Connect with us

    DAKSHINA KANNADA

    ಕಾರಣಿಕ ತೋರಿಸಿದ ಗುಳಿಗ ದೈವ..! ವೆನ್ಲಾಕ್‌ ಆಸ್ಪತ್ರೆಯಲ್ಲಿ ದೈವದ ಕಟ್ಟೆ ನಿರ್ಮಾಣ..!

    Published

    on

    ಮಂಗಳೂರು : ದೈವಗಳು ನಂಬಿದವರ ಕೈ ಬಿಡುವುದಿಲ್ಲ ಎಂಬ ತುಳುನಾಡಿನ ಜನರ ನಂಬಿಕೆಗೆ ಇಂಬು ಕೊಡುವಂತಹ ಅನೇಕ ಘಟನೆಗಳು ನಡೆದಿವೆ. ಇನ್ನು ದೈವ ನಂಬಿಕೆ ಇಲ್ಲದೆ ಅಪಚಾರ ಮಾಡಿದವರಿಗೂ ತಾನು ಏನು ಎಂದು ದೈವ ತೋರಿಸಿಕೊಟ್ಟ ಉದಾಹರಣೆಗಳು ಕೂಡ ಸಾಕಷ್ಟಿವೆ. ಇದೀಗ ಅಂತಹುದೇ ಒಂದು ಘಟನೆ ದಕ್ಷಿಣ ಕನ್ನಡ ಜಿಲ್ಲಾಸ್ಪತ್ರೆ ವೆನ್ಲಾಕ್‌ನಲ್ಲಿ ನಡೆದಿದ್ದು, ದೈವದ ಕಾರಣಿಕಕ್ಕೆ ಈ ಘಟನೆ ಸಾಕ್ಷಿಯಾಗಿದೆ.

    ಮಂಗಳೂರು ಜಿಲ್ಲಾಸ್ಪತ್ರೆಯಲ್ಲಿ ಸರ್ಜಿಕಲ್‌ ಸೂಪರ್ ಸ್ಪೆಷಾಲಿಟಿ ವಿಭಾಗ ನಿರ್ಮಾಣಕ್ಕೆ ಹಲವು ವರ್ಷಗಳ ಹಿಂದೆ ಚಾಲನೆ ನೀಡಲಾಗಿತ್ತು. ಹೊಸ ಕಟ್ಟಡ ಕಾಮಗಾರಿಗಾಗಿ ಇಲ್ಲಿದ್ದ ಹಲವು ಮರಗಳನ್ನು ಕಡಿಯುವ ಕೆಲಸವನ್ನು ಗುತ್ತಿಗೆದಾರರು ಮಾಡಿದ್ದರು. ಈ ವೇಳೆ ಇಲ್ಲಿ ಗುಳಿಗ ದೈವದ ಸಾನಿಧ್ಯವಿದ್ದ ಮರವೊಂದು ಇದ್ದು ಅದನ್ನು ಕಡಿಯದಂತೆ ಹಲವರು ಗುತ್ತಿಗೆದಾರನಿಗೆ ಮನವಿ ಮಾಡಿದ್ದರು. ಆದ್ರೆ, ಅಭಿವೃದ್ದಿ ಕಾಮಗಾರಿಗೆ ದೈವ ದೇವರು ಇಲ್ಲಾ ಅಂತ ಮರ ಕಡಿಯಲು ಮುಂದಾಗಿದ್ದ. ಈ ವೇಳೆ ಪರಿಸರ ಹೋರಾಟಗಾರರು ಮರವನ್ನು ಬೇರೆಡೆ ಸ್ಥಳಾಂತರ ಮಾಡಿ ಮರದ ಜೀವ ಉಳಿಸಿದ್ದರು.

