Connect with us

    LATEST NEWS

    ಆಸ್ತಿ ವಿಚಾರಕ್ಕೆ ತಂಗಿಯನ್ನೇ ಕ್ರೂರ*ವಾಗಿ ಹತೈ*ಗೈದ ಅಣ್ಣ

    Published

    on

    ಮಂಗಳೂರು/ಗದಗ: ‘ಆಸ್ತಿ’ ಎಂಬ ಒಂದು ವಿಚಾರ ಬಂದಾಗ ಅಣ್ಣ-ತಂಗಿ, ಅಕ್ಕ-ತಮ್ಮ ಎಂಬುವುದನ್ನೇ ಮರೆತು ಮೃ*ಗಗಳಂತೆ ವರ್ತಿಸುವ ಸಮಾಜದಲ್ಲಿ ನಾವಿದ್ದೇವೆ. ಅಂತಹದ್ದೇ ಒಂದು ಅಮಾ*ನುಷ ಘಟನೆ ಗದಗದಲ್ಲಿಯೂ ನಡೆದಿದೆ.


    ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಅನ್ನದಾನೀಶ್ವರ ನಗರದಲ್ಲಿ ಆಸ್ತಿ ವಿವಾದ ಹಿನ್ನೆಲೆ ಅಣ್ಣನೇ ತಂಗಿಯನ್ನು ಚಾಕು*ವಿನಿಂದ ಇರಿ*ದು ಕೊಂದು ಪೊಲೀಸ್​ ಠಾಣೆಗೆ ಬಂದು ಶರಣಾಗಿದ್ದಾನೆ. ತಂಗಿ ಕಾಳಮ್ಮ (35) ಜೊತೆ ಇಂದು (ಸೆ.24) ಆಸ್ತಿ ವಿಚಾರವಾಗಿ ಜಗಳ ಶುರುವಾಗಿ, ಜಗಳ ವಿಕೋಪಕ್ಕೆ ತಿರುಗಿ ಆರೋಪಿ ಈಶ್ವರಪ್ಪ ಕ್ಯಾದಿಗೇಹಳ್ಳಿ ತಂಗಿಯ ಹೊಟ್ಟೆ*ಗೆ ಚಾಕುವಿ*ನಿಂದ ಇರಿದು ಹ*ತೈ ಮಾಡಿದ್ದಾನೆ.
    ಘಟನೆ ಹಿನ್ನಲೆ:
    ಮೃ*ತ ಮಹಿಳೆ 14 ವರ್ಷದ ಹಿಂದೆ ಕಟಿಂಗ್ ಸಲೂನ್ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದು, ಬಳಿಕ 2020 ರಲ್ಲಿ‌ ಮೈಬೂಬ್ ಬೆಟಗೇರಿ ಎಂಬಾತನ ಜೊತೆ ಎರಡನೇ ಮದುವೆಯಾಗಿದ್ದಾರೆ. ಜೀವನ ನಿರ್ವಹಣೆಗಾಗಿ ಅಣ್ಣನ 15 ಎಕರೆ ಜಮೀನಿನಲ್ಲಿ ಅವಳು ಪಾಲಿಗಾಗಿ ಕೋರ್ಟ್ ಮೆಟ್ಟಿಲೇರಿದ್ದಳು.
    ಕೇಸ್ ವಾಪಸ್ ಪಡೆಯುವಂತೆ ಇಂದು ಬೆಳಿಗ್ಗೆ ಅಣ್ಣನು ಮನೆಗೆ ಬಂದು ಒತ್ತಾಯ ಮಾಡಿದ್ದ. ಅವನ ಮಾತು ಕೇಳದಾಗ ಸಿಟ್ಟು ನೆತ್ತಿಗೇರಿ ಸಿಕ್ಕ ಸಿಕ್ಕಲ್ಲಿ ಮನಬಂದಂತೆ ಚಾ*ಕು ಇ*ರಿದು, ಕುತ್ತಿ*ಗೆ ಮೇಲೆ ಕಾಲಿಟ್ಟು ಉ*ಸಿರುಗಟ್ಟಿಸಿ ಕೊ*ಲೆ ಮಾಡಿದ್ದಾನೆ. ನಂತರ ತಾನೇ ಮುಂಡರಗಿ ಪೊಲೀಸರಿಗೆ ಶರಣಾಗಿದ್ದಾನೆ.
    ಸ್ಥಳಕ್ಕೆ ಗದಗ ಹೆಚ್ಚುವರಿ ಎಸ್‌.ಪಿ ಎಂ.ಬಿ.ಸಂಕದ ಹಾಗೂ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    LATEST NEWS

