Connect with us

    FILM

    ಎಲ್ಲರ ಕಣ್ಣು ಜಾಹ್ನವಿ ಕೊರಳ ಮೇಲೆ…ಅಂತದ್ದೇನಿದೆ ಆ ನೆಕ್ಲೇಸ್ ನಲ್ಲಿ?

    Published

    on

    ಸಿನಿಮಾ ಲೋಕದಲ್ಲಿ ಲವ್ ಬರ್ಡ್ಸ್ ಸಾಮಾನ್ಯವಾಗಿವೆ. ಪ್ರೇಮಿಸಿ ಮದುವೆಯಾದವರೂ ಇದ್ದಾರೆ. ಡೇಟಿಂಗ್ ಬಳಿಕ ಬ್ರೇಕ್ ಅಪ್ ಆದವರೂ ಇದ್ದಾರೆ. ಬಾಲಿವುಡ್ ಲವ್ ಬರ್ಡ್ಸ್ ಗಳಲ್ಲಿ ಜಾಹ್ನವಿ ಕಪೂರ್ ಮತ್ತು ಶಿಖರ್ ಜೋಡಿಯೂ ಸದ್ಇಯ ಸುದ್ದಿಯಲ್ಲಿದೆ. ಇವರಿಬ್ಬರು ಅಲ್ಲಲ್ಲಿ ಜೊತೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ.


    ಇದೀಗ ಜಾಹ್ನವಿಗೆ ಶಿಖರ್ ನೀಡಿರುವ ಒಲವಿನ ಉಡುಗೊರೆಯ ಫೋಟೋ ವೈರಲ್ ಆಗಿದೆ, ಹೌದು, ಜಾಹ್ನವಿ ‘ಮೈದಾನ್’ ಚಿತ್ರದ ಪ್ರಿಮಿಯರ್ ನಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದರು. ಆಗ ಅವರ ಕೊರಳಲ್ಲಿದ್ದ ನೆಕ್ಲೇಸ್ ಕಣ್ಣಿಗೆ ಬಿದ್ದಿದೆ. ಈ ನೆಕ್ಲೇಸ್ ತುಂಬಾ ಸ್ಪೇಷನ್ ಅನ್ನೋದು ನೋಡಿದ ಕೂಡಲೇ ಗೊತ್ತಾಗಿದೆ.

    ಇದನ್ನೂ ಓದಿ : ಟೆಸ್ಟ್‌ ಕ್ರಿಕೆಟ್‌ ಗೆ ಧೋನಿ ವಿದಾಯ ಹೇಳಿದ್ಯಾಕೆ…? ಸಿಕ್ರೆಟ್‌ ರಿವೀಲ್ ಮಾಡಿದ ಪತ್ನಿ..!

    ಯಾಕೆ ಸ್ಪೆಷಲ್?


    ಜಾಹ್ನವಿ ಕೊರಳಲ್ಲಿ ಈ ನೆಕ್ಲೇಸ್ ಗಮನ ಸೆಳೆದಿದೆ. ಯಾಕೆಂದರೆ, ಈ ನೆಕ್ಲೇಸ್ ನಲ್ಲಿ ‘ಶಿಖು’ ಎಂದು ಬರೆಯಲಾಗಿದೆ. ಹಾಗಾಗಿ ಈ ನೆಕ್ಲೇಸ್ ಜಾಹ್ನವಿಗೆ ಸ್ಪೆಷಲ್ ಅನ್ನೋದು ಕನ್ಫರ್ಮ್ ಆಗಿದೆ. ಈ ಹಿಂದೆ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಅವರು ಒಂದು ವಿಚಾರ ಬಹಿರಂಗಪಡಿಸಿದ್ದರು. ಅದು, ಅಪ್ಪ, ತಂಗಿ ಖುಷಿ ಮತ್ತು ಶಿಖುಗೆ ಸ್ಪೀಡ್ ಡಯಲ್ ನಲ್ಲಿ ಕರೆ ಮಾಡುತ್ತೇನೆ ಎಂಬುದಾಗಿ.

    ಶಿಖರ್  ಅವರ ಹಾಗೂ ತಮ್ಮ ನಡುವಿನ ಸಂಬಂಧವನ್ನು ಅಧಿಕೃತವಾಗಿ ಘೋಷಣೆ ಮಾಡದಿದ್ದರೂ ಜಾಹ್ನವಿ ಇಂತಹ ವಿಚಾರಗಳಿಂದಲೇ ಸುಳಿವು ನೀಡುತ್ತಿರುತ್ತಾರೆ. ಇದೀಗ ನೆಕ್ಲೇಸ್ ಸರದಿ. ಇದೀಗ ಎಲ್ಲರ ಕಣ್ಣು ಜಾಹ್ನವಿ ನೆಕ್ಲೇಸ್ ಮೇಲಿದ್ದು, ಯಾವಾಗ ಈ ಜೋಡಿ ವಿವಾಹ ಬಂಧನಕ್ಕೆ ಒಳಗಾಗುತ್ತೆ ಅನ್ನೋದನ್ನು ಅಭಿಮಾನಿಗಳು ಕಾಯುತ್ತಿದ್ದಾರೆ.

