Connect with us

    LATEST NEWS

    ರಾಜ್ಯದ ಎಲ್ಲಾ ಟ್ರಕ್ಕಿಂಗ್ ಪಾಯಿಂಟ್ ಬಂದ್..!

    Published

    on

    ರಾಜ್ಯ ಸರ್ಕಾರ ಚಾರಣ ಪ್ರೀಯರಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದ್ದು, ರಾಜ್ಯದ ಎಲ್ಲಾ ಚಾರಣ ತಾಣಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿ ಆದೇಶ ಹೊರಡಿಸಿದೆ.

    ಇತ್ತೀಚಿನ ದಿನಗಳಲ್ಲಿ ವೀಕೆಂಡ್‌ ಸಮಯದಲ್ಲಿ ಚಾರಣ ಪ್ರದೇಶಗಳು ತುಂಬಿ ತುಳುಕುತ್ತಿರುತ್ತದೆ. ಇದರಿಂದ ಪರಿಸರಕ್ಕೂ ಹಾನಿಯಾಗುತ್ತದೆ ಮತ್ತು ಜಲ ಮೂಲಗಳೂ ಕಲುಷಿತಗೊಳ್ಳುತ್ತವೆ ಹೀಗಾಗಿ ಇಂತಹ ಚಾರಣ ಪಥಕ್ಕೆ ಕಡಿವಾಣ ಹಾಕಿ ಎಂದು ಅರಣ್ಯ ಸಚಿವರು ಸೂಚಿಸಿದ್ದಾರೆ. ಜ.26 ರಂದು ಪುಷ್ಪಗಿರಿ ಅರಣ್ಯ ವ್ಯಾಪ್ತಿಯ ಕುಮಾರ ಪರ್ವತಕ್ಕೆ ಒಂದೇ ದಿನ ಸಾವಿರಾರು ಚಾರಣಿಗರು ಆಗಮಿಸಿದ ಕಾರಣ ಅಲ್ಲಿ ಅವ್ಯವಸ್ಥೆ ಉಂಟಾಗಿತ್ತು. ಇದನ್ನು ಪರಿಗಣಿಸಿ ಅರಣ್ಯದೊಳಗೆ ಜನಜಂಗುಳಿ ತಪ್ಪಿಸಲು ಚಾರಣಕ್ಕೆ ಆನ್‌ಲೈನ್‌ ವ್ಯವಸ್ಥೆ ಜಾರಿ ಮಾಡಲು ಸರ್ಕಾರ ತೀರ್ಮಾನಿಸಿದೆ. ಈ ವಿಚಾರವಾಗಿ ಪ್ರಧಾನ ಅರಣ್ಯ ಸಂರಕ್ಷಣಾ ಅಧಿಕಾರಿ ಹಾಗೂ ಅರಣ್ಯ ಕಾರ್ಯಪಡೆ ಮುಖ್ಯಸ್ಥರಿಗೆ ಅರಣ್ಯ ಜೀವಶಾಸ್ತ್ರ ಮತ್ತು ಪರಿಸರ ಸಚಿವರು ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

