Connect with us

    LATEST NEWS

    ಮಲಗಿದ್ದ ಮಗುವಿಗೆ ಅಣ್ಣನ ಹೆಂಡತಿಯಿಂದ ವಿಷಪ್ರಾಷಣ .! ಹೇಯ ಕೃತ್ಯದ ವೀಡಿಯೋ ವೈರಲ್

    Published

    on

    ರಾಜಸ್ಥಾನ: ಮೈದುನನ ಪುಟ್ಟ ಕಂದಮ್ಮನಿಗೆ ವಿಷಪ್ರಾಷಣ ನೀಡಿ ಕೊಲೆ ಮಾಡಲು ಯತ್ನಿಸಿದ್ದ ಅಮಾನವೀಯ ಕೃತ್ಯ ರಾಜಸ್ಥಾನದ ಬರ್ಮೇರ್ ಜಿಲ್ಲೆಯಲ್ಲಿ ನಡೆದಿದೆ. ಇಂತಹ ಕೆಲವೊಂದು ಅಮಾನವೀಯ ದೃಶ್ಯಗಳನ್ನು ಸಿನೆಮಾಗಳಲ್ಲಿ ನೋಡುತ್ತಿದ್ದೆವು. ಇದೀಗ ನಿಜ ಜೀವನದಲ್ಲೂ ಇಂತಹ ಘಟನೆಗಳು ಸಂಭವಿಸುತ್ತದೆ ಅಂದರೆ ನಂಬಲೂ ಅಸಾಧ್ಯ.

    baby death

    ಕೋಣೆಯಲ್ಲಿ ಸೊಳ್ಳೆ ಪರದೆಯನ್ನು ಮುಚ್ಚಿ ಬೆಚ್ಚಗೆ ಮಲಗಿಸಿದ್ದ ಕಂದಮ್ಮಗೆ ಓರೆಗಿತ್ತಿಯೊಬ್ಬಳು ಮಗುವಿಗೆ ಎರಡು, ಮೂರು ಬಾರಿ ವಿಷಪ್ರಾಷಣ ಮಾಡಿದ್ದಾಳೆ. ಈ ದೃಶ್ಯ ಅಲ್ಲೆ ಇಟ್ಟಿದ್ದ ವೀಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ವಂತ ಮೈದುನನ ಮಗುವಿಗೆ ಓರೆಗತ್ತಿಯೊಬ್ಬಳು ತನ್ನ ಮಗುವನ್ನು ಕಂಕುಳಲ್ಲಿ ಇರಿಸಿಕೊಂಡು ಮೈದುನನ ಕೋಣೆಗೆ ಬರುತ್ತಾಳೆ.  ಮಲಗಿದ್ದ ಮಗುವಿಗೆ ಸೊಳ್ಳೆ ಪರದೆಯನ್ನು ಹಾಕಿದ್ದರು. ಪರದೆಯನ್ನು ಸರಿಸಿ ವಿಷವನ್ನು ಬಿಂದು ಬಿಂದುವಾಗಿ  ಬಾಯಿಗೆ ನೀಡುತ್ತಾಳೆ. ಹೀಗೆ ಎರಡು ಬಾರಿ ಹೋಗಿ ಬಂದು ಈ ಕೃತ್ಯವನ್ನು ಮಾಡಿದ್ದಾಳೆ. ಇದೀಗ ಈಕೆ ಮಾಡಿರುವ ಕೃತ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇನ್ನು ಟ್ವಿಟರ್‌ ನಲ್ಲಿ ಈ ವೀಡಿಯೋ ಪೋಸ್ಟ್ ಮಾಡಲಾಗಿದ್ದು, ಅದರಲ್ಲಿ ಬರೆದಿರುವ ಮಾಹಿತಿಯಂತೆ ಈ ಹಿಂದೆಯೂ ಇದೇ ರೀತಿ ಈ ಕುಟುಂಬದಲ್ಲಿ ವಿಷ ಪ್ರಾಷಾಣದಿಂದ ಇಬ್ಬರು ಮಕ್ಕಳು ಬಲಿಯಾಗಿದೆ. ಹಾಗಾಗಿ ಮಗುವಿನ ತಾಯಿ ಕೋಣೆಯಲ್ಲಿ ವೀಡಿಯೋ ಕ್ಯಾಮೆರವನ್ನು ಇಟ್ಟಿದ್ದಳು ಎನ್ನಲಾಗಿದೆ. ಅದೃಷ್ಟವಶಾತ್  ಮಗು ವಿಷಪ್ರಾಶಣವಾದರೂ ಬದುಕುಳಿದಿದೆ. ಘಟನೆಯ ಬಳಿಕ ಅಸ್ವಸ್ಥಗೊಂಡಿದ್ದ ಮಗುವನ್ನು ಕೂಡಲೇ ಐಸಿಯುಗೆ ದಾಖಲಿಸಿ ಮೂರು ದಿನಗಳ ಕಾಲ  ಚಿಕಿತ್ಸೆ ನೀಡಿದ ಪರಿಣಾಮ ಮಗು ಬದುಕುಳಿದಿದೆ.