    ಶಿವಳ್ಳಿ ಸ್ಪಂದನ ಸಂಘದಲ್ಲಿ ಗೊಂದಲ..! ರಿಜಿಸ್ಟ್ರಾರ್ ಕಚೇರಿಯಲ್ಲಿ ದೂರು ದಾಖಲು..!

    Published

    on

    ಮಂಗಳೂರು : ಶಿವಳ್ಳಿ ಸ್ಪಂದನ ಮಂಗಳೂರು (ರಿ) ಇದರ 2024-26 ಸಾಲಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ನಡೆದಿದೆ. 29-8-2024 ರಂದು ನಡೆದಿದ್ದ ಮಹಾಸಭೆಯಲ್ಲಿ ಉಮೇದುವಾರಿಕೆ ಇಲ್ಲದ ಕಾರಣ ಹತ್ತು ಜನರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಆದ್ರೆ ಇದೀಗ ಕೆಲವರು ಶಿವಳ್ಳಿ ಸ್ಪಂದನದ ನೂತನ ಆಡಳಿತ ಮಂಡಳಿಯ ಸದಸ್ಯರು ಎಂದು ಹೇಳಿ ಕಾನೂನು ಬಾಹಿರ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಶಿವಳ್ಯಿ ಸ್ಪಂದನ ಮಂಗಳೂರು (ರಿ) ಇದರ ಕಾರ್ಯದರ್ಶಿ ಪ್ರಕಟಣೆ ಹೊರಡಿಸಿದ್ದು, ಇಂತಹ ಪ್ರಕಟಣೆ ಮಾಡುವವರಿಗೂ ಸ್ಪಂದನ ಮಂಗಳುರು (ರಿ) ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ. ಇದು ಶಿವಳ್ಳಿ ಸ್ಪಂದನದ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಈ ರೀತಿಯ ಪ್ರಕಟಣೆ ನೀಡಿ ಗೊಂದಲಕ್ಕೆ ಅವಕಾಶ ನೀಡಬಾರದು ಎಂದು ವಿನಂತಿಸಿದ್ದಾರೆ.


    ಈ ವಿಚಾರವಾಗಿ ಸೊಸೈಟಿ ಉಪನಿಬಂಧಕರ ಮುಂದೆ ಹೋಗಿದ್ದು, ಕಾನೂನು ಕ್ರಮಕ್ಕೆ ಕೂಡಾ ಆಗ್ರಹ ಮಾಡಲಾಗಿದೆ. ಲೆಟರ್ ಹೆಡ್ ಹಾಗೂ ವಿಳಾಸ ದುರುಪಯೋಗದ ಕುರಿತು ರಿಜಿಸ್ಟ್ರಾರ್ ಕಚೇರಿಯಲ್ಲಿ ದೂರು ದಾಖಲಾಗಿದೆ. ಕರ್ನಾಟಕ ಬ್ಯಾಂಕ್‌ ಖಾತೆಯನ್ನೂ ಕೂಡಾ ಫ್ರೀಜ್ ಮಾಡಲಾಗಿದ್ದು ವಿಚಾರಣೆ ಮುಗಿದು ಫಲಿತಾಂ ವರುವ ತನಕ ಯಾವುದೇ ರೀತಿಯ ಚಟುವಟಿಕೆ ನಡೆಸಬಾರದು ಎಂದು ಕೋರಿದ್ದಾರೆ.

