Connect with us

LATEST NEWS

ಎಪ್ರಿಲ್ 1ರ ಹೊಸ ಹಣಕಾಸು ವರ್ಷ; ನೌಕರರ ಕೆಲಸದ ಸಮಯದಲ್ಲಿ ಹೆಚ್ಚಳ; ವೇತನ ಪರಿಷ್ಕರಣೆ..!

Published

on

ನವದೆಹಲಿ: ಎಪ್ರಿಲ್ ಒಂದರಿಂದ ಹೊಸ ಹಣಕಾಸು ಆರಂಭವಾಗುವುದರೊಂದಿಗೆ ಹಲವಾರು ಹೊಸ ಬದಲಾವಣೆಗಳೂ ಆಗಲಿವೆ. ಈ ಬದಲಾವಣೆಗಳಲ್ಲಿ ಮುಖ್ಯವಾಗಿ ಸರ್ಕಾರಿ ನೌಕರರ ಕೆಲಸದ ಸಮಯ ಮತ್ತು ವೇತನ ಪರಿಷ್ಕರಣೆಯಾಗಲಿದೆ.

ಪ್ರಸ್ತುತ ಇರುವ 9ಗಂಟೆಗಳ ಕೆಲಸದ ಮಿತಿ 12ಗಂಟೆಗೆ ಹೆಚ್ಚಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ. ಕೆಲಸದ ಸಮಯ ಹೆಚ್ಚಳದೊಂದಿಗೆ ಕೆಲಸದ ದಿನಗಳ ಸಂಖ್ಯೆ ವಾರದಲ್ಲಿ ನಾಲ್ಕು ದಿನವಾಗಲಿದೆ.

ಗ್ರ್ಯಾಚುವಿಟಿ ಮತ್ತು ಭವಿಷ್ಯ ನಿಧಿಯಲ್ಲಿ ಹೆಚ್ಚಳವಾಗಲಿದ್ದು, ಒಟ್ಟು ವೇತನದಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ. 2020ರಲ್ಲಿ ವೇತನ ಸಂಹಿತೆ ಮಸೂದೆಗಳನ್ನು ಸಂಸತ್ತಿನಲ್ಲಿ ಅಂಗೀಕರಿಸಿರುವುದರಿಂದ ಇದು ಜಾರಿಗೆ ಬರುವ ಸಾಧ್ಯತೆಯಿದೆ.ಈ ಕಾನೂನು ಎಪ್ರಿಲ್  1 2021ರಲ್ಲಿ ಜಾರಿಗೆ ಬರುವ ಸಾಧ್ಯತೆಯಿದೆ.  ಇದರಿಂದ ನೌಕರರ ಒಟ್ಟು ವೇತನ ಕಡಿಮೆಯಾಗುವುದಲ್ಲದೆ. ಇದರ ಪರಿಣಾಮ ಉದ್ಯೋಗಿಗಳು ಹಾಗೂ ಉದ್ಯೋಗದಾತರ ಮೇಲಾಗಲಿದೆ.  ಖಾಸಗಿ ಕಂಪನಿಗಳ ಮೇಲೂ ಹೊಸ ನಿಯಮ ಪ್ರಭಾವ ಬೀರಲಿದೆ

ಹೊಸ ನಿಯಮದ ಪ್ರಕಾರ ಮೂಲ ವೇತನ ಶೇಕಡಾ 50 ಅಥವಾ ಅದಕ್ಕೂ ಮೀರಿರಬೇಕು ಆಗ ಮಾತ್ರ ನೌಕರರ ವೇತನದ ರಚನೆ ಬದಲಾಗಲಿದೆ. ಹೊಸ ಭತ್ಯೆಗಳು ಒಟ್ಟು ವೇತನದ ಶೇಕಡಾ 50ರಷ್ಟಾಗಲಿದೆ. ಮೂಲ ವೇತನದ ಹೆಚ್ಚಳದೊಂದಿಗೆ ಪಿಎಫ್ ಹೆಚ್ಚಾಗಲಿದೆ.