    ಹೀಗಾಗಿ ಇನ್ನು ಮುಂದೆ ಚಾರಣ ಪ್ರೀಯರು ಸರ್ಕಾರದ ಆನ್‌ಲೈನ್ ವ್ಯವಸ್ಥೆ ಇರುವ ಜಾಗಗಳಿಗೆ ಮುಂಗಡ ಬುಕ್ಕಿಂಗ್ ಮಾಡಿ ಹೋಗಲು ಮಾತ್ರ ಅವಕಾಶ ಇರುತ್ತದೆ. ಚಾರಣಿಗರು ಅರಣ್ಯ ಅಂಚಿನ ಗ್ರಾಮಗಳಲ್ಲಿ ಹಾಗೂ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್, ಬಾಟಲಿ, ತಟ್ಟೆ, ಉಳಿದ ಆಹಾರ ಪದಾರ್ಥಗಳನ್ನು ಎಸೆದು ಹೋಗುತ್ತಿದ್ದಾರೆ . ಇದರಿಂದ ವನ್ಯ ಜೀವಿಗಳಿಗೆ ಅಪಾಯ ಆಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಏಕಾಏಕಿ ಹರಿದು ಬರುವ ಇಷ್ಟೊಂದು ಜನರನ್ನು ನಿಯಂತ್ರಿಸುವುದು ಮತ್ತು ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಬಿಡುವುದು ಅರಣ್ಯ ಇಲಾಖೆಯ ಸಿಬ್ಬಂದಿಗೂ ದೊಡ್ಡ ಸವಾಲಾಗುತ್ತದೆ ಹೀಗಾಗಿ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ಇಲ್ಲದ ಚಾರಣ ತಾಣಗಳು ಅಂದರೆ ಕುಮಾರ ಪರ್ವತ, ಮೂರುಕಣ್ಣಿನಗುಡ್ಡ ಸೇರಿದಂತೆ ಎಲ್ಲ ಚಾರಣ ತಾಣಗಳಲ್ಲಿ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ತರುವವರೆಗೆ ತಾತ್ಕಾಲಿಕವಾಗಿ ಚಾರಣ ನಿರ್ಬಂಧಿಸುವಂತೆ ಈಶ್ವರ ಖಂಡ್ರೆ ಸೂಚಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಮಾಜಿ ಕ್ರಿಕೆಟಿಗನಿಗೆ ಜೀವನ ಪರ್ಯಂತ ಉಚಿತ ಚಿಕಿತ್ಸೆ ಘೋಷಿಸಿದ ಆಸ್ಪತ್ರೆ!

    Published

    on

    ಮಂಗಳೂರು/ ಮುಂಬೈ : ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ತೀವ್ರ ಮೂತ್ರ ಸೋಂಕು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಯಿಂದ ಅವರು ಥಾಣೆಯ ಆಕೃತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಗೂ ಒಳಗಾಗಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ಆಕೃತಿ ಆಸ್ಪತ್ರೆಯ ಡಾ. ವಿವೇಕ್ ತ್ರಿವೇದಿ, ಕಾಂಬ್ಳಿ ಅವರಿಗೆ ಜೀವನ ಪರ್ಯಂತ ಚಿಕಿತ್ಸೆ ಉಚಿತವಾಗಿರುತ್ತದೆ ಎಂದು ಘೋಷಿಸಿದ್ದಾರೆ. ಆಸ್ಪತ್ರೆಯ ಉಸ್ತುವಾರಿ ಎಸ್.ಸಿಂಗ್ ಉಚಿತ ಚಿಕಿತ್ಸೆ ನೀಡುವ ಬಗ್ಗೆ ನಿರ್ಧಾರ ಮಾಡಿದ್ದಾರೆ. ಕಾಂಬ್ಳಿ ಚಿಕಿತ್ಸೆ ಬಗ್ಗೆ ಯಾರೂ ಯೋಚಿಸುವಂತಿಲ್ಲ ಎಂದಿದ್ದಾರೆ.

