Connect with us

    LATEST NEWS

    ಖ್ಯಾತ ಕಲಾನಿರ್ದೇಶಕ ಸುನಿಲ್ ಬಾಬು ಹೃದಯಾಘಾತದಿಂದ ನಿಧನ..!

    Published

    on

    ಎರ್ನಕುಳಂ : ಭಾರತೀಯ ಸಿನಿಮಾ ರಂಗದ ಖ್ಯಾತ ಕಲಾನಿರ್ದೇಶಕ ಸುನಿಲ್ ಬಾಬು ಹೃದಯಾಘಾತದಿಂದ ನಿಧನರಾಗಿದ್ದಾರೆ.

    ಮಲಯಾಳಂ, ತೆಲುಗು, ಹಿಂದಿ, ತಮಿಳು ಸೇರಿದಂತೆ ನಾನಾ ಭಾಷೆಯ ಸಿನಿಮಾಗಳಿಗೆ ಕೆಲಸ ಮಾಡಿದ್ದ ಹೆಗ್ಗಳಿಕೆಗೆ ಸುನೀಲ್ ಬಾಬು ಪಾತ್ರರಾಗಿದ್ದರು.

    50ರ ವಯಸ್ಸಿನ ಸುನಿಲ್ ಬಾಬು ಕೇರಳದ ಎರ್ನಾಕುಳಂನಲ್ಲಿ ವಾಸಿಸುತ್ತಿದ್ದರು. ಮನೆಯಲ್ಲೇ ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ.

    ಈಗಷ್ಟೇ ಅವರು ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನ ವಾರಿಸು ಸಿನಿಮಾದ ಶೂಟಿಂಗ್ ಮುಗಿಸಿದ್ದರು.

    ಮೂರ್ನಾಲ್ಕು ಸಿನಿಮಾಗಳಿಗೆ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಗಜನಿ, ಉರುಮಿ ಸೇರಿದಂತೆ ನೂರಾರು ಚಿತ್ರಗಳಿಗೆ ಕೆಲಸ ಮಾಡಿದ ಹೆಗ್ಗಳಿಕೆ ಇವರದ್ದು.

    ವಿಭಿನ್ನವಾಗಿ, ಬೃಹತ್ ಸೆಟ್ ಹಾಕುವುದರಲ್ಲಿ ಪರಿಣಿತಿ ಪಡೆದಿದ್ದ ಸುನಿಲ್ ಬಾಬು ಅವರಿಗೆ 2005ರಲ್ಲಿ ಅನಂತ ಭದ್ರ ಸಿನಿಮಾಗಾಗಿ ಅತ್ಯುತ್ತಮ ಕಲಾ ನಿರ್ದೇಶಕ ರಾಜ್ಯ ಪ್ರಶಸ್ತಿ ಕೂಡ ದೊರೆತಿದೆ.

    ಸುನಿಲ್ ಅವರ ಸಾವಿನ ಸುದ್ದಿಗೆ ಚಿತ್ರರಂಗ ಕಂಬಿನಿ ಮಿಡಿದಿದ್ದು, ದುಲ್ಕರ್ ಸಲ್ಮಾನ್ ಭಾವುಕರಾಗಿಯೇ ಇವರ ಬಗ್ಗೆ ಸುದೀರ್ಘವಾಗಿ ನೆನಪುಗಳನ್ನು ಬರೆದಿಕೊಂಡಿದ್ದಾರೆ.

    ನಿಮ್ಮ ಪ್ರತಿಭೆಗೆ ನೀವೇ ಸಾಟಿ, ನಿಮ್ಮ ಕುಟುಂಬಕ್ಕೆ ಈ ನೋವು ಭರಿಸುವಂತಹ ಶಕ್ತಿ ಸಿಗಲಿ ಎಂದು ಅವರು ಬರೆದು ಕಂಬನಿ ಮಿಡಿದಿದ್ದಾರೆ.

