Connect with us

    LATEST NEWS

    ಕೊನೆಗೂ ಅನುರಾಧಳ ಕೈ ಸೇರಿದ ಆಸ್ತಿ; ಎಷ್ಟು ಗೊತ್ತಾ ?

    Published

    on

    ಮಂಗಳೂರು: ಮಾಜಿ ಡಾನ್‌ ಮುತ್ತಪ್ಪ ರೈ ಅವರ ನಿಧನದ ನಂತರ ಸಾವಿರಾರು ಕೋಟಿ ರೂ. ಮೌಲ್ಯದ ಒಡೆತನವಿದ್ದ ಆಸ್ತಿಯನ್ನು ತನ್ನಿಬ್ಬರು ಮಕ್ಕಳು, ಎರಡನೇ ಹೆಂಡತಿ, ಸಹೋದರನ ಪುತ್ರ, ಮನೆ ಕೆಲಸದವರು ಸೇರಿ ಯಾರ್ಯಾರಿಗೆ ಎಷ್ಟು ಆಸ್ತಿ ಸೇರಬೇಕು ಎಂದು ಬರೆದಿಟ್ಟದ್ದರೂ, ಮುತ್ತಪ್ಪ ರೈ ಮಕ್ಕಳು ತಮ್ಮ ತಂದೆಯ ಎರಡನೇ ಹೆಂಡತಿಗೆ ಆಸ್ತಿ ನೀಡದೇ ಮನೆಯಿಂದ ಹೊರಗೆ ಹಾಕಿದ್ದರು.

     

    ಇದನ್ನು ಪ್ರಶ್ನೆ ಮಾಡಿ ಕೋರ್ಟ್‌ ಮೊರೆ ಹೋಗಿದ್ದ ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧಾ ರೈ ಅವರ ಕೈಗೆ ಇದೀಗ ನೂರಾರು ಕೋಟಿ ಆಸ್ತಿ ಕೈ ಸೇರಿದೆ.

    ಮುತ್ತಪ್ಪ ರೈ ಅವರ ಮೊದಲ ಹೆಂಡತಿ ಸಾವಿಗೀಡಾದ ನಂತರ ಮಕ್ಕಳು ಚೆನ್ನಾಗಿ ನೋಡಿಕೊಳ್ಳದ ಕಾರಣ ತನಗೊಬ್ಬ ಹೆಂಡತಿಯ ಅಗತ್ಯವಿದೆ ಎಂದು ಅವರು ಅನುರಾಧ ರೈ ಅವರನ್ನು ಮದುವೆಯಾಗಿದ್ದರು. ಮುತ್ತಪ್ಪ ರೈ ಅನಾರೋಗ್ಯ ಕಾಣಿಸಿಕೊಳ್ಳುತ್ತಿದ್ದಂತೆ ಮಕ್ಕಳು ಎರಡನೇ ಹೆಂಡತಿಗೆ ಎಲ್ಲಿ ಆಸ್ತಿ ಕೊಡಬೇಕಾಗಬಹುದು ಎನ್ನುವ ಕಾರಣಕ್ಕೆ ಮನೆಯಿಂದ ಹೊರಗೆ ಹಾಕಿದ್ದರು.

    ವಿಲ್‌ನಲ್ಲಿ ಮುತ್ತಪ್ಪ ರೈ ಅವರು ತಮ್ಮ ಪುತ್ರರಾದ ರಾಖಿ ರೈ, ರಿಕ್ಕಿ ರೈ, ಸಹೋದರನ ಪುತ್ರ ಅಶ್ವಿನ್‌ ರೈ, ಎರಡನೇ ಪತ್ನಿ ಅನುರಾಧ ರೈ, ಮನೆಕೆಲಸದವರಿಗೂ ವಿಲ್‌ನಲ್ಲಿ ಆಸ್ತಿ ಹಂಚಿಕೆ ಮಾಡಿದ್ದರು. ಒಟ್ಟು 41 ಪುಟಗಳ ವಿಲ್‌ ಬರೆಸಿದ್ದರು.