    ಇದನ್ನೂ ಓದಿ : ಒಂದು ಮೊಟ್ಟೆಯ ಕಥೆ ; 1 ತತ್ತಿಯಿಂದ 2 ಕೋಳಿಮರಿ ಜನನ

    ಮೂತ್ರದ ಸೋಂಕು ಮತ್ತು ಕಾಲು ಸೆಳೆತದಿಂದ ಕಾಂಬ್ಳಿ ಆಸ್ಪತ್ರೆಗೆ ದಾಖಲಾದ ನಂತರ, ಆಸ್ಪತ್ರೆಯ ಸಿಬ್ಬಂದಿ ಹಲವಾರು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ್ದಾರೆ. ಅವರ ಆರೋಗ್ಯವನ್ನು ನಿರಂತರವಾಗಿ ಗಮನಿಸುತ್ತಿದ್ದೇವೆ. ಇಂದು ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಡಾ. ವಿವೇಕ್ ತ್ರಿವೇದಿ ತಿಳಿಸಿದ್ದಾರೆ. ಸದ್ಯ ಕಾಂಬ್ಳಿ ಆರೋಗ್ಯ ಸ್ಥಿರವಾಗಿದೆ. ಆದರೆ, ಕಾಂಬ್ಳಿ ಅವರು ಐಸಿಯುನಲ್ಲಿ ಮೇಲ್ವಿಚಾರಣೆಯಲ್ಲಿರಬೇಕು ಎಂದು ಡಾ. ವಿವೇಕ್ ತ್ರಿವೇದಿ ತಿಳಿಸಿರುವ ಬಗ್ಗೆ ವರದಿಯಾಗಿದೆ.

    Continue Reading

    LATEST NEWS

    ಒಂದು ಮೊಟ್ಟೆಯ ಕಥೆ ; 1 ತತ್ತಿಯಿಂದ 2 ಕೋಳಿಮರಿ ಜನನ

    Published

    on

    ಮಂಗಳೂರು/ತೆಲಂಗಾಣ : ಮಹಿಳೆಯೊಬ್ಬಳು ಒಂದು ಕೋಳಿಯನ್ನು ಪ್ರೀತಿಯಿಂದ ಸಾಕಿದ್ದು, ಇತ್ತೀಚೆಗೆ ಅದರ ಮೊಟ್ಟೆ ಒಡೆದಿದೆ. ಆದರೆ ಅಚ್ಚರಿ ಏನೆಂದರೆ, ನಿನ್ನೆ (ಡಿ23) ಒಂದು ಮೊಟ್ಟೆಯಿಂದ ಎರಡು ಕೋಳಿ ಜನ್ಮ ಪಡೆದ ಘಟನೆ ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ಬೋತ್ ಮಂಡಲದಲ್ಲಿ ನಡೆದಿದೆ. ಇದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದ್ದು, ಏನು ವಿಷಯ ಎಂಬ ಪೂರ್ತಿ ಮಾಹಿತಿ ಇಲ್ಲಿದೆ.

    ಊಹೆಗೂ ಮೀರಿದಂತೆ ಪ್ರಕೃತಿಯಲ್ಲಿ ಹಲವಾರು ರೀತಿಯಲ್ಲಿ ಹೊಸ ವಿಷಯಗಳು ನಡೆಯುತ್ತಿರುತ್ತವೆ. ಅಂತೆಯೇ ಒಂದು ಮೊಟ್ಟೆಯಿಂದ ಎರಡು ಮರಿಗಳು ಬಂದ ಘಟನೆ ತೋಫಿಕ್​​ ಎನ್ನುವ ಮಹಿಳೆಯ ಮನೆಯಲ್ಲಿ ನಡೆದಿದೆ. ಈಕೆಗೆ ಕೋಳಿ ಸಾಕುವುದು ಎಂದರೆ ತುಂಬಾ ಇಷ್ಟ. ಹಾಗಾಗಿ ಹಲವು ಕೋಳಿಯನ್ನು ಸಾಕುತ್ತಿದ್ದರು. ಅವುಗಳಲ್ಲಿ ಒಂದು ಇತ್ತೀಚೆಗೆ ಮೊಟ್ಟೆಯೊಡೆದಿದೆ. ಆ ಮೊಟ್ಟೆಯಿಂದ ಒಂದಲ್ಲ, ಎರಡು ಮರಿಗಳು ಹೊರಬಂದಿರುವುದು ಗಮನಕ್ಕೆ ಬಂದಿದೆ.