    LATEST NEWS

    ರೇವಣ್ಣ ಕುಟುಂಬಕ್ಕೆ ಮತ್ತೊಂದು ಅಘಾ*ತ; ಸೂರಜ್ ರೇವಣ್ಣ ಬಂಧನ

    Published

    on

    ಹಾಸನ : ಮಾಜಿ ಸಚಿವ ಎಚ್. ಡಿ. ರೇವಣ್ಣ ಕುಟುಂಬಕ್ಕೆ ಮತ್ತೊಂದು ಅಘಾ*ತವಾಗಿದೆ. ಲೈಂ*ಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರನ್ನು ಬಂಧಿಸಲಾಗಿದೆ.


    ಹಾಸನದ ಹೊಳೆನರಸೀಪುರದ ಗ್ರಾಮಾಂತರ ಠಾಣೆಯಲ್ಲಿ ಶನಿವಾರ ಸಂಜೆ ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿ*ಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಐಪಿಸಿ ಸೆಕ್ಷನ್ 377, 342, 506 ಅಡಿ ಕೇಸ್ ದಾಖಲಾಗಿದ್ದು, ಪೊಲೀಸರು ಸೂರಜ್ ರೇವಣ್ಣ ಅವರನ್ನು ಬಂಧಿಸಿದ್ದಾರೆ.

    ಸೂರಜ್ ರೇವಣ್ಣ ವಿರುದ್ಧ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ವಿಚಾರಣೆಗಾಗಿ ಸಕಲೇಶಪುರ ಡಿವೈಎಸ್ಪಿ ಪ್ರಮೋದ್ ಕುಮಾರ್ ನೇಮಕಗೊಂಡಿದ್ದಾರೆ. ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಸೂರಜ್ ರೇವಣ್ಣ ಶನಿವಾರ ಸಂಜೆ ಠಾಣೆಗೆ ಆಗಮಿಸಿದ್ದರು. ಆಗ ಅವರ ವಿಚಾರಣೆ ನಡೆದಿತ್ತು. ಭಾನುವಾರ ಮುಂಜಾನೆ 4 ಗಂಟೆವರೆಗೂ ಅವರ ವಿಚಾರಣೆ ನಡೆಸಿದ ತನಿಖಾಧಿಕಾರಿಗಳು ಬಳಿಕ ಬಂಧಿಸಿದ್ದಾರೆ.

    ಇದನ್ನೂ ಓದಿ : ತಾಯಿ-ಮಗಳ ಡಬಲ್ ಮ*ರ್ಡರ್..! ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ ಶಾಕ್..!

    ಲೈಂ*ಗಿಕ ದೌರ್ಜನ್ಯ ಹಾಗೂ ಅತ್ಯಾ*ಚಾರ ಪ್ರಕರಣದ ಆರೋಪ ಎದುರಿಸುತ್ತಿರೋ ಹಾಸನದ ಮಾಜಿ ಸಂಸದ, ಸೂರಜ್ ರೇವಣ್ಣ ಸಹೋದರ ಪ್ರಜ್ವಲ್ ರೇವಣ್ಣ ಈಗಾಗಲೇ ಎಸ್‌ಐಟಿ ಕಸ್ಟಡಿಯಲ್ಲಿದ್ದಾರೆ. ಈಗ ಸೂರಜ್ ರೇವಣ್ಣ ಸಹ ಬಂಧನವಾಗಿದ್ದು, ರೇವಣ್ಣ ಕುಟುಂಬ ಮತ್ತೆ ಸಂಕಷ್ಟ ಎದುರಾಗಿದೆ.

    Continue Reading

    LATEST NEWS

    ತಾಯಿ-ಮಗಳ ಡಬಲ್ ಮ*ರ್ಡರ್..! ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ ಶಾಕ್..!

