Connect with us

DAKSHINA KANNADA

ಬ್ಯಾರಿ ಅಕಾಡೆಮಿಯಿಂದ ಅಹ್ಮದ್ ನೂರಿ ಜನ್ಮ ಶತಮಾನೋತ್ಸವ ಆಚರಣೆ :ಟಿ.ಎ. ಆಲಿಯಬ್ಬ ಜೋಕಟ್ಟೆಗೆ ಅಹ್ಮದ್ ನೂರಿ ಪ್ರಶಸ್ತಿ ಪ್ರದಾನ

Published

on

ಮಂಗಳೂರು: ಬ್ಯಾರಿ ಭಾಷಿಕರ ಕುರಿತು “ಮೈಕಾಲ” ಎಂಬ ಕೃತಿಯನ್ನು ರಚನೆ ಮಾಡುವ ಮೂಲಕ ಪ್ರಸಿದ್ಧಿ ಪಡೆದ ದಿವಂಗತ ಅಹ್ಮದ್ ನೂರಿಯವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಮಂಗಳೂರು ನಗರದ ಪುರಭವನದ ಅಹ್ಮದ್ ನೂರಿ ವೇದಿಕೆಯಲ್ಲಿ ಶುಕ್ರವಾರ ಸಂಜೆ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್, ದೇಶಕ್ಕೆ ಅಪಾರ ಕೊಡುಗೆ ನೀಡಿದ ಮಹನೀಯರ ಬಗ್ಗೆ ಬ್ಯಾರಿ ಲೇಖಕ, ಲೇಖಕಿಯರು ಬ್ಯಾರಿ ಭಾಷೆಯಲ್ಲಿ ಬರೆದ 10 ಕೃತಿಗಳನ್ನು ಅಕಾಡಮಿಯು ಪ್ರಕಟಿಸಿ ಇಂದು ಬಿಡುಗಡೆಗೊಳಿಸಲಾಗಿದೆ‌.

ಮುಂದೆಯೂ ಇನ್ನಷ್ಟು ಒಳ್ಳೆಯ ಕೃತಿಗಳನ್ನು ಪ್ರಕಟಿಸಲಾಗುವುದು‌. ಆ ಮೂಲಕ ಬ್ಯಾರಿ ಭಾಷೆಯ ಸಾಹಿತ್ಯ ವೃದ್ಧಿಗೆ ಪ್ರಯತ್ನಿಸಲಾಗುವುದು ಎಂದರು. ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಖತಿ, ಆಂದೋಲನದಲ್ಲಿ ತೊಡಗಿಸಿಕೊಂಡು ಗತಿಸಿದ ಮಹನೀಯರನ್ನು ನೆನಪಿಸುವ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವನ್ನು ಮುಂದುವರಿಸಲಾಗುವುದು ಎಂದು ರಹೀಂ ಉಚ್ಚಿಲ್ ನುಡಿದರು‌.

ಈ ಕಾರ್ಯಕ್ರಮದಲ್ಲಿ ಅಕಾಡಮಿಯ ಮಾಜಿ ಸದಸ್ಯ, ಹಿರಿಯ ಸಾಹಿತಿ ಟಿ.ಎ.ಆಲಿಯಬ್ಬ ಜೋಕಟ್ಟೆಗೆ ದಿ. ಅಹ್ಮದ್ ನೂರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.


ಇನ್ನು ಅಹ್ಮದ್ ನೂರಿ ಅವರ ಬದುಕು ಮತ್ತು ಬರಹದ ಕುರಿತು ಪತ್ರಕರ್ತ ಹಂಝ ಮಲಾರ್‌ರ ಅಧ್ಯಕ್ಷತೆಯಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಸಾಹಿತಿ ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಬ್ಯಾರಿ ಅಧ್ಯಯನ ಪೀಠದ ಸದಸ್ಯ ಅಹ್ಮದ್ ಬಾವಾ ಪಡೀಲ್, ಮುಸ್ಲಿಂ ಲೇಖಕರ ಸಂಘದ ಮಾಜಿ ಅಧ್ಯಕ್ಷ ಸಈದ್ ಇಸ್ಮಾಯಿಲ್ ವಿಷಯ ಮಂಡಿಸಿದರು.

