Connect with us

    BELTHANGADY

    ವೈಯುಕ್ತಿಕ ದ್ವೇಷಕ್ಕೆ ಬೆಳ್ತಂಗಡಿ ಶಾಸಕರಿಂದ ಮಹಿಳಾ ಅಧಿಕಾರಿ ವರ್ಗಾವಣೆ: ಆರೋಪ

    Published

    on

    ಮಂಗಳೂರು: ವೈಯಕ್ತಿಕ ದ್ವೇಷದಿಂದ ಅರಣ್ಯ ಸಂಚಾರಿ ದಳದ ಮಹಿಳಾ ಅಧಿಕಾರಿಯನ್ನು ವರ್ಗಾವಣೆ ಮಾಡಿದ ಆರೋಪ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಮೇಲೆ ಬಂದಿದೆ.


    ಬೆಳ್ತಂಗಡಿ ತಾಲೂಕಿನ ಅಕ್ರಮ ಮರ ಸಾಗಾಟಗಾರರ ಮರ ಹಾಗೂ ವಾಹನ ವಶಪಡಿಸಿಕೊಂಡ ಕಾರಣ ದಕ್ಷಿಣ ಕನ್ನಡ ಜಿಲ್ಲಾ ಅರಣ್ಯ ಸಂಚಾರಿದಳದ ಪ್ರಭಾರ ಅಧಿಕಾರಿ ಸಂಧ್ಯಾ ಸಚಿನ್ ಎಂಬುವವರನ್ನು ವರ್ಗಾವಣೆ ಮಾಡಲಾಗಿದೆ.

    ಈ ಬಗ್ಗೆ ಸ್ವತಃ ಶಾಸಕ ಹರೀಶ್‌ ಪೂಂಜಾ ಅವರು ಅಧಿಕಾರಿಯನ್ನು ಬೀದರ್‌ಗೆ ವರ್ಗಾವಣೆ ಮಾಡುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ಈ ನಡುವೆ ನ್ಯಾಯ ಒದಗಿಸಿಕೊಡಿ ಎಂದು ಬೆಳ್ತಂಗಡಿ ನಾರಾಯಣ ಗುರು ಸ್ವಾಮಿ ಸೇವಾ ಸಂಘಕ್ಕೆ ವರ್ಗಾವಣೆಯಾದ ಮಹಿಳಾ ಅಧಿಕಾರಿ ಪತ್ರವನ್ನು ಬರೆದಿದ್ದಾರೆ.

    ಈ ಪತ್ರದಲ್ಲಿ ಶಾಸಕರು ಕೋಪಗೊಂಡು ನನ್ನಲ್ಲಿ ವೈಯಕ್ತಿಕ ದ್ವೇಷ ಹಗೆತನ‌ ಸಾಧಿಸಿ ಬೀದರ್ ಗೆ ವರ್ಗಾವಣೆ ಮಾಡಿರೋದಾಗಿ ಉಲ್ಲೇಖಿಸಿ, ನ್ಯಾಯ ಒದಗಿಸಿಕೊಡುವಂತೆ ಕೇಳಿಕೊಂಡಿದ್ದಾರೆ.

    ಸದ್ಯ ಈ ಪತ್ರ ಸಹ ವೈರಲ್ ಆಗಿದೆ.
    ಸದ್ಯ ಬೀದರ್‌ನ ನೌಬಾದ್ ಅರಣ್ಯ ತರಬೇತಿ ಕೇಂದ್ರಕ್ಕೆ ಸಂಧ್ಯಾ ಸಚಿನ್ ವರ್ಗಾವಣೆ ಮಾಡಲಾಗಿದೆ.

    ಶಾಸಕರ ಬೆಂಬಲಿತ ಮರ-ವಾಹನ ಮುಟ್ಟುಗೋಲು
    ಎರಡು ತಿಂಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದಲ್ಲಿ ಯಾವುದೇ ಅನುಮತಿ ಇಲ್ಲದೆ ಕೋಟ್ಯಾಂತರ ರೂಪಾಯಿ ಮೌಲ್ಯದ ಮರಗಳನ್ನು ಕಡಿದುರುಳಿಸಿದ್ದರು. ಈ ಬಗ್ಗೆ ಅರಣ್ಯ ಇಲಾಖೆಗೆ ಸ್ಥಳೀಯರು ದೂರು ನೀಡಿದ್ದರು.