    ಯಾವಾಗ ದೈವ ಸಾನಿಧ್ಯವಿದ್ದ ಮರವನ್ನು ತೆರವು ಮಾಡಲಾಗಿತ್ತೋ ಅಂದಿನಿಂದ ಇಲ್ಲಿ ಗುತ್ತಿಗೆದಾರನಿಗೆ ಹಲವು ಸಂಕಷ್ಟಗಳು ಎದುರಾಗಿವೆ. ಕಾರ್ಮಿಕರು ಹಲವು ಅವಘಡಗಳಿಗೆ ಸಿಲುಕಿ ಆಸ್ಪತ್ರೆ ಸೇರಿದ್ದಾರೆ. ಕಾಮಗಾರಿಯ ವೇಳೆ ನಾಗರ ಹಾವು ಕೂಡ ಬಲಿಯಾದ ಘಟನೆ ನಡೆದಿದೆ. ಕೊನೆಗೂ ಕುಂಟುತ್ತಾ ಸಾಗಿದ್ದ ಕಾಮಗಾರಿ ಇತ್ತೀಚೆಗಷ್ಟೇ ಪೂರ್ಣಗೊಂಡು ಆಸ್ಪತ್ರೆಯ ಉದ್ಘಾಟನೆಯೂ ಆಗಿದೆ. ಆದ್ರೆ, ಆಸ್ಪತ್ರೆಯಲ್ಲಿ ಅದೇನೋ ನೆಗಟಿವ್ ಎನರ್ಜಿ ಇದೆ ಅನ್ನೋ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಗೆ ಅನಿಸಿದೆ. ಹಲವು ಎಡರುತೊಡರುಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಯ ಸಿಬ್ಬಂದಿ ಜ್ಯೋತಿಷಿ ಮೊರೆ ಹೋಗಿದ್ದಾರೆ. ಈ ವೇಳೆ ಇಲ್ಲಿ ಗುಳಿಗ ದೈವದ ನೆಲೆಯನ್ನು ಕಿತ್ತು ಹಾಕಿದ್ದು ದೈವ ಅತಂತ್ರವಾಗಿದೆ ಅನ್ನೋ ವಿಚಾರ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ, ನಾಗ ಹತ್ಯೆಯಿಂದ ನಾಗ ದೋಷ ಕೂಡ ಇದೆ ಅನ್ನೋ ವಿಚಾರ ಗೊತ್ತಾಗಿದೆ.

    ಇದೀಗ ಜ್ಯೋತಿಷಿಗಳ ಸಲಹೆಯಂತೆ ವೆನ್ಲಾಕ್ ಆಸ್ಪತ್ರೆಯ ಈ ಸರ್ಜಿಕಲ್ ಸೂಪರ್ ಸ್ಪೆಷಾಲಿಟಿ ವಿಭಾಗದಲ್ಲಿ ಆಶ್ಲೇಷ ಬಲಿ ನಡೆಸಿ ನಾಗನನ್ನು ಸಂತೃಪ್ತಿ ಪಡಿಸಲಾಗಿದೆ. ಅಷ್ಟೇ ಅಲ್ಲದೆ, ಇಲ್ಲಿರೋ ಅಶ್ವತ ಮರದ ಬುಡದಲ್ಲಿ ಗುಳಿಗ ದೈವವನ್ನು ಪ್ರತಿಷ್ಠಾಪಿಸಿ ದೈವದ ಕೋಪವನ್ನು ಶಮನ ಮಾಡಲಾಗಿದೆ.

    ಶರವು ದೇವಸ್ಥಾನಕ್ಕೆ ಸೇರಿದ ಶರವು ಗುಳಿಗ ದೈವದ ಸಾನಿಧ್ಯ ಈ ಪ್ರದೇಶದಲ್ಲಿ ಇದ್ದು, ಇಲ್ಲಿನ ಮರ ತೆರವು ಮಾಡಿದ ಕಾರಣ ದೈವ ಅತಂತ್ರವಾಗಿತ್ತು. ರೈಲ್ವೇ ನಿಲ್ದಾಣದ ಬಳಿಯ ಶ್ರೀ ಮುತ್ತಪ್ಪನ್ ದೈವದ ಗುಡಿಯ ಬಳಿ ನೆಲೆಯಾಗಿತ್ತು ಎಂದು ಜ್ಯೋತಿಷ್ಯರಿಂದ ತಿಳಿದು ಬಂದಿತ್ತು. ಇದೀಗ ಗುಳಿಗ ದೈವದ ಪ್ರತಿಷ್ಠಾಪನೆಯಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣವಾಗಿದೆ.