    Continue Reading

    DAKSHINA KANNADA

    ಕಾರಣಿಕ ತೋರಿಸಿದ ಗುಳಿಗ ದೈವ..! ವೆನ್ಲಾಕ್‌ ಆಸ್ಪತ್ರೆಯಲ್ಲಿ ದೈವದ ಕಟ್ಟೆ ನಿರ್ಮಾಣ..!

    Published

    on

    ಮಂಗಳೂರು : ದೈವಗಳು ನಂಬಿದವರ ಕೈ ಬಿಡುವುದಿಲ್ಲ ಎಂಬ ತುಳುನಾಡಿನ ಜನರ ನಂಬಿಕೆಗೆ ಇಂಬು ಕೊಡುವಂತಹ ಅನೇಕ ಘಟನೆಗಳು ನಡೆದಿವೆ. ಇನ್ನು ದೈವ ನಂಬಿಕೆ ಇಲ್ಲದೆ ಅಪಚಾರ ಮಾಡಿದವರಿಗೂ ತಾನು ಏನು ಎಂದು ದೈವ ತೋರಿಸಿಕೊಟ್ಟ ಉದಾಹರಣೆಗಳು ಕೂಡ ಸಾಕಷ್ಟಿವೆ. ಇದೀಗ ಅಂತಹುದೇ ಒಂದು ಘಟನೆ ದಕ್ಷಿಣ ಕನ್ನಡ ಜಿಲ್ಲಾಸ್ಪತ್ರೆ ವೆನ್ಲಾಕ್‌ನಲ್ಲಿ ನಡೆದಿದ್ದು, ದೈವದ ಕಾರಣಿಕಕ್ಕೆ ಈ ಘಟನೆ ಸಾಕ್ಷಿಯಾಗಿದೆ.

    ಮಂಗಳೂರು ಜಿಲ್ಲಾಸ್ಪತ್ರೆಯಲ್ಲಿ ಸರ್ಜಿಕಲ್‌ ಸೂಪರ್ ಸ್ಪೆಷಾಲಿಟಿ ವಿಭಾಗ ನಿರ್ಮಾಣಕ್ಕೆ ಹಲವು ವರ್ಷಗಳ ಹಿಂದೆ ಚಾಲನೆ ನೀಡಲಾಗಿತ್ತು. ಹೊಸ ಕಟ್ಟಡ ಕಾಮಗಾರಿಗಾಗಿ ಇಲ್ಲಿದ್ದ ಹಲವು ಮರಗಳನ್ನು ಕಡಿಯುವ ಕೆಲಸವನ್ನು ಗುತ್ತಿಗೆದಾರರು ಮಾಡಿದ್ದರು. ಈ ವೇಳೆ ಇಲ್ಲಿ ಗುಳಿಗ ದೈವದ ಸಾನಿಧ್ಯವಿದ್ದ ಮರವೊಂದು ಇದ್ದು ಅದನ್ನು ಕಡಿಯದಂತೆ ಹಲವರು ಗುತ್ತಿಗೆದಾರನಿಗೆ ಮನವಿ ಮಾಡಿದ್ದರು. ಆದ್ರೆ, ಅಭಿವೃದ್ದಿ ಕಾಮಗಾರಿಗೆ ದೈವ ದೇವರು ಇಲ್ಲಾ ಅಂತ ಮರ ಕಡಿಯಲು ಮುಂದಾಗಿದ್ದ. ಈ ವೇಳೆ ಪರಿಸರ ಹೋರಾಟಗಾರರು ಮರವನ್ನು ಬೇರೆಡೆ ಸ್ಥಳಾಂತರ ಮಾಡಿ ಮರದ ಜೀವ ಉಳಿಸಿದ್ದರು.