    ಇದೀಗ ಓರಗಿತ್ತಿಯ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಾಳೆ. ಆದರೆ ಈ ಬಗ್ಗೆ ಪ್ರಕರಣ ದಾಖಲಾದ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

    dehali

    ಸ್ಪೀಕರ್ ಹುದ್ದೆಗೆ ಚುನಾವಣೆ..! ಇತಿಹಾಸದಲ್ಲೇ ಮೊದಲು..!

    Published

    on

    ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಲೋಕಸಭಾ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ. ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ವಿರೋಧ ಪಕ್ಷಗಳಿಗೆ ಬಿಟ್ಟುಕೊಡಲು ಎನ್‌ಡಿಎ ಹಿಂದೇಟು ಹಾಕಿದ ಕಾರಣ ಈ ಪರಿಸ್ಥಿತಿ ನಿರ್ಮಾಣವಾಗಿದೆ.


    ಹದಿನೆಂಟನೇ ಲೋಕಸಭೆಯಲ್ಲಿ ಹತ್ತು ವರ್ಷಗಳ ಬಳಿಕ ಇಂಡಿಯಾ ಮೈತ್ರಿಕೂಟ ಪ್ರಬಲ ವಿರೋಧ ಪಕ್ಷವಾಗಿ ಮೂಡಿಬಂದಿದೆ. ಇದೇ ಕಾರಣದಿಂದ ಮೊದಲ ಅಧಿವೇಶನ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷಗಳು ಸರ್ಕಾರದ ಪ್ರತಿಯೊಂದು ನಡೆಯನ್ನು ಪ್ರಶ್ನೆ ಮಾಡಲು ಆರಂಭಿಸಿವೆ. ಅಧಿವೇಶನದ ಆರಂಭದಲ್ಲಿ ಹಂಗಾಮಿ ಸ್ಪೀಕರ್ ಆಯ್ಕೆಯಲ್ಲಿ ಹಿರಿಯ ಕಾಂಗ್ರೆಸ್ ಸಂಸದರನ್ನು ಕಡೆಗಣಿಸಿ ಭರ್ತೃಹರಿ ಅವರನ್ನು ನೇಮಿಸಲಾಗಿತ್ತು. ಇದೀಗ 18 ನೇ ಲೋಕಸಭೆಯ ಸ್ಪೀಕರ್ ಆಗಿ ಎನ್‌ಡಿಎ ನಿಂದ ಓಂ ಬಿರ್ಲಾ ಅವರ ಹೆಸರು ಮತ್ತೆ ಮುಂದಿಡಲಾಗಿದೆ. ಒಮ್ಮತದ ಸ್ಪೀಕರ್ ಆಯ್ಕೆಯ ವಿಚಾರವಾಗಿ ಆಡಳಿತ ಪಕ್ಷ ಮತ್ತು ವಿರೊಧ ಪಕ್ಷದ ನಡುವೆ ನಡೆದ ಮಾತುಕತೆ ವಿಫಲವಾಗಿದೆ.

    ಇದನ್ನು ಓದಿ: ತುಳುನಾಡಿನ ದೈವ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಂಸದ ಬ್ರಿಜೇಶ್ ಚೌಟ

    ಓಂ ಬಿರ್ಲಾ ಅವರನ್ನು ಒಮ್ಮತದ ಆಯ್ಕೆಯಾಗಿ ಪರಿಗಣಿಸಲು ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ಕಾನೂನುಬದ್ಧವಾಗಿ ವಿರೋಧ ಪಕ್ಷಕ್ಕೆ ಬಿಟ್ಟು ಕೊಡಲು ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟ ಮನವಿ ಮಾಡಿತ್ತು. ಇದೇ ವಿಚಾರವಾಗಿ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಅವರ ನೇತೃತ್ವದಲ್ಲಿ ಸರ್ವ ಪಕ್ಷ ಸಭೆ ಕೂಡ ನಡೆದಿತ್ತು. ಆದರೆ ವಿರೋಧ ಪಕ್ಷದ ಮನವಿಗೆ ಎನ್‌ಡಿಎನಿಂದ ಸಕಾರಾತ್ಮಕ ಉತ್ತರ ಬಾರದ ಹಿನ್ನೆಲೆಯಲ್ಲಿ ವಿರೋಧ ಪಕ್ಷದಿಂದ ಹಿರಿಯ ಕಾಂಗ್ರೆಸ್ ನಾಯಕ ಕೆ. ಸುರೇಶ್ ಅವರನ್ನು ಸ್ಪೀಕರ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ. ಹೀಗಾಗಿ ಲೋಕಸಭಾ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ.
    ಎನ್‌ಡಿಎ ಒಕ್ಕೂಟಕ್ಕೆ ಸ್ಪಷ್ಟ ಬಹುಮತ ಇರುವ ಕಾರಣ ಓ ಬಿರ್ಲಾ ಅವರು ಸ್ಪೀಕರ್ ಆಗಿ ಆಯ್ಕೆಯಾಗಲು ಯಾವುದೇ ತೊಂದರೆ ಇಲ್ಲ. ಆದ್ರೆ ಸರ್ಕಾರಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದ ಪ್ರಧಾನಿ ಮೋದಿ ಅವರು ವಿರೋಧ ಪಕ್ಷದ ಜೊತೆ ಸರಿಯಾಗಿ ವರ್ತಿಸುತ್ತಿಲ್ಲ . ಹೀಗಾಗಿ ಅಸಹಕಾರದ ಹೆಜ್ಜೆಯನ್ನು ವಿರೋಧ ಪಕ್ಷ ಇಡಲು ಅವರೇ ಪ್ರೇರೇಪಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