    2020ರಲ್ಲಿ ಮುತ್ತಪ್ಪ ರೈ ಸಾವಿಗೀಡಾಗಿದ್ದು, ನಂತರ ಅವರು ಬರೆದಿಟ್ಟ ವಿಲ್‌ ಅನ್ನು ಮಕ್ಕಳು ಮರೆಮಾಚಿದ್ದಾರೆ. ಯಾರಿಗೂ ತುಂಡು ಆಸ್ತಿ ಕೊಡದೇ ರಾಖಿ ರೈ, ರಿಕ್ಕಿ ರೈ ತಾವೇ ಇಟ್ಟುಕೊಂಡಿದ್ದರು.

    ಬಳಿಕ ಅನುರಾಧ ರೈ ಈ ವಿರುದ್ಧ ಕೋರ್ಟ್‌ ಮೊರೆ ಹೋಗಿದ್ದು, ಇದೀಗ ಬೆಂಗಳೂರಿನ 19 ನೇ ಸಿಟಿ ಸಿವಿಲ್‌ ಹಾಗೂ ಸೆಷನ್ಸ್‌ ಕೋರ್ಟ್‌ನಲ್ಲಿ ಆಸ್ತಿ ವಿವಾದ ಇತ್ಯರ್ಥಗೊಂಡಿದೆ. ಒಟ್ಟು 100 ಕೋಟಿ ಮೌಲ್ಯದ ಆಸ್ತಿ ಹಂಚಿಕೆ ಮಾಡಲಾಗಿದೆ ಎನ್ನಲಾಗಿದೆ.

    ಅನುರಾಧಾ ರೈ ಗೆ ಸಿಕ್ಕ ಆಸ್ತಿ ಎಷ್ಟು ಗೊತ್ತಾ ?

    ಅನುರಾಧ ರೈಗೆ 7 ಕೋಟಿ ನಗದು ಹಣ, ಮಂಡ್ಯದ ಪಾಂಡವಪುರದ ಬಳಿ 22 ಎಕರೆ ಜಮೀನು, ಮೈಸೂರಿನಲ್ಲಿ 4,800 ಚದರಡಿ ನಿವೇಶನ ಹಾಗೂ ಅದೇ ನಿವೇಶನದಲ್ಲಿನ ಮನೆ, ನಂದಿಬೆಟ್ಟ ಬಳಿಯ ಕೆಂಪತಿಮ್ಮನಹಳ್ಳಿಯಲ್ಲಿ 5.5 ಎಕರೆ ಜಮೀನು. ಅನುರಾಧ ರೈ ಅವರಿಗೆ ನೀಡಲಾದ ಆಸ್ತಿ 100 ಕೋಟಿ ರೂ. ಎಂದು ಹೇಳಲಾಗಿದೆ.

    Click to comment

    Leave a Reply

    Your email address will not be published. Required fields are marked *

    BIG BOSS

    BBK11: ಓಪನ್ ಆಗಿದೆ ಬಿಗ್​ಬಾಸ್ ಮನೆಯ ಮುಖ್ಯದ್ವಾರ; ಕ್ಲೈಮ್ಯಾಕ್ಸ್​ನಲ್ಲಿ ಇದೆಯಾ ರೋಚಕ ಟ್ವಿಸ್ಟ್..!

    Published

    on

    ಬಿಗ್​ ಬಾಸ್​… ಆರಂಭದಲ್ಲೇ ರಣಾಂಗಣವಾಗಿ ಬದಲಾಗಿರೋ ಬಿಗ್ ಮನೆ ಅತಿರೇಕದ ಕದನಕ್ಕೂ ಸಾಕ್ಷಿಯಾಗಿದೆ. ಇದುವರೆಗೂ ಚರ್ಚೆಯಾಗುತ್ತಿದ್ದ ರೀತಿಯೇ ರಂಜಿತ್ ಹಾಗೂ ಲಾಯರ್ ಜಗದೀಶ್​ಗೆ ಕಿರುತೆರೆಯ ದೊಡ್ಮನೆಯಿಂದ ಗೇಟ್ ಪಾಸ್ ಸಿಕ್ಕಿದೆ. ಹೊರಹೋಗಲು ಡೋರ್ ಓಪನ್ ಆಗಿದೆ.