     

    ಕಂಪ್ಲೀಟ್ ಸ್ಟೋರಿಗಾಗಿ ವಿಡಿಯೋ ನೋಡಿ:

    DAKSHINA KANNADA

    ಹಿರಿಯ ಸಾಮಾಜಿಕ ಹೋರಾಟಗಾರ ಪಿ.ಬಿ.ಡೇಸಾ ನಿಧ*ನ

    Published

    on

    ಮಂಗಳೂರು : ಹಿರಿಯ ಸಾಮಾಜಿಕ ಹೋರಾಟಗಾರ ಪಿ.ಬಿ.ಡೇಸಾ ನಿಧ*ನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಇಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಇಹಲೋಕ ತ್ಯಜಿಸಿದರು.

    ಪೀಪಲ್ಸ್ ಯೂನಿಯನ್ ಫಾರ್ ಲಿಬರ್ಟೀಸ್  ರಾಜ್ಯಾಧ್ಯಕ್ಷರಾಗಿದ್ದ ಡೇಸಾ, ಮಾನವ ಹಕ್ಕು ಹೋರಾಟಗಾರರಾಗಿದ್ದರು. ಅನ್ಯಾಯ, ಅಕ್ರಮಗಳ ವಿರುದ್ಧ ಧ್ವನಿ ಎತ್ತುತ್ತಿದ್ದರು. ಅಲ್ಲದೇ,  ಪೊಲೀಸರ ದೌರ್ಜ*ನ್ಯದ ವಿರುದ್ಧ ಸಂಘಟಿತ ಹೋರಾಟ ನಡೆಸುತ್ತಿದ್ದರು.

    ಇದನ್ನೂ ಓದಿ : 2.5 ಲಕ್ಷಕ್ಕೆ ನವಜಾತ ಶಿಶು ಮಾರಾಟ ಯತ್ನ; 10 ಮಂದಿಯ ಬಂಧನ

    ಅನೇಕ ಮಂದಿಯ ಕೆಂಗಣ್ಣಿಗೆ ಗುರಿಯಾಗಿದ್ದ ಅವರ ಮೇಲೆ ಹಿಂದೊಮ್ಮೆಅವರ ಕಚೇರಿಯಲ್ಲೇ ಕೊ*ಲೆಯತ್ನವೂ ನಡೆದಿತ್ತು.  ಡೇಸಾ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಯಾವುದೇ ಧಾರ್ಮಿಕ ಕ್ರಿಯೆ ನಡೆಸದೆ ಮೃ*ತದೇಹವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ನಾಳೆ ಹಸ್ತಾಂತರ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

    Continue Reading

    DAKSHINA KANNADA

    ಕರಾವಳಿಯ ವಿವಿಧೆಡೆ ಉತ್ತಮ ಮಳೆ; ದ.ಕ ಜಿಲ್ಲೆಯಲ್ಲಿ ರೆಡ್ ಅಲರ್ಟ್

    Published

    on

    ಮಂಗಳೂರು: ದ.ಕ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ರಾತ್ರಿ- ಮುಂಜಾನೆ ವೇಳೆ ಮಳೆ ಸುರಿಯುತ್ತಿದ್ದು, ಸೋಮವಾರದಂದು ಹಗಲಲ್ಲೂ ಸ್ವಲ್ಪ ಮಳೆಯಾಗಿದೆ. ಸೆ. 24 ಮಂಗಳವಾರದಂದು ಭಾರತೀಯ ಹವಾಮಾನ ಇಲಾಖೆ ಕರಾವಳಿಗೆ ರೆಡ್‌ ಅಲರ್ಟ್ ಘೋಷಿಸಿದ್ದು, ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ.

