ಬೆಂಗಳೂರು: ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ 11ನೇ ದಿನದ ಕಾರ್ಯವನ್ನ ಸೋಮವಾರ ಮಾಡಲು ದೊಡ್ಮನೆ ಕುಟುಂಬ ನಿರ್ಧರಿಸಿದೆ. ಈ ಕಾರ್ಯಕ್ರಮದಲ್ಲಿ ಡಾ.ರಾಜ್ಕುಟುಂಬ ಮತ್ತು ಗಣ್ಯರು ಮಾತ್ರ ಭಾಗಿಯಾಗಲಿದ್ದಾರೆ.
ಇನ್ನು, 12ನೇ ದಿನದಂದು ಸಾರ್ವಜನಿಕರಿಗಾಗಿ ಪ್ಯಾಲೇಸ್ ಗ್ರೌಂಡ್ನಲ್ಲಿ ಡಾ.ರಾಜ್ ಕುಟುಂಬ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ಪುಷ್ಪ ನಮನ ಸಲ್ಲಿಸುವುದರ ಜೊತೆಗೆ ನ.9ರಂದು ಅಭಿಮಾನಿಗಳಿಗೆ ಅನ್ನದಾನ ಮಾಡಲಾಗುತ್ತೆ ಅನ್ನೋ ಮಾಹಿತಿ ಸಿಕ್ಕಿದೆ.
ರಜನಿಕಾಂತ್ ಭೇಟಿ ಸಾಧ್ಯತೆ ಮುಂದಿನ ವಾರ ಪುನೀತ್ ಮನೆಗೆ ರಜಿನಿಕಾಂತ್ ಭೇಟಿ ನೀಡುವ ಸಾಧ್ಯತೆ ಇದೆ ಎಂದು ರಜಿನಿಕಾಂತ್ ಸ್ನೇಹಿತ ರಾಜ್ ಬಹದ್ದೂರ್ ಹೇಳಿಕೆ ನೀಡಿದ್ದಾರೆ. ಅಪ್ಪುಗೆ ಹೀಗಾಗಿದೆ ಎಂದು ಕೇಳಿ ಬೇಜಾರು ಮಾಡಿಕೊಂಡರು. ಚಿಕ್ಕ ವಯಸ್ಸಿನಲ್ಲಿ ಈ ರೀತಿ ಆಯ್ತು ಎಂದು ನೊಂದುಕೊಂಡರು. ಆಸ್ಪತ್ರೆಯಲ್ಲಿ ಇದ್ದಿದ್ದರಿಂದ ರಜಿನಿಕಾಂತ್ ಬರಲು ಆಗಿರಲಿಲ್ಲ ಎಂದರು.