    Published

    on

    ಮಂಗಳೂರು ( ಅಂಕೋಲ ) : ತನ್ನ ಪತ್ನಿ ಹಾಗೂ ಮಗಳನ್ನು ಯಾರೋ ಹ*ತ್ಯೆ ಮಾಡಿದ್ದಾರೆ ಎಂಬ ಕರೆ ಸ್ವೀಕರಿಸಿದ ಪೊಲೀಸರು ಸ್ಥಳಕ್ಕೆ ಹೋದಾಗ ಶಾಕ್‌ಗೆ ಒಳಗಾಗಿದ್ದಾರೆ. 112 ಗೆ ಕರೆ ಮಾಡಿದ್ದ ವ್ಯಕ್ತಿ ಭೀಕ*ರ ಹ*ತ್ಯೆಯ ಬಗ್ಗೆ ತಿಳಿಸಿ ತನಗೆ ಭಯವಾಗುತ್ತಿದೆ ಬೇಗ ಬನ್ನಿ ಎಂದಿದ್ದ.
    ಅಂಕೋಲದ ಹಿಲ್ಲೂರಿನ ಬಿಲ್ಲನ ಬೈಲ್‌ನ ಮಂಜುನಾಥ ಬೊಮ್ಮಯ್ಯ ನಾಯಕ ಎಂಬಾತ ಈ ಕರೆ ಮಾಡಿದ್ದ. ಮಾಹಿತಿ ಪಡೆದ 112 ಸಿಬ್ಬಂಧಿ ಕಾರವಾರದಿಂದ ವೈರ್‌ಲೆಸ್ ಮೂಲಕ ತಕ್ಷಣ ಘಟನಾ ಸ್ಥಳಕ್ಕೆ ತೆರಳುವಂತೆ ಅಂಕೋಲ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಕರೆ ಸ್ವೀಕರಿಸಿದ ಪಿಎಸೈ ಉದ್ಧಪ್ಪ ಧರೆಪ್ಪನವರ್, ಎಎಸೈ ಲಲಿತಾ ರಜಪೂತ್ ಹಾಗೂ ಸಿಬ್ಬಂದಿ ಪ್ರವೀಣ ಪೂಜಾರ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿ, ಜೀಪನ್ನೇರಿ ತಾಲೂಕು ಕೇಂದ್ರದಿಂದ 37 ಕಿಲೋ ಮೀಟರ್ ದೂರದ ಹಿಲ್ಲೂರಿಗೆ ಬಂದಿದ್ದಾರೆ.

    ಘಟನಾ ಸ್ಥಳಕ್ಕೆ ಬಂದು ವಿಚಾರಿಸಿದ ಪೊಲೀಸರಿಗೆ ಶಾಕ್‌..!

    ಪೊಲೀಸರು ಹಿಲ್ಲೂರು ಗ್ರಾಮಕ್ಕೆ ತಲುಪುವ ಸಮಯಕ್ಕೆ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದಾರೆ. ಇದನ್ನು ನೋಡಿದ ಪೊಲೀಸರು ಡಬ್ಬಲ್ ಮ*ರ್ಡರ್‌ ವಿಚಾರವಾಗಿ ತಲೆ ಕೆಡಿಸಿಕೊಂಡು ಮನೆಯತ್ತ ಬಂದಿದ್ದಾರೆ. ಆದ್ರೆ ಅಲ್ಲಿ ಸೇರಿದ್ದ ಅಷ್ಟೂ ಜನರು ಪೊಲೀಸರು ಬರುತ್ತಿದ್ದಂತೆ ಮುಸಿಮುಸಿ ನಗಲು ಆರಂಭಿಸಿದ್ದಾರೆ. ಇದನ್ನು ನೋಡಿದ ಪೊಲೀಸರೂ ಕೂಡಾ ಒಂದು ಕ್ಷಣ ಅನುಮಾನಿಸಿದ್ದಾರೆ. ಆದ್ರೆ ಅಸಲಿ ವಿಚಾರ ತಿಳಿಯುತ್ತಿದ್ದಂತೆ ಶಾಕ್ ಆಗಿದ್ದು ಮಾತ್ರವಲ್ಲದೆ ಪಿತ್ತ ನೆತ್ತಿಗೇರಿ ಕರೆ ಮಾಡಿದ್ದ ವ್ಯಕ್ತಿಯನ್ನು ಹಿಡಿದು ನಾಲ್ಕು ತದುಕಿದ್ದಾರೆ.

