STATE
ವಾರದ ರಜೆಯಲ್ಲಿ “ಪ್ರಕೃತಿಯೊಂದಿಗೆ ಓದು” ವಿನೂತನ ಕಾರ್ಯಕ್ರಮ; ಎಲ್ಲಿ ಗೊತ್ತಾ ??
Published
3 hours agoon
ಮಂಗಳೂರು/ಕಾರವಾರ: ವಾರದ ರಜೆ ಬಂದರೆ ಸಾಕು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಬೇಕೆಂದು ಬಹುತೇಕ ಅಧಿಕಾರಿಗಳು ಬಯಸುತ್ತಾರೆ. ಆದರೆ, ಉತ್ತರ ಕನ್ನಡ ಜಿಲ್ಲಾಧಿಕಾರಿ ತಮ್ಮ ರಜೆ ದಿನಗಳಲ್ಲಿ “ಪ್ರಕೃತಿಯೊಂದಿಗೆ ಓದು” ಎಂಬ ವಿಶೇಷ ಕಾರ್ಯಕ್ರಮ ನಡೆಸುತ್ತಿದ್ದಾರೆ. ಯುವ ಪಿಳಿಗೆಗೆ ಪುಸ್ತಕ ಮತ್ತು ಪ್ರಕೃತಿಯ ಮಹತ್ವ ತಿಳಿಸಲು ಎರಡು ಗಂಟೆ ಮೀಸಲಿಡುತ್ತಿದ್ದಾರೆ. ಅದು ಯಾವ ರಿತಿ ಎಂಬ ಸಂಪೂರ್ಣ ಮಾಹಿತಿ ಇಲ್ಲಿವೆ.
ಇವತ್ತಿನ ಮೊಬೈಲ್ ಯುಗದಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆ ಆಗುತ್ತಿದೆ. ಓದುವ ಹವ್ಯಾಸ ರೂಢಿಸಿಕೊಳ್ಳಬೇಕೆಂದು ಬಹುತೇಕ ಅಧಿಕಾರಿಗಳು ಹಾಗೂ ಸಾಹಿತಿಗಳು ಹೇಳುವುದನ್ನು ಕೇಳಿದ್ದೆವೆ. ಆದರೆ, ಕೇವಲ ಮಾತಿನಲ್ಲಿ ಪ್ರೇರೇಪಣೆ ನೀಡುವುದರ ಬದಲು ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಹಾಗೂ ಅವರ ಪತಿ, ಸಾರ್ವಜನಿಕ ಪಾರ್ಕ್ಗಳಲ್ಲಿ ಜನರ ಜೊತೆ ಸೇರಿ ಪುಸ್ತಕ ಓದುವ ವಿನೂತನ ಕಾರ್ಯಕ್ರಮ ನಡೆಸುತ್ತಿದ್ದಾರೆ.
ಜನರಲ್ಲಿ ಓದುವ ಹವ್ಯಾಸ ಹೆಚ್ಚಿಸಲು ಉತ್ತರ ಕನ್ನಡ ಜಿಲ್ಲಾಡಳಿತ “ಪ್ರಕೃತಿಯೊಂದಿಗೆ ಓದು” ಎಂಬ ವಿನೂತನ ಕಾರ್ಯಕ್ರಮ ನಡೆಸುತ್ತಿದೆ. ಜ್ಞಾನ ಹೆಚ್ಚಿಸಿಕೊಳ್ಳುವ ಜೊತೆಗೆ ಓದುವ ಹವ್ಯಾಸ ಹೆಚ್ಚಿಸಲು ಈ ಪ್ರಯೋಗ ಜಿಲ್ಲಾಡಳಿತ ಮಾಡುತ್ತಿದೆ. ಇದಕ್ಕಾಗಿ ಜಿಲ್ಲಾಡಳಿತ ಪ್ರತಿ ಭಾನುವಾರ ಬೆಳಗ್ಗೆ 9 ರಿಂದ 11 ಗಂಟೆಯವರೆಗೆ ಗಾಂಧಿ ಪಾರ್ಕ್ನಲ್ಲಿ ವ್ಯವಸ್ಥೆ ಮಾಡಿದೆ.
