Connect with us

    LATEST NEWS

    ಅಮಿತ್ ಮಾಳವೀಯ ವಿರುದ್ಧ ಲೈಂ*ಗಿಕ ದೌರ್ಜ*ನ್ಯ ಆರೋಪ: ಬಿಜೆಪಿ ವಿರುದ್ಧ ಕಿಡಿಕಾರಿದ ಕಾಂಗ್ರೆಸ್; ಮಾಳವೀಯನನ್ನು ಉಚ್ಚಾಟಿಸಲು ಆಗ್ರಹಿಸಿದ ಸುಪ್ರೀಯಾ ಶ್ರೀನಾಥೆ

    Published

    on

    ನವದೆಹಲಿ : ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ಧ ಲೈಂ*ಗಿಕ ದೌರ್ಜ*ನ್ಯದ ಆರೋಪ ಕೇಳಿ ಬಂದಿದೆ. ಸ್ವತಃ ಸಂಘ ಪರಿವಾರದ ಪ್ರಮುಖ್ ಶಂತನು ಸಿನ್ಹಾ ಇಂತಹದೊಂದು ಗಂಭೀರ ಆರೋಪ ಮಾಡಿದ್ದಾರೆ. ಅಮಿತ್ ಮಾಳವೀಯ ಪಶ್ಚಿಮ ಬಂಗಾಳದ ಸ್ಟಾರ್ ಹೊಟೇಲ್ ಮಾತ್ರವಲ್ಲದೆ, ಬಿಜೆಪಿ ಕಚೇರಿಯಲ್ಲೂ ಮಹಿಳೆಯರ ಲೈಂ*ಗಿಕ ದೌರ್ಜ*ನ್ಯ ಮಾಡಿರುವುದಾಗಿ ಆರೋಪಿಸಿದ್ದಾರೆ.


    ಇದೀಗ ಪ್ರಧಾನಿಯಾಗಿ ಮೋದಿ ಅಧಿಕಾರ ವಹಿಸಿಕೊಂಡ ತಕ್ಷಣವೇ ಕಾಂಗ್ರೆಸ್ ಇದನ್ನು ಅಸ್ತ್ರವಾಗಿ ಮಾಡಿಕೊಂಡು ಸರ್ಕಾರದ ವಿರುದ್ಧ ತನ್ನ ದಾಳಿಯನ್ನು ಆರಂಭಿಸಿದೆ.

    ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಥೆ, ಪ್ರಧಾನಿ ಮೋದಿ ವಿರುದ್ಧ ಹಾಗೂ ಎನ್ಡಿ ಒಕ್ಕೂಟದ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿಯ ಐಟಿ ಸೆಲ್ ನಲ್ಲಿ ಇರುವ ನಾಯಕರು ಮಹಿಳೆಯರ ಲೈಂ*ಗಿಕ ದೌರ್ಜ*ನ್ಯ ಪ್ರಕರಣ ಹಾಗೂ ದೇಶ ದ್ರೋಹಿ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

    ಇದನ್ನೂ ಓದಿ : ರಾತೋರಾತ್ರಿ ಮನೆಗೆ ನುಗ್ಗಿ ದರೋಡೆ ಮಾಡಿದ ಗ್ಯಾಂಗ್; ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿ ಚಿನ್ನಾಭರಣ ಲೂಟಿ

    ಇಷ್ಟೇ ಅಲ್ಲದೆ, ಬಿಜೆಪಿ ಆಡಳಿತ ಅವಧಿಯಲ್ಲಿ ನಡೆದಿದ್ದ ಮಹಿಳಾ ದೌರ್ಜ*ನ್ಯ ಪ್ರಕರಣದಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದ ವಿಚಾರವನ್ನು ಪ್ರಸ್ತಾಪಸಿದ್ದಾರೆ. ಇದೀಗ ಅಮಿತ್ ಮಾಳವೀಯ ಪ್ರಕರಣ ಬೆಳಕಿಗೆ ಬಂದಿದ್ದು, ಮೋದಿ ಮೌನ ಮುರಿದು ಪ್ರಕರಣದ ತನಿಖೆ ನಡೆಸಬೇಕು ಹಾಗೂ ಅಮಿತ್ ಮಾಳವೀಯನನ್ನು ಉಚ್ಚಾಟಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    DAKSHINA KANNADA

    ಮೈಸೂರು ದಸರಾದಲ್ಲಿ ತುತ್ತೂರಿ ಬ್ಯಾನ್

    Published

    on

    ಮಂಗಳೂರು/ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದೆ. ಜಂಬೂ ಸವಾರಿ ನೋಡಲು ಜನರು ಕಾಯುತ್ತಿದ್ದಾರೆ. ಈ ಹಿಂದೆ ದಸರಾ ಆನೆಗಳೊಂದಿಗೆ ಫೋಟೋ, ರೀಲ್ಸ್ ಗೆ ಸರ್ಕಾರ ಬ್ರೇಕ್ ಹಾಕಿತ್ತು. ಈಗ ತತ್ತೂರಿ ಬ್ಯಾನ್ ಮಾಡಲಾಗಿದೆ.