    ಬಿಗ್‌ಬಾಸ್ ಅಂದ್ರೆ.. ಟಾಸ್ಕ್‌, ಎಲಿಮಿನೇಟ್, ಸೇವ್, ಜಗಳ ಎಲ್ಲ ಮಿಕ್ಸ್​ ಮಸಾಲ ಇದ್ದೇ ಇರುತ್ತೆ. ಆದ್ರೆ, ಈ ಸಲದ ಬಿಗ್‌ಬಾಸ್‌ ಸೀಸನ್ ನೋಡಿದ್ರೆ ಜನಕ್ಕೆ ಇದೇನಪ್ಪ ಬರೀ ಜಗಳ ಅನಿಸುವಂತೆ ಆಗ್ಬಿಟ್ಟಿದೆ. ಆರಂಭದಿಂದ ಬಿಗ್ ಮನೆಯಲ್ಲಿ ಬರೀ ಜಗಳದ್ದೇ ಸದ್ದು. ಅದರ ಸೆಂಟರ್ ಆಫ್ ಅಟ್ರ್ಯಾಕ್ಷನ್ ಅಭಿಮಾನಿಗಳ ಪಾಲಿನ ಕಿಂಗ್ ಜಗದೀಶ್.

    ಆದ್ರೀಗ ಇದೇ ಜಗದೀಶ್, ಜಗಳದ ಜಟಾಪಟಿಯಿಂದ ಬಿಗ್ ಬಾಸ್​ ಮನೆಯಿಂದ ಹೊರಹೋಗೋ ಪರಿಸ್ಥಿತಿ ಬಂದಿದೆ. ಎಪಿಸೋಡ್‌ನಲ್ಲಿ ಬಿಗ್‌ಬಾಸ್‌ ಕಂಟೆಸ್ಟ್‌ಗಳಿಗೆ ಒಂದು ಟಾಸ್ಕ್‌ ಕೊಟ್ಟಿರುತ್ತೆ. ಟಾಸ್ಕ್‌ನಲ್ಲಿ ಗೆದ್ದೋರಿಗೆ ಇಬ್ಬರನ್ನ ಸೇವ್‌ ಮತ್ತು ನಾಮಿನೇಟ್‌ ಮಾಡೋ ಅವಕಾಶ ಇರುತ್ತೆ. ಆದರೆ ನಾಮಿನೇಟ್​ ವೇಳೆ ಜಗಳ ಆಗಿದ್ದೆ ಜಗಳ ಆಗೋಕೆ ಕಾರಣ ಆಗಿದೆ.

    ಈ ವಾರದ ನಾಮಿನೇಟ್‌ ಯಾರು?

    ಆಟ ಆದ ಮೇಲೆ.. ನೇರವಾಗಿ ನಾಮಿನೇಟ್‌ ಆಗಿದ್ದ ಅನುಷಾ.. ಐಶ್ವರ್ಯ, ಮಾನಸ, ಜಗದೀಶ್, ಗೋಲ್ಡ್‌ ಸುರೇಶ್, ಮೋಕ್ಷಿತಾ, ಧನರಾಜ್‌ ಹಾಗೂ ಉಗ್ರಂ ಮಂಜು ಈ ವಾರದ ನಾಮಿನೇಟ್‌ ಅಂತಾ ಬಿಗ್‌ಬಾಸ್ ಅಂತಿಮ ಪಟ್ಟಿಯನ್ನ ಡಿಸ್‌ಪ್ಲೇ ಮಾಡಿದೆ ಅಷ್ಟೇ.. ಅಷ್ಟೋತ್ತು ಆಟ ಆಡಿದವ್ರು ಈಗ ಗುಂಪು ಗುಂಪಾಗಿ ಸಮಜಾಯಿಷಿ ಕೋಡೋಕೆ ಶುರು ಮಾಡಿದರು.