    ಈ ವೇಳೆ ದಾಳಿ ನಡೆಸಿದ ಅರಣ್ಯಾಧಿಕಾರಿ ಸಂಧ್ಯಾ ತನ್ನ ತಂಡದೊಂದಿಗೆ ದಾಳಿ ನಡೆಸಿದಾಗ ಹೆಬ್ಬಲಸು, ಹಲಸು, ಬೋಗಿ, ಕಿರಲ್ ಬೋಗಿ, ಸಾಗುವಾನಿ ಸೇರಿದಂತೆ ಬೆಲೆಬಾಳುವ ಮರಗಳನ್ನು ಕಡಿದು ಹಾಕಿರುವುದು ಪತ್ತೆಯಾದವು.

    ಈ ಸಂಬಂಧ ಪ್ರಕರಣ ದಾಖಲಿಸಿದ ಅರಣ್ಯಾಧಿಕಾರಿ ಸಂಧ್ಯಾ, ಸ್ಥಳದಲ್ಲಿದ್ದ ಲಾರಿ ಸಮೇತ ಮರಗಳನ್ನು ಮುಟ್ಟುಗೋಲು ಹಾಕಿಕೊಂಡರು. ಈ ಪ್ರಕರಣದಲ್ಲಿ ಶಾಸಕರ ಬೆಂಬಲಿತರು ಇದ್ದರು ಎನ್ನಲಾಗಿದೆ.


    ಪ್ರಕರಣದ ಬಗ್ಗೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ತನಿಖೆ ನಡೆಸಿ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯ ನಾಲ್ಕು ಸಿಬ್ಬಂದಿಯನ್ನು ಅಮಾನತು ಮಾಡಿದರು.

    ಇದರಿಂದಾಗಿ ಮಹಿಳಾ ಅಧಿಕಾರಿ ಮೇಲೆ ದ್ವೇಷದಿಂದ ದೂರದ ಬೀದರ್ ಜಿಲ್ಲೆಗೆ ವರ್ಗಾವಣೆ ಮಾಡಲು ಯಶಸ್ವಿಯಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

    BELTHANGADY

    ಶಿರಾಡಿಘಾಟ್‌ನಲ್ಲಿ ಭೀಕರ ರಸ್ತೆ ಅಪ*ಘಾತ..! ತಾಯಿ ಮಗ ದಾರುಣ ಸಾ*ವು

    Published

    on

    ಬೆಳ್ತಂಗಡಿ:  ಶಿರಾಡಿಘಾಟ್‌ನಲ್ಲಿ ಇನೋವಾ ಕಾರಿಗೆ ಭೀಕರ ರಸ್ತೆ ಅಪಘಾತ ಸಂಭವಿಸಿ ತಾಯಿ ಮಗ ದಾರಣವಾಗಿ ಸಾವಿಗೀಡಾದ ದುರ್ಘಟನೆ ಮೇ.21ರಂದು ಬೆಳಿಗ್ಗೆ ನಡೆದಿದೆ.

    charmadi

    ಕಾರು ಅಪಘಾತದಲ್ಲಿ ಬಂಟ್ವಾಳ ಮೂಲದ ತಾಯಿ ಹಾಗೂ ಮಗ ಸ್ಥಳದಲ್ಲೇ ಅಸುನೀಗಿದ್ದಾರೆ. ಕಾರಿನಲ್ಲಿದ್ದ ಹಲವರಿಗೆ ಗಾಯಗಳಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಇನ್ನೋವಾ ಕಾರಿನಲ್ಲಿ ಒಂದೇ ಮನೆಯವರು ಪ್ರಯಾಣ ಮಾಡುತ್ತಿದ್ದರು. ಸಕಲೇಶಪುರ ವ್ಯಾಪ್ತಿಯಲ್ಲಿ ಘಾಟ್‌ನ ತಿರುವಿನಲ್ಲಿ ವಾಹನ ಚಲಾಯಿಸುತ್ತಿದ್ದ ಮೊಹಮ್ಮದ್ ಶಫೀಕ್‌ ಅವರಿಗೆ ನಿಯಂತ್ರಣ ತಪ್ಪಿ ಈ ಅಪಘಾತ ನಡೆದಿದೆ.