    ಮಾನಸಿಕ ಅಸ್ವಸ್ಥನಿಂದ ಪೊಲೀಸರಿಗೆ ಹುಸಿ ಕರೆ..!

    ಹೌದು 112 ಗೆ ಕರೆ ಮಾಡಿದ್ದ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದು, ಕಳೆದೊಂದು ವರ್ಷದಿಂದ ಈ ರೀತಿ ಮಾಡುತ್ತಿದ್ದಾನೆ. ಈತನ ಈ ಕೃತ್ಯದಿಂದ ಬೇಸತ್ತ ಪತ್ನಿ ಹಾಗೂ ಮಕ್ಕಳು ಬೇರೆಯವರ ಮನೆಯಲ್ಲಿ ವಾಸಮಾಡುತ್ತಿದ್ದಾರೆ. ಇದೀಗ ಪತ್ನಿ ಮತ್ತು ಮಗಳನ್ನು ಯಾರೋ ಕೊಲೆ ಮಾಡಿದ್ದಾರೆ ಅಂತ ಊರವರನ್ನು ಸೇರಿಸಿದ್ದು ಮಾತ್ರವಲ್ಲದೆ ಪೊಲೀಸರೂ ಮನೆ ಬಾಗಿಲಿಗೆ ಬರುವಂತೆ ಮಾಡಿದ್ದಾನೆ.

    Continue Reading

    LATEST NEWS

    ಕಿತ್ತೋದ ಕಾಮಾಗಾರಿ..! ಸ್ಮಾರ್ಟ್‌ ಸಿಟಿಗೆ ಎಷ್ಟು ವರ್ಷ ಗ್ಯಾರೆಂಟಿ..?

    Published

    on

    ಮಂಗಳೂರು : ಮಂಗಳೂರು ನಗರದಲ್ಲಿ ಸ್ಮಾರ್ಟ್‌ ಸಿಟಿ ಕಾಮಾಗಾರಿಯ ಒಂದೊಂದೆ ಕರ್ಮಾಕಾಂಡ ಈಗ ಹೊರ ಬರುತ್ತಿದೆ. ಹಂಪನಕಟ್ಟೆಯ ಕಾರ್ ಪಾರ್ಕಿಂಗ್ ಕಟ್ಟಡ ಕಾಮಾಗಾರಿ ನೆನೆಗುದಿಗೆ ಬಿದ್ದಿದ್ರೆ, ಮುಳಿಹಿತ್ಲಿನ ರಿವರ್ ಫ್ರಂಟ್‌ ತಡೆಗೋಡೆ ಕುಸಿತವಾಗಿದೆ. ಇದೀಗ ನೆಲ್ಲಿಕಾಯಿ ರಸ್ತೆಯಲ್ಲಿ ಪಾದಾಚಾರಿ ರಸ್ತೆಯಲ್ಲಿ ಚರಂಡಿಯ ಮುಚ್ಚಳವೊಂದು ಜನರನ್ನು ಬಲಿ ಪಡೆಯಲು ಕಾದು ನಿಂತಿದೆ.

