DAKSHINA KANNADA
ಮಂಗಳೂರಿಗೆ ಹೆಮ್ಮೆಯ ಗರಿ; ಎಜೆ ಗ್ರ್ಯಾಂಡ್ ಎಲೈಟ್ ಹೊಟೇಲ್ ಲೋಕಾರ್ಪಣೆ
ಮಂಗಳೂರು : ಆರೋಗ್ಯ, ಸಾಮಾಜಿಕ, ಶೈಕ್ಷಣಿಕ ,ಉದ್ಯಮ ಹೀಗೇ ಎಲ್ಲಾ ಕ್ಷೇತ್ರಗಳಲ್ಲೂ ಮಂಗಳೂರಿನ ಜನರಿಗೆ ತನ್ನ ಕೊಡುಗೆ ನೀಡಿರುವ ಎ.ಜೆ.ಗ್ರೂಪ್ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ನಗರದ ಹೊರವಲಯದಲ್ಲಿ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಎಜೆ ಗ್ರಾಂಡ್ ಎಲೈಟ್ ಅನ್ನೋ ಸ್ಟಾರ್ ಹೊಟೇಲ್ ಶುಕ್ರವಾರ ಲೋಕಾರ್ಪಣೆಗೊಂಡಿದೆ. ಹಲವು ಗಣ್ಯರ ಸಮಕ್ಷಮದಲ್ಲಿ ಎಜೆ ಗ್ರೂಪ್ನ ಎ.ಜೆ.ಶೆಟ್ಟಿ ಅವರು ಹೊಟೇಲ್ ಲೋಕಾರ್ಪಣೆ ಮಾಡಿದ್ದಾರೆ.
ಹೊಟೇಲ್ ಉದ್ಯಮದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಸರು ಇಡೀ ಜಗತ್ತಿನಲ್ಲೇ ಹೆಸರುವಾಸಿಯಾಗಿದೆ. ಸಾವಿರಾರು ಜನರಿಗೆ ಉದ್ಯೋಗ ಸೃಷ್ಟಿ ಮಾಡಿರೋ ಈ ಹೊಟೇಲ್ ಉದ್ಯಮದಲ್ಲಿ ಮಂಗಳೂರಿನ ಎ.ಜೆ.ಶೆಟ್ಟಿ ಗ್ರೂಪ್ ಕೊಡುಗೆ ಕೂಡಾ ಸಾಕಷ್ಟು ಇದೆ. ಹಲವಾರು ವರ್ಷಗಳಿಂದ ಹೊಟೇಲ್ ಉದ್ಯಮದ ಮೂಲಕ ಸೇವೆಯ ಜೊತೆಗೆ ಹಲವಾರು ಉದ್ಯೋಗ ಸೃಷ್ಟಿ ಮಾಡಿರುವ ಎ.ಜೆ.ಶೆಟ್ಟಿ ಗ್ರೂಪ್ನ ಮತ್ತೊಂದು ಹೊಟೇಲ್ ಎಜೆ ಗ್ರ್ಯಾಂಡ್ ಎಲೈಟ್ ಇದೀಗ ಲೋಕಾರ್ಪಣೆಗೊಂಡಿದೆ. ಮಂಗಳೂರು ಹೊರವಲಯದ ರಾಷ್ಟ್ರೀಯ ಹೆದ್ದಾರಿ 66 ರ ಎಕ್ಕೂರಿನಲ್ಲಿ ಹೊಟೇಲ್ ಲೋಕಾರ್ಪಣೆಗೊಂಡಿದೆ.
