Connect with us

    FILM

    ದರ್ಶನ್ ಕೇಸ್‌ಗೆ ಮತ್ತೊಂದು ಟ್ವಿಸ್ಟ್..! ಎ1 ಆರೋಪಿ ಆಗ್ತಾರಾ ದರ್ಶನ್..!! CSFL ರಿಪೋರ್ಟ್ ನಲ್ಲೇನಿದೆ?

    Published

    on

    ಬೆಂಗಳೂರು/ಮಂಗಳೂರು:  ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್ ಪರಪ್ಪನ ಅಗ್ರಹಾರ ಸೇರಿದ್ದಾರೆ. ಈಗಾಗಲೇ ಹಲವಾರು ನಟ ನಟಿಯರು ಜೈಲಿಗೆ ಭೇಟಿ ನೀಟಿ ದರ್ಶನ್‌ ಜೊತೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಕನ್ನಡ ಚಿತ್ರರಂಗದ ಕಛೇರಿಯಲ್ಲಿ ಪೂಜಾ ಹವನಾದಿಗಳನ್ನು ಕೂಡಾ ನೆರವೇರಿಸಿದ್ದಾರೆ. ಇತ್ತ ಪೂಜೆ ಹೋಮಗಳನ್ನು ಮಾಡುವ ಮೂಲಕ ದರ್ಶನ್‌ಗೆ ಬಂದಿರುವ ಸಂಕಷ್ಟ ನಿವಾರಣೆ ಮಾಡುವಂತೆ ಪತ್ನಿ ವಿಜಯಲಕ್ಷ್ಮೀ ದೇವರ ಮೊರೆ ಹೋಗಿದ್ದಾರೆ. ಆದ್ರೆ ದರ್ಶನ್ ಬಿಡುಗಡೆ ಭಾಗ್ಯ ಸಿಗುತ್ತೋ ಇಲ್ಲವೋ ಅನ್ನುವುದು ಕಾದು ನೋಡಬೇಕಿದೆ.

    ಅಲ್ಲದೇ ದರ್ಶನ್ ವಿರುದ್ಧ ಪೊಲೀಸರ ಸಾಕ್ಷ್ಯಾಧಾರಗಳನ್ನು ಬಲ ಪಡಿಸಿದ್ದಾರೆ.  ರೇಣುಕಾಸ್ವಾಮಿ ಕೊಲೆ ಎ2 ಆಗಿದ್ದ ನಟ ದರ್ಶನ್​ರನ್ನು ಪೊಲೀಸರು ಎ1 ಮಾಡಿ ಚಾರ್ಜ್​ಶೀಟ್ ಸಲ್ಲಿಸೋಕೆ ನಿರ್ಧರಿಸಿದ್ದಾರೆ. ರೇಣುಕಾಸ್ವಾಮಿಯನ್ನ ಕಿಡ್ನಾಪ್ ಮಾಡುವುದರಿಂದ ಹಿಡಿದು, ಹತ್ಯೆ ಮಾಡಿ ಸಾಕ್ಷ್ಯನಾಶಕ್ಕೆ ಯತ್ನಿಸೋವರೆಗೆ ಎಲ್ಲಾ ಕೃತ್ಯಗಳು ಸಾಬೀತಾಗಿದ್ದು, ದರ್ಶನ್ ಗ್ಯಂಆಗ್‌ ಗೆ ಇದು ದೊಡ್ಡ ಸಂಕಷ್ಟವೇ ಆಗಿದೆ. ಈ ಮಧ್ಯೆ ಸಿಎಫ್‌ಎಸ್‌ಎಲ್‌ ರಿಪೋರ್ಟ್‌ ಕೂಡಾ ಪೊಲೀಸರ ಕೈ ಸೇರಿದ್ದು, ಹಲವು ಅಂಶಗಳು ರಿವೀಲ್ ಆಗಿವೆ.