ಹೊಸ ನಿಯಮಗಳ ಪ್ರಕಾರ, ಯಾವುದೇ ಉದ್ಯೋಗಿಯಿಂದ 5 ಗಂಟೆಗಳಿಗಿಂತ ಹೆಚ್ಚು ನಿರಂತರ ಕೆಲಸವನ್ನು ನಿಷೇಧಿಸಲಾಗಿದೆ.
ಪ್ರತಿ 5 ಗಂಟೆಗಳ ನಂತರ 30 ನಿಮಿಷಗಳ ವಿಶ್ರಾಂತಿ ನೀಡುವಂತೆ ನೌಕರರಿಗೆ ಸೂಚನೆ ನೀಡಲಾಗಿದೆ.

1 Comment

1 Comment

  1. ಕೆ ಪ್ರಕಾಶ್

    22/08/2022 at 10:21 PM

    ಯೆಲ್ಲಿದೆ ನೌಕರರ ನೀತಿ ಸಂಹಿತೆ ?.ಯಾವ ಕಾರಣ ಕ್ಕಾಗಿ ನಾವು ಸ್ಥಳೀಯ ರು ವೇತನ ತಾರತಮ್ಯ ನೀತಿ, ಸೇವಾ ಹಿರಿತನ ಕಡೆ ಗಣನೆ, ಮುಂಬಡ್ತಿ ನೀಡದೇ ಮಾನಸಿಕ ಕ್ರೌರ್ಯವನ್ನು ಯಾರು ಸರಿಪಡಿಸುವರು .
    ಗಳಿಕೆ ರಜವನ್ನು 180 ರಿಂದ 120 ಕ್ಕೆ ನಂತರ 24 ಕ್ಕೆ ಇಳಿಸಿ ಕಂಪನಿ ಗೆ ಕೂತು ಲಾಭ ಮಾಡಿ ಕೊಡುತ್ತಾರೆ. 20/80 ಸೂತ್ರದ ಪ್ರಕಾರ ಕಂಪನಿಯು 20% ನವ ರಿಂದ ಮಾತ್ರ ನಡೆಯುತ್ತದೆ 80% ನವರು ಇವರಿಗೆ ದುಡಿದು ದುಡಿದು ಮುಪ್ಪಾಗುವುದು.
    ಈ ಸಂಹಿತೆ ಗಳು ಜಾರಿ ಯಾವಾಗ?5 ವರ್ಷ ದಿಂದ ಜಾರಿ ಮಾಡುತ್ತಲೇ ಜಾರಿ ಹೋಗಿದ್ದಾರೆ.

Leave a Reply

Your email address will not be published. Required fields are marked *

BANTWAL

Bantwala:ನಿಯಂತ್ರಣ ತಪ್ಪಿ ಮೈಲು ಕಲ್ಲಿಗೆ ಕಾರು ಢಿಕ್ಕಿ..!

Published

on

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆಯ ಬದಿಯಲ್ಲಿ ಹಾಕಿದ ಮಣ್ಣಿನ ಮೇಲೆ ಹತ್ತಿ ಮೈಲು ಕಲ್ಲಿಗೆ ಢಿಕ್ಕಿ ಹೊಡೆದ ಘಟನೆ ಬಂಟ್ವಾಳದ ಮಾಣಿ ಸಮೀಪದ ಪೆರಾಜೆ ಎಂಬಲ್ಲಿ ನಡೆದಿದೆ.

ಪುತ್ತೂರಿನಿಂದ ಮಾಣಿ ಕಡೆಗೆ ಬರುತ್ತಿದ್ದ ಕಾರು ಚಾಲಕ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಮಣ್ಣಿನ ರಾಶಿ ಮೇಲೆ ಏರಿತ್ತು. ಈ ವೇಳೆ ಕಾರನ್ನು ನಿಯಂತ್ರಣಕ್ಕೆ ತರುವಲ್ಲಿ ಚಾಲಕ ಯಶಸ್ವಿ ಆದ ಕಾರಣ ದೊಡ್ಡ ಅನಾಹುತ ತಪ್ಪಿತ್ತು. ಆದರೆ ರಸ್ತೆ ಬದಿಯಲ್ಲಿದ್ದ ಮೈಲು ಕಲ್ಲಿಗೆ ಢಿಕ್ಕಿ ಹೊಡೆದು ಕಾರು ನಿಂತ ಕಾರಣ ಕಾರಿಗೆ ಅಲ್ಪ ಸ್ವಲ್ಪ ಹಾನಿಯಾಗಿದ್ದು, ಕಾರು ಚಾಲಕನಿಗೂ ಸಣ್ಣ ಪುಟ್ಟ ಗಾಯವಾಗಿದೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರಯಾಗಿದ್ದು, ಕಾರು ನಿಯಂತ್ರಣ ತಪ್ಪಿದ ದೃಶ್ಯ ಕಂಡು ಬಂದಿದೆ.

