Connect with us

  DAKSHINA KANNADA

  ಐಸಿಸ್‌ ಉಗ್ರನ ಜೊತೆ ಲಿಂಕ್ ಆರೋಪ-ಮಂಗಳೂರಿನ ಫ್ಲ್ಯಾಟ್‌ನಲ್ಲಿ ಪೊಲೀಸರಿಂದ ಮಹಜರು

  Published

  on

  ಮಂಗಳೂರು: ಐಸಿಸ್ ನಂಟು ಆರೋಪದಲ್ಲಿ ಮಂಗಳೂರಿನಲ್ಲಿ ಬಂಧಿತ ಮಾಝ್‌ ಮುನೀರ್ ಅಹಮ್ಮದ್ ವಾಸವಾಗಿದ್ದ ಆರ್ಯ ಸಮಾಜ ರಸ್ತೆಯಲ್ಲಿರುವ ಖಾಸಗಿ ಪ್ಲ್ಯಾಟನ್ನು ಶಿವಮೊಗ್ಗ ಪೊಲೀಸರು ಮಂಗಳವಾರ ಮಹಜರು ನಡೆಸಿದ್ದಾರೆ.


  ಈ ಸಂದರ್ಭ ಅಲ್ಲಿಂದ ಕೆಲವು ದಾಖಲೆ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶಿವಮೊಗ್ಗದಿಂದ ಟೆಂಪೋ ಟ್ರಾವೆಲ್ಲರ್‌ನಲ್ಲಿ ಸಂಜೆ ವೇಳೆಗೆ ಆಗಮಿಸಿದ ಪೊಲೀಸ್ ತಂಡ ನೇರವಾಗಿ ನಗರದ ಆರ್ಯ ಸಮಾಜ ರಸ್ತೆಯಲ್ಲಿರುವ ಖಾಸಗಿ ಅಪಾರ್ಟ್‌ಮೆಂಟ್‌ಗೆ ತೆರಳಿ ಮಹಜರು ನಡೆಸಿದೆ.


  ಮಾಝ್‌ ಮೂಲ ತೀರ್ಥಹಳ್ಳಿಯಾದರೂ ಕಲಿಕಾ ಸಲುವಾಗಿ ಈ ಫ್ಲ್ಯಾಟ್‌ನಲ್ಲಿ ತಂದೆ, ತಾಯಿ ಜೊತೆಗೆ ವಾಸ್ತವ್ಯವಿದ್ದ. ಮಾಝ್‌ ಮುಡಿಪು ಎಂಜಿನಿಯರಿಂಗ್‌ ಕಾಲೇಜಿಗೆ ಇಲ್ಲಿಂದಲೇ ತೆರಳುತ್ತಿದ್ದ . ಈ ಫ್ಲ್ಯಾಟ್‌ ಮಾಝ್‌ನ ತಂದೆಯ ಸಂಬಂಧಿಕರದ್ದು ಎಂದು ಹೇಳಲಾಗಿದೆ.

  ಸುಮಾರು ಎರಡು ತಾಸಿಗೂ ಅಧಿಕ ಕಾಲ ಇಲ್ಲಿ ಮಹಜರು ನಡೆಸಲಾಗಿದೆ. ಮನೆಯ ಒಳಭಾಗವನ್ನು ಪೂರ್ತಿಯಾಗಿ ತಪಾಸಣೆ ನಡೆಸಲಾಗಿದ್ದು, ಈ ವೇಳೆ ಅಮೂಲ್ಯ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  ಇನ್ನು ಐಸೀಸ್‌ ಜೊತೆ ನಂಟು ಹೊಂದಿದ್ದ ಮಾಜ್‌ ಮುನೀರ್‌ ಅಹಮ್ಮದ್‌(22) ಮತ್ತು ಶಿವಮೊಗ್ಗದ ಸಯ್ಯದ್ ಯಾಸೀನ್‌(21)ನನ್ನು ನಿನ್ನೆ ಶಿವಮೊಗ್ಗ ಪೊಲೀಸರ ತಂಡ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದೆ.


  ಇವರನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಒಂದು ವಾರ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಆಗಸ್ಟ್‌ 15ರಂದು ಶಿವಮೊಗ್ಗದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸ್‌ ವಶದಲ್ಲಿರುವ ಶಂಕಿತರ ಹೆಸರೂ ಉಲ್ಲೇಖವಾಗಿತ್ತು.

  ವಶಕ್ಕೆ ಪಡೆದಿರುವ ಆರೋಪಿಗಳನ್ನು ಶಿವಮೊಗ್ಗ ತುಂಗಾ ತೀರ, ಅಡಿಕೆ ತೋಟದಲ್ಲಿ ಪೊಲೀಸರು ಮಹಜರು ನಡೆಸಿ ವಿಚಾರಣೆ ಆರಂಭಿಸಿದ್ದಾರೆ.

  ಇದೇ ವೇಳೆ ಶಿವಮೊಗ್ಗ ಪೊಲೀಸರು ಶಂಕಿತ ಉಗ್ರರ ಆಪ್ತ ಎಂದು ಹೇಳಲಾಗಿರುವ ಮಂಗಳೂರು ಮೂಲದ ಅನ್ಸರ್‌ ಎಂಬ ಯುವಕನನ್ನೂ ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದ್ದು, ಆತನನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

   

  DAKSHINA KANNADA

  ಲವ್‌ ಜಿಹಾದ್‌ ತಡೆಯಲು ಶ್ರೀರಾಮ ಸೇನೆಯಿಂದ ಹೆಲ್ಪ್‌ ಲೈನ್

  Published

  on

  ಮಂಗಳೂರು: ಲವ್‌ ಜಿಹಾದ್‌ ತಡೆಯಲು ಶ್ರೀರಾಮ ಸೇನೆಯ ಕರ್ನಾಟಕ ರಾಜ್ಯ ಘಟಕವು ಸಹಾಯವಾಣಿ ವ್ಯವಸ್ಥೆಯನ್ನು ಇಂದಿನಿಂದ ಕಾರ್ಯಾರಂಭಗೊಳಿಸಿದೆ.  ಮೇ.29ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್‌ ರವರು ಈ ಬಗ್ಗೆ ಮಾಹಿತಿ ನೀಡಿದರು.

  ಹಿಂದೂ ಯುವತಿಯರ ರಕ್ಷಣೆ ಈ ಸಹಾಯವಾಣಿ ವ್ಯವಸ್ಥೆಯ ಮುಖ್ಯ ಉದ್ದೇಶವಾಗಿದೆ. ಕರ್ನಾಟಕದ ಮಂಗಳೂರು, ಬೆಂಗಳೂರು, ಕಲಬುರಗಿ, ಹುಬ್ಬಳ್ಳಿ- ಧಾರವಾಡ, ದಾವಣಗೆರೆ, ಬಾಗಲಕೋಟೆ ಎಂಬ 6 ಕಡೆ ಏಕಕಾಲದಲ್ಲಿ ಹೆಲ್ಪ್ ಲೈನ್‌ ಕಾರ್ಯಾರಂಭಗೊಂಡಿದೆ. ಹುಬ್ಬಳ್ಳಿಯಲ್ಲಿ ಈ ಸಹಾಯವಾಣಿಯ ಕೇದ್ರ ಇರುತ್ತದೆ ಎಂದು ತಿಳಿಸಿದರು.

