Connect with us

    FILM

    ದರ್ಶನ್‌ ಕೊಲೆ ಪ್ರಕರಣ ಬೆನ್ನಲ್ಲೇ ‘ಯಶ್’ ವೀಡಿಯೋ ವೈರಲ್..! ಅಭಿಮಾನಿಗಳಿಗೆ ಯಶ್ ಹೇಳಿದ್ದೇನು?

    Published

    on

    ಮಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಈಗಾಗಲೇ ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದು, ಸ್ಯಾಂಡಲ್‌ವುಡ್‌ ಸ್ಟಾರ್ ನಟ ಈ ಹತ್ಯೆಯಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಈಗಾಗಲೇ ಹತ್ಯೆಗೆ ಸಂಬಂಧಪಟ್ಟವರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದು, ತೀವ್ರ ತನಿಖೆ ನಡೆಯುತ್ತಿದೆ.

    ಇನ್ನು ಸ್ಟಾರ್ ನಟ, ಹೆಚ್ಚು ಫ್ಯಾನ್‌ ಫಾಲೋವರ್ಸ್‌ನ್ನು ಹೊಂದಿರುವ ದರ್ಶನ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಇದರಿಂದಾಗಿ ಕನ್ನಡ ಚಿತ್ರರಂಗವೇ ಶಾಕ್‌ಗೆ ಒಳಗಾಗಿದೆ. ದರ್ಶನ್‌ ರವರ ಗೆಳತಿ ಪವಿತ್ರಾಗೌಡಾಳಿಗೆ ರೇಣುಕಾ ಸ್ವಾಮಿ ಎಂಬಾತ ಅಶ್ಲೀಲ ಸಂದೇಶವನ್ನು ಕಳುಹಿಸಿದ್ದ. ಇದರಿಂದ ಕೋಪಗೊಂಡು ದರ್ಶನ್ ಹಾಗೂ ಡಿ ಗ್ಯಾಂಗ್‌ ಈ ಕೃತ್ಯ ಎಸಗಿದ್ದಾರೆ. ಇದೀಗ ದರ್ಶನ್, ಪವಿತ್ರಾ ಸೇರಿದಂತೆ 17 ಮಂದಿ ಜೈಲು ಪಾಲಾಗಿದ್ದಾರೆ.

    Read More..; ರೇಣುಕಾಸ್ವಾಮಿ ಹ*ತ್ಯೆ ಪ್ರಕರಣ : ಅನುಕುಮಾರ್ ಬಂಧನದ ಸುದ್ದಿ ಕೇಳಿ ತಂದೆ ಹೃದಯಾ*ಘಾತದಿಂದ ಸಾ*ವು

    ಇದೀಗ ಈ ಬೆನ್ನಲ್ಲೇ ಪಾನ್ ಇಂಡಿಯಾ ಸ್ಟಾರ್ ಯಶ್ ಅವರ ಹಳೆ ವೀಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ಹೌದು, ಯಶ್ ಚಿತ್ರರಂಗದಲ್ಲಿ ಯಶಸ್ಸಿನ ಹಾದಿಯನ್ನು ಹಿಡಿದು ಇದೀಗ ಪಾನ್‌ ಇಂಡಿಯಾ ಸ್ಟಾರ್‌ ಆಗಿ ಮಿಂಚುತ್ತಿದ್ದಾರೆ. ಈ ಹಿಂದೆ ಅವರು ಅಭಿಮಾನಿಗಳ ಬಗ್ಗೆ ಹೇಳಿರುವ ಹಳೆ ವೀಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಯಶ್ ಅವರು ಅಭಿಮಾನಿಗಳ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದರು. ಅಷ್ಟೇ ಅಲ್ಲ, ಅಭಿಮಾನಿಗಳು ತಲೆ ತಗ್ಗಿಸೋ ಕೆಲಸ ಮಾಡಲ್ಲ ಎಂದಿದ್ದರು. ಈ ಮಾತನ್ನು ಅವರು ಈಗಲೂ ಉಳಿಸಿಕೊಂಡು ಬರುತ್ತಿದ್ದಾರೆ.  ಅವರಿಗೆ ಅಭಿಮಾನಿಗಳ ಮೇಲೆ ಇರೋ ಗೌರವ, ಪ್ರೀತಿ ಕಡಿಮೆ ಆಗಿಲ್ಲ. ಯಾರಾದರೂ ಅಭಿಮಾನಿಗಳು ಸಿಕ್ಕರೆ ಯಶ್ ಪ್ರೀತಿಯಿಂದ ಫೋಟೋಗೆ ಪೋಸ್ ಕೊಡುತ್ತಾರೆ.

    ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್‌ ಅರೆಸ್ಟ್‌ ಆಗಿದ್ದಾರೆ. ಈ ಪ್ರಕರಣ ಸಾಕಷ್ಟು ಚರ್ಚೆಗೂ ಎಡೆಮಾಡಿಕೊಟ್ಟಿದೆ. ಕನ್ನಡ ಚಿತ್ರರಂಗ ತಲೆ ತಗ್ಗಿಸುವಂತಾಗಿದೆ. ಆದರೆ ದರ್ಶನ್ ಫ್ಯಾನ್ಸ್ ಮಾತ್ರ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರಿಗೆ ಬೆಂಬಲವನ್ನು ಸೂಚಿಸುತ್ತಿದ್ದಾರೆ. ಈ ಮಧ್ಯೆ ಯಶ್‌ರವರ ವೀಡಿಯೋವನ್ನು ವೈರಲ್ ಮಾಡುತ್ತಿದ್ದಾರೆ.

    FILM

    ದರ್ಶನ್ ಸರ್ ನನಗೆ ಗುರು ಸಮಾನರು…ಧರ್ಮೋ ರಕ್ಷತಿ ರಕ್ಷಿತಃ… ಎಂದ ನಟಿ ರಚಿತಾ ರಾಮ್; ಹೇಳಿದ್ದೇನು?

    Published

    on

    ಬೆಂಗಳೂರು : ರೇಣುಕಾಸ್ವಾಮಿ ಹ*ತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದರ್ಶನ್ ಬಂಧನವಾಗಿದೆ. ಇತ್ತ ನಟ, ನಟಿಯರು ಪ್ರತಿಕ್ರಿಯೆ ನೀಡಲು ಆರಂಭಿಸಿದ್ದಾರೆ. ಇದೀಗ ರಚಿತಾ ರಾಮ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಇನ್ಟಾಗ್ರಾಂ ಖಾತೆಯಲ್ಲಿ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


    “ಧರ್ಮೋ ರಕ್ಷತಿ ರಕ್ಷಿತಃ” ಎಂದು ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. ನಮಸ್ಕಾರ..ಈ ನೋಟ್‌ನ ನಾನು ನಟಿಯಾಗಿ ಅಲ್ಲ ಸಾಮನ್ಯ ಪ್ರಜೆಯಾಗಿ ಬರೆಯುತ್ತಿದ್ದೇನೆ. ಇತ್ತಿಚೆಗೆ ನಡೆದ ಪ್ರಕರಣದ ಬಗ್ಗೆ ನನ್ನ ಮಾತು..! ಎಂದಿದ್ದಾರೆ.

    ಇತ್ತೀಚೆಗೆ ನಡೆದ ಪ್ರಕರಣದ ಬಗ್ಗೆ ನನ್ನ ಮಾತು.

    ಮೊದಲನೆಯದಾಗಿ ರೇಣುಕಾಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಭಗವಂತ ಧೈರ್ಯ ಭರಿಸುವ ಶಕ್ತಿ ನೀಡಲಿ ಎಂಬ ಪ್ರಾರ್ಥನೆ ಮಾಡುತ್ತೇನೆ. ಈ ಹತ್ಯೆಗೆ ಕಾನೂನಾತ್ಮಕವಾಗಿ ನ್ಯಾಯ ಸಿಗುತ್ತದೆ ಎಂಬ ಭರವಸೆ ನನಗಿದೆ.

    ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಟ ದರ್ಶನ್‌ ಸರ್‌ ನನಗೆ ಗುರು ಸಮಾನರು. ನನ್ನ ಜೀವನದ ತಪ್ಪುಗಳನ್ನು ತಿದ್ದಿ ಮಾರ್ಗದರ್ಶನ ನೀಡಿದಂತಹ ವ್ಯಕ್ತಿ ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ನಂಬಲು ಸ್ವಲ್ಪ ಕಷ್ಟವಾಗುತ್ತಿದೆ. ಏನಿದ್ದರೂ ಸತ್ಯ ಪೊಲೀಸ್‌ ತನಿಖೆಯಿಂದ ನಮ್ಮ ಮುಂದೆ ಬರಲಿದೆ ಎನ್ನುವುದೇ ನನ್ನ ನಂಬಿಕೆ. ನನ್ನ ಮಾಧ್ಯಮ ಮಿತ್ರರು ಈ ಕೇಸ್‌ನ ವರದಿಯಲ್ಲಿ ಪಾರದರ್ಶಕವಾಗಿರುತ್ತೀರಿ ಮತ್ತು ನಿಷ್ಪಕ್ಷವಾಗಿ ಕೆಲಸ ಮಾಡುತ್ತೀರಿ ಎಂದು ಆಶಿಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ : ನಟ ದರ್ಶನ್ ಮತ್ತೊಬ್ಬ ಮ್ಯಾನೇಜರ್ ಆತ್ಮಹ*ತ್ಯೆ!? ಡೆ*ತ್ ನೋಟ್ ನಲ್ಲಿ ಏನಿದೆ!?

    ದರ್ಶನ್ ಹಾಗೂ ರಚಿತಾ ರಾಮ್ ಜೊತೆಯಾಗಿ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಡಿಂಪಲ್ ಕ್ವೀನ್ ತನ್ನ ಸಿನಿ ಜರ್ನಿ ಆರಂಭಿಸಿದ್ದೇ ದರ್ಶನ್ ಜೊತೆಗೆ, ಅದೂ ‘ಬುಲ್ ಬುಲ್’ ಚಿತ್ರದ ಮೂಲಕ. ಅಂಬರೀಶ, ಜಗ್ಗುದಾದಾ, ಕ್ರಾಂತಿ ಚಿತ್ರಗಳಲ್ಲಿ ಇವರಿಬ್ಬರು ಜೊತೆಯಾಗಿ ನಟಿಸಿದ್ದರು.

    Continue Reading

    FILM

    ನಟ ದರ್ಶನ್ ಮತ್ತೊಬ್ಬ ಮ್ಯಾನೇಜರ್ ಆತ್ಮಹ*ತ್ಯೆ!? ಡೆ*ತ್ ನೋಟ್ ನಲ್ಲಿ ಏನಿದೆ!?

    Published

    on

    ಬೆಂಗಳೂರು : ಬೆಂಗಳೂರಿನ ಹೊರವಲಯದಲ್ಲಿರುವ ಆನೇಕಲ್ ತಾಲ್ಲೂಕಿನ ಬಗ್ಗನದೊಡ್ಡಿಯಲ್ಲಿ ನಟ ದರ್ಶನ್ ಅವರಿಗೆ ಸೇರಿದ್ದೆನ್ನಲಾದ ಫಾರ್ಮ್ ಹೌಸ್ ನಲ್ಲಿ ಮ್ಯಾನೇಜರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಮ್ಯಾನೇಜರ್ ಮಾನಸಿಕ ಖಿನ್ನತೆಗೆ ಒಳಗಾಗಿ ಡೆ*ತ್ ನೋಟ್ ಬರೆದಿಟ್ಟು ಆತ್ಮಹ*ತ್ಯೆಗೆ ಶರಣಾಗಿದ್ದಾರೆ ಎಂಬುದು ತಿಳಿದುಬಂದಿದೆ.


    ಶ್ರೀಧರ್ ಮೃತ ಮ್ಯಾನೇಜರ್. ಕಳೆದ ಏಪ್ರಿಲ್ ತಿಂಗಳಿನಲ್ಲಿ ಮ್ಯಾನೇಜರ್ ಶ್ರೀಧರ್ ಆತ್ಮಹತ್ಯೆಗೆ ಶರಣಾಗಿದ್ದರು. ಬಗ್ಗನದೊಡ್ಡಿಯಲ್ಲಿನ ದುರ್ಗ ಫಾರ್ಮ್ ಹೌಸ್‌ನಲ್ಲಿ ಶ್ರೀಧರ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದರು. ಆತ, ಡೆತ್ ನೋಟ್ ಬರೆದಿಟ್ಟು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇನ್ನು ಶ್ರೀಧರ್ ಮೃ*ತದೇಹವನ್ನು ನೋಡಿದ್ದ ಆತನ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದ.