Continue Reading

LATEST NEWS

ಖಾಸಗಿ ಶಾಲೆಗೆ ನಾಡಗೀತೆ ಅನ್ವಯವಿಲ್ಲ- ಕನ್ನಡ ಸಂಸ್ಕೃತಿ ಇಲಾಖೆ ಆದೇಶ..!

Published

on

ಬೆಂಗಳೂರು: ಖಾಸಗಿ ಶಾಲೆಗಳಲ್ಲಿ ಇನ್ನು ಮುಂದೆ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂದು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಖಾಸಗಿ ಶಾಲೆಗಳಿಗೆ ನಾಡಗೀತೆ ಹಾಡುವುದಕ್ಕೆ ವಿನಾಯಿತಿ ನೀಡಿದ ಸರ್ಕಾರ, ಸರ್ಕಾರಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳಲ್ಲಿ ಮಾತ್ರ ನಾಡಗೀತೆ ಹಾಡಬೇಕು ಎಂದು ಆದೇಶಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಆದೇಶ ಹೊರಡಿಸಿದ್ದು ಸದ್ಯ ಇದು ವಿವಾದಕ್ಕೆ ಕಾರಣವಾಗಿದೆ. ಈ ಹಿಂದೆ ಎಲ್ಲಾ ಶಾಲೆಗಳಲ್ಲಿ ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ನಾಡಗೀತೆಯನ್ನು ಹಾಡಬೇಕಿತ್ತು. ಇದಲ್ಲದೆ ಸರ್ಕಾರಿ ಇಲಾಖೆ, ಕಚೇರಿ, ಪ್ರಾಧಿಕಾರಗಳು, ಸರ್ಕಾರದ ಸಂಸ್ಥೆಗಳಿಗೂ ಇದು ಅನ್ವಯ ಆಗಿತ್ತು. ಸರ್ಕಾರಿ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಮುನ್ನ ನಾಡಗೀತೆ ಹಾಡಬೇಕು ಎಂದು ಆದೇಶಿಸಲಾಗಿತ್ತು. ಹಿಂದಿನ ಆದೇಶವನ್ನು ಬದಲಾವಣೆ ಮಾಡಿದ ರಾಜ್ಯ ಸರ್ಕಾರ ಈಗ ಎಲ್ಲಾ ಶಾಲೆಗಳು ಎಂಬುದರ ಬದಲಾಗಿ ಸರ್ಕಾರಿ ಶಾಲೆಗಳು ಎಂದು ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.  ಈ ಬಗ್ಗೆ ಶಿವಮೊಗ್ಗದಲ್ಲಿ ಪ್ರತಿಕ್ರೀಯೆ ನೀಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕನ್ನಡ ಸಂಸ್ಕೃತಿ ಇಲಾಖೆ ಯಾಕೆ ಈ ನಿರ್ಧಾರ ತಗೆದುಕೊಂಡಿದೆ ಅವರು ಉತ್ತರ ಕೊಡಬೇಕಾಗುತ್ತೆ . ಎಲ್ಲಾ ಶಾಲೆಯಲ್ಲಿ ಸಂವಿಧಾನ ಪೀಠಿಕೆ ಕಡ್ಡಾಯ ಮಾಡುತ್ತೇವೆ ಹಾಗೂ ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆ ಹೇಳಿದರೆ ಒಳ್ಳೆಯದು ಎಂದು ಹೇಳಿದ್ದಾರೆ. ನಾಡಗೀತೆ ಕಡ್ಡಾಯವಲ್ಲ ಎಂದು ಮಾಡಿದ್ದರೆ ನಾನು ಮಾರ್ಪಾಡು ಮಾಡಿಸುತ್ತೇನೆ ಹಾಗೂ ನಾನು ನಮ್ಮ ಇಲಾಖೆಯಲ್ಲಿ ನಾಡಗೀತೆ ಕಡ್ಡಾಯ ಅಂತ ಮಾಡಿಸುತ್ತೇನೆ ಎಂದು ಪ್ರತಿಕ್ರೀಯೆ ನೀಡಿದ್ದಾರೆ.