     

     

     

    2 Comments

    Leave a Reply

    Your email address will not be published. Required fields are marked *

    FILM

    ಐಶ್ವರ್ಯಾ ರೈ ಜೊತೆಗೂಡಿ ಬಿಗ್‌ ಬಿ ಫ್ಯಾಮಿಲಿ ಮತದಾನ…!

    Published

    on

    ಮಂಗಳೂರು ( ಮಹಾರಾಷ್ಟ್ರ ) : ಚುನಾವಣೆಯಲ್ಲಿ ಮತ ಚಲಾಯಿಸಿರುವ ಐಶ್ವರ್ಯಾ ರೈ ಬಚ್ಚನ್ ಕುಟುಂಬದ ಜೊತೆ ಮತಕೇಂದ್ರಕ್ಕೆ ಆಗಮಿಸಿದ್ದಾರೆ. ಅಮಿತಾಬಚ್ಚನ್‌, ಜಯಾಬಚ್ಚನ್ ಜೊತೆಯಲ್ಲಿ ಒಂದೇ ಕಾರಿನಲ್ಲಿ ಮತಗಟ್ಟೆಗೆ ಆಗಮಿಸಿದ್ದಾರೆ. ಈ ಮೂಲಕ ಹಲವು ಸಮಯದಿಂದ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಶೇಕ್‌ ಬಚ್ಚನ್‌ ದಾಂಪತ್ಯ ವಿಚಾರವಾಗಿ ಇದ್ದ ಗಾಸಿಪ್‌ಗೆ ತೆರೆ ಎಳೆದಿದ್ದಾರೆ.


    ಐದನೇ ಹಂತದ ಮತದಾನದಲ್ಲಿ ಅನೇಖ ಸೆಲಬ್ರಿಟಿಗಳು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಮತದಾನವಾಗಿದ್ದು, ಬಾಲಿವುಡ್ ನಟ ನಟಿಯರು ಮತದನಾ ಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಿದ್ದಾರೆ. ನಟ ಅಕ್ಷಯ್ ಕುಮಾರ್ ಬೆಳಗ್ಗೆ 7 ಗಂಟೆಗೆ ಮತದಾನ ಕೇಂದ್ರಕ್ಕೆ ಹಾಜರಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಭಾರತೀಯ ಪೌರತ್ವ ಪಡೆದ ನಂತರ ಅಕ್ಷಯ್ ಕುಮಾರ್ ಮೊದಲ ಬಾರಿಗೆ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.

    ಪಿಂಕ್ ಡ್ರೆಸ್ನಲ್ಲಿ ಆಗಮಿಸಿದ ಜಾನ್ವಿ ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ತೆರಳಿ ಮತಯಾಚನೆ ಮಾಡಿದರು. ಮತದಾನ ಕೇಂದ್ರದಲ್ಲಿ ಜಾನ್ವಿ ಕಪೂರ್ ಅವರನ್ನು ನೋಡಲು ಅಭಿಮಾನಿಗಳು ಜಮಾಯಿಸಿದ್ದರು. ವಿಶೇಷ ಮಹಿಳಾ ಪೊಲೀಸರು ನಟಿ ಜಾನ್ವಿಗೆ ಭದ್ರತೆ ಒದಗಿಸಿದರು.

    ಅದೇ ರೀತಿ ಶಾರುಖ್ ಖಾನ್ ಅವರು ತಮ್ಮ ಕುಟುಂಬದೊಂದಿಗೆ ಮತದಾನ ಮಾಡುತ್ತಿರುವುದು ಕಂಡುಬಂದಿದೆ. ಹೀಗೆ ಹೃತಿಕ್ ರೋಷನ್, ರಾಕೇಶ್ ರೋಷನ್, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮತದಾನ ಮಾಡಿದರು. ಇನ್ನು ವರುಣ್ ಧವನ್ ಜೊತೆಗೆ ತಂದೆ ಡೇವಿಡ್ ಧವನ್, ಧರ್ಮೇಂದ್ರ, ಆಶಾ ಭೋಂಸ್ಲೆ ಮತ್ತು ಇತರರು ಬೂತ್‌ನಲ್ಲಿ ಮತದಾನ ಮಾಡಿದರು.