    ಪೊಲೀಸರು ಸ್ಥಳ ಭೇಟಿ ಮಾಡಿ ಪರಿಶೀಲನೆ ಮಾಡಿದಾಗ ಮ್ಯಾನೇಜರ್ ಶ್ರೀಧರ್ ಫಾರ್ಮ್ ಹೌಸ್ ಪಕ್ಕದಲ್ಲಿ ರಕ್ತಕಾರಿ ಮೃ*ತಪಟ್ಟಿರುವುದು ಕಂಡು ಬಂದಿದೆ. ಒಂದು ವರ್ಷಗಳ ಕಾಲ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು, ಸುಮಾರು 2 ಎಕರೆ 36 ಗುಂಟೆ ಪ್ರದೇಶದಲ್ಲಿರುವ ಫಾರ್ಮ್ ಹೌಸ್ ನಿರ್ಮಾಣವಾಗುತ್ತಿದೆ. ಫಾರ್ಮ್‌ಹೌಸ್ ಪಕ್ಕದ ಕಲ್ಲು ಬಂಡೆ ಮೇಲೆ ಶ*ವವಾಗಿ ಪತ್ತೆಯಾಗಿದ್ದಾರೆ.
    ಡೆತ್ ನೋಟ್ ಪತ್ತೆಯಾಗಿದ್ದು, ಈ ಘಟನೆಯ ಬೆನ್ನಲ್ಲೇ ಆನೇಕಲ್ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲು ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ : WATCH : ಕಾರು ಚಲಾಯಿಸುವಾಗ ರೀಲ್ಸ್ ಮಾಡಲು ಹೋಗಿ ಪ್ರಾ*ಣ ಕಳೆದುಕೊಂಡ ಯುವತಿ

    ಡೆತ್ ನೋಟ್ ನಲ್ಲಿ ಏನಿದೆ?

    ದರ್ಶನ್ ಫಾರ್ಮ್‌ಹೌಸ್ ಮ್ಯಾನೇಜರ್ ಸಾವಿಗೂ ಮುನ್ನ ಬರೆದಿಟ್ಟಿರುವ ಡೆ*ತ್‌ನೋಟ್ ಪತ್ತೆಯಾಗಿದೆ. ಡೆತ್ ನೋಟ್ ಅನ್ನು ಸ್ವತಃ ತಾನೇ ಬರೆದಿಟ್ಟಿರುವ ಮ್ಯಾನೇಜರ್ ಶ್ರೀಧರ್ ಡೆ*ತ್ ನೋಟ್ ನಲ್ಲಿ ಹೆಬ್ಬೆಟ್ಟು ಕೂಡಾ ಒತ್ತಿದ್ದಾರೆ.

    ಅದರಲ್ಲಿ ಯಾವುದೋ ಕಾರಣದಿಂದ ನನ್ನ ಪರ್ಸನಲ್ ಒಂಟಿತನ ಕಾಡುತ್ತಿದೆ. ಬದುಕುವ ಆಸೆಯಿಲ್ಲ, ನನ್ನ ಸಾವಿಗೆ ನಾನೇ ಕಾರಣ. ನನ್ನ ಸಾ*ವಿನ ಕಾರಣ ಹಾಗೂ ಹಿನ್ನೆಲೆಯನ್ನು ಇಟ್ಟುಕೊಂಡು ಸ್ನೇಹಿತರು, ಕುಟುಂಬ ಸದಸ್ಯರು ಸೇರಿದಂತೆ ಯಾರೊಬ್ಬರಿಗೂ ತೊಂದರೆ ಕೊಡಬೇಡಿ. ನಾನು ಯಾರಿಗೆ ಫೋನ್ ಮಾಡಿದ್ದೆ, ಅದು ಇದು ಎಂದು ಯಾರಿಗೂ ಪೊಲೀಸರು ತೊಂದರೆ ಕೊಡಬೇಡಿ. ನಮ್ಮ ಮನೆಯಲ್ಲಿ ಅಪ್ಪ, ಅಮ್ಮ, ಸಹೋದರಿಯರು ಸೇರಿ ಎಲ್ಲರಿಗೂ ಹೇಳುತ್ತಿದ್ದೇನೆ, ನನ್ನ ಸಾವಿಗೆ ನಾನೇ ಕಾರಣ ಎಂದು ಹೇಳಿದ್ದಾರೆ.