Continue Reading

DAKSHINA KANNADA

Kadaba: ಕರ್ತವ್ಯದಲ್ಲೇ ವಿಎಗೆ ಬಸ್ ಸೀಟ್ ಅಡಿಯಲ್ಲಿ ಸಕತ್ ನಿದ್ರೆ..!

Published

on

ಕಡಬ: ಕುಡಿತದ ಚಟಕ್ಕಾಗಿ ಹಲವು ಬಾರಿ ಹಿರಿಯ ಅಧಿಕಾರಿಗಳಿಂದ ಛೀಮಾರಿ ಹಾಕಿಸಿಕೊಂಡಿದ್ದ ವಿಎ ಫೆ.20ರಂದು ಮತ್ತೆ ಕುಡಿದು ಅವಾಂತರ ಮಾಡಿರುವ ಘಟನೆ ಕಡಬದಲ್ಲಿ ನಡೆದಿದೆ.

ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವಿಎ ಕುಡಿದ ಅಮಲಿನಲ್ಲಿ ಬಸ್ ನಲ್ಲಿ ಬಿದ್ದುಕೊಂಡಿದ್ದಾನೆ. ಇದೆಲ್ಲಾ ನಡೆದದ್ದು, ಸುಬ್ರಹ್ಮಣ್ಯ- ಕಡಬ ಬಸ್ ನಲ್ಲಿ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಗೋಳಿತೊಟ್ಟು ಗ್ರಾಮದ ವಿಎ ನಾಗಸುಂದರ ಕುಡಿದು ಬಸ್ ಸೀಟ್ ಅಡಿಯಲ್ಲಿ ಮಲಗಿ ಪ್ರಯಾಣಿಕರಲ್ಲಿ ಗೊಂದಲ ಸೃಷ್ಟಿಸಿದ್ದ. ಹೀಗಾಗಿ ಬಸ್ ಚಾಲಕ ನೆರವಾಗಿ ಬಸ್ಸನ್ನು ಕಡಬ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ. ಸ್ಟೇಷನ್ ಪೊಲೀಸರ ಸಹಾಯದಿಂದ ವಿಎ ಯನ್ನು ಇಳಿಸಿ ಬಸ್ ಮುಂದೆ ಹೋಗಿದೆ. ಬಳಿಕ ಹಲವರು ಸೇರಿ ವಿಎಯನ್ನು ಆತನ ನಿವಾಸದ ಹೊರಗೆ ಮಲಗಿಸಿ ಬಂದಿದ್ದಾರೆ. ವಿಎ ನಾಗಸುಂದರ ಈ ಹಿಂದೆಯೂ ಹಲಾವರು ಬಾರಿ ಕುಡಿದು ರಸ್ತೆಯಲ್ಲಿ ಬಿದ್ದು ಇದೇ ರೀತಿ ವರ್ತಿಸಿ ಹಿರಿಯ ಅಧಿಕಾರಿಗಳಿಂದ ತರಾಟೆಗೆ ಒಳಗಾಗಿದ್ದ. ಆದರೆ ಇತ್ತೀಚೆಗೆ ಇದು ಈತನ ನಿತ್ಯ ಕಾಯಕ ಎಂಬಂತಾಗಿದ್ದು ಈತನ ಈ ಚಟದಿಂದ ಹಲವು ದಾಖಲೆ ಪತ್ರ ಕಳೆದು ಹಾಕಿದ್ದಾನೆ ಎಂಬ ಆರೋಪವೂ ಇದೆ. ಈತನ ವಿಚಾರ‌ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ. ಈ ವಿಎಯನ್ನು ವರ್ಗಾವಣೆ ಮಾಡಿ ಇಲ್ಲ ಮದ್ಯವರ್ಜನ ಶಿಬಿರದಲ್ಲಾದ್ರೂ ಬಿಡಿ ಅನ್ನೋದು ಸ್ಥಳಿಯರ ಮನವಿ.

Continue Reading

LATEST NEWS

Trending