  Read More..;ಕಾಂಗ್ರೆಸ್ ಅಭ್ಯರ್ಥಿಯ ಕರಪತ್ರದಲ್ಲಿ ಬಿಜೆಪಿ ನಾಯಕನ ಫೋಟೋ! ನಗೆಪಾಟಲಿಗೀಡಾದ ಕಾಂಗ್ರೆಸ್

  ಸಹಾಯವಾಣಿಯು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದ್ದು, ರಾಜ್ಯದ ಯಾವುದೇ ಮೂಲೆಯಿಂದ ಕರೆ ಮಾಡಬಹುದಾಗಿದ್ದು, ಆಧಾರ ಸಹಿತವಾಗಿ ಕರೆ ಮಾಡಬೇಕು. ಮಾಹಿತಿಯನ್ನು ಗೌಪ್ಯವಾಗಿ ಇರಿಸಲಾಗುವುದು. ಲವ್‌ ಜಿಹಾದ್ ಕೆರಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ. ಕರೆಗಳ ಸತ್ಯಾಸತ್ಯತೆ ತಿಳಿದು ಬಳಿಕ ಮುಂದಿನ ಹೆಜ್ಜೆ ಇರಿಸಲಾಗುವುದು. ಕಾನೂನು ಮೀರುವುದಿಲ್ಲ. ಕಾನೂನಿನ ಚೌಕಟ್ಟಿನಲ್ಲಿಯೇ ಹೆಲ್ಪ್ ಲೈನ್‌ ಕಾರ್ಯಾಚರಿಸಲಿದೆ. ಸಹಾಯವಾಣಿ ವ್ಯವಸ್ಥೆಯ ನಿರ್ವಹಣೆಯಲ್ಲಿ ವಕೀಲರ ತಂಡ, ಮಾಜಿ ಪೊಲೀಸ್ ಅಧಿಕಾರಿಗಳು, ಮಹಿಳೆಯರು ಇರುತ್ತಾರೆ. ಕಾನೂನು ಸಲಹೆಯನ್ನು ನೀಡಲಾಗುತ್ತದೆ ಎಂದರು. ಲವ್‌ ಜಿಹಾದ್ ಗೆ ಸಂಬಂಧಿಸಿ ಉತ್ತರ ಭಾರತದಲ್ಲಿ 2022- 23 ರಲ್ಲಿ 153 ಹಿಂದು ಯುವತಿಯರ ಕೊಲೆಯಾಗಿದೆ ಎಂದು ಮಾಹಿತಿ ನೀಡಿದರು.

  ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ಮಂಗಳೂರು/ ಉಡುಪಿ ವಿಭಾಗದ ಅಧ್ಯಕ್ಷ ಮಧುಸೂದನ್‌ ಉರ್ವಸ್ಟೋರ್‌, ಉಡುಪಿ ಜಿಲ್ಲಾಧ್ಯಕ್ಷ ಜಯರಾಮ್‌ ಅಂಬೆಕಲ್ಲು, ಮಂಗಳೂರು ಕಾರ್ಯಾಧ್ಯಕ್ಷ ಅರುಣ್ ಕದ್ರಿ, ಸುದರ್ಶನ್‌ ಪೂಜಾರೆ, ಹೇಮಂತ ಜಾನಕೆರೆ ಅವರು ಉಪಸ್ಥಿತರಿದ್ದರು.

  ಈ ಸಹಾಯವಾಣಿಯ ನಂಬರ್‌ 9090443444 

   