ಪತ್ರಕರ್ತ ಎ.ಕೆ. ಕುಕ್ಕಿಲ ಮಹಾತ್ಮಾ ಗಾಂಧೀಜಿ ಕುರಿತು ಬರೆದ “ಜಂಡ್ ಕಂಡ ತುನಿರೊ ಪಕೀರ” ಎಂಬ ಕೃತಿಯನ್ನು ಅಕ್ಷರಸಂತ ಪದ್ಮಶ್ರೀ ಹರೇಕಳ ಹಾಜಬ್ಬ, ಹಫ್ಸಾ ಬಾನು ಬೆಂಗಳೂರು ಬರೆದ ಡಾ. ಬಿ.ಆರ್. ಅಂಬೇಡ್ಕರ್‌ ಕೃತಿಯನ್ನು ಪತ್ರಕರ್ತ ಪೆರೂರ್ ಜಾರು, ಎಂ. ಅಶೀರುದ್ದೀನ್ ಆಲಿಯಾ ಬರೆದ ಸ್ವಾಮಿ ವಿವೇಕಾನಂದ ಕೃತಿಯನ್ನು ಕೊಂಕಣಿ ಸಾಹಿತ್ಯ ಅಕಾಡಮಿಯ ಸದಸ್ಯ ಗೋಪಾಲಕೃಷ್ಣ ಭಟ್, ಅಬ್ದುಲ್ ರಝಾಕ್ ಅನಂತಾಡಿ ಬರೆದ ಸರ್ದಾರ್ ವಲ್ಲಭಬಾಯಿ ಪಟೇಲ್ ಕೃತಿಯನ್ನು ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ರಹೀನಾ ತೊಕ್ಕೊಟ್ಟು ಬರೆದ ಹವಾಲ್ದಾರ್ ಅಬ್ದುಲ್ ಹಮೀದ್ ಕೃತಿಯನ್ನು ಸಿಆರ್‌ಪಿಎಫ್ ಯೋಧ ಝುಬೈರ್ ಹಳೆನೇರೆಂಕಿಯ ಪತ್ನಿ ಮೆಹರಾಝ್, ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಬರೆದ ಸರ್ ಎಂ. ವಿಶ್ವೇಶ್ವರಯ್ಯ ಹಾಗೂ ಝುಲೇಖಾ ಮುಮ್ತಾಝ್ ಬರೆದ ಡಾ.ಎಪಿಜೆ ಅಬ್ದುಲ್ ಕಲಾಂ ಕೃತಿಯನ್ನು ಶಾರದಾ ವಿದ್ಯಾಲಯದ ಪ್ರೊ.ಎಂ.ಬಿ. ಪುರಾಣಿಕ್, ಮರಿಯಮ್ ಇಸ್ಮಾಯಿಲ್ ಬರೆದ ವೀರ ರಾಣಿ ಅಬ್ಬಕ್ಕ ಕೃತಿಯನ್ನು ರಂಗಭೂಮಿ ಕಲಾವಿದೆ ಸರೋಜಿನಿ ಶೆಟ್ಟಿ, ಮುಹಮ್ಮದ್ ಅಶ್ರಫ್ ಬಾವಾ ಬರೆದ ಮೌಲಾನಾ ಅಝಾದ್ ಕೃತಿಯನ್ನು ಡಾ. ಎಂಎಸ್‌ಎಂ ಅಬ್ದುಲ್ ರಶೀದ್ ಝೈನಿ ಸಖಾಫಿ ಕಾಮಿಲ್, ಬಶೀರ್ ಅಹ್ಮದ್ ಕಿನ್ಯಾ ಬರೆದ ಅಟಲ್ ನಬಿಹಾರಿ ವಾಜಪೇಯಿ ಕೃತಿಯನ್ನು ಮುಸ್ತಫಾ ತಂಙಳ್ ಕೋಲ್ಪೆ ಬಿಡುಗಡೆಗೊಳಿಸಿದರು.