    ಇದೀಗ ಆ ಅವಳಿ ಮರಿಗಳನ್ನು ನೋಡಲು ಜನರು ಬರುತ್ತಿದ್ದಾರೆ. ‘ಇಂತಹ ಘಟನೆಯನ್ನು ನಾವು ಕೇಳಿಲ್ಲ ಅಥವಾ ನೋಡಿಲ್ಲ’ ಎಂದು ಬಂದವರು ಹೇಳುತ್ತಿದ್ದಾರೆ. ಈ ಫೋಟೋಗಳನ್ನು ವಾಟ್ಸಾಪ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಚಿತ್ರ ಕುರಿತು ಸ್ಥಳೀಯ ಪಶುವೈದ್ಯಾಧಿಕಾರಿ ಸುಶೀಲ್ ಕುಮಾರ್ ಮಾತನಾಡಿ, ‘ಆನುವಂಶಿಕ ದೋಷದಿಂದ ಒಂದು ಮೊಟ್ಟೆಯಿಂದ 2 ಶಿಶುಗಳು ಜನಿಸುವ ಸಾಧ್ಯತೆ ಇದೆ. ಇಂತಹವುಗಳು ಬಹಳ ಅಪರೂಪ’ ಎಂದಿದ್ದಾರೆ.

    Continue Reading

    LATEST NEWS

    ಹೊಸ ವರ್ಷಾಚರಣೆಗೆ ತಡರಾತ್ರಿವರೆಗೆ ಪಬ್, ಬಾರ್, ಹೊಟೇಲ್ ತೆರೆಯಲು ಅವಕಾಶ ನೀಡುವಂತೆ ಮನವಿ

    Published

    on

    ಬೆಂಗಳೂರು: ಹೊಸ ವರ್ಷಾಚರಣೆಗೆ ದಿನಗಣನೆ ಆರಂಭವಾಗಿದ್ದು, ಪಬ್, ಬಾರ್, ರೆಸ್ಟೋರೆಂಟ್ಗಳನ್ನು ತಡರಾತ್ರಿ 2 ಗಂಟೆವರೆಗೆ ತೆರೆಯುವಂತೆ ಮಾಲೀಕರು ಮನವಿ ಮಾಡಿದ್ದಾರೆ.

    ವರ್ಷಾಚರಣೆ ಹಿನ್ನಲೆಯಲ್ಲಿ ಸಿಲಿಕಾನ್ ಸಿಟಿ ಈಗಾಗಲೇ ಭರದ ಸಿದ್ದತೆ ನಡೆಯುತ್ತಿದ್ದು, ಪಬ್, ಬಾರ್‌ಗಳಲ್ಲಿ ಮುಂಗಡ ಬುಕ್ಕಿಂಗ್ ಮಾಡಿಕೊಂಡಿದ್ದು, ಡಿ.31ರ ರಾತ್ರಿ ವ್ಯಾಪಾರ ವಹಿವಾಟು ಹೆಚ್ಚಾಗಲಿದೆ.

    ಅಂದಾಜು 1500 ಕೋಟಿಗೂ ಅಧಿಕ ವ್ಯಾಪಾರವಾಗುವ ಸಾಧ್ಯತೆ ಇದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ. ಪ್ರಸ್ತುತ 12 ಗಂಟೆವರೆಗೆ ಮಾತ್ರ ಪಬ್ ಬಾರ್‌ ಗಳನ್ನು ತೆರೆಯಲು ಅವಕಾಶ ನೀಡಿದ್ದು, ಹೊಸ ವರ್ಷಾಚರಣೆಯ ಹಿಂದಿನ ದಿನ 31ರ ರಾತ್ರಿ 2 ಗಂಟೆಯವರೆಗೂ ತೆರೆಯಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

    ಸಾಕಷ್ಟು ಸಿದ್ದತೆಗಳನ್ನು ಮಾಡಿಕೊಂಡಿದ್ದು, ಒಂದು ವೇಳೆ ಸಮಯ ನೀಡದಿದ್ದರೆ ವ್ಯಾಪಾರಕ್ಕೆ ತೊಂದರೆಯಾಗಲಿದೆ. ಈ ನಿಟ್ಟಿನಲ್ಲಿ ಕಾಲಾವಕಾಶವನ್ನು ನೀಡಬೇಕೆಂದು ಈ ಮೂಲಕ ಮನವಿ ಮಾಡಿದ್ದಾರೆ.

    Continue Reading

    LATEST NEWS

    Trending