ಪ್ರತಿ ಭಾನುವಾರ ಗಾಂಧಿ ಪಾರ್ಕ್ ಎರಡು ಗಂಟೆಗಳ ಕಾಲ ಗ್ರಂಥಾಲಯವಾಗಿ ಪರಿವರ್ತನೆಯಾಗುತ್ತದೆ. ಪಾರ್ಕ್ನಲ್ಲಿ ದಿನಪತ್ರಿಕೆಗಳು, ಕಥೆ, ಸಾಮಾನ್ಯ ಜ್ಞಾನ, ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳನ್ನು ಇಡಲಾಗಿದೆ. ವಿದ್ಯಾರ್ಥಿಗಳು ಇಲ್ಲಿ ಬಂದು ಇಲ್ಲಿನ ಪುಸ್ತಕಗಳನ್ನು ಪಡೆದು ಓದಬಹುದು. ಜೊತೆಗೆ ತಾವು ಕೂಡ ಪುಸ್ತಕ ತಂದು ಇಲ್ಲಿ ಓದಬಹುದು. ಪುಸ್ತಕ ಓದುವುದರ ಜೊತೆಗೆ ತಾವು ಓದಿದ್ದ ಪುಸ್ತಕ ಹಾಗೂ ಓದಬೇಕಾದ ಪುಸ್ತಕದ ಬಗ್ಗೆ ಜಿಲ್ಲಾಧಿಕಾರಿಯವರ ಜೊತೆ ತಮ್ಮ ವಿಚಾರಗಳನ್ನು ಹಂಚಿಕೊಳ್ಳಬಹುದು. ಓರ್ವ ಐಎಎಸ್ ಅಧಿಕಾರಿಯ ಜೊತೆ ಓದುವುದು ಮತ್ತು ಮುಕ್ತವಾಗಿ ಮಾತನಾಡಲು ಅವಕಾಶ ಸಿಗುತ್ತೆ ಅಂತ ಬಹಳಷ್ಟು ಯುವಕ-ಯುವತಿಯರು ಪಾರ್ಕ್ಗೆ ಓದಲು ಬರುತ್ತಾರೆ.
ಸಾಮಾನ್ಯವಾಗಿ ರವಿವಾರ ಮೊಬೈಲ್ ಹಿಡಿದು ಸಮಯ ವ್ಯರ್ಥ ಮಾಡುತ್ತೇವೆ. ಆದರೆ ಇಂತಹ ಯೋಜನೆಗಳಿಂದ ಓದುವ ಆಸಕ್ತಿ ಹೆಚ್ಚುತ್ತದೆ. ವಿದ್ಯಭ್ಯಾಸಕ್ಕೂ ಅನುಕೂಲ ಆಗಿದೆ ಎಂದು ಪಾರ್ಕ್ಗೆ ಓದಲು ಬಂದ ವಿದ್ಯಾರ್ಥಿಗಳು ಅಭಿಪ್ರಾಯ ತಿಳಿಸಿದ್ದಾರೆ. ಒಟ್ಟಿನಲ್ಲಿ ಮೂರು ಹೊತ್ತು ಮೊಬೈಲ್ ಎಂದು ಗೀಳು ಅಂಟಿಸಿಕೊಂಡು ಸಮಯ ವ್ಯರ್ಥ ಮಾಡುವ ಇಂದಿನ ಯುವಜನತೆಗೆ “ಪ್ರಕೃತಿಯೊಂದಿಗೆ ಓದು” ಕಾರ್ಯಕ್ರಮ ಓದುವ ಹವ್ಯಾಸ ಹೆಚ್ಚಿಸಲು ಸಹಾಯವಾಗಿದೆ.
LATEST NEWS
ಕದ್ದ ಚಿನ್ನಾಭಾರಣಗಳನ್ನು ಮನೆಯ ಜಗಲಿಯ ಮೇಲೆ ಇಟ್ಟು ಹೋದ ಕಳ್ಳರು !
Published
2 minutes agoon
25/11/2024By
NEWS DESK3ಮಂಗಳೂರು/ಮಂಡ್ಯ: ರಾಜ್ಯದಲ್ಲಿ ಕಳ್ಳತನ ಎನ್ನುವುದು ಸಾಮಾನ್ಯವಾಗಿದೆ. ಕಳ್ಳರು ಕದ್ದ ಚಿನ್ನಾಭಾರಣಗಳನ್ನು ಎಲ್ಲಿಯಾದರೂ ಮಾರಿ ಬಿಡುತ್ತಾರೆ. ಆದರೆ ಕಳ್ಳರಲ್ಲೂ ಪ್ರಾಮಾಣಿಕತೆ ಇದೆ ಎಂದು ಮಂಡ್ಯದಲ್ಲಿ ಸಾಕ್ಷಿಯಾಗಿದೆ.