    ಇಷ್ಟೇ ಆಗಿದ್ರೆ ಬಿಗ್‌ಬಾಸ್ ಮನೆ ರಣರಂಗ ಆಗುತ್ತಿರಲಿಲ್ಲ. ಆದ್ರೆ ಈ ಗ್ಯಾಪಲ್ಲಿ ಮಹಿಳಾ ಸ್ಪರ್ಧಿಯೊಬ್ಬರ ಬಗ್ಗೆ ಜಗದೀಶ್ ಹೇಳಿದ ಅದೊಂದು ಮಾತು ದೊಡ್ಡ ರಾದ್ದಾಂತ ಸೃಷ್ಟಿಸಿಬಿಟ್ಟಿತು. ಜಗದೀಶ್ ಆ ವರ್ಡ್‌ ಯೂಸ್‌ ಮಾಡ್ತಿದ್ದಂತೆ ಬಿಗ್‌ಬಾಸ್ ಮಹಿಳಾ ಮಣಿಗಳು ಲಾಯರ್‌ಗೆ ಪ್ರಶ್ನೆ ಮಾಡೋಕೆ ಶುರು ಮಾಡಿದರು.

    ಜಗದೀಶ್​​ ತಪ್ಪಾಗಿ ಮಾತನಾಡಿದ್ರಾ..?

    ಮಾಸನ ಹಾಗೂ ಜಗದೀಶ್ ಮಾತಿನ ಚಕಮಕಿ ವೇಳೇ ರಂಜಿತ್‌ ಬಂದು ಜಗದೀಶ್​​ರನ್ನ ತಳ್ಳಿದ್ದಾರೆ. ಅತ್ತ ಮಹಿಳೆಯರ ಬಗ್ಗೆ ಜಗದೀಶ್​​ ತಪ್ಪಾಗಿ ಮಾತಾಡಿದ್ದಾರೆ. ಹೀಗಾಗಿ ಈ ಇಬ್ಬರನ್ನ ಮನೆಯಿಂದ ಹೊರಬರಲು ಬಿಗ್‌ಬಾಸ್‌ ಸೂಚಿಸಿದ್ದು, ಮನೆಯ ಮುಖ್ಯದ್ವಾರ ಓಪನ್ ಆಗಿದೆ. ಡೋರ್ ಏನೋ ಓಪನ್ ಆಗಿದೆ. ಆದ್ರೆ, ಯಾರೂ ಹೊರಗೆ ಹೋಗಿರುವುದು ಎನ್ನುವುದು ತೋರಿಸಿಲ್ಲ. ಹೀಗಾಗಿ ಕ್ಲೈಮ್ಯಾಕ್ಸ್ ಇವತ್ತಿನ ಸಂಚಿಕೆಯಲ್ಲಿ ಕಾಣಸಿಗಲಿದೆ.

    Continue Reading

    DAKSHINA KANNADA

    SHOCKING NEWS – ಉಳ್ಳಾಲ: ತಿಂಗಳ ಹಿಂದಷ್ಟೇ ಖರೀದಿಸಿದ್ದ ಟಿವಿಎಸ್‌ ಸ್ಕೂಟಿ ಬೆಂಕಿಗಾಹುತಿ

    Published

    on

    ಉಳ್ಳಾಲ: ಟಿವಿಎಸ್‌ ಕಂಪನಿಯ ಎಂಟಾರ್ಕ್‌ ಸ್ಕೂಟರ್‌ ತನ್ನಷ್ಟಕ್ಕೆ ಉರಿದು ಸುಟ್ಟ ಆಶ್ಚರ್ಯಕರ ಘಡನೆ ಉಳ್ಳಾಲದಲ್ಲಿ ನಡೆದಿದೆ.