    ಫೋಸ್ಟ್​​ ಮಾರ್ಟಂ, ಎಫ್​ಎಸ್​​ಎಲ್, ಸಿಸಿಟಿವಿ, ಕಾಲ್​ ಡಿಟೇಲ್ಸ್, ಸಾಂದರ್ಭಿಕ ಸಾಕ್ಷ್ಯಗಳು ಡಿ ಗ್ಯಾಂಗ್​ ಕೃತ್ಯದತ್ತ ಬೊಟ್ಟು ಮಾಡಿದ್ದು ಸಂಕಷ್ಟದ ಸುರುಳಿ ಸುತ್ತಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಸಿಎಫ್‌ಎಸ್‌ಎಲ್ ರಿಪೋರ್ಟ್ ತನಿಖಾಧಿಕಾರಿಗಳ ಕೈ ಸೇರಿದ್ದು, ದರ್ಶನ್, ಪವಿತ್ರಗೌಡ ಸೇರಿ ಡೆವಿಲ್ ಗ್ಯಾಂಗ್‌ನ ಮೊಬೈಲ್ ರಿಟ್ರೀವ್‌ನಲ್ಲಿ ಮಹತ್ವದ ಅಂಶಗಳು ಪತ್ತೆಯಾಗಿವೆ. ಹೈದ್ರಾಬಾದ್‌ನಲ್ಲಿರೋ ಕೇಂದ್ರಿಯ ವಿಧಿವಿಜ್ಞಾನ ಪ್ರಯೋಗಾಯಲಕ್ಕೆ ಹಲವು ಟೆಕ್ನಿಕಲ್ ಎವಿಡೆನ್ಸ್‌ಗಳನ್ನು ಪೊಲೀಸರು ಕಳಿಸಿಕೊಟ್ಟಿದ್ದರು. ಮೊಬೈಲ್, ಕೆಲ ಸಿಸಿಟಿವಿ ಡಿವಿಆರ್‌ಗಳನ್ನು ರಿಟ್ರೀವ್ ಮಾಡಲು ತನಿಖಾ ತಂಡ ಕಳುಹಿಸಿ ಕೊಟ್ಟಿತ್ತು. ಇದೀಗ ದರ್ಶನ್, ಪವಿತ್ರ ಗೌಡ ಸೇರಿ 13 ಆರೋಪಿಗಳ ಮೊಬೈಲ್ ರಿಟ್ರೀವ್‌ ಮಾಡಲಾಗಿದೆ. ಎಲ್ಲಾ 17 ಕೊಲೆ ಆರೋಪಿಗಳ ವಾಟ್ಸ್‌ ಆ್ಯಪ್‌ ಚಾಟಿಂಗ್‌ನೆಲ್ಲಾ ರಿಟ್ರೀವ್ ಮಾಡಲಾಗಿದೆ. ಇದೀಗ ಸಿಎಸ್‌ಎಫ್ಎಲ್ ರಿಟ್ರೀವ್ ಮಾಡಿರೋ ಶೇಕಡ 100ರಷ್ಟು ಟೆಕ್ನಿಕಲ್ ಎವಿಡೆನ್ಸ್‌ಗಳು ತನಿಖಾಧಿಕಾರಿಗಳ ಕೈ ಸೇರಿದೆ. CFSL ನಿಂದ ಬಂದಿರೋ ವರದಿಯನ್ನ ತನಿಖಾ ತಂಡ ಪರಿಶೀಲನೆ ನಡೆಸುತ್ತಿದೆ. ಈಗಾಗಲೇ ಮರಣೋತ್ತರ ಪರೀಕ್ಷೆ ವರದಿ ಹಾಗೂ ಎಫ್‌ಎಸ್‌ಎಲ್ ವರದಿ ಎರಡೂ ತಾಳೆ ಆಗಿದೆ. ರೇಣುಕಾಸ್ವಾಮಿಗೆ ಗಂಭೀರ ಹಲ್ಲೆ ಮಾಡಲಾಗಿದೆ. ಅಲ್ಲದೇ ಕರೆಂಟ್ ಶಾಕ್‌ನಿಂದ ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿರೋದಾಗಿ ವರದಿ ಬಂದಿದೆ. ಇದರ ಜೊತೆಗೆ ಹತ್ಯೆಗೂ ಮುನ್ನ ಮತ್ತು ಕೊಲೆಯ ನಂತರ ಆರೋಪಿಗಳು ಒಬ್ಬರಿಗೊಬ್ಬರು ಮಾತನಾಡಿಕೊಂಡಿರೋದು ಸಿಎಫ್ಎಸ್‌ಎಲ್ ವರದಿಯಲ್ಲಿ ಬಹಿರಂಗವಾಗಿದೆ. ಸಿ.ಡಿ.ಆರ್ ಅನಾಲಿಸಿಸ್‌ಲ್ಲಿ 17 ಆರೋಪಿಗಳು ಪರಸ್ಪರ ಮಾತಾಡಿರೋದು ಕನ್ಫರ್ಮ್ ಆಗಿದೆ. ಸಮಾನ ಉದ್ದೇಶದಿಂದ ಪದೇ ಪದೇ ಒಬ್ಬರಿಗೊಬ್ಬರು ಕರೆ ಮಾಡಿರೋದು ದೃಢಪಟ್ಟಿದೆ.

