Saturday, August 20, 2022

ಮಂಗಳೂರಿನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಮಂಗಳೂರು: ‘ಅಂಬೇಡ್ಕರ್ ಜಯಂತಿಯನ್ನು ಗೌರವಪೂರ್ಣವಾಗಿ ಅಚರಿಸಲಾಗುತ್ತಿದೆ. ಅತ್ಯದ್ಭುತವಾದ ಸಂವಿಧಾನ ರಚನೆಯಿಂದ ಇವತ್ತು ಕೂಡಾ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಗಟ್ಟಿಯಾಗಿ ಆಡಳಿತವನ್ನು ನೀಡುತ್ತಿದೆ.

ಅಂಬೇಡ್ಕರ್ ನೀಡಿದ ಸಂವಿಧಾನದಿಂದಾಗಿ ಅದರ ತಳಹದಿ ಮೇಲೆ 75 ವರ್ಷಗಳವರೆಗೆ ಯಾವುದೇ ರಾಷ್ಟ್ರಗಳು ಇಷ್ಟು ಒಳ್ಳೆಯ ಪ್ರಜಾಪ್ರಭುತ್ವ ವ್ಯವಸ್ಥೆ ನೀಡಲಿಲ್ಲ. ಅದಕ್ಕೆ ಮೂಲಕಾರಣ ಸಂವಿಧಾನ ಶಿಲ್ಪಿ ಡಾ ಬಿ. ಆರ್ ಅಂಬೇಡ್ಕರ್ ‘ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ ಸುನಿಲ್ ಕುಮಾರ್ ಹೇಳಿದರು.


ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅವರು ಉದ್ಘಾಟಿಸಿದರು.

ನಂತರ ಮಾತನಾಡಿ ‘ಎಲ್ಲಾ ಸರಕಾರಗಳೂ ಅತ್ಯುತ್ತಮ ಆಡಳಿತವನ್ನು ನೀಡಿವೆ. ಅಂಬೇಡ್ಕರ್ ಅವರ ಐದು ಸ್ಥಳ ಪಂಚತೀರ್ಥವನ್ನು ಅಭಿವೃದ್ಧಿ ಪಡಿಸುವ ಕೆಲಸವನ್ನು ಕೇಂದ್ರ ಸರಕಾರ ಮಾಡಿದೆ.

ಅಂಬೇಡ್ಕರ್ ಜನ್ಮಭೂಮಿಯನ್ನು ಅಭಿವೃದ್ಧಿ ಪಡಿಸುವ ಕೆಲಸವನ್ನು ಕೇಂದ್ರ ಸರಕಾರ ಮುಂದಾಗಿದೆ. ಮಂಗಳೂರಿನಲ್ಲೂ ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗಿದೆ’ ಎಂದರು.

ಅಧ್ಯಕ್ಷತೆಯನ್ನು ವೇದವ್ಯಾಸ ಕಾಮತ್‌ ವಹಿಸಿದ್ದರು. ಸಂಸದ ನಳಿನ್‌ ಕುಮಾರ್ ಕಟೀಲು, ಶಾಸಕ ಭರತ್ ಶೆಟ್ಟಿ, ನಿತಿನ್‌ಕುಮಾರ್, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ.ವಿ , ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Hot Topics