  Continue Reading

  DAKSHINA KANNADA

  ಸತ್ಯವಾದ ದೈವದ ನುಡಿ… ನ್ಯಾಯಾಲಯಕ್ಕೆ ಶರಣಾದ ಕೊಲೆ ಆರೋಪಿ

  Published

  on

  ಉಡುಪಿ: ಅಭಯ ನೀಡಿದ್ದ ದೈವದ ಕಾರ್ಣಿಕದಿಂದ ಕೊಲೆ ಆರೋಪಿ ಪತ್ತೆಯಾಗಿದ್ದು, ತಾನಾಗೆ ಬಂದು ನ್ಯಾಯಾಲಯಕ್ಕೆ ಶರಣಾಗಿರುವ ಅಚ್ಚರಿಯ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಕಳೆದ ವರ್ಷ ಪಾಂಗಾಳದಲ್ಲಿ ಡ್ರ್ಯಾಗರ್ ನಿಂದ ಚುಚ್ಚಿ ಶರತ್‌ ಶೆಟ್ಟಿಯನ್ನು ಕೊಲೆಗೈದ ಆರೋಪಿ ಇದೀಗ ನ್ಯಾಯಾಲಯದ ಮುಂದೆ ಶರಣಾಗಿದ್ದಾನೆ. ಹಿಂದೆ ದೈವ ನೀಡಿದ್ದ ಕಾರ್ಣಿಕದ ನುಡಿ ಸತ್ಯವಾಯಿತಾ ಎಂಬ ಮಾತು ಕೇಳಿ ಬರುತ್ತಿದೆ. ಶರತ್‌ ಶೆಟ್ಟಿ ಹತ್ಯೆ ನಡೆದು ದಿನಗಳು ಕಳೆದರೂ ಕೊಲೆ ಆರೋಪಿಯ ಪತ್ತೆಯಾಗದೇ ಇದ್ದಾಗ ಕುಟುಂಬದವರು ದೈವದ ಮೊರೆ ಹೋಗಿದ್ದರು. ಈ ವೇಳೆ ‘ಕೊಲೆಗಾರ ಎಲ್ಲೇ ಇದ್ದರೂ ತಂದು ನಿಲ್ಲಿಸುತ್ತೇನೆ’ ಎಂದು ದೈವ ಅಭಯ ನೀಡಿತ್ತು. ಇದೀಗ ಆರೋಪಿ ತಾನಾಗಿಯೇ ಬಂದು ನ್ಯಾಯಾಲಯಕ್ಕೆ ಶರಣಾಗಿರುವುದು ಅಚ್ಚರಿಗೆ ಕಾರಣವಾಗಿದೆ.

                                                      ಶರತ್ ಶೆಟ್ಟಿ

  ಘಟನೆ:
  2023 ರ ಫೆಬ್ರವರಿ 5 ರಂದು ಉಡುಪಿಯ ಪಾಂಗಳ ಪಡುವಿನಲ್ಲಿ ಬಬ್ಬು ಸ್ವಾಮಿ ದೈವಸ್ಥಾನದ ನೇಮದಲ್ಲಿ ಭಾಗವಹಿಸಿದ್ದ ಶರತ್ ಶೆಟ್ಟಿ (42) ಅವರು ದುಷ್ಕರ್ಮಿಗಳಿಗೆ ಬಲಿಯಾಗಿದ್ದರು. ಮಾತುಕತೆಗೆ ಎಂದು ಕರೆದಿದ್ದ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದುರ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತಾದ್ರೂ ಆರೋಪಿಗಳು ಯಾರು ಅನ್ನೋದು ಪತ್ತೆಯಾಗಿರಲಿಲ್ಲ. ಇದರಿಂದ ಬೇಸತ್ತ ಕುಟುಂಬಸ್ಥರು ಪಾಂಗಾಳದ ಮನೆಯಲ್ಲಿ ವರ್ತೆ ಪಂಜುರ್ಲಿಗೆ ನೇಮೋತ್ಸವವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ದೈವ ಆರೋಪಿಯನ್ನು ಪಾತಾಳದಲ್ಲಿದ್ದರೂ ಹುಡುಕಿ ಮುಂದೆ ನಿಲ್ಲಿಸುತ್ತೇನೆ ಎಂದು ಅಭಯ ನೀಡಿತ್ತು.

  Read More..; ಪಾಂಗಳ ಶರತ್ ಶೆಟ್ಟಿ ಕೊಲೆ ಪ್ರಕರಣ-ನಾಲ್ವರ ಬಂಧನ: ಕಲಿ ಯೋಗೀಶ ಸೇರಿ ಹಲವರಿಗೆ ಶೋಧ