    ಎಲ್ಲಾ ಆರೋಪಿಗಳ ಮೊಬೈಲ್‌ನಲ್ಲಿ ಚಾಟಿಂಗ್‌ ಇಂಟರ್ ಎಕ್ಸ್‌ಚೇಂಜ್ ಆಗಿದೆ. ಎಲ್ಲಾ ಚಾಟಿಂಗ್‌ಗಳನ್ನು ಮಿರರ್ ಇಮೇಜ್‌ ಮಾಡುವ ಕಾರ್ಯವನ್ನು ಮಾಡಿರುವ ವರದಿ ಪೊಲೀಸರ ಕೈ ಸೇರಿದೆ. ಇದೀಗ ವಾಟ್ಸ್‌ಆ್ಯಪ್ ಚಾಟ್ ಹಾಗೂ ಸಿಸಿಟಿವಿ ದೃಶ್ಯಾವಳಿಗಳು ಕೇಸ್‌ಗೆ ಪ್ರಮುಖ ಸಾಕ್ಷ್ಯ ಆಗೋದು ಪಕ್ಕಾ ಆಗಿದೆ. ತನಿಖೆ ವೇಳೆ ಸಿಕ್ಕಿರುವ ಎಲ್ಲಾ ಸಾಕ್ಷ್ಯಗಳನ್ನು ಲೆಕ್ಕಾಚಾರ ಮಾಡಿದ್ರೆ, ಈ ಹತ್ಯೆ ಆಕಸ್ಮಿಕ ಅಲ್ಲ ಅನ್ನೋದು ಗೊತ್ತಾಗುತ್ತೆ. ಒಟ್ಟಾರೆ, ನಟ ದರ್ಶನ್ ಹಾಗೂ ಗ್ಯಾಂಗ್ ಪರಿಸ್ಥಿತಿ ಮಾಡಿದ್ದುಣ್ಣೋ ಮಹರಾಯ ಎನ್ನುವಂತಾಗಿದೆ.

    FILM

    ಖ್ಯಾತ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಅರೆಸ್ಟ್..!

    Published

    on

    ಬೆಂಗಳೂರು/ಮಂಗಳೂರು: ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಬಂಧನವಾಗಿದೆ. 21 ವರ್ಷ ಪ್ರಾಯದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪದಡಿಯಲ್ಲಿ ಕೊರಿಯೋಗ್ರಾಫರ್ ಬಂಧನವಾಗಿದೆ.

    ಇತ್ತೀಚಿಗೆ ಖ್ಯಾತ ಕೊರಿಯೋಗ್ರಾಫರ್‌ ಜಾನಿ ಮಾಸ್ಟರ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಮಾಸ್ಟರ್ ವಿರುದ್ಧ 21 ವರ್ಷದ ಸಹಾಯಕ ಡ್ಯಾನ್ಸರ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಹಿಂದಿ, ತೆಲುಗು, ಕನ್ನಡ, ತಮಿಳು ಸಿನೆಮಾಗಳಿಗೆ ಮಾತ್ರವಲ್ಲದೆ ಸ್ಟಾರ್ ನಟರಿಗೆ ಕೊರಿಯೋಗ್ರಫಿ ಮಾಡಿರುವ ಕೋರಿಯೋಗ್ರಾಫರ್ ಇದೀಗ ಬಂಧನಕ್ಕೊಳಗಾಗಿದ್ದಾರೆ.