    ತುತ್ತೂರಿ ಬ್ಯಾನ್ ಮಾಡುವಂತೆ ಸೂಚಿಸಿ ಮೈಸೂರು ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ. ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ತುತ್ತೂರಿ ಕಿರಿಕಿರಿ ಉಂಟುಮಾಡುವ ಹಿನ್ನೆಲೆ ಈ ಆದೇಶ ಹೊರಡಿಸಲಾಗಿದೆ.

    ಕರ್ನಾಟಕ ಪೊಲೀಸ್ ಕಾಯ್ದೆ 1963, ಕಲಂ 35, 36 ಮತ್ತು 92 (Q) ಅಡಿ ವುವುಜೆಲಾ (ತುತ್ತೂರಿ) ಮಾರಾಟ ಮಾಡುವುದು ಹಾಗೂ ಬಳಸುವುದನ್ನು ನಿಷೇಧಿಸಲಾಗಿದೆ. ಕರ್ನಾಟಕ ಪೊಲೀಸ್ ಕಾಯ್ದೆ 1963 ಸೆಕ್ಷನ್ 92 (Q) ಪ್ರಕಾರ ಹಾಗೂ ಭಾರತೀಯ ನ್ಯಾಯ ಸಂಹಿತೆ-2023 ಸೆಕ್ಷನ್ 270ರಲ್ಲಿ ಸಾರ್ವಜನಿಕ ಉಪದ್ರವವನ್ನು ಅಪರಾಧವೆಂದು ಪರಿಗಣಿಸಿದ್ದು, ಸಾರ್ವಜನಿಕ ಆರೋಗ್ಯ, ಸುರಕ್ಷತೆ, ನೈತಿಕತೆಗೆ ಕಿರಿಕಿರಿ ಉಂಟುಮಾಡುತ್ತದೆ ಎಂದು ಪರಿಗಣಿಸಲಾಗಿದೆ.

    ಇದನ್ನೂ ಓದಿ : ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಗೆ ಬಾಂ*ಬ್ ಬೆದರಿಕೆ ಇ-ಮೇಲ್

    ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನಿನನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಈ ಘಟಕದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

    Continue Reading

    LATEST NEWS

    ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ; 3 ಮೃ*ತ್ಯು, 7 ಗಾ*ಯ

    Published

    on

    ಮಂಗಳೂರು/ಹರಿಯಾಣ: ಹರಿಯಾಣದ ಸೋನಿಪತ್‌ನಲ್ಲಿ ಇಂದು (ಸೆ.28) ಬೆಳಿಗ್ಗೆ ಅಕ್ರಮವಾಗಿ ನಡೆಸುತ್ತಿದ್ದ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋ*ಟವು ಸಂಭವಿಸಿದ್ದು, 3 ಜನರ ಮೃ*ತ್ಯು ಹಾಗೂ 7 ಮಂದಿಗೆ ಗಂ*ಭೀರ ಗಾಯವಾಗಿದೆ.


    ವೇದ್ ಎಂಬುವವರ ಮನೆಯಲ್ಲಿ ಪಟಾಕಿಗಳನ್ನು ತಯಾರಿಸುತ್ತಿದ್ದು, ಮನೆಯಲ್ಲಿ ಸಂಗ್ರಹಿಸಿದ ರಾಸಾಯನಿಕಗಳಿಂದ ಬೆಂ*ಕಿ ಅವ*ಘಡ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
    ಮೂವರ ದೇಹವು ಛಿಧ್ರ*ವಾಗಿದ್ದು, ಗಾ*ಯಾಳುಗಳನ್ನು ಆಸ್ಪತ್ರೆಗೆ ಚಿಕಿ*ತ್ಸೆಗಾಗಿ ಕಳುಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದು, ಪಟಾಕಿ ಕಾರ್ಖಾನೆ ನಡೆಸುತ್ತಿದ್ದ ವೇದ್ ಪರಾರಿಯಾಗಿದ್ದಾನೆ. ಈ ಕುರಿತು ಸೋನಿಪತ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    DAKSHINA KANNADA