    ಕುಂಪಲ ವಿದ್ಯಾನಗರ ನಿವಾಸಿ ಐಟಿಐ ಕಲಿಯುತ್ತಿರುವ ರಾಕೇಶ್‌ ಎಂಬ ವಿದ್ಯಾರ್ಥಿ ತಿಂಗಳ ಹಿಂದೆ ಖರೀದಿ ಮಾಡಿದ್ದನು. ಆ ಸ್ಕೂಟರ್ ತನ್ನಷ್ಟಕ್ಕೆ ತಾನೇ ಬೆಂಕಿಗಾಹುತಿ ಆದದಲ್ಲದೆ, ಮನೆಯ ಗೋಡೆ, ಕಿಟಕಿಗಳ ಗಾಜುಗಳು, ಒಣಗಲು ಹಾಕಲಾದ ಬಟ್ಟೆಗಳು ಸುಟ್ಟು ಕರಕಲಾಗಿದೆ.

    ಘಟನೆ ನಡೆದಾಗ ಕೂಡಲೇ ಮನೆ ಮಂದಿ ಎಚ್ಚೆತ್ತು ಬೆಂಕಿಯನ್ನು ನಂದಿಸಿ, ಮನೆಗೆ ವ್ಯಾಪಿಸಲಿದ್ದ ಬೆಂಕಿಯನ್ನು ನಂದಿಸಿ, ಹೆಚ್ಚಾಗುವ ಅನಾಹುತವನ್ನು ತಡೆದಿದ್ದಾರೆ.

    ರಾಕೇಶ್‌ ಓದಿನ ಜೊತೆ ಪಾರ್ಟ್‌ ಟೈಂ ಕೆಲಸ ಮಾಡಿ ತೊಕ್ಕೊಟ್ಟಿನ “ಸೋನಾ ಟಿವಿಎಸ್‌” ಶೋರೂಂನಲ್ಲಿ ಸ್ಕೂಟರ್‌ ಖರೀದಿ ಮಾಡಿದ್ದರು.

    ಎರಡು ದಿನಗಳ ಹಿಂದೆ ಮೊದಲ ಇಎಮ್‌ಐ ಕಂತು ಕಟ್ಟಿದ್ದು. ಸ್ಕೂಟರಿನ ಬ್ಯಾಟರಿ ಸಿಡಿದು ಬೆಂಕಿ ಹತ್ತಿರುವುದಾಗಿ ಶಂಕೆ ವ್ಯಕ್ತಪಡಿಸಲಾಗಿದೆ. ಈ ಕುರಿತು ರಾಕೇಶ್‌ ಉಳ್ಳಾಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

    Continue Reading

    LATEST NEWS

    ವಕ್ಫ್‌ ಜಮೀನಿನಲ್ಲಿ ಹೊಸ ಸಂಸತ್ ನಿರ್ಮಾಣ..! ಅಸ್ಸಾಂ ಮಾಜಿ ಸಂಸದನ ವಿವಾದಾತ್ಮಕ ಹೇಳಿಕೆ..!

    Published

    on

    ದೆಹಲಿಯ ಸಂಸತ್ ಭವನ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ವಕ್ಫ್‌ ಆಸ್ತಿಯಲ್ಲಿ ನಿರ್ಮಿಸಲಾಗಿದೆ ಎಂದು ಅಸ್ಸಾಂನ ಧುಬ್ರಿ ಸಂಸದ ಬದ್ರುದ್ದೀನ್ ಅಜ್ಮಲ್‌ ಹೇಳಿದ್ದಾರೆ. ಅಜ್ಮಲ್ ಅವರ ಈ ಹೇಳಿಕೆ ಈಗ ದೊಡ್ಡ ವಿವಾದ ಸೃಷ್ಟಿಸಿದ್ದು, ಸರಕಾರ ಮಂಡಿಸಿದ್ದ ವಕ್ಫ್‌ ಮಸೂದೆ ತಿದ್ದುಪಡಿ ವಿಚಾರಕ್ಕೆ ಬಲ ನೀಡಿದಂತಾಗಿದೆ. ಇವರ ಈ ಹೇಳಿಕೆಯ ಬೆನ್ನಲ್ಲೇ ಟ್ವಿಟ್‌ ಮಾಡಿರುವ ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಎಲ್ಲಾ ಸಂಸದರು ವಕ್ಫ್‌ ತಿದ್ದುಪಡಿ ಮಸೂದೆಯನ್ನು ಬೆಂಬಲಿಸುವಂತೆ ಕರೆ ನೀಡಿದ್ದಾರೆ.

