧ್ವಜ್ (9ನೇ ತರಗತಿ ) ಹಿಂದಿ ಭಾಷಣದಲ್ಲಿ ತೃತೀಯ, ದೇವಿಕಾ ಕೆ (9ನೇ ತರಗತಿ) ಕವನ ವಾಚನದಲ್ಲಿ ತೃತೀಯ, ಆರೋನ್ ಪಾಯಸ್ (10ನೇ ತರಗತಿ ) ಮತ್ತು ಪುನೀತ್ ಕೆ ಜಿ (10ನೇ ತರಗತಿ ) ರಸಪ್ರಶ್ನೆಯಲ್ಲಿ ತೃತೀಯ, ಮೊಹಮ್ಮದ್ ನವಾವಿ (10ನೇ ತರಗತಿ ), ಅಬ್ದುಲ್ ಮಾಹಿಜ್ (10ನೇ ತರಗತಿ ), ಮುಹಮ್ಮದ್ ಫಾಝಿಲ್ (10ನೇ ತರಗತಿ ), ಎಂ. ಮುಹಮ್ಮದ್ ಸಿಯಾನ್ (10ನೇ ತರಗತಿ ), ಮುಹಮ್ಮದ್ ಹಿಷಾಮ್ (10ನೇ ತರಗತಿ ), ಮೊಹಮ್ಮದ್ ಶುರೈಫ್ (9ನೇ ತರಗತಿ ) ಕವ್ವಾಲಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಗಳಿಸಿದ್ದಾರೆ.
- LATEST NEWS6 days ago
ವಧುವಿನಿಂದ ʼಮೊದಲ ರಾತ್ರಿʼ ನಿರಾಕರಣೆ; ಕಾರಣ ತಿಳಿದು ವರನಿಗೆ ಶಾ*ಕ್
- FILM7 days ago
ಕೋರ್ಟ್ ಮೆಟ್ಟಿಲೇರಿದ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್
- LATEST NEWS5 days ago
ನವ ವಧು ಸಹಿತ ನದಿಗೆ ಹಾರಿದ ಕುಟುಂಬ ; ಸ್ಮ*ಶಾನವಾದ ಮದುವೆ ಮನೆ..!
- LATEST NEWS4 days ago
ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿ ಓಡಾಡುವಂತಿಲ್ಲ; ‘ಬುರ್ಖಾ ಬ್ಯಾನ್’ ಸರಕಾರದ ಆದೇಶ