    ಯಾವಾಗ ದೈವ ಸಾನಿಧ್ಯವಿದ್ದ ಮರವನ್ನು ತೆರವು ಮಾಡಲಾಗಿತ್ತೋ ಅಂದಿನಿಂದ ಇಲ್ಲಿ ಗುತ್ತಿಗೆದಾರನಿಗೆ ಹಲವು ಸಂಕಷ್ಟಗಳು ಎದುರಾಗಿವೆ. ಕಾರ್ಮಿಕರು ಹಲವು ಅವಘಡಗಳಿಗೆ ಸಿಲುಕಿ ಆಸ್ಪತ್ರೆ ಸೇರಿದ್ದಾರೆ. ಕಾಮಗಾರಿಯ ವೇಳೆ ನಾಗರ ಹಾವು ಕೂಡ ಬಲಿಯಾದ ಘಟನೆ ನಡೆದಿದೆ. ಕೊನೆಗೂ ಕುಂಟುತ್ತಾ ಸಾಗಿದ್ದ ಕಾಮಗಾರಿ ಇತ್ತೀಚೆಗಷ್ಟೇ ಪೂರ್ಣಗೊಂಡು ಆಸ್ಪತ್ರೆಯ ಉದ್ಘಾಟನೆಯೂ ಆಗಿದೆ. ಆದ್ರೆ, ಆಸ್ಪತ್ರೆಯಲ್ಲಿ ಅದೇನೋ ನೆಗಟಿವ್ ಎನರ್ಜಿ ಇದೆ ಅನ್ನೋ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಗೆ ಅನಿಸಿದೆ. ಹಲವು ಎಡರುತೊಡರುಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಯ ಸಿಬ್ಬಂದಿ ಜ್ಯೋತಿಷಿ ಮೊರೆ ಹೋಗಿದ್ದಾರೆ. ಈ ವೇಳೆ ಇಲ್ಲಿ ಗುಳಿಗ ದೈವದ ನೆಲೆಯನ್ನು ಕಿತ್ತು ಹಾಕಿದ್ದು ದೈವ ಅತಂತ್ರವಾಗಿದೆ ಅನ್ನೋ ವಿಚಾರ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ, ನಾಗ ಹತ್ಯೆಯಿಂದ ನಾಗ ದೋಷ ಕೂಡ ಇದೆ ಅನ್ನೋ ವಿಚಾರ ಗೊತ್ತಾಗಿದೆ.

    ಇದೀಗ ಜ್ಯೋತಿಷಿಗಳ ಸಲಹೆಯಂತೆ ವೆನ್ಲಾಕ್ ಆಸ್ಪತ್ರೆಯ ಈ ಸರ್ಜಿಕಲ್ ಸೂಪರ್ ಸ್ಪೆಷಾಲಿಟಿ ವಿಭಾಗದಲ್ಲಿ ಆಶ್ಲೇಷ ಬಲಿ ನಡೆಸಿ ನಾಗನನ್ನು ಸಂತೃಪ್ತಿ ಪಡಿಸಲಾಗಿದೆ. ಅಷ್ಟೇ ಅಲ್ಲದೆ, ಇಲ್ಲಿರೋ ಅಶ್ವತ ಮರದ ಬುಡದಲ್ಲಿ ಗುಳಿಗ ದೈವವನ್ನು ಪ್ರತಿಷ್ಠಾಪಿಸಿ ದೈವದ ಕೋಪವನ್ನು ಶಮನ ಮಾಡಲಾಗಿದೆ.

    ಶರವು ದೇವಸ್ಥಾನಕ್ಕೆ ಸೇರಿದ ಶರವು ಗುಳಿಗ ದೈವದ ಸಾನಿಧ್ಯ ಈ ಪ್ರದೇಶದಲ್ಲಿ ಇದ್ದು, ಇಲ್ಲಿನ ಮರ ತೆರವು ಮಾಡಿದ ಕಾರಣ ದೈವ ಅತಂತ್ರವಾಗಿತ್ತು. ರೈಲ್ವೇ ನಿಲ್ದಾಣದ ಬಳಿಯ ಶ್ರೀ ಮುತ್ತಪ್ಪನ್ ದೈವದ ಗುಡಿಯ ಬಳಿ ನೆಲೆಯಾಗಿತ್ತು ಎಂದು ಜ್ಯೋತಿಷ್ಯರಿಂದ ತಿಳಿದು ಬಂದಿತ್ತು. ಇದೀಗ ಗುಳಿಗ ದೈವದ ಪ್ರತಿಷ್ಠಾಪನೆಯಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣವಾಗಿದೆ.