    AIUDF ಮುಖ್ಯಸ್ಥ ಹಾಗೂ ಅಸ್ಸಾಂನ ಮಾಜಿ ಸಂಸದ ಬದ್ರುದ್ದೀನ್ ಅಜ್ಮಲ್‌ ಕಾರ್ಯಕ್ರಮವೊಂದರಲ್ಲಿ ವಕ್ಫ್‌ ಆಸ್ತಿಯ ವಿಚಾರ ಪ್ರಸ್ತಾಪ ಮಾಡಿದ್ದರು. ಈ ವೇಳೆ ಮಾತನಾಡಿದ ಅವರು ದೆಹಲಿಯ ಸಂಸತ್ ಭವನ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ವಕ್ಫ್‌ ಆಸ್ತಿಯಲ್ಲಿ ನಿರ್ಮಿಸಲಾಗಿದೆ ಎಂದು ಹೇಳಿದ್ದರು. ಕೇಂದ್ರ ಸಚಿವ ಕಿರಣ್ ರಿಜಿಜು ಅವರನ್ನು ಉಲ್ಲೇಖಿಸಿ, ಬಾರತವು ಅತೀ ದೊಡ್ಡ ವಕ್ಫ್ ಆಸ್ತಿಯನ್ನು ಹೊಂದಿದೆ. ಅವುಗಳನ್ನು ಮುಸ್ಲಿಂ ಸಮೂದಾಯದ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಬಳಸಬೇಕು ಎಂದು ಹೇಳಿದ್ದರು.

    ಇದಿಷ್ಟೇ ಅಲ್ಲದೆ ಆಂದ್ರಪ್ರದೇಶದ ವಿಮಾನ ನಿಲ್ದಾಣವನ್ನು ವಕ್ಫ್ ಅನುಮತಿ ಪಡೆಯದೆ ಚಂದ್ರಬಾಬು ನಾಯ್ಡು ನಿರ್ಮಾಣ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅನುಮತಿ ಇಲ್ಲದೆ ವಕ್ಫ್‌ ಭೂಮಿಯನ್ನು ಬಳಸುವುದು ತಪ್ಪಾಗಿದ್ದು, ಈ ತಪ್ಪಿಗೆ ಅವರ ಸರ್ಕಾರ ಶೀಘೃ ಪಥನವಾಗುತ್ತದೆ ಎಂದು ಹೇಳಿದ್ದಾರೆ.

    ಕೇಂದ್ರ ಸರ್ಕಾರ ವಕ್ಫ್‌ ಮಸೂದೆಯ ತಿದ್ದುಪಡಿಯನ್ನು ಸಂಸತ್‌ನಲ್ಲಿ ಜುಲೈ 28ರಂದು ಮಂಡಿಸಿತ್ತು. ಆದರೆ ವಿರೋಧ ಪಕ್ಷದ ಜೊತೆಗೆ ಸ್ವಪಕ್ಷೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ರಚಿಸಿರುವ ಜಂಟಿ ಸಂಸದೀಯ ಸಮಿತಿಯಲ್ಲಿ ಈ ಮಸೂದೆ ಪರಿಶೀಲನೆ ನಡೆಯುತ್ತಿದೆ. ಇದೇ ವೇಳೆ ಬದ್ರುದ್ದೀನ್ ಅಜ್ಮಲ್‌ ಅವರ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿಸಿದ್ದು ಇದು ಮಸೂದೆಯ ತಿದ್ದುಪಡಿಯ ಮೇಲೂ ಪರಿಣಾಮ ಬೀರುವ ಸಾದ್ಯತೆ ಎದುರಾಗಿದೆ.

    Continue Reading

    LATEST NEWS

    Trending