ಐಶಾರಾಮಿ ರೂಮ್ಸ್…ಬಾಂಕ್ವೆಲ್ ಹಾಲ್…
ಎಜೆ ಗ್ರ್ಯಾಂಡ್ ಎಲೈಟ್ ಕಾಲಿಟ್ಟಾಗಲೇ ಗ್ರಾಹಕರಿಗೆ ಸೊಗಸಾದ ಅನುಭವ ಸಿಗಲಿದೆ. ಸುಂದರವದ ಕಟ್ಟಡ ವಿನ್ಯಾಸದಿಂದ ಕಂಗೊಳಿಸುತ್ತಿರುವ ಎಜೆ ಗ್ರ್ಯಾಂಡ್ ಎಲೈಟ್ ಒಂದು ಸುಂದರ ಅನುಭೂತಿ. ಇಲ್ಲಿ ಗ್ರಾಹಕರ ಅವಶ್ಯಕತೆಗೆ ತಕ್ಕಂತೆ ಮೂರು ವಿಧದ 26 ಐಶಾರಾಮಿ ರೂಮ್ಗಳನ್ನು ಎಜೆ ಗ್ರ್ಯಾಂಡ್ ಎಲೈಟ್ ಹೊಂದಿದೆ.
ಇನ್ನು ಕನಿಷ್ಟ 20 ಜನರಿಂದ ಆರಂಭಗೊಂಡು 1000 ಜನರಿಗೆ ಸಭೆ ಸಮಾರಂಭ ನಡೆಸಬಹುದಾದ ಬಾಂಕ್ವೆಟ್ ಹಾಲ್ ಇಲ್ಲಿನ ವೈಶಿಷ್ಟ್ಯ. ಓಪನ್ ಸ್ಪೇಸ್ನಲ್ಲೂ ಸಭೆ ಸಮಾರಂಭ ನಡೆಸಲು ಬೇಕಾದ ಸ್ಥಳಾವಕಾಶನೂ ಇಲ್ಲಿದ್ದು, ಸುಮಾರು 4 ಎಕ್ರೆ ಜಾಗದಲ್ಲಿ ಈ ಐಶಾರಾಮಿ ಹೊಟೇಲ್ ತಲೆ ಎತ್ತಿದೆ. ಸ್ವಿಮ್ಮಿಂಗ್ ಫೂಲ್ ಸಹಿತವಾಗಿ ಇರುವ ಈ ಎಜೆ ಗ್ರ್ಯಾಂಡ್ ಎಲೈಟ್ ಸದ್ಯ ಜಿಲ್ಲೆಯಲ್ಲೇ ಪ್ರತಿಷ್ಠಿತ ಹೊಟೇಲ್ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಂತಿದೆ.
ಪರಿಪೂರ್ಣ ವ್ಯವಸ್ಥೆ :
ಎಜೆ ಗ್ರ್ಯಾಂಡ್ ಎಲೈಟ್ ಹೆಸರೇ ಹೇಳುವಂತೆ ಗ್ರ್ಯಾಂಡ್ ಆಗಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಇಲ್ಲಿ ಪರಿಪೂರ್ಣ ವ್ಯವಸ್ಥೆ ಇದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೇ ಇರುವ ಈ ಹೊಟೇಲ್ ನಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಹೊಂದಿದೆ. ಮಧುವನ್ ಪ್ಯೂರ್ ವೆಜ್ ರೆಸ್ಟೋರೆಂಟ್, ಲೀ ಗ್ರ್ಯಾಂಡೆ ಮಲ್ಟಿ ಕ್ಯುಝಿನ್ ರೆಸ್ಟೋರೆಂಟ್, ಐರಿಶ್ ಬಾರ್, ಪ್ರೀಮಿಯಮ್ ಸೂಟ್ ರೂಮ್ಸ್, ಡಿಲಕ್ಸ್ ಮಾಸ್ಟರ್ ರೂಮ್ಸ್, ಎಕ್ಸ್ ಕ್ಯೂಟೀವ್ ಮಾಸ್ಟರ್ ರೂಮ್ಸ್, ಡಿಲಕ್ಸ್ ಟ್ವಿನ್ ರೂಮ್ಸ್, ಹೆಲ್ತ್ ಕ್ಲಬ್, ಕಾನ್ಫರೆನ್ಸ್ ರೂಮ್, ಲೆ ಗ್ರ್ಯಾಂಡ್ ಕಿಚನ್ ಮಲ್ಟಿ ಕ್ಯುಝಿನ್ ರೆಸ್ಟೋರೆಂಟ್ ಸೌಲಭ್ಯವಿದ್ದು, ಎಲ್ಲಾ ಗ್ರಾಹಕರಿಗೆ ಬೇಕಾದ ಫುಡ್ ಸೌಲಭ್ಯವನ್ನೂ ಹೊಂದಿದೆ.