ಬ್ಯಾರಿ ಅಕಾಡಮಿಯ ಸದಸ್ಯರಾದ ಕಮರುದ್ದೀನ್ ಸಾಲ್ಮರ, ಶಂಶೀರ್ ಬುಡೋಳಿ, ಸುರೇಖಾ, ಚಂಚಲಾಕ್ಷಿ ಉಪಸ್ಥಿತರಿದ್ದರು.
ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆಯವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಬಶೀರ್ ಅಹ್ಮದ್ ಕಿನ್ಯ, ಎಂ. ಅಶೀರುದ್ದೀನ್ ಆಲಿಯಾ, ಸಾರಾ ಅಲಿ ಪರ್ಲಡ್ಕ, ರಶೀದಾ ಉಚ್ಚಿಲ್ ಕವನ ವಾಚಿಸಿದರು.

ಬಾತಿಷ್ ಪುತ್ತೂರು ಮತ್ತು ಬಳಗದಿಂದ ಬ್ಯಾರಿ ಸಂಗೀತ ಹಾಗೂ ಹುಸೈನ್ ಕಾಟಿಪಳ್ಳ ಮತ್ತು ತಂಡದಿಂದ ಬ್ಯಾರಿ ಕವ್ವಾಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಅಕಾಡಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಮಾಜಿ ಸದಸ್ಯ ಹುಸೈನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

DAKSHINA KANNADA

ಚೌಟ ಪರ ಪ್ರಚಾರಕ್ಕೆ ಪುತ್ತೂರಿಗೆ ಬರಲಿದ್ದಾರೆ ಅಣ್ಣಾಮಲೈ

Published

on

ಪುತ್ತೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರ ಪರವಾಗಿ ಏಪ್ರಿಲ್ ೨೩ರಂದು ಪುತ್ತೂರಿನಲ್ಲಿ ರೋಡ್ ಶೋ ನಡೆಯಲಿದೆ. ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷರಾದ ಅಣ್ಣಾಮಲೈ ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಪುತ್ತೂರು ಬಿಜೆಪಿ ಚುನಾವಣಾ ಸಂಯೋಜಕರಾದ ಚನಿಲ ತಿಮ್ಮಪ್ಪ ಶೆಟ್ಟಿ ಹೇಳಿದರು.


ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೮.೩೦ಕ್ಕೆ ಅಣ್ಣಾ ಮಲೈ ಅವರು ಸುಳ್ಯ ನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ೧೦.೩೦ಕ್ಕೆ ಪುತ್ತೂರಿಗೆ ಬರಲಿದ್ದು, ದರ್ಬೆ ವೃತ್ತದಿಂದ ಬಸ್ ನಿಲ್ದಾಣದವರೆಗೆ ರೋಡ್ ಶೋ ನಡೆಸಲಿದ್ದಾರೆ. ಇದಾದ ಬಳಿಕ ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ ಎಂದರು.


ಅದೇ ದಿನ ಅಪರಾಹ್ನ ೩ ಗಂಟೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಉಪ್ಪಿನಂಗಡಿಯಲ್ಲಿ ಬಿಜೆಪಿ ರೋಡ್‌ ಶೋ ನಡೆಯಲಿದೆ. ಸಂಜೆ ೫.೩೦ಕ್ಕೆ ವಿಟ್ಲದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ನೇತೃತ್ಬದಲ್ಲಿ ರೋಡ್ ಶೋ ನಡೆಯಲಿದೆ ಎಂದರು.