ಈ ಘಟನೆ ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಿದ್ದೇಗೌಡ ಎಂಬುವವರ ಕುಟುಂಬ ಮನೆದೇವರ ಪೂಜೆಗೆಂದು ಹೋಗಿದ್ದರು. ಈ ವೇಳೆ ಮನೆಯ ಹೆಂಚುಗಳನ್ನು ತೆಗೆದು ಒಳನುಗ್ಗಿದ್ದ ಕಳ್ಳರು ಬೀರುವನ್ನು ಒಡೆದು ಕಳ್ಳತನ ಮಾಡಿದ್ದರು. ಈ ವೇಳೆ 50 ಗ್ರಾಂ ಚಿನ್ನದ ಸರ, 10 ಗ್ರಾಂ ಚೈನ್, 15 ಗ್ರಾಂನ ಮೂರು ಜೊತೆ ಓಲೆಗಳು ಸೇರಿ ಒಟ್ಟು 75 ಗ್ರಾಂನಷ್ಟು ಚಿನ್ನಾಭರಣ ಕದ್ದಿದ್ದರು.
ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ರಕ್ಷಿಸಿದ ರೈಲ್ವೇ ಸಿಬ್ಬಂದಿ
ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ದೂರು ಕೂಡ ನೀಡಿದ್ದರು. ಕಳ್ಳರಿಗೆ ಪೊಲೀಸರ ಭಯವೋ ಅಥವಾ ಮನೆದೇವರ ಆಶೀರ್ವಾದವೋ ಗೊತ್ತಿಲ್ಲ, ಪೊಲೀಸರಿಗೆ ದೂರು ನೀಡಿದ ಎರಡು ದಿನಗಳ ನಂತರ ಕಳ್ಳರು ಮನೆಯ ಮುಂಭಾಗದ ಜಗಲಿಯ ಮೇಲೆ ಚಿನ್ನಾಭರಣಗಳನ್ನು ಇಟ್ಟು ಹೋಗಿದ್ದಾರೆ.
ಚಿನ್ನಾಭರಣ ವಾಪಸ್ಸು ಸಿಕ್ಕ ಖುಷಿಯಲ್ಲಿ ಸಿದ್ದೇಗೌಡರ ಕುಟುಂಬ ನಿರಾಳವಾಗಿದೆ.
ಅಂಕೋಲಾ: ನ್ಯಾನೋ ಕಾರು ಪ*ಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃ*ತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ಕೊಡಸಣಿಯ ಅಪಾಯಕಾರಿ ಕ್ರಾಸ್ ಬಳಿ ನಡೆದಿದೆ.
ಪರಿಣಾಮ ಓರ್ವ ಮೃ*ತಪಟ್ಟಟ್ಟು, ಮತ್ತೋರ್ವ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಹೊನ್ನಾವರ ಅರೆಯಂಗಡಿ ಮೂಲದ ರಮೇಶ ಶಿವಾನಂದ ನಾಯ್ಕ ಮೃ*ತ ದುರ್ದೈವಿ ಎಂದು ಗುರುತಿಸಲಾಗಿದೆ.
ವಧು ಅನ್ವೇಷಣೆಗಾಗಿ ಅದೇ ಕಾರಿನಲ್ಲಿ ಅಂಕೋಲಾ ಕಡೆ ಬರುತ್ತಿದ್ದ ದಿನೇಶ ಎನ್ನುವವನ ತಲೆ ಹಾಗೂ ಇತರೆಡೆ ಗಾ*ಯನೋವುಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೊಳಪಡಿಸಲಾದ್ದು ಪ್ರಾ*ಣಾಪಾಯದಿಂದ ಪಾರಾಗಿದ್ದಾನೆ.
ಅವೈಜ್ಞಾನಿಕ ಹಾಗೂ ಅಪೂರ್ಣ ಹೆದ್ದಾರಿ ಕಾಮಗಾರಿಯಿಂದ ಕೊಡಸಣಿ ಕ್ರಾಸ್ ಬಳಿ ಹತ್ತಾರು ಅಪಘಾತಗಳು ಸಾ*ವು ನೋವುಗಳು ಸಂಭವಿಸುತ್ತಲೇ ಇದ್ದು ಕಳೆದ ವಾರ ಇದೇ ಸ್ಥಳದ ಹತ್ತಿಪತ್ತು ಮೀಟರ್ ದೂರದಲ್ಲಿ ಭಾರೀ ವಾಹನ ಒಂದು ಪ*ಲ್ಟಿಯಾಗಿತ್ತು.