ಇನ್ನು ರೂಮ್ ಪಡೆದವರಿಗೆ ಮುಂಜಾನೆ ಸಂಜೆ ವರ್ಕೌಟ್ ಮಾಡಲು ಜಿಮ್ ಸೌಲಭ್ಯ ಕೂಡಾ ಇಲ್ಲಿದ್ದು, ಇದೊಂದು ಪರಿಪೂರ್ಣ ವ್ಯವಸ್ಥೆಯನ್ನು ಹೊಂದಿರುವ ಹಾಗೂ ರೂಮ್ ಪಡೆದವರಿಗೂ ಆತ್ಮೀಯ ಆತಿಥ್ಯ ನೀಡಲು ಸಕಲ ಸಿದ್ಧತೆಯೊಂದಿಗೆ ಇರುವ ನಗರದ ಏಕೈಕ ಹೊಟೇಲ್ ಆಗಿದೆ.
ಅತಿಥಿ ಸತ್ಕಾರದ ಜೊತೆಗೆ ನಗರದಲ್ಲಿನ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲು ಈ ಹೊಟೇಲ್ ಬಹಳಷ್ಟು ಸಹಕಾರಿಯಾಗಲಿದೆ.
ಎಜೆ ಶೆಟ್ಟಿ ಅವರ ಈ ಸಾಧನೆಗೆ ಹಲವು ಗಣ್ಯರು ಶುಭ ಹಾರೈಸಿದ್ದು, ಉದ್ಘಾಟನೆಯಲ್ಲಿ ಭಾಗವಹಿಸಿದ್ದಾರೆ. ಬೆಳೆಯುತ್ತಿರುವ ಮಂಗಳೂರು ನಗರದಲ್ಲಿದ್ದ ಹೊಟೇಲ್ ಕೊರತೆಯನ್ನು ಎಜೆ ಗ್ರ್ಯಾಂಡ್ ಎಲೈಟ್ ಪೂರ್ಣಗೊಳಿಸಿದ್ದು. ಎಜೆ ಶೆಟ್ಟಿ ಗ್ರೂಪ್ ನಿಂದ ಇನ್ನಷ್ಟು ಹೊಸ ಕೊಡುಗೆಗಳು ನಗರಕ್ಕೆ ಸಿಗುವ ಮೂಲಕ ಉದ್ಯಮದ ಜೊತೆಗೆ ಜನರಿಗೆ ಉದ್ಯೋಗದ ಅವಕಾಶವೂ ಸಿಗಲಿ ಅಂತ ಶುಭ ಹಾರೈಸಿದ್ದಾರೆ.
DAKSHINA KANNADA
ಕುಳಾಯಿ ಜೆಟ್ಟಿಯ ಬ್ರೇಕ್ ವಾಟರ್ ಮರು ವಿನ್ಯಾಸಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ ಮನವಿ
ಕುಳಾಯಿ : ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕುಳಾಯಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೀನುಗಾರಿಕಾ ಬಂದರಿನ ವಿನ್ಯಾಸವನ್ನು ಪರಿಷ್ಕರಿಸಿ ಸರ್ವ ಋತು ಬಂದರು ಹಾಗೂ ಸುರಕ್ಷತೆಯ ಮೀನುಗಾರಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ ಅವರಿಗೆ ಮನವಿ ಸಲ್ಲಿಸಿದರು.