    ಇನ್ನು ಬುಧವಾರದಂದು ಕೂಡ ಮಳೆಯಾಗುವಂತಹ ಸಾಧ್ಯತೆಯಿದ್ದು, ಎಲ್ಲೊ ಅಲರ್ಟ್‌ ಘೋಷಿಸಲಾಗಿದೆ. ಸೋಮವಾರದಂದು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆಗಳಲ್ಲಿ ಸಾಧಾರಣದಿಂದ ಉತ್ತಮ ಮಳೆಯಾಗಿದೆ. ಪುತ್ತೂರು, ಬೆಳ್ಳಾರೆ ಭಾಗದಲ್ಲಿ ಬಿರುಸಿನ ಮಳೆಯಾಗಿದ್ದು, ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಮಧ್ಯಾಹ್ನ ಬಳಿಕ ಸಾಧಾರಣ ಮಳೆಯಾಗಿದೆ.

    ಬಂಟ್ವಾಳದಲ್ಲಿ ರಾತ್ರಿ ಮಳೆ ಆರಂಭವಾಗಿದೆ. ಇನ್ನು ಮುಂಜಾನೆ ವೇಳೆಯಲ್ಲಿ ಜಿಲ್ಲೆಯ ಅಲ್ಲಲ್ಲಿ ಮಳೆ ಸುರಿದಿದ್ದು, ಬಳಿಕ ಮೋಡ ಕವಿದ ಬಿಸಿಲಿನ ವಾತಾವರಣವಿತ್ತು. ಸಂಜೆಯಾಗುತ್ತಲೇ ದಟ್ಟ ಮೋಡ ಕವಿದು ಜಿಲ್ಲೆಯ ವಿವಿಧೆಡೆ ಬಿರುಸಿನ ಮಳೆಯಾಗಿದೆ.

    Continue Reading

    DAKSHINA KANNADA

    ಉಳ್ಳಾಲದಲ್ಲಿ ಮನೆ ಅವರಣಗೋಡೆ ಕುಸಿತ; ಅತಂಕದಲ್ಲಿ ಮನೆ ಮಂದಿ

    Published

    on

    ಮಂಗಳೂರು: ನಿನ್ನೆ(ಸೆ.23) ರಾತ್ರಿ ಸುರಿದ ಮಳೆಗೆ ನಗರದ ಹೊರವಲಯ ಉಳ್ಳಾಲ ಟಿಸಿ ರೋಡ್ ಮುಳಿಗುಡ್ಡೆ ಎಂಬಲ್ಲಿ ಮನೆಯ ಅವರಣ ಗೋಡೆ ಮೇಲೆ ಮಣ್ಣು ಕುಸಿದು ಬಿದ್ದಿದ್ದು ಮನೆ ಮಂದಿ ಅತಂಕದಲ್ಲಿದ್ದಾರೆ. ಮನೆಯೊಂದು ಕುಸಿಯುವ ಭೀತಿ ಎದುರಾಗಿದೆ.  ರಾತ್ರಿ ಸುಮಾರು 2 ಗಂಟೆ ವೇಳೆಗೆ  ಈ ಘಟನೆ ನಡೆದಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    (ಸೆ.23)ನಿನ್ನೆ ರಾತ್ರಿ ಮಂಗಳೂರು ಸೇರಿದಂತೆ ನಗರದ ಹೊರವಲಯದ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಸ್ಥಳಕ್ಕೆ ಉಳ್ಳಾಲ ಪುರಸಭೆ ಅಧಿಕಾರಿಗಳು ಭೇಟಿ ನೀಡಿದ್ದು ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸುವ ಕಾರ್ಯಚರಣೆ ನಡೆಯುತ್ತಿದೆ.

    Continue Reading

    LATEST NEWS

    Trending