    Continue Reading

    FILM

    ‘ಅಣ್ಣಾವ್ರ’ ಹಾಡು ಹಾಡಿದ ‘ಮೋಹನ್ ಲಾಲ್’; ವೀಡಿಯೋ ವೈರಲ್

    Published

    on

    ಬೆಂಗಳೂರು: ಮಲಯಾಳಂ ಸೂಪರ್ ಸ್ಟಾರ್ ನಟ ಮೋಹನ್‌ ಲಾಲ್ ರವರು ಡಾ. ರಾಜ್‌ಕುಮಾರ್ ಜೊತೆ ಅವಿನಾಭಾವ ಸಂಬಂಧವಿತ್ತು. ಇಬ್ಬರ ನಡುವೆ ಒಂದೊಳ್ಳೆ ಬಾಂಧವ್ಯವಿತ್ತು. ಇದಕ್ಕೆ ಸಾಕ್ಷಿ ಅನ್ನುವಂತೆ ಹೊಸ ವೀಡಿಯೋ ಒಂದು ವೈರಲ್ ಆಗಿದೆ. ಈ ವೀಡಿಯೋದಲ್ಲಿ ರಾಜ್‌ಕುಮಾರ್‌ ನಟನೆಯ ‘ಎರಡು ಕನಸು’ ಸಿನೆಮಾದ ‘ಎಂದೆಂದೂ ನಿನ್ನನು ಮರೆತು ನಾನಿರಲಾರೆ..’ ಎಂಬ ಹಾಡನ್ನು ಹಾಡಲು ಪ್ರಯತ್ನಿಸಿದ್ದಾರೆ. ಇನ್ನು ಡಾ. ರಾಜ್‌ಕುಮಾರ್ ಅವರಿಗೆ ಟಾಲಿವುಡ್, ಬಾಲಿವುಡ್ ಸೇರಿದಂತೆ ಎಲ್ಲಾ ಕಡೆ ಅಭಿಮಾನಿಗಳು ಇರುವುದು ವಿಶೇಷ.

    mohan lal

    Read More..; ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರಿಂದ ದಾಳಿ; ಡ್ರ*ಗ್ಸ್ ಪತ್ತೆ! ಪಾರ್ಟಿಯಲ್ಲಿದ್ದರು ನಟ – ನಟಿಯರು,.!

    ಇನ್ನು ಮೋಹನ್‌ಲಾಲ್ ಕನ್ನಡ ಸಿನೆಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ. ಕನ್ನಡ ಚಿತ್ರರಂಗದಲ್ಲೂ ಹಲವಾರು ಅಭಿಮಾನಿಗಳನ್ನು ಹೊಂದಿದ್ದಾರೆ. ಲಾಲೇಟ ಎಂದೇ ಎಲ್ಲರಿಗೂ ಪ್ರೀತಿಪಾತ್ರರಾಗಿರುವ ಮೋಹನ್‌ಲಾಲ್‌ರವರ ಮೇ.21ರಂದು ಹುಟ್ಟುಹಬ್ಬ.

    Continue Reading

    FILM

    ಮತ್ತೆ ಕಿರುತೆರೆಗೆ ಲಗ್ಗೆ ಇಟ್ಟ ನಟ ರೂಪೇಶ್ ಶೆಟ್ಟಿ; ‘Huu ಅಂತೀಯಾ…Uhuu ಅಂತೀಯಾ’ ಅಂದ್ರು ರಾಕ್ ಸ್ಟಾರ್!

    Published

    on

    ಮಂಗಳೂರು : ರೂಪೇಶ್ ಶೆಟ್ಟಿ ಕೋಸ್ಟಲ್ ವುಡ್ ನಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಕಲಾವಿದ. ಕನ್ನಡ ಸಿನಿಮಾಗಳಲ್ಲೂ ಮಿಂಚಿದ್ದಾರೆ. ಈಗಾಗಲೇ ಕಿರುತೆರೆಗೆ ಲಗ್ಗೆ ಇಟ್ಟಿರುವ ಅವರು ಬಿಗ್ ಬಾಸ್ ಸೀಸನ್ 9 ರ ವಿಜೇತರಾಗಿ ಹೊರಹೊಮ್ಮಿದ್ದರು. ಇದೀಗ ಮತ್ತೆ ಕಿರುತೆರೆಗೆ ಲಗ್ಗೆ ಇಡುತ್ತಿದ್ದಾರೆ.