ಉತ್ತರದ ಬ್ರೇಕ್ ವಾಟರ್ 831 ಮೀಟರ್ ಮತ್ತು ದಕ್ಷಿಣದ ಬ್ರೇಕ್ ವಾಟರ್ 262 ಮೀಟರ್ ಮಾಡಲಾಗುತ್ತಿದೆ. ಇದು ಸುರಕ್ಷತೆಯ ಮೀನುಗಾರಿಕೆಗೆ ಪೂರಕವಾಗಿಲ್ಲ. ಸಮುದ್ರದ ನೀರಿನ ರಭಸವನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗದೆ ನಾಡದೋಣಿ ಮೀನುಗಾರರಿಗೆ ತಮ್ಮ ದೋಣಿಯನ್ನು ದಡಕ್ಕೆ ತರಲು ಪೂರಕ ವಾತಾವರಣವಿಲ್ಲ.
ಇದನ್ನೂ ಓದಿ : WATCH : ಸೀಟಿಗಾಗಿ ಕಿಟಕಿಯಿಂದ ಬಸ್ ಹತ್ತಿದ ವಿದ್ಯಾರ್ಥಿ! ಆಮೇಲೇನಾಯ್ತು ಗೊತ್ತಾ!?
ಪ್ರಸ್ತುತ ಇರುವ ಉತ್ತರದ ಬ್ರೇಕ್ ವಾಟೆರ್ನ ಉದ್ದವನ್ನು 831 ರಿಂದ ಸರಾರಸರಿ 250 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 1081 ಮೀಟರ್ಗೆ ನಿಗದಿಪಡಿಸಿ, ದಕ್ಷಿಣದ ಬ್ರೇಕ್ ವಾಟರ್ ಉದ್ದ 262 ಮೀಟರ್ನಿಂದ 719 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 981(ಅಳಿವೆ ಬಾಗಿಲಿನ ಅಗಲ ಅಂತರ 100 ಮೀಟರ್ ಮಾತ್ರ ಇರುವಂತೆ) ವಿನ್ಯಾಸವನ್ನು ಮರು ವಿನ್ಯಾಸಗೊಳಿಸಿ ಕಾಮಗಾರಿ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಈ ವೇಳೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಉಪಸ್ಥಿತರಿದ್ದರು.
DAKSHINA KANNADA
ವಿದೇಶಿ ಹಡಗಿನಲ್ಲಿ ಬೆಂಕಿ ಅವಘಡ; ಕರ್ನಾಟಕ ಕರಾವಳಿಯಲ್ಲಿ ಲಂಗರು ಹಾಕಿದ ಕಾರ್ಗೋ ಹಡಗು
ಮಂಗಳೂರು: ಗುಜರಾತ್ನಿಂದ ಕೊಲಂಬೋಕ್ಕೆ ವಿವಿಧ ಸರಕುಗಳನ್ನು ಸಾಗಾಟ ಮಾಡುತ್ತಿದ್ದ ವಿದೇಶಿ ಮೂಲದ ಸರಕು ಸಾಗಾಟ ಹಡಗಿನಲ್ಲಿ ಅಗ್ನಿ ಆಕಸ್ಮಿಕ ನಡೆದ ಘಟನೆ ಬೆಳಕಿಗೆ ಬಂದಿದೆ.
