Connect with us

    LATEST NEWS

    ಗೋಹತ್ಯೆ ನಿಷೇಧ ಕಾಯ್ದೆ ನಂತರ ರಾಜ್ಯದಲ್ಲಿ 400 ಪ್ರಕರಣ: ಕಡತದಲ್ಲೇ ಬಾಕಿಯಾದ ಗೋಶಾಲೆ

    Published

    on

    ಬೆಂಗಳೂರು: ರಾಜ್ಯದಲ್ಲಿ ಗೋಹತ್ಯೆಯನ್ನು ನಿಷೇಧಿಸಿ ಕಾಯ್ದೆ ಜಾರಿಗೆ ಬಂದ ಬಳಿಕ ಈವರೆಗೆ ರಾಜ್ಯದಲ್ಲಿ 400 ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.


    ಕರ್ನಾಟಕ ಜಾನುವಾರ ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಈಗಾಗಲೇ ರಾಜ್ಯದಲ್ಲಿ ಜಾರಿಗೊಂಡಿದೆ.

    ಜಾನುವಾರ ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಪ್ರಕಾರ, ಕರ್ನಾಟಕದಲ್ಲಿ ಯಾವುದೇ ವ್ಯಕ್ತಿ ಜಾನುವಾರ ಹತ್ಯೆ ಮಾಡಲು ಅಥವ ಹತ್ಯೆ ನಡೆಸುವವರಿಗೆ ಮಾರಾಟ ಮಾಡಲು ಅವಕಾಶವಿಲ್ಲ. ಹೀಗಿದ್ದರೂ ಅಕ್ರಮ ಗೋಸಾಗಾಟ ಪ್