LATEST NEWS
ಕಾಮೆಂಟ್ ಮೂಲಕ ಹಿಂದೂ ಧರ್ಮದ ದೇವರುಗಳ ಬಗ್ಗೆ ಅವಹೇಳನ: ದೂರು ದಾಖಲು
Published
2 hours agoon
25/11/2024ಮಂಗಳೂರು/ಬೆಂಗಳೂರು: ಹಿಂದೂ ದೇವರುಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಕಾಮೆಂಟ್ ಹಾಕಿದ ವ್ಯಕ್ತಿಯ ವಿರುದ್ಧ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಂಜುಮ್ ಶೇಖ್ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ, ಶೃಂಗೇರಿ ಶಾರದಂಭೆ, ಕೊಲ್ಲೂರು ಮೂಕಾಂಬಿಕೆ ಅಮ್ಮನ ಬಗೆಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾನೆ. ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಗ್ರಹಿಸಿದೆ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ರಾಘವೇಂದ್ರ ಭಟ್ ಈ ಕುರಿತು ಮಾತನಾಡಿ, “ಅಂಜುಮ್ ಶೇಖ್ ಎಂಬಾತ ಹೊರನಾಡು ಅನ್ನಪೂರ್ಣೇಶ್ವರಿ, ಶೃಂಗೇರಿ ಶಾರದಂಭೆ, ಕೊಲ್ಲೂರು ಮೂಕಾಂಬಿಕೆ, ತಿರುಪತಿ ತಿಮ್ಮಪ್ಪ ಮತ್ತು ಗಣೇಶ ದೇವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಈ ಕಾಮೆಂಟ್ನಿಂದ ನಮಗೆ ಅತ್ಯಂತ ನೋವುಂಟು ಆಗಿದೆ ಇಂತವರ ಮೇಲೆ ಕ್ರಮ ಕೈಗೊಳ್ಳಬೇಕು” ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ : ವಾರದ ರಜೆಯಲ್ಲಿ “ಪ್ರಕೃತಿಯೊಂದಿಗೆ ಓದು” ವಿನೂತನ ಕಾರ್ಯಕ್ರಮ; ಎಲ್ಲಿ ಗೊತ್ತಾ ??
ಧರ್ಮದ ಬಗ್ಗೆ ಈ ರೀತಿ ಕಾಮೆಂಟ್ ಮಾಡಿದ್ದಕ್ಕೆ ಪೊಲೀಸ್ ಠಾಣೆ, ಶಾಸಕರ ಮನೆಗೆ ಬೆಂಕಿ ಹಚ್ಚಿದ್ದಾರೆ. “ನಾವು ಅವರ ತರಹ ಬೆಂಕಿ ಹಚ್ಚುವ ಕೆಲಸ ಮಾಡಲ್ಲ. ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ್ದೇವೆ. ನಾವು ರಾಮನ ತರಹ ಇದ್ದೀವಿ, ಆದರೆ ಪರಶುರಾಮ ಆಗಬೇಕಾಗುತ್ತದೆ” ಎಂದು ದೂರಿನಲ್ಲಿ ದಾಖಲಿಸಿದ್ದಾರೆ. ಈ ಕುರಿತು ಪೊಲೀಸರು ಸೂಕ್ಷ್ಮ ರಿತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ.
LATEST NEWS
ಚಾರ್ಜರ್ ಕೇಬಲ್ ಗೆ ಗಮ್ ಟೇಪ್ ಸುತ್ತಿ ಚಾರ್ಜ್ ಮಾಡುವವರು ಇದನ್ನು ಓದಲೇ ಬೇಕು !
ಕಾಮೆಂಟ್ ಮೂಲಕ ಹಿಂದೂ ಧರ್ಮದ ದೇವರುಗಳ ಬಗ್ಗೆ ಅವಹೇಳನ: ದೂರು ದಾಖಲು
ಬಿಗ್ ಬಾಸ್ ನಿಂದ ಧರ್ಮ ಎಲಿಮಿನೆಟ್ ಆಗಿದ್ದು ಯಾಕೆ ಗೊತ್ತಾ ?
ಸ್ನೇಹಿತನಿಗೆ ಥಳಿಸಿ ಅ*ಪ್ರಾಪ್ತೆ ಮೇಲೆ ಅ*ತ್ಯಾಚಾ*ರ ಎಸಗಿದ ಟ್ರಕ್ ಚಾಲಕ
ನಿನ್ನೆಯ ಹರಾಜಿನಲ್ಲಿ ಆರ್ ಸಿಬಿ ಖರೀದಿಸಿದ ಆಟಗಾರರು ಇವರೇ !
ಎಲನ್ ಮಸ್ಕ್ ಗೆ ಇಷ್ಟವಾದ ಭಾರತದ ಚುನಾವಣಾ ಪ್ರಕ್ರಿಯೆ!
Trending
- LATEST NEWS5 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- Baindooru3 days ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
- LIFE STYLE AND FASHION4 days ago
ಚಿಕನ್ ಪ್ರಿಯರೇ ಗಮನಿಸಿ; ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ
- LATEST NEWS7 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!
Pingback: ಕಾಮೆಂಟ್ ಮೂಲಕ ಹಿಂದೂ ಧರ್ಮದ ದೇವರುಗಳ ಬಗ್ಗೆ ಅವಹೇಳನ: ದೂರು ದಾಖಲು - NAMMAKUDLA NEWS - ನಮ್ಮಕುಡ್ಲ ನ್ಯೂಸ್