ಇದನ್ನೂ ಓದಿ : ಚಾಕೊಲೇಟ್ ತಿಂದು ರಕ್ತಕಾರಿದ ಒಂದೂವರೆ ವರ್ಷದ ಮಗು
ಮಹಾ ಅಭಿಯಾನ:

ಏಪ್ರಿಲ್ ೨೧ ರಂದು ಭಾನುವಾರ ಬೆಳಗ್ಗಿನಿಂದ ಸಂಜೆಯವರೆಗೂ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ೨೨೧ ಬೂತ್‌ಗಳಲ್ಲಿ ಕಾರ್ಯಕರ್ತರಿಂದ ಮನೆ ಮನೆ ಭೇಟಿ ಮತಯಾಚನೆಯ ಮಹಾ ಅಭಿಯಾನ ನಡೆಯಲಿದೆ. ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ನೇತೃತ್ವದಲ್ಲಿ ಈಗಾಗಲೇ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಹಕಾರ ಭಾರತಿಯಡಿಯಲ್ಲಿ ಗೆದ್ದ ಸಹಕಾರಿ ಸಂಘಗಳ ನಿರ್ದೇಶಕರ ಸಭೆ ನಡೆಸಲಾಗಿದೆ ಎಂದು ನುಡಿದರು.

Continue Reading

DAKSHINA KANNADA

2 ಗ್ರಾಮಸ್ಥರ ನಡುವೆ ಬೆಂಕಿಯ ಕಾದಾಟ; ಇದು ಕಟೀಲು ಜಾತ್ರೆಯ ತೂಟೆದಾರದ ವಿಶೇಷ

Published

on

ಕಟೀಲು: ಅವರೆಲ್ಲ ಮಿತ್ರರಾದರೂ ಶತ್ರುಗಳಂತೆ ಆವೇಶದಿಂದ ಒಬ್ಬರ ಮೇಲೆ ಒಬ್ಬರು ಬೆಂಕಿಯನ್ನು ಎಸೆಯುತ್ತಿದ್ದರು. ಹಾಗಂತ ಇವರು ವೈರಿಗಳಂತೆ ಹೋರಾಡಿದರೂ ಯಾರಿಗೂ ಏನೂ ಆಗುವುದಿಲ್ಲ. ಯಾಕೆಂದರೆ ಇವರು ಈ ರೀತಿ ಮಾಡುವುದು ಸಂಪ್ರದಾಯವಾಗಿದ್ದು,  ಹರಕೆಯ ರೀತಿಯಲ್ಲಿ ಇದು ಪ್ರತಿ ವರ್ಷ ನಡೆಯತ್ತದೆ. ಆದ್ರೆ ಈ ದೃಶ್ಯ ನೋಡಲು ಮಾತ್ರ ಭೀಕರ ಕಾಳಗದಂತೆ ಕಾಣಿಸುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಜನರ ಆರಾಧ್ಯ ದೇವತೆಯಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಸಂತೃಪ್ತಿಗಾಗಿ ನಡೆಯುವ ಒಂದು ಸೇವೆಯಾಗಿ ಸ್ಥಳೀಯವಾಗಿ ತೂಟೆದಾರು ಎಂದು ಪ್ರಸಿದ್ಧಿ ಪಡೆದುಕೊಂಡಿದೆ. ಪ್ರತಿ ವರ್ಷವು ಇಲ್ಲಿನ  ಜಾತ್ರೆಯ ಕೊನೆಯ ದಿನ ದೇವಿಯ ಅವಭೃತ ಸ್ನಾನ ನಡೆಯುತ್ತದೆ. ಈ ಸಂದರ್ಭದಲ್ಲಿ ಮೂರು ಕಡೆಗಳಲ್ಲಿ ಈ ರೀತಿಯಾಗಿ ಭಕ್ತರು ಬೆಂಕಿಯನ್ನು ಎಸೆಯುವ ಸಂಪ್ರದಾಯ ಅನಾದಿ ಕಾಲದಿಂದ ನಡೆದುಕೊಂಡು ಬಂದಿದೆ.