ಜುಲೈ 19 ರಂದು ಕರ್ನಾಟಕ ಕರಾವಳಿಯ ಸಮುದ್ರದಲ್ಲಿ ಈ ದುರ್ಘಟನೆ ನಡೆದಿದ್ದು, ಕೋಸ್ಟ್ ಗಾರ್ಡ್ ತಂಡ ಹೆಲಿಕಾಪ್ಟರ್ ಹಾಗೂ ರಕ್ಷಣಾ ಹಡಗಿನ ಮೂಲಕ ಸತತ ನಲುವತ್ತು ಘಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದೆ. ಹಡಗಿನಲ್ಲಿ ಒಟ್ಟು 21 ಸಿಬ್ಬಂದಿ ಇದ್ದು ಒಬ್ಬ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಹಡಗಿನ ಬೆಂಕಿ ನಂದಿಸಿ ಸಿಬ್ಬಂದಿಗಳ ರಕ್ಷಣೆ ಮಾಡಿದ ಬಳಿಕ ಹಡಗನ್ನು ಕರ್ನಾಟಕ ಕರಾವಳಿ ಭಾಗಕ್ಕೆ ತೆಗೆದುಕೊಂಡು ಬರಲಾಗಿದೆ. ಸದ್ಯ ಸುರತ್ಕಲ್ ಕಡಲ ಕಿನಾರೆಯಿಂದ ಸುಮಾರು 33 ನಾಟಿಕಲ್ ಮೈಲ್ ದೂರದಲ್ಲಿ ಹಡಗು ಲಂಗರು ಹಾಕಲಾಗಿದೆ. ಗುಜಾರಾತ್ನ ಮುಂದ್ರಾ ಬಂದರಿನಿಂದ ಹೊರಟಿದ್ದ ಈ ಹಡಗು ಪನಾಮ ದೇಶಕ್ಕೆ ಸೇರಿದ್ದಾಗಿ ಮಾಹಿತಿ ಲಭ್ಯವಾಗಿದೆ.
ಬೆಂಕಿ ಅವಘಡದಿಂದ ಸಂಪೂರ್ಣ ಹಾನಿಯಾಗಿರುವ ಹಡಗು ಅಪಾಯಕಾರಿ ಪರಿಸ್ಥಿತಿಯಲ್ಲಿದ್ದು, ಕೋಸ್ಟ್ ಗಾರ್ಡ್ ಸಿಬ್ಬಂದಿ ಹಡಗಿನ ಮೇಲೆ ನಿಗಾ ಇರಿಸಿದ್ದಾರೆ. ಹಡಗು ಮುಳುಗಡೆಯಾಗುವ ಸಾದ್ಯತೆಯ ಜೊತೆಗೆ ಹಡಗಿನಲ್ಲಿ ಮತ್ತೆ ಬೆಂಕಿ ಕಾಣಿಸಿಕೊಳ್ಳುವ ಸಂಭವ ಕೂಡಾ ಇದೆ. ಹೀಗಾಗಿ ಹಡಗು ಮುಳುಗಡೆಯಾದಲ್ಲಿ ಸಮುದ್ರಕ್ಕೆ ತೈಲ ಸೋರಿಕೆಯ ಆತಂಕ ಕೂಡಾ ಎದುರಾಗಿದೆ. ಹೀಗಾಗಿ ಹಡಗಿನ ಮೇಲೆ ನಿಗಾ ವಹಿಸಿರುವ ಕೋಸ್ಟ್ ಗಾರ್ಡ್ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.
DAKSHINA KANNADA
ದಕ್ಷಿಣ ಕನ್ನಡ ಜಿಲ್ಲೆಯ ಮಹಾಪ್ರವಾಹಕ್ಕೆ 50 ವರ್ಷ; ಮರುಕಳಿಸದಿರಲಿ ‘ಆ ಶುಕ್ರವಾರ’ ಎನ್ನುತ್ತಿದ್ದಾರೆ ಕರಾವಳಿಗರು!
ಮಂಗಳೂರು: 1974 ಜುಲೈ 26ರ ಶುಕ್ರವಾರ ರಾತ್ರಿ ಇಡೀ ಸುರಿದ ಭಾರೀ ಮಳೆ ಮುಂಜಾನೆಯ ವೇಳೆಗೆ ನೆರೆ ರೌದ್ರಾವತಾರ ತಾಳಿತ್ತು.
ಹಿಂದೆ ಎಂದೂ ಕಾಣದ ರೀತಿ ನೇತ್ರಾವತಿ ನದಿ ಉಕ್ಕಿ ಹರಿದಿತ್ತು. ನಸುಕಿನ ಜಾವ ನೇತ್ರಾವತಿ ನದಿ ಮನೆಯೊಳಗೆಯೇ ಪ್ರವೇಶಿಸಿತ್ತು.