    ಏನಿದು ಘಟನೆ?
    ಯುವತಿಯ ನೀಡಿದ ದೂರಿನ ಹಿನ್ನೆಲೆಯಲ್ಲಿ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ವಿರುದ್ಧ ಜೀರೋ ಎಫ್‌ಐಆರ್ ದಾಖಲಾಗಿತ್ತು. ಆ ಬಳಿಕ ನೃತ್ಯ ನಿರ್ದೇಶಕ ತಲೆ ಮರೆಸಿಕೊಂಡಿದ್ದರು. ಮೂರು ದಿನಗಳಿಂದ ಹುಡುಕಾಡುತ್ತಿದ್ದ ಹೈದರಾಬಾದ್‌ನ ಪೊಲೀಸರು ನಾಲ್ಕು ತಂಡಗಳಾಗಿ ಶೋಧ ನಡೆಸಿದ್ದರು. ಇಂದು (ಸೆಪ್ಟೆಂಬರ್ 19) ಬೆಳಗ್ಗೆ ಗೋವಾದಲ್ಲಿ ಹೈದರಾಬಾದ್‌ ಪೊಲೀಸರು ಬಂಧಿಸಿದ್ದಾರೆ. ಇನ್ನೊಂದು ಕಡೆ ಜಾನಿ ಮಾಸ್ಟರ್ ವಿರುದ್ಧ ಪೋಕ್ಸೊ ಪ್ರಕರಣ ಕೂಡ ಇವರ ಮೇಲೆ ದಾಖಲಾಗಿದೆ. ಮಹಿಳಾ ನೃತ್ಯ ನಿರ್ದೇಶಕಿಯೊಬ್ಬರ ಮೇಲೆ ಚಿತ್ರೀಕರಣದ ವೇಳೆ ಜಾನಿ ಮಾಸ್ಟರ್ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿ ದೂರು ನೀಡಿದ್ದರು. ಅಲ್ಲದೆ ಔಟ್ ಡೋರ್ ಶೂಟಿಂಗ್ ವೇಳೆ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಗಿ ಆರೋಪ ಮಾಡಿದ್ದಾರೆ.

    ನಟ ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್ ಗೆ ಕೊ*ಲೆ ಬೆದರಿಕೆ ಹಾಕಿದ ಮಹಿಳೆ

    ಈ ದೂರಿನ ಬೆನ್ನಲ್ಲೇ ಪೊಲೀಸರು ಜಾನಿ ಮಾಸ್ಟರ್ ವಿರುದ್ಧ ಸೆಕ್ಷನ್ 376, 506, 323 (2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ನರಸಿಂಗಿ ಠಾಣೆಯ ಪೊಲೀಸರಿಂದ ತನಿಖೆ ನಡೆಸಲಾಗುತ್ತಿದ್ದು, ಝೀರೊ ಎಫ್‌ಐಆರ್ ಕೂಡ ದಾಖಲಾಗಿತ್ತು. ಜಾನಿ ಮಾಸ್ಟರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಯುವತಿಯನ್ನು ವಿಚಾರಣೆ ಮಾಡಿದ್ದರು. ಆಕೆಯ ಮನೆಯಲ್ಲಿಯೇ ಸುಮಾರು ಮೂರು ಗಂಟೆಗಳಿಗೂ ಅಧಿಕ ಕಾಲ ವಿಚಾರಣೆ ನಡೆಸಿ, ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿದ್ದರು.

    Continue Reading

    FILM

    ನಟ ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್ ಗೆ ಕೊ*ಲೆ ಬೆದರಿಕೆ ಹಾಕಿದ ಮಹಿಳೆ