    ಮಂಗಳೂರು : ಅರ್ಚನಾ ಕಾಮತ್ ತ್ಯಾಗ ಸಂಸ್ಮರಣಾ ರಕ್ತದಾನ ಶಿಬಿರ

    Published

    on

    ಮಂಗಳೂರು : ಬದುಕಿರುವಾಗಲೇ ದೇಹದ ಅಂಗವೊಂದನ್ನು ಆಪ್ತ ಸಂಬಂಧಿಗೆ ದಾನ ಮಾಡಿ ವಿಧಿಲೀಲೆಗೆ ಬಲಿಯಾದ ಉಪನ್ಯಾಸಕಿ ಅರ್ಚನಾ ಕಾಮತ್ ಅವರ ದಿವ್ಯಾತ್ಮಕ್ಕೆ ನುಡಿ ನಮನ ಕಾರ್ಯಕ್ರಮ ಮತ್ತು ರಕ್ತದಾ ನ ಶಿಬಿರ ಮಂಗಳೂರಿನ ಟಿ.ವಿ.ರಮಣ್ ಪೈ ಸಭಾಂಗಣದಲ್ಲಿ ನಡೆಯಿತು.

    ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ ಈ ಕಾರ್ಯಕ್ರಮವನ್ನು ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು,  ಶಾಸಕ ಕಾಮತ್ ಬಾಲ್ಯದಿಂದಲೇ ಪರಿಚಯರಾಗಿದ್ದ ಅರ್ಚನಾ ಕಾಮತ್ ಅವರು ಶಿಕ್ಷಕಿಯಾಗಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನವರಾಗಿದ್ದರು. ಅವರ ಬದುಕು ನಮಗೆ ಆದರ್ಶವಾಗಿದೆ. ಅವರ ಇಡೀ ಕುಟುಂಬ ನಮಗೆ ಆತ್ಮೀಯವಾಗಿದೆ. ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ರಕ್ತದಾನ ಶಿಬಿರ ಆಯೋಜಿಸಿ ಅರ್ಚನಾ ಅವರ ಆತ್ಮೀಯರನ್ನು ಒಂದುಗೂಡಿಸಿ ಮಾದರಿ ಕಾರ್ಯ ಮಾಡಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ನಮ್ಮನ್ನು ಅಗಲಿದ ಅರ್ಚನಾ ‌ಕಾಮತ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರ ಬಗ್ಗೆ ಮಾತನಾಡುವುದು ತುಂಬಾ ನೋವಿನ ಸಂಗತಿ ಎಂದು ಭಾವುಕರಾದರು.

    ಈ ಸಂದರ್ಭ ರಥಬೀದಿ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ಸಿಎ ಜಗನ್ನಾಥ್ ಕಾಮತ್, ಬೆಸೆಂಟ್ ಶಿಕ್ಷಣ ಸಂಸ್ಥೆಯ ಪ್ರಮುಖರಾದ ಮಣೇಲ್ ಅಣ್ಣಪ್ಪ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಬಿಎನ್ ಐ, ಸಹ್ಯಾದ್ರಿ ಶಿಕ್ಷಣ ಸಂಸ್ಥೆ, ಕೆನರಾ ಹೈಸ್ಕೂಲ್ ಅಸೋಸಿಯೇಷನ್, ಕೆಎಂಸಿ ಆಸ್ಪತ್ರೆ, ಬೆಸೆಂಟ್ ಶಿಕ್ಷಣ ಸಂಸ್ಥೆ, ಯೂತ್ ಆಫ್ ಜಿಎಸ್ ಬಿ, ಸಿಎ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ರಕ್ತದಾನ ಶಿಬಿರದಲ್ಲಿ 98ಕ್ಕೂ ಅಧಿಕ ನಾಗರಿಕರು ರಕ್ತದಾನ ಮಾಡಿದರು.

    ಇದನ್ನೂ ಓದಿ : ಮುದ್ದಾದ ಮಗಳ ಮುಖ ರಿವೀಲ್ ಮಾಡಿದ ಮಿಲನಾ ದಂಪತಿ

    ಅರ್ಚನಾ ಕಾಮತ್ ಅವರ ಪತಿ, ಸಹೋದರಿ ಹಾಗೂ ಸಂಬಂಧಿಕರು ರಕ್ತದಾನ ಮಾಡಿ ನೋವಿನಲ್ಲಿಯೂ ಹೃದಯ ವೈಶಾಲ್ಯತೆ ಮೆರೆದು ಮಾದರಿಯಾದರು.

    Continue Reading

    LATEST NEWS

    Trending