ಬಂಟ್ವಾಳ ಪೇಟೆ, ಪಕ್ಕದೂರುಗಳಿಗೆ ಸಂಪರ್ಕಿಸುವ ರಸ್ತೆಗಳೆಲ್ಲವೂ ಕ್ಷಣಮಾತ್ರದಲ್ಲೆ ಜಲಮಯ. ಎಲ್ಲಿಗೆ ಹೋಗೋದು? ಏನು ಮಾಡೋದು ಅನ್ನೋದನ್ನು ಯೋಚಿಸುವಷ್ಟರಲ್ಲೇ ಊರಿಗೆ ಊರೇ ಮುಳುಗಿತ್ತು. ಬಂಟ್ವಾಳ ಮತ್ತು ಉಪ್ಪಿನಂಗಡಿ ಪೇಟೆಯಲ್ಲಿ ವಾಹನಗಳ ಬದಲು ದೋಣಿಗಳು ಸಂಚರಿಸಿದ್ದವು. ಆ ಕಾಲದಲ್ಲಿಯೇ ಐವತ್ತು ಲಕ್ಷ ರೂಪಾಯಿ ನಷ್ಟ ಉಂಟಾಗಿತ್ತು.
ಆ ಸಮಯದಲ್ಲಿ ಜಿಲ್ಲೆಯ ಬಹುತೇಕ ಪ್ರದೇಶಗಳು ನೆರೆ ನೀರಿನಿಂದ ಆವರಿಸಿದ್ದವು, ಆವತ್ತಿನ ಕಾಲದಲ್ಲಿ ಮಣ್ಣಿನಿಂದ ನಿರ್ಮಿಸಿದ್ದ ನೂರಾರು ಮನೆ ಅಂಗಡಿ ನೆರೆ ನೀರಿಗೆ ಕೊಚ್ಚಿಕೊಂಡು ಹೋಗಿದ್ದವು. ಈಗಲೂ ಕೂಡಾ ಆ ಭೀಕರ ನೆರೆಯು ನಮ್ಮ ಹಿರಿಯರ ಬಾಯಲ್ಲಿ (ಎಲ್ಪತ್ತ ನಾಲೆತ್ತ ಬೊಲ್ಲ) ಎಂದು ಪ್ರಖ್ಯಾತಿ ಹೊಂದಿದೆ.
ಕಾಕತಾಳೀಯ ಎಂಬಂತೇ ಪ್ರವಾಹದ ಆ ದಿನ, ವಾರ ಎಲ್ಲವೂ ಸೇಮ್ ಆಗಿದ್ದು, ಮತ್ತೆ ಅದೇ ರೀತಿಯ ಪ್ರವಾಹ ಪರಿಸ್ಥಿತಿಯೂ ನೇತ್ರಾವತಿ ತಟದಲ್ಲಿದೆ. ಈಗಾಗಲೇ ನೇತ್ರಾವತಿ ಅಪಾಯ ಮಟ್ಟ ಮೀರಿದ್ದು, ಈ ಆತಂಕಕ್ಕೆ ಕಾರಣವೂ ಆಗಿದೆ.
- LATEST NEWS5 days ago
ಗೀಸರ್ನಿಂದ ವಿಷಾನಿಲ ಸೋರಿಕೆ; ಇಹಲೋಕ ತ್ಯಜಿಸಿದ ತಾಯಿ, ಮಗ
- LATEST NEWS5 days ago
ಕಸದ ತೊಟ್ಟಿಯಲ್ಲಿ ಪತ್ತೆಯಾಯ್ತು ಲಕ್ಷಾಂತರ ರೂ. ಬೆಲೆ ಬಾಳುವ ವಜ್ರದ ನೆಕ್ಲೇಸ್
- LATEST NEWS7 days ago
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ಕ್ರಿಕೆಟಿಗ
- DAKSHINA KANNADA2 days ago
ವಿಟ್ಲದ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅನೈತಿಕ ಚಟುವಟಿಕೆ; ಸಾರ್ವಜನಿಕರನ್ನು ನೋಡಿ ಕಾಲ್ಕಿತ್ತ ಜೋಡಿ