    Continue Reading

    FILM

    ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ‘ದಿ ಪುಷ್ಪ-2’..!

    Published

    on

    ಅಂಧ್ರಪ್ರದೇಶ/ಮಂಗಳೂರು: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ ಸಿನೆಮಾ ಪುಷ್ಪ–2 ಸಿನೆಮಾದಲ್ಲಿ ಸಿನಿ ಪ್ರೇಕ್ಷಕರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಭಾರೀ ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನೆಮಾ ಆ.15ಕ್ಕೆ ರಿಲೀಸ್ ಆಗಲಿದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಆಗಸ್ಟ್‌ 15 ಸ್ವಾತಂತ್ರ್ಯ ದಿನಾಚರಣೆಯಂದು ಸಿನೆಮಾ ರಿಲೀಸ್ ಆಗುವುದಿಲ್ಲ ಎಂಬ ಊಹಾಪೋಹಗಳು ಹರಿದಾಡುತ್ತಿತ್ತು. ಇದೀಗ ಚಿತ್ರ ತಂಡ ಈ ಎಲ್ಲಾ ಊಹಾಪೋಹಗಳಿಗೆ ತೆರೆ ನೀಡಿದೆ. ಇದರಿಂದ ಪುಷ್ಪ-2 ಸಿನೆಮಾಕ್ಕಾಗಿ ಕಾತುರದಿಂದ ಕಾಯುತ್ತಿದ್ದ ಅಲ್ಲು ಫ್ಯಾನ್ಸ್‌ಗೆ ನಿರಾಸೆಯಾಗಿದೆ.

    Read More..; ಪುಷ್ಪ 2 ರಿಲೀಸ್ ಡೇಟ್ ಬದಲು…? ಸ್ಪಷ್ಟನೆ ನೀಡಿದ ಚಿತ್ರ ತಂಡ

    ವರ್ಷದ ಕೊನೆಯಲ್ಲಿ ‘ದಿ ಪುಷ್ಪ-2’

    ಚಿತ್ರ ತಂಡ ಪುಷ್ಪ-2 ಸಿನೆಮಾ ರಿಲೀಸ್ ಡೇಟ್‌ಅನ್ನು ಖಚಿತಪಡಿಸಿದೆ. ಈ ಹಿಂದೆ ಆಗಸ್ಟ್‌ ನಲ್ಲಿ ಚಿತ್ರ ರಿಲೀಸ್ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ಡಿಸೆಂಬರ್ 6 ರಂದು ಸಿನೆಮಾವನ್ನು ರಿಲೀಸ್ ಮಾಡಲು ಚಿತ್ರ ತಂಡ ಸಿದ್ಧತೆ ನಡೆಸಿದೆ. ಈ ಸಿನೆಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಪ್ಯಾನ್ ಇಂಡಿಯಾ ಸಿನೆಮಾ. ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಸಿನೆಮಾ ಇದಾಗಿದ್ದು, ಸಣ್ಣ ಬ್ಯಾನರ್‌ನಲ್ಲಿ ನಿರ್ಮಾಣಗೊಂಡಿರುವ ಸಿನೆಮಾಗಳು ಈ ಸಿನೆಮಾ ರಿಲೀಸ್‌ ಡೇಟ್‌ಗಾಗಿ ಕಾಯುತ್ತಿದ್ದರು. ತೆಲುಗಿನ ಸಣ್ಣ ಬಜೆಟ್‌ ಸಿನೆಮಾಗಳು ಈ ಸಿನೆಮಾ ಯಾವ ಡೇಟ್‌ ಅಲ್ಲಿ ರಿಲೀಸ್ ಆಗುತ್ತೆ ಎಂಬುದನ್ನು ನೋಡಿಕೊಂಡು ತಮ್ಮ ಸಿನೆಮಾಗಳ ರಿಲೀಸ್ ಡೇಟ್ ಪ್ಲ್ಯಾನ್‌ ಮಾಡಬೇಕಿತ್ತು.

     

    Continue Reading

    LATEST NEWS

    Trending