    Published

    on

    ಮಂಗಳೂರು/ಮುಂಬೈ : ನಟ ಸಲ್ಮಾನ್‌ ಖಾನ್‌ ತಂದೆ, ಹಿರಿಯ ಸಾಹಿತಿ ಸಲೀಂ ಖಾನ್ ಅವರಿಗೆ ವಾಕಿಂಗ್ ವೇಳೆ ಮಹಿಳೆಯೊಬ್ಬರು ಬೆದರಿ*ಕೆ ಹಾಕಿದ್ದಾರೆ ಎನ್ನಲಾಗಿದೆ.  ಮುಂಜಾನೆಯ ವಾಕಿಂಗ್ ಸಮಯದಲ್ಲಿ ಮಹಿಳೆಯೊಬ್ಬಳು ಡಾನ್‌ ಲಾರೆನ್ಸ್‌ ಬಿಷ್ಣೋಯ್‌ ಹೆಸರಿನಲ್ಲಿ ಬೆದರಿ*ಕೆ ಹಾಕಿದ್ದಾಗಿ ವರದಿಯಾಗಿದೆ. ಈ ಬಗ್ಗೆ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ವಾಕಿಂಗ್ ವೇಳೆ ಹತ್ತಿರಕ್ಕೆ ಬಂದಿದ್ದ ಮಹಿಳೆ ಸಲೀಂ ಖಾನ್‌ ಅವರಿಗೆ, ಸರಿಯಾಗಿ ನಡೆದುಕೊಳ್ಳಿ, ಇಲ್ಲದೆ ಇದ್ದರೆ ಸಲ್ಮಾನ್‌ ಖಾನ್‌ ಅವರಿಗೆ ಕೊ*ಲೆ ಬೆದರಿ*ಕೆ ಹಾಕಿರುವ ಡಾನ್‌ ಲಾರೆನ್ಸ್‌ಗೆ ಕರೆ ಮಾಡುವುದಾಗಿ ಹೇಳಿದ್ದಾಗಿ ದೂರು ನೀಡಲಾಗಿದೆ. ಮಹಿಳೆ ಯಾರು? ಎಲ್ಲಿಂದ ಬಂದವಳು ? ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದ್ರೆ ಸಲ್ಮಾನ್‌ ಖಾನ್‌ ನಗರದಿಂದ ಹೊರಟ ಕೆಲವೇ ಗಂಟೆಯಲ್ಲಿ ಈ ಘಟನೆ ನಡೆದಿದೆ

    ಎಪ್ರಿಲ್‌ ತಿಂಗಳಲ್ಲಿ ಸಲ್ಮಾನ್ ಖಾನ್‌ ಅವರ ಬಾಂದ್ರದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಹೊರಗೆ ಗುಂಡಿನ ದಾ*ಳಿ ನಡೆಸಲಾಗಿತ್ತು. ಇದು ಲಾರೆನ್ಸ್ ಬಿಷ್ಣೋಯ್‌ ಸಹೋದರ ಅನ್ಮೋಲ್ ಬಿಷ್ಣೋಯ್‌ ಮಾಡಿರುವುದಾಗಿ ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿದ್ದ. ಸಲ್ಮಾನ್ ಖಾನ್‌ ವಿಚಾರಣೆಯ ವೇಳೆಯಲ್ಲಿ ತನ್ನ ಕುಟುಂಬಕ್ಕೆ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ನಿಂದ ಬೆದರಿ*ಕೆ ಇದೆ ಎಂದು ಹೇಳಿಕೆ ನೀಡಿದ್ದರು.

    ಇದನ್ನೂ ಓದಿ : ಶಾಸಕ ಮುನಿರತ್ನ ಸೇರಿದಂತೆ 7 ಮಂದಿ ವಿರುದ್ಧ ಅತ್ಯಾಚಾ*ರ ಕೇಸ್ ದಾಖಲು

    ಇದೀಗ ಸಲ್ಮಾನ್ ಖಾನ್‌ ತಂದೆ ಸಲೀಂ ಖಾನ್‌ ಅವರಿಗೆ ಬೆದರಿಕೆ ಹಾಕಿರುವ ಹಿನ್ನಲೆಯಲ್ಲಿ ಸಲ್ಮಾನ್ ಖಾನ್ ಕುಟುಂಬಕ್ಕೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಮಹಿಳೆ ಯಾರು ಎಂಬ ಬಗ್ಗೆ ತನಿಖೆ ಆರಂಭಿಸಿದ್ದಾರೆ.