     

    ಕಂಪ್ಲೀಟ್ ಸ್ಟೋರಿಗಾಗಿ ವಿಡಿಯೋ ನೋಡಿ:

    Continue Reading

    FILM

    ಆಸ್ಕರ್‌ಗೆ ಅಧಿಕೃತ ಪ್ರವೇಶ ಪಡೆದ “ಸ್ವಾತಂತ್ರ್ಯ ವೀರ್ ಸಾವರ್ಕರ್” ಸಿನೆಮಾ

    Published

    on

    ಮುಂಬೈ/ಮಂಗಳೂರು: ಬಾಲಿವುಡ್ ನಟ ರಣ್‌ದೀಪ್‌ ಹೂಡಾ ನಟಿಸಿ ನಿರ್ದೇಶಿಸಿರುವ ಸ್ವಾತಂತ್ರ್ಯ ವೀರ್‌ ಸಾವರ್ಕರ್‌ ಸಿನಿಮಾವೂ ಅಧಿಕೃತವಾಗಿ 2025ರ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ಈ ಜೀವನಚರಿತ್ರೆಯಾಧಾರಿತ ಸಿನಿಮಾವೂ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಅವರ ಜೀವನಗಾಥೆಯನ್ನು ಹೊಂದಿದ್ದು, ಈ ಸಿನಿಮಾದಲ್ಲಿ ರಣ್‌ದೀಪ್ ಹೂಡಾ ಜೊತೆ ಬಾಲಿವುಡ್ ನಟಿ ಅಂಕಿತಾ ಲೋಖಂಡೆ ನಟಿಸಿದ್ದಾರೆ.

    savarkar

    ಸಂದೀಪ್ ಸಿಂಗ್ ಅವರು ಈ ಸಿನಿಮಾದ ನಿರ್ಮಾಣ ಮಾಡಿದ್ದು, ಈ ಸಿನಿಮಾವೀಗ ಆಸ್ಕರ್‌ಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರು ಈ ಖುಷಿಯ ವಿಚಾರವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್  ಮಾಡಿ ಸಂತಸದ ಜೊತೆ ಹೆಮ್ಮೆ ಹಾಗೂ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

    2025ರ ಆಸ್ಕರ್‌ಗೆ ನಾಮ ನಿರ್ದೇಶನಗೊಂಡ ‘ಲಾಪತಾ ಲೇಡಿಸ್’ ಚಿತ್ರ

    ಕೆಲ ವಾರಗಳ ಹಿಂದಷ್ಟೇ ರಣ್‌ದೀಪ್ ಹೂಡಾ ಅವರಿಗೆ ಮುಂಬೈನಲ್ಲಿ ಪ್ರತಿಷ್ಠಿತ ಸ್ವಾತಂತ್ರ್ಯವೀರ ಸಾವರ್ಕರ್‌ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯ್ತು. ಸ್ವಾತಂತ್ರ್ಯ ಹೋರಾಟಗಾರ ಜೀವನಚರಿತ್ರೆಯನ್ನು ಅದ್ಭುತವಾಗಿ ತೆರೆಗೆ ತಂದಿದ್ದಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ. ಸ್ವಾತಂತ್ರ್ಯ ಹೋರಾಟದ ವೇಳೆ ಭಾರತದ ಯುವ ಸಮೂಹದಲ್ಲಿ ಸಾಕಷ್ಟು ಪ್ರಭಾವ ಬೀರಿದ್ದ ವಿವಾದಿತ ಹಾಗೂ ಪ್ರಭಾವಶಾಲಿ ನಾಯಕ ವೀರ್ ಸಾವರ್ಕರ್ ಆಗಿದ್ದಾರೆ. ಮಾರ್ಚ್‌ 22 ರಂದು ಹಿಂದಿ ಹಾಗೂ ಮಾರಾಠಿ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು.

    Continue Reading

    LATEST NEWS

    Trending