    Read More..; ಟಿಸಿ ಕೊಟ್ಟಿಲ್ಲ ಎಂದು ಬೇಸರಗೊಂಡು ಎಸ್‌ಎಸ್‌ಎಲ್‌ಸಿ ಪಾಸಾದ ವಿದ್ಯಾರ್ಥಿ ಆತ್ಮಹ*ತ್ಯೆ

    20 ವರ್ಷ ಪ್ರಾಯದ ಮೊಹಮ್ಮದ್ ಶಫೀಕ್ ಹಾಗೂ 50 ವರ್ಷ ಪ್ರಾಯದ ಆವರ ತಾಯಿ ಸಪೀಯಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುಂಜಾವಿನಲ್ಲಿ ಈ ಅಪಘಾತ ನಡೆದಿದ್ದು, ತಕ್ಷಣ ಹಿಂಬದಿ ವಾಹನಗಳಲ್ಲಿ ಬಂದವರು ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಮಂಗಳೂರು ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತರಿಬ್ಬರೂ ಬಂಟ್ವಾಳ ತಾಲೂಕಿನ ಬೊಂಡಾಲದ ನಿವಾಸಿಗಳಾಗಿದ್ದು, ಶಬ್ಬಿರ್ ಎಂಬರ ಪತ್ನಿ ಹಾಗೂ ಮಗ ಮೃತಪಟ್ಟವರೆಂದು ತಿಳಿದು ಬಂದಿದೆ. ಸಕಲೇಶಪುರದ ಮಾರನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    BELTHANGADY

    ಠಾಣೆಗೆ ನುಗ್ಗಿ ಉದ್ಧಟತನದ ವರ್ತನೆ..! ಹರೀಶ್ ಪೂಂಜಾ ಮೇಲೆ ಕೇಸ್‌..!

    Published

    on

    ಮಂಗಳೂರು : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪೊಲೀಸರ ಜೊತೆಯಲ್ಲಿ ಉದ್ಧಟತನದಿಂದ ವರ್ತಿಸಿದ್ದ ಶಾಸಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಬೆಳ್ತಂಗಡಿಯ ಮೇಲಂತಬೆಟ್ಟು ಎಂಬಲ್ಲಿ ಅಕ್ರಮ ಗಣಿಗಾರಿಕೆಗೆ ಪೊಲೀಸರ ಸಹಕಾರ ಪಡೆದು ತಹಶೀಲ್ದಾರ್ ದಾಳಿ ನಡೆಸಿದ್ದರು. ಈ ವೇಳೆ ಅದು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿ ಹಾಗೂ ಬಿಜೆಪಿ ಮುಖಂಡ ಪ್ರಮೋದ್ ಗೌಡ ಎಂಬವರಿಗೆ ಸೇರಿದ್ದಾಗಿ ತಿಳಿದು ಬಂದಿತ್ತು. ಈ ಹಿನ್ನಲೆಯಲ್ಲಿ ಶಶಿರಾಜ್ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದು ತಂದಿದ್ದರು. ಈ ವಿಚಾರ ತಿಳಿದು ಠಾಣೆಗೆ ಆಗಮಿಸಿದ್ದ ಶಾಸಕ ಹರೀಶ್ ಪೂಂಜಾ ಠಾಣೆಯಲ್ಲಿ ಪೊಲೀಸರ ಜೊತೆಯಲ್ಲಿ ಅನುಚಿತವಾಗಿ ವರ್ತಿಸಿ ಬೆದರಿಕೆ ಕೂಡಾ ಹಾಕಿದ್ದರು.

    ಶಾಸಕ ಹರೀಶ್ ಪೂಂಜಾ ನಡವಳಿಕೆಯ ಬಗ್ಗೆ ವ್ಯಾಪಕ ಟೀಕೆ ಕೂಡಾ ವ್ಯಕ್ತವಾಗಿದ್ದು, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಲಾಗಿತ್ತು. ಇದೀಗ ಹಿರಿಯ ಅಧಿಕಾರಿಗಳ ಸೂಚನೆಯಂತೆ ಶಾಸಕ ಹರೀಶ್ ಪೂಂಜಾ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. IPC 353 ,504 ಅಡಿಯಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ.