    ನಿರೂಪಕನಾಗಿ ಎಂಟ್ರಿ:


    ಸಾಲು ಸಾಲು ಸಿನಿಮಾಗಳಲ್ಲಿ ಬಿಝಿಯಾಗಿರುವ ರೂಪೇಶ್ ಶೆಟ್ಟಿ ಕಿರುತೆರೆಗೆ ಮತ್ತೆ ಲಗ್ಗೆ ಇಡುತ್ತಿದ್ದಾರೆ. ಅದು ಹೊಸ ರಿಯಾಲಿಟಿ ಶೋನಲ್ಲಿ. ಹಾಗಂತ ಅವರು ಸ್ಪರ್ಧಿಯಾಗಿ ಕಾಣಿಸಿಕೊಳ್ಳುತ್ತಿಲ್ಲ. ಬದಲಿಗೆ ನಿರೂಪಕರಾಗಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಅದುವೇ ‘Huu ಅಂತೀಯಾ…Uhuu ಅಂತೀಯಾ’. ಇದೊಂದು ವಿಭಿನ್ನ ಬಗೆಯ ವಿನೂತನ ಗೇಮ್ ಶೋ ಆಗಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ವೀಕೆಂಡ್ ನಲ್ಲಿ ಈ ಶೋ ಪ್ರಸಾರವಾಗಲಿದೆ.
    ರೂಪೇಶ್ ಶೆಟ್ಟಿ ಹಾಗೂ ಅರುಣ್ ಇಬ್ಬರು ಜೊತೆಯಾಗಿ ಈ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.

    ಹೇಗಿರಲಿದೆ ಶೋ:

    ಈ ಶೋನಲ್ಲಿ ಒಟ್ಟು ಮೂರು ಸುತ್ತುಗಳು ಇರುತ್ತವೆ. ಈ ಶೋನಲ್ಲಿ ಭಾಗವಹಿಸುವ ಸೆಲೆಬ್ರಿಟಿಗಳಿಗೆ ಬರೋಬ್ಬರಿ 6 ಲಕ್ಷ ರೂಪಾಯಿ ಗೆಲ್ಲುವ ಅವಕಾಶ ಇರುತ್ತದೆ.
    ಮೊದಲ ಸುತ್ತಿನಲ್ಲಿ ಸ್ಪರ್ಧಿಗಳು ಒಬ್ಬರ ನಂತರ ಒಬ್ಬರು ಆಟ ಆಡುತ್ತಾರೆ. ನಿರೂಪಕರು ನೀಡಿದ ಸತ್ಯ ಮತ್ತು ಸುಳ್ಳು ಸಂಗತಿಗಳನ್ನು ಸ್ಪರ್ಧಿಗಳು ಸರಿಯಾಗಿ ಆರಿಸಿದರೆ 1 ಲಕ್ಷ ರೂಪಾಯಿ ಗೆಲ್ಲಬಹುದು. ಎರಡನೇ ಸುತ್ತಿನಲ್ಲಿ ಸ್ಪರ್ಧಿಗಳಿಗೆ ಊಟದ ಸವಾಲು ಎದುರಾಗುತ್ತೆ. ಇದರಲ್ಲಿ ಗೆದ್ದವರಿಗೆ 2 ಲಕ್ಷ ರೂಪಾಯಿ ಸಿಗಲಿದೆ. ಹಾಗೇ ಕೊನೆಯ ಸುತ್ತಿನಲ್ಲಿ ಕೇವಲ ಇಬ್ಬರು ಸ್ಪರ್ಧಿಗಳು ಆಟ ಆಡುತ್ತಾರೆ. ಇಲ್ಲಿ ಗೆದ್ದವರಿಗೆ 3 ಲಕ್ಷ ರೂಪಾಯಿ ಸಿಗುತ್ತೆ.

    ಇದನ್ನೂ ಓದಿ : ದರ್ಶನ್ ‘ಡೆವಿಲ್’ಗೆ ಹೀರೋಯಿನ್ ಫಿಕ್ಸ್; ಡಿಬಾಸ್ ಗೆ ಜೊತೆಯಾದ್ರು ಕರಾವಳಿ ಬೆಡಗಿ!

    ಪ್ರಾರಂಭ ಯಾವಾಗ ?

    ‘Huu ಅಂತೀಯಾ…Uhuu ಅಂತೀಯಾ’ ಮೇ 19 ರಿಂದ ಪ್ರತಿ ಭಾನುವಾರ ರಾತ್ರಿ 7 ಗಂಟೆಗೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ. ಮೊದಲ ಸಂಚಿಕೆಯಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಅಮೃತಾ ಅಯ್ಯಂಗಾರ್ ಮೂವರು ಸೆಲೆಬ್ರೆಟಿಗಳು ಭಾಗವಹಿಸುತ್ತಿದ್ದಾರೆ.

    Continue Reading

    LATEST NEWS

    Trending