  ಅದರಂತೆಯೇ ಮೇ.23ರಂದು ಪ್ರಕರಣ ಎ1 ಆರೋಪಿ ಯೋಗೀಶ್ ಆಚಾರ್ಯ ತಾನಾಗಿಯೇ ನ್ಯಾಯಾಲಯದ ಮುಂದೆ ಶರಣಾಗಿದ್ದಾನೆ. ಒಂದು ವರ್ಷ ಮೂರು ತಿಂಗಳು ತಲೆಮರಿಸಿಕೊಂಡಿದ್ದ ಈತ ಉಡುಪಿ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯಕ್ಕೆ ವಕೀಲರ ಮೂಲಕ ಹಾಜರಾಗಿದ್ದಾರೆ.
  ಶರತ್ ಶೆಟ್ಟಿ ಪ್ರಕರಣದ ಪ್ರಮುಖ ಆರೋಪಿ ಯೋಗೀಶ್ ಆಚಾರ್ಯನನ್ನು ಮೇ.30ರ ವರೆಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿತ್ತು. ಪ್ರಕರಣದ ಪ್ರಸ್ತುದ ತನಿಖಾಧಿಕಾರಿ ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ ಆರೋಪಿಯನ್ನು ನ್ಯಾಯಾಂಗ ಬಂಧನದಿಂದ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

  Continue Reading

  DAKSHINA KANNADA

  ರಘುಪತಿ ಭಟ್ ಜೊತೆ ಗುರುತಿಸಿಕೊಂಡ ನಾಲ್ವರಿಗೆ ನೋಟಿಸ್

  Published

  on

  ಉಡುಪಿ : ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿ ಇದ್ದರೂ ಕೂಡಾ ಪಕ್ಷದ ನಿಯಮಗಳನ್ನು ಉಲ್ಲಂಘಿಸಿ ಪದವೀಧರ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಶಾಸಕ ರಘುಪತಿ ಭಟ್‌ ಅವರನ್ನು ಪಕ್ಷ ಅಮಾನತುಗೊಳಿಸಿ ನೋಟಿಸ್ ನೀಡಿದೆ.


  ಇದೀಗ ರಘುಪತಿ ಭಟ್ ಜೊತೆ ಗುರುತಿಸಿಕೊಂಡ ಬಿಜೆಪಿ ನಾಯಕರಿಗೆ ಕೂಡ ನೋಟಿಸ್ ಜಾರಿ ಮಾಡಲಾಗಿದೆ. ನೈರುತ್ಯ ಪದವೀಧರ ಕ್ಷೇತ್ರ ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ ಜೊತೆಗೆ ಗುರುತಿಸಿಕೊಂಡ ನಾಲ್ವರು ಬಿಜೆಪಿ ಪದಾಧಿಕಾರಿಗಳಿಗೆ ಶಿಸ್ತು ಕ್ರಮ ಕೈಗೊಳ್ಳುವ ನೋಟಿಸ್ ನೀಡಲಾಗಿದೆ.

  ಇದನ್ನೂ ಓದಿ : ಎಸ್‌ಐಟಿಯಿಂದ ಪ್ರಜ್ವಲ್‌ ನಿವಾಸ ಪರಿಶೀಲನೆ..! ಹಾಸಿಗೆ, ದಿಂಬು ವಶಕ್ಕೆ ಪಡೆದ ತನಿಖಾ ತಂಡ

  ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹೇಶ್ ಠಾಕೂರ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಉಪೇಂದ್ರ ನಾಯಕ್, ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ರೋಶನ್ ಶೆಟ್ಟಿ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜುನೈದ್ ಅವರು ಪಕ್ಷದ ಜವಾಬ್ದಾರಿ ಹೊಂದಿದ್ದರು, ಆದರೆ ಅವರು ಇದೀಗ ಭಟ್ ಜೊತೆ ಸೇರಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಅಕ್ಷಮ್ಯವಾಗಿದೆ. ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿದ ಕಾರಣಕ್ಕೆ 48 ಗಂಟೆಗಳ ಒಳಗೆ ಸ್ಪಷ್ಟನೆ ನೀಡಿ ಜಿಲ್ಲಾಧ್ಯಕ್ಷರ ಮುಂದೆ ಸ್ಪಷ್ಟೀಕರಣ ನೀಡುವಂತೆ ನೋಟಿಸ್ ನೀಡಲಾಗಿದೆ.

  Continue Reading

  LATEST NEWS

  Trending