ಮೂಡುಬಿದಿರೆ: ಮುಖ್ಯಮಂತ್ರಿಯಿಂದ ಲೋಕಾರ್ಪಣೆಗೊಂಡ ಮೂಡುಬಿದಿರೆಯ ಆಡಳಿತ ಸೌಧದಲ್ಲಿ ತಿಂಗಳು ಕಳೆದರೂ ತಹಶೀಲ್ದಾರ್ ಕರ್ತವ್ಯ ಆರಂಭಿಸಿಲ್ಲ.
ಶಾಸಕರು ಹಾಗೂ ಸರ್ವೆ ಇಲಾಖೆ ಜೊತೆ ಹೊಂದಾಣಿಕೆ ಮಾಡಿಕೊಂಡು ಅವರ ಬೇಳೆ ಬೇಯಿಸುತ್ತಿದ್ದಾರೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಆರೋಪಿಸಿದ್ದಾರೆ.
ಈ ಬಗ್ಗೆ ಮೂಡುಬಿದಿರೆಯ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ತಹಶೀಲ್ದಾರ್ ಪುಟ್ಟರಾಜು ಅವರು ಕಛೇರಿಯಲ್ಲಿ ಇನ್ನೂ ಕರ್ತವ್ಯವನ್ನು ಆರಂಭಿಸಿಲ್ಲ.
ಇದು ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಲು ತಹಸೀಲ್ದಾರ್ ಅವರಿಗಾಗಿ ನಿರ್ಮಾಣ ಮಾಡಿದ ಕಛೇರಿಯೋ ಅಥವಾ ಶಾಸಕರಿಗೆ ಮಾಡಿದ ಕಛೇರಿಯೋ ಎಂದು ಪ್ರಶ್ನಿಸಿದರು.
ಈ ಕಟ್ಟಡದಲ್ಲಿ ಶಾಸಕರು ಬಂದು ಕುಳಿತುಕೊಂಡಿದ್ದಾರೆ ಮತ್ತು ಅವರ ಚೇಲಾಗಳು ಕೂಡಾ ಬರುತ್ತಿದ್ದಾರೆ. ಮಾತ್ರವಲ್ಲ ಬಿಜೆಪಿಗರು ತಮ್ಮ ಬೇಳೆ ಬೆಯಿಸಿಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ.
ಮೂಡುಬಿದಿರೆ ತಾಲೂಕು ಆಗಿ ಘೋಷಣೆ ಆಗುವ ಮೊದಲೇ ತಹಶೀಲ್ದಾರ್ ಅವರ ನೇಮಕ ಮಾಡುವ ಕೆಲಸ ನನ್ನ ಅವಧಿಯಲ್ಲಿ ಆಗಿತ್ತು.
ನಾಡ ಕಛೇರಿಯ ನಿರ್ಮಾಣವೂ ನನ್ನ ಅವಧಿಯಲ್ಲೇ ಆಗಿದೆ. ಸಾರ್ವಜನಿಕ ದಾಖಲೆಗೆ ಭದ್ರತೆ ಒದಗಿಸುವ ಕೆಲಸ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳನ್ನು ನನ್ನ ಅವಧಿಯಲ್ಲಿ ಆಗಿತ್ತು. ಆದ್ರೆ ಇವತ್ತು ಮೂಡುಬಿದಿರೆಯಲ್ಲಿ
ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಲು ತಹಸೀಲ್ದಾರ್ ಅವರಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಲಾಗಿದೆ.
ಆದ್ರೆ ಈ ಆಡಳಿತ ಸೌಧದ ದುರುಪಯೋಗ ವಾಗುತ್ತಿರುವುದು ಖಂಡನೀಯ ಎಂದರು.