    Continue Reading

    FILM

    ಮೊದಲ ಬಾರಿಗೆ ದರ್ಶನ್ ಭೇಟಿಗೆ ಬಂದ ತಾಯಿ..! ದರ್ಶನ್‌ಗಾಗಿ ತಾಯಿ ತಂದಿದ್ದೇನು ಗೊತ್ತಾ?

    Published

    on

    ಮೈಸೂರು/ಮಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಗೆ ಬಿಡುಗಡೆ ಭಾಗ್ಯ ಇನ್ನೂ ದೊರೆತಿಲ್ಲ. ಇನ್ನು ಜೈಲಲ್ಲಿರುವ ದರ್ಶನ್ ಭೇಟಿಗೆ ಚಿತ್ರರಂಗದ ನಟ ನಟಿಯರು ಭೇಟಿ ನೀಡುತ್ತಿದ್ದಾರೆ. ಕೆಲ ದಿನಗಳ ಹಿಂದ ಪತ್ನಿ ವಿಜಯಲಕ್ಷ್ಮೀ ಹಾಗೂ ಸಹೋದರ ದಿನಕರ್ ತೂಗುದೀಪ ಅವರಲ್ಲಿ ತಾಯಿಯಯನ್ನು ಕಾಣುವ ಹಂಬಲ ವ್ಯಕ್ತಪಡಿಸಿದ್ದರು. ಈ ಹಿಂದೆಯೇ ತಾಯಿ ಮೀನಾ ಕೂಡಾ ದರ್ಶನ್ ಭೇಟಿ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ.

    ದರ್ಶನ್ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ; ಸೆ.30ರವರೆಗೆ ಜೈಲೇ ಗತಿ

    ಇದೀಗ ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ಅಕ್ಕ, ಭಾವ ಮತ್ತು ಅವರ ಮಕ್ಕಳು ಕೇಂದ್ರ ಕಾರಾಗ್ರಹಕ್ಕೆ ಭೇಟಿ ನೀಡಿದ್ದಾರೆ.  ಪರಪ್ಪನ ಅಗ್ರಹಾರದಲ್ಲಿದ್ದಾಗ ದರ್ಶನ್​​ರನ್ನು ಕಾಣಲು ಮಗ ದಿನಕರ್​ ತೂಗುದೀಪ ಜೊತೆ ಬಂದಿದ್ದರು. ಬಳ್ಳಾರಿ ಜೈಲಿಗೆ ಇದೇ ಮೊದಲ ಬಾರಿಗೆ ತಾಯಿ ಮೀನಾ ತೂಗುದೀಪ ಬಂದಿದ್ದಾರೆ. ಮಗನನ್ನು ಕಾಣುವ ತವಕದಲ್ಲಿ ತನ್ನ ಮಗಳ ಜೊತೆಗೆ ಕೇಂದ್ರ ಕಾರಾಗೃಹಕ್ಕೆ ಬಂದಿದ್ದಾರೆ.

    ದರ್ಶನ್​ ನೋಡಲು ಬಂದ ವೇಳೆ ತಾಯಿ ಮೀನು ತೂಗುದೀಪ ಮತ್ತು ಕುಟುಂಬಸ್ಥರು ಕೈಯಲ್ಲಿ ಎರಡು ಬ್ಯಾಗ್ ತಂದಿದ್ದಾರೆ. ಸ್ವೀಟ್ಸ್, ಊಟದ ಬಾಕ್ಸ್, ಹಣ್ಣು ತಂದಿದ್ದಾರೆ. ಮಡದಿ ವಿಜಯಲಕ್ಷ್ಮೀ, ಸ್ನೇಹಿತರು ಈಗಾಗಲೇ ದರ್ಶನ್​​ರನ್ನು ಭೇಟಿ ಮಾಡಿದ್ದಾರೆ. ಆದರೆ ಬೆಂಗಳೂರಿನಿಂದ ಬಳ್ಳಾರಿಗೆ 300ಕಿಮೀ ಅಂತರವಿರುವ ಕಾರಣ ತಾಯಿ ಮೀನಾ ತೂಗುದೀಪ್​ ದರ್ಶನ್​​ರನ್ನು ಭೇಟಿ ಮಾಡಿರಲಿಲ್ಲ.

    Continue Reading

    LATEST NEWS

    Trending