ಬೆಂಕಿಯ ಆಟ ಎಂದರೆ ದೇವಿಗೆ ಬಲು ಇಷ್ಟ:

ಪುರಾಣದ ಪ್ರಕಾರ, ಲೋಕ ಕಂಟಕನಾದ ಅರುಣಾಸುರನನ್ನು ಸಂಹರಿಸಿದ ಕಟೀಲು ಶ್ರೀ ದುರ್ಗಾಪರಮೇಶ್ವರಿಯನ್ನ  ಸಂತೃಪ್ತಿಗೊಳಿಸಲು ದೇವತೆಗಳು ಬೆಂಕಿಯ ಮಳೆ ಸುರಿಸಿದ್ರು ಅನ್ನೋ ಪೌರಾಣಿಕ ಕಥೆ ಇದೆ. ಹೀಗಾಗಿ ಪ್ರತಿ ವರ್ಷ ಜಾತ್ರೆಯಲ್ಲಿ ದೇವಿಯು ರಥೋತ್ಸವದ ಬಳಿಕ ಅವಭೃತ ಸ್ನಾನ ಮುಗಿಸಿ ವಾಪಾಸು ಆಗುವಾಗ ಭಕ್ತರು ಈ ಸೇವೆಯನ್ನು ಮಾಡುತ್ತಾರೆ. ಮೈ ಮೇಲೆ ಆವೇಶ ಬಂದವರಂತೆ ಒಬ್ಬರಿಗೊಬ್ಬರು ತೆಂಗಿನ ಗರಿಯಿಂದ ಮಾಡಿದ ಬೆಂಕಿಯ ದೀವಟಿಗೆಯನ್ನು  ಒಬ್ಬರ ಮೇಲೊಬ್ಬರು ಎಸೆಯುತ್ತಾ ದೇವಿಯನ್ನು ದೇವಸ್ಥಾನಕ್ಕೆ ಬರಮಾಡಿಕೊಳ್ಳುತ್ತಾರೆ. ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಎಂಟು ದಿನಗಳ ಜಾತ್ರೋತ್ಸವ ನಡೆದು, ಜಾತ್ರೋತ್ಸವದ ಕೊನೆಯ ದಿನ ಈ ತೂಟೆದಾರು ಅನ್ನೋ ಬೆಂಕಿಯ ಆಟ ನಡೆಯುತ್ತದೆ.

 

ಅತ್ತೂರು ಮತ್ತು ಕೊಡೆತ್ತೂರು ಗ್ರಾಮಸ್ಥರ ಕಾದಾಟ:

ಈ ಆಟವನ್ನು ಆಡಲು ಎಲ್ಲರಿಗೂ ಅವಕಾಶ ಇಲ್ಲ. ಅತ್ತೂರು ಹಾಗೂ ಕೊಡೆತ್ತೂರು ಗ್ರಾಮದ ಜನರಿಗೆ ಮಾತ್ರ ಅವಕಾಶ. ಎರಡೂ ಗ್ರಾಮದ ಜನರು ಎದುರೆದುರಾಗಿ ನಿಂತು ತೆಂಗಿನ ಗರಿಗಳಿಂದ ಮಾಡಿದ ಸೂಟೆಗಳನ್ನು ಹಿಡಿದು ಇದನ್ನು ಒಬ್ಬರಿಗೊಬ್ಬರು ಎಸೆಯುತ್ತಾರೆ. ಆದರೆ ವಿಶೇಷ ಅಂದ್ರೆ  ಈ ಕಾದಾಟದಲ್ಲಿ ಯಾರಿಗೂ ಗಾಯಗಳಾಗುವುದಿಲ್ಲ ಅಲ್ಲದೆ ಅವರು ಉಟ್ಟ ಬಟ್ಟೆಗೂ ಹಾನಿ ಆಗುವುದಿಲ್ಲ ಅನ್ನೋದೇ ದೇವಿಯ ಮಹಿಮೆ.