    Continue Reading

    LATEST NEWS

    ದಕ್ಷಿಣ ಭಾರತದ ಜೈನ ಮುಖಂಡ, ಬೆಳಗಾವಿಯ ಖ್ಯಾತ ಉದ್ಯಮಿ ರಾವಸಾಹೇಬ ಪಾಟೀಲ ಇನ್ನಿ*ಲ್ಲ

    Published

    on

    ಬೆಳಗಾವಿ: ದಕ್ಷಿಣ ಭಾರತ ಜೈನ ಸಮಾಜದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ರಾವಸಾಹೇಬ ಪಾಟೀಲ ಅವರು ನಿಧ*ನರಾಗಿದ್ದಾರೆ. ರಾವಸಾಹೇಬ ಪಾಟೀಲರು ಜೈನ ಮುಖಂಡರು, ಖ್ಯಾತ ಉದ್ಯಮಿಯೂ ಆಗಿದ್ದರು.

    ಖ್ಯಾತ ಉದ್ಯಮಿ ರಾವಸಾಹೇಬ ಪಾಟೀಲರಿಗೆ 80 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹಿರಿಯ ಸಹಕಾರಿ ಧುರೀಣರು, ಸಾಮಾಜಿಕ, ಧಾರ್ಮಿಕ, ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದ ಇವರು ಇಂದು ಬೆಳಗ್ಗೆ ಇ*ಹಲೋಕವನ್ನು ತ್ಯ*ಜಿಸಿದ್ದಾರೆ.

    ರಾವಸಾಹೇಬ ಪಾಟೀಲರ ನಿ*ಧನದ ಹಿನ್ನೆಲೆಯಲ್ಲಿ ಕುಟುಂಬಸ್ಥರು, ಅಭಿಮಾನಿಗಳ ಆಂ*ಕ್ರದನ ಮುಗಿಲು ಮುಟ್ಟಿದೆ. ಮೃ*ತರ ಹುಟ್ಟೂರಾದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೊರಗಾಂವ ಪಟ್ಟಣದಲ್ಲಿ ಇಂದು ಸಂಜೆ ಅಂ*ತ್ಯಸಂ*ಸ್ಕಾರ ನಡೆಯಲಿದೆ.

    ರಾವಸಾಹೇಬ ಪಾಟೀಲರು ಅರಿಹಂತ ಉದ್ಯೋಗ ಸಮೂಹ ಸಂಸ್ಥೆಯ ಸಂಸ್ಥಾಪಕ‌ ಅಧ್ಯಕ್ಷರಾಗಿದ್ದರು. ಹಲವಾರು ಉದ್ಯಮ ಜೊತೆಗೆ ಅರಿಹಂತ ಬ್ಯಾಂಕ್‌ ಶಾಖೆಗಳನ್ನ ಹೊಂದಿದ್ದರು. ಸದ್ಯ ದಕ್ಷಿಣ ಭಾರತ ಜೈನ ಸಮಾಜದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

    Continue Reading

    LATEST NEWS

    ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಮನೆಯಲ್ಲಿ ಅ*ಗ್ನಿ ಅವಘಡ

    Published

    on

    ಮಂಗಳೂರು/ಶಿರಸಿ : ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಅವರ ಮನೆಯಲ್ಲಿ ಮಂಗಳವಾರ(ಜೂ.25) ಅ*ಗ್ನಿ ಅವಘ*ಡ ಸಂಭವಿಸಿದೆ.


    ಶಿರಸಿಯ ಕೆ.ಎಚ್.ಬಿ. ಕಾಲೋನಿಯಲ್ಲಿರುವ ಅನಂತಕುಮಾರ್ ಹೆಗಡೆಯವರ ಮನೆಯೊಳಗಿನ ಜಿಮ್‌ನಲ್ಲಿ ಬೆಂ*ಕಿ ಕಾಣಿಸಿಕೊಂಡಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂ*ಕಿ ತಗುಲಿರಬಹುದು ಎಂದು ಅಂದಾಜಿಸಲಾಗಿದೆ.

    ಬೆಂ*ಕಿಯಿಂದ ಜಿಮ್‌ನಲ್ಲಿ ಇದ್ದ ಹಲವು ಉಪಕರಣಗಳಿಗೆ ಹಾನಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಮಾಜಿ ಸಂಸದ ಮತ್ತು ಅವರ ಕುಟುಂಬದವರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಘಟನೆ‌ ನಡೆದಿದೆ.

    Continue Reading

    LATEST NEWS

    Trending