    Continue Reading

    BELTHANGADY

    ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ಬಂಧನ..! ಶಾಸಕ ಪೂಂಜಾ ಪ್ರತಿಭಟನೆ

    Published

    on

    ಬೆಳ್ತಂಗಡಿ : ಅಕ್ರಮ ಕಲ್ಲಿನ ಗಣಿಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿ ಅವರನ್ನು ರಾತೋರಾತ್ರಿ ಬಂಧಿಸಿದ್ದಾರೆ. ಆದ್ರೆ, ಈ ಬಂಧನವನ್ನು ವಿರೋಧಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಇಡೀ ರಾತ್ರಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

    ಬೆಳ್ತಂಗಡಿಯ ಮೆಲಂತಬೆಟ್ಟು ಗ್ರಾಮದ ಮೂಡಲ ನಿವಾಸಿ ಸೂರಪ್ಪ ಪೂಜಾರಿ ಎಂಬವರ ಜಾಗಕ್ಕೆ ಮೇ 18 ರ ಸಂಜೆ ತಹಶೀಲ್ದಾರ್‌ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಅಕ್ರಮ ಗಣಿಗಾರಿಕೆಯ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಪೊಲೀಸರ ಜೊತೆಯಲ್ಲಿ ದಾಳಿಯನ್ನು ನಡೆಸಲಾಗಿತ್ತು. ಈ ವೇಳೆ ಸ್ಥಳದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ವಿಚಾರ ಪತ್ತೆಯಾಗಿದ್ದು, ಸ್ಥಳದಿಂದ ಒಂದು ಹಿಟಾಚಿ, ಕಂಪ್ರೆಸರ್, ಕಾರು ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು. ವಿಚಾರಣೆಯ ವೇಳೆ ಈ ಅಕ್ರಮ ಗಣಿಗಾರಿಕೆ ಬಿಜೆಪಿ ಮುಖಂಡ ಪ್ರಮೋದ್ ದಿಡುಪೆ ಹಾಗೂ ಯುವ ಮೋರ್ಚಾದ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ಅವರದ್ದು ಎಂದು ಗೊತ್ತಾಗಿತ್ತು.

    ಅಕ್ರಮ ಗಣಿಗಾರಿಕೆ ಸಾಬೀತಾದ ಹಿನ್ನೆಲೆಯಲ್ಲಿ ರಾತೋ ರಾತ್ರಿ ಶಶಿರಾಜ್ ಶೆಟ್ಟಿ ಅವರ ಮನೆಗೆ ನುಗ್ಗಿ ಅವರನ್ನು ಬಂಧಿಸಿದ್ದರು. ಈ ವಿಚಾರ ತಿಳಿದು ಠಾಣೆಗೆ ಆಗಮಿಸಿದ ಶಾಸಕ ಹರೀಶ್ ಪೂಂಜಾ, ಶಶಿರಾಜ್ ಶೆಟ್ಟಿಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ರು. ಆದ್ರೆ, ಶಾಸಕರ ಮಾತಿಗೆ ಒಪ್ಪದ ಪೊಲೀಸರು ಆರೋಪಿಯ ವಿರುದ್ಧ ಎಫ್‌ ಐ ಆರ್ ದಾಖಲಿಸಿಕೊಂಡಿದ್ದಾರೆ. ಇದರಿಂದ ಆಕ್ರೋಶಿತರಾದ ಶಾಸಕ ಪೂಂಜಾ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

    ಇದನ್ನೂ ಓದಿ : KARKALA: ಕಲ್ಲು ಸಾಗಾಟದ ಲಾರಿ ಪಲ್ಟಿ; ಇಬ್ಬರು ಕಾರ್ಮಿಕರು ಸಾ*ವು

    ಪೊಲೀಸರ ಮೇಲೆ ಕಾಂಗ್ರೆಸ್ ಏಜೆಂಟರ ಆರೋಪ :

    ರಾತೋರಾತ್ರಿ ಮನೆಗೆ ನುಗ್ಗಿದ ಪೊಲೀಸರು ಅಕ್ರಮದಲ್ಲಿ ಭಾಗಿಯಾಗದ ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡಿದ್ದಾರೆ ಅಂತ ಶಾಸಕ ಪೂಂಜಾ ಆರೋಪಿಸಿದ್ದಾರೆ. ಪೊಲೀಸರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ನಮ್ಮ ಸರ್ಕಾರ ಬಂದಾಗ ನೋಡಿಕೊಳ್ಳುವುದಾಗಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ. ಮಾಧ್ಯಮಗಳ ಮುಂದೆ ತಮ್ಮ ಆಕ್ರೋಶ ವ್ಯಕ್ತಪಡಿಸಿ ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ.

    Continue Reading

    LATEST NEWS

    Trending