ಜಾತ್ರೆಯ ಸಂದರ್ಭದಲ್ಲಿ ಮಾತ್ರ ನಡೆಯುವ ಈ  ಬೆಂಕಿಯ ಕಾದಾಟ ಒಂದು ರೀತಿ ಹರಕೆಯ ರೂಪದಲ್ಲಿ ನಡೆಯುತ್ತದೆ. ಮೊದಲಾಗಿ ಈ ಕಾದಾಟದಲ್ಲಿ ಭಾಗವಹಿಸುವ ಭಕ್ತರು ದೇವಿಯ ಕುಂಕುಮ ಪಡೆದು ಮೈಗೆ ಲೇಪಿಸುತ್ತಾರೆ ಮತ್ತು ದೇವಿಯ ಹೂವನ್ನು ತಲೆಗೆ ಕಟ್ಟಿಕೊಂಡು ಈ ಸೇವೆಗೆ ಸಿದ್ಧರಾಗುತ್ತಾರೆ. ಬಳಿಕ ಹೊಸ ಕೇಸರಿ ಬಣ್ಣದ ಪಂಚೆಯನ್ನು ಧರಿಸಿ ಈ ಕಾದಾಟವನ್ನು ಮಾಡುತ್ತಾರೆ. ಈ ವೇಳೆ ಇವರನ್ನು ನಿಯಂತ್ರಿಸಲು ಎರಡೂ ಕಡೆಯಿಂದ ಊರ ಮುಖಂಡರಿದ್ದು, ಕಾದಾಡ ವಿಕೋಪಕ್ಕೆ ಹೋದಾಗ ಅವರೇ ಇವರನ್ನು ನಿಯಂತ್ರಣ ಮಾಡುತ್ತಾರೆ.

ಮನೆಯಿಂದ ತಾವೇ ತಯಾರಿಸಿದ ತೆಂಗಿನ ಗರಿಯ ಸೂಟೆ ತರುತ್ತಾರೆ:

ಎಂಟು ದಿನಗಳ ಕಾಲ ಶುದ್ಧ ಸಸ್ಯಾಹಾರಿಗಳಾಗಿ, ದುಶ್ಚಟವನ್ನು ತ್ಯಜಿಸುತ್ತಾರೆ. ಗ್ರಾವಸ್ಥರು ಬರುವಾಗ ಮನೆಯಿಂದ ತಾವೇ ತಯಾರಿಸಿದ ತೆಂಗಿನ ಗರಿಯ ಸೂಟೆಯನ್ನು ತರುತ್ತಾರೆ. ಬೆಂಕಿಯನ್ನು ಎಸೆಯುವಾಗ ಇರುವ ಆವೇಶ ಈ ಆಟ ಮುಗಿದ ಬಳಿಕ ಇರುವುದಿಲ್ಲ. ಎಲ್ಲರೂ ಒಂದಾಗಿ ದೇವರ ದರ್ಶನ ಮಾಡಿ ಜೊತೆಯಾಗಿ ತಮ್ಮ ಗ್ರಾಮಗಳಿಗೆ ತೆರಳುತ್ತಾರೆ. ಈ ಬೆಂಕಿ ಎಸೆಯುವ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆಯುತ್ತಾ ಬಂದಿದೆ. ಆದರೆ, ಇದುವರೆಗೆ ಯಾರಿಗೂ ಏನೂ ಆಗದಿರುವುದಕ್ಕೆ ಇಲ್ಲಿನ ದೇವಿಯ ಮಹಿಮೆಯೇ ಕಾರಣ ಎಂಬುದು ಎಲ್ಲರ ನಂಬಿಕೆ.

Continue Reading

DAKSHINA KANNADA

ಪ್ರಾಣ ಸಂಕಟದಲ್ಲಿದ್ದ ಹೆಬ್ಬಾವು..! ರಕ್ಷಣೆ ವೇಳೆ ದೇಹದಲ್ಲಿ 11 ಬುಲ್ಲೆಟ್ ಪತ್ತೆ..!

Published

on

ಮಂಗಳೂರು: ಆಹಾರಕ್ಕಾಗಿ ಪರ್ಸಿಯನ್ ಕ್ಯಾಟ್ ಒಂದನ್ನು ತಿಂದಿದ್ದ ಹೆಬ್ಬಾವು ಆಹಾರ ನುಂಗಲಾರದೆ ಸಂಕಷ್ಟಕ್ಕೆ ಸಿಲುಕಿದೆ. ಇದನ್ನ ಗಮನಿಸಿದ ಸ್ಥಳಿಯರು ಉರಗರಕ್ಷಕರ ಮೂಲಕ ಹಾವನ್ನು ರಕ್ಷಣೆ ಮಾಡಿದ್ದಾರೆ. ಆದ್ರೆ ಹಾವಿನ ವೈದ್ಯಕೀಯ ಪರೀಕ್ಷೆ ವೇಳೆ ಹಾವಿನ ದೇಹದಲ್ಲಿ 11 ಬುಲ್ಲೆಟ್‌ಗಳು ಪತ್ತೆಯಾಗಿದೆ.

snake

ಬಿಜೈ ಆನೆಗುಂಡಿಯಲ್ಲಿ ಈ  ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದೆ.  ಹೆಬ್ಬಾವು ಪರ್ಷಿಯನ್ ಕ್ಯಾಟ್ ಅನ್ನು ನುಂಗಿ ಒದ್ದಾಡುತ್ತಿತ್ತು. ಪರಿಶೀಲನೆ ಮಾಡಿದಾಗ ಹೆಬ್ಬಾವಿನ ಕತ್ತಿನ ಕೆಳಭಾಗದಲ್ಲಿ ಬಲೆ ಸಿಲುಕಿ ಆಹಾರ ನುಂಗಲು ತೊಂದರೆಯಾಗುತ್ತಿತ್ತು‌. ತಕ್ಷಣ ಉರಗರಕ್ಷಕ ಭುವನ್ ದೇವಾಡಿಗ ಅವರಿಗೆ ಕರೆ ಮಾಡಲಾಗಿದ್ದು, ಅವರು ತಕ್ಷಣ ಅವರು ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳಕ್ಕೆ ಬಂದ ಭುವನ್ ದೇವಾಡಿಗ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿ ಅರಣ್ಯ ಅಧಿಕಾರಿಗಳ ಸಹಕಾರದಿಂದ ಬಲೆಯನ್ನು ಕತ್ತರಿಸಿ ಹೆಬ್ಬಾವನ್ನು ರಕ್ಷಿಸಿದ್ದರು.

ಸುಮಾರು 8.50 ಫೀಟ್ ಉದ್ದದ, 8ಕೆಜಿ ತೂಕವುಳ್ಳ ಈ ಹೆಬ್ಬಾವನ್ನು ವೈದ್ಯಕೀಯ ತಪಾಸಣೆಗೆ ಮರೋಳಿಯ ಪಶುವೈದ್ಯ ಡಾ.ಯಶಸ್ವಿಯವರಲ್ಲಿಗೆ ಕೊಂಡೊಯ್ಯಲಾಯಿತು. ಅವರು ಪರೀಕ್ಷೆ ನಡೆಸಿದಾಗ ಬೆನ್ನಿನ ಭಾಗದಲ್ಲಿ ಗಟ್ಟಿಯಾದ ವಸ್ತು ಸಿಕ್ಕಿದಂತಾಗಿದೆ. ಆದ್ದರಿಂದ ಎಕ್ಸರೇ ಮಾಡಿದಾಗ ಹೆಬ್ಬಾವಿನ ದೇಹದೊಳಗೆ ಹನ್ನೊಂದು ಏರ್ ಬುಲೆಟ್ ಪತ್ತೆಯಾಗಿದೆ. ಇದರಲ್ಲಿ ಎರಡು ಬುಲೆಟ್ ಅನ್ನು ಮಾತ್ರ ಹೆಬ್ಬಾವು ದೇಹದಿಂದ ಹೊರತೆಗೆಯಲು ಸಾಧ್ಯವಾಗಿದೆ. ಈ ಹಿಂದೆ ಯಾರೋ ಏರ್ ಗನ್ ನಿಂದ ಶೂಟ್ ಮಾಡಿದ್ದರಿಂದ ಅದರ ದೇಹದೊಳಗೆ ಏರ್ ಬುಲೆಟ್ ಸೇರಕೊಂಡಿರಬಹುದು. ಸದ್ಯ ಈ ಹೆಬ್ಬಾವನ್ನು ಪರಿವೀಕ್ಷಣೆ ಮಾಡಲಾಗುತ್ತಿದೆ ಎಂದು ಉರಗ ರಕ್ಷಕ ಭುವನ್ ದೇವಾಡಿಗ ಹೇಳಿದ್ದಾರೆ‌.

 

Continue Reading

LATEST NEWS

Trending