    ಕುಟುಂತ್ತಾ ಸಾಗಿದ್ದ ಸ್ಮಾರ್ಟ್‌ ಸಿಟಿ ಕಾಮಾಗಾರಿಯಿಂದ ಮಂಗಳೂರು ಅಂದವಾಗುವುದು ಬಿಟ್ಟು ಅಂದಗೆಟ್ಟು ಹೋಗಿದೆ ಎನ್ನಬಹುದು. ಕೇವಲ ನಾಲ್ಕೈದು ಸರ್ಕಲ್‌, ಮೂರ್ನಾಲ್ಕು ಕೆರೆ ಹಾಗೂ ಒಂದೆರಡು ಪಾರ್ಕ್‌ಗಳನ್ನು ಅಭಿವೃದ್ದಿ ಮಾಡಿ ಇದೇ ಸ್ಮಾರ್ಟ್‌ ಸಿಟಿ ಅಂತ ಜನರನ್ನು ನಂಬಿಸುವ ಕೆಲಸ ಆಗಿದೆ. ಆದ್ರೆ ಅಸಲಿಗೆ ಆಗಬೇಕಾದ ಅಗತ್ಯ ಕೆಲಸಗಳು ಹಳ್ಳ ಹಿಡಿದಿದೆ ಅನ್ನೋದು ಸುಳ್ಳಲ್ಲ. ಇನ್ನು ಪೂರ್ಣಗೊಂಡಿರುವ ಕದ್ರಿ ಪಾರ್ಕ್‌ ಅಂಗಡಿ ಮಳಿಗೆಗಳು ಪಾಳು ಬೀಳುತ್ತಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ.
    ಇದರ ನಡುವೆ ಅಲ್ಲಲ್ಲಿ ಅಗೆದು ಹಾಕಲಾದ ಜಲ ಸಿರಿ ಯೋಜನೆಯ ಕಾಮಾಗಾರಿಗಳು ದ್ವಿಚಕ್ರವಾಹನ ಸವಾರರನ್ನು ಯಾವಾಗ ಬಲಿ ಪಡೆಯಲಿದೆಯೋ ಗೊತ್ತಿಲ್ಲ. ಇದೆಲ್ಲದರ ನಡುವೆ ಪಾದಾಚಾರಿಗಳು ನಡೆದಾಡುವ ಫುಟ್‌ಪಾತ್‌ ಕೂಡಾ ಕಳಪೆ ದರ್ಜೆಯಲ್ಲಿ ಮಾಡಿದ್ದಾರೆ ಅನ್ನೋದು ನೆಲ್ಲಿಕಾಯಿ ರಸ್ತೆಯಲ್ಲಿ ಸಂಚರಿಸಿದ್ರೆ ಗೊತ್ತಾಗುತ್ತದೆ. ಇಲ್ಲಿನ ಇಂಟರ್‌ ಲಾಕ್ ಕಿತ್ತು ಹೋಗುತ್ತಿರುವುದು ಮಾತ್ರವಲ್ಲದೆ ದುಬಾರಿ ಬೆಲೆಯ ಚರಂಡಿ ಮುಚ್ಚಳ ತುಂಡಾಗಿ ಜನರ ಜೀವ ಬಲಿಗೆ ಕಾದು ನಿಂತಿದೆ.

    ಇದು ಯಾವ ರೀತಿಯ ಸ್ಮಾರ್ಟ್‌ ಸಿಟಿ ಕಾಮಾಗಾರಿ ಅನ್ನೋದನ್ನು ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಹೇಳಬೇಕಾಗಿದೆ. ಕೋಟ್ಯಾಂತರ ರೂಪಾಯಿ ಜನರ ತೆರಿಗೆ ಹಣವನ್ನು ಬೇಕಾಬಿಟ್ಟಿ ಕೆಲಸದ ಮೂಲಕ ಪೂಲು ಮಾಡುವ ಈ ಸ್ಮಾರ್ಟ್‌ ಸಿಟಿ ಬೇಕಿತ್ತಾ ಅಂತ ಜನರು ಪ್ರಶ್ನೆ ಮಾಡುತ್ತಿದ್ದಾರೆ. ತಕ್ಷಣ ನೆಲ್ಲಿಕಾಯಿ ರಸ್ತೆಯ ಫುಟ್‌ ಪಾತ್ ದುರಸ್ಥಿ ಮಾಡದೇ ಇದ್ರೆ ಕತ್ತಲಿನಲ್ಲಿ ಯಾರಾದ್ರೂ ಬಿದ್ದು ಅಪಾಯ ಸಂಭವಿಸುವುದು ಗ್ಯಾರೆಂಟಿ ಅಂತ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    Continue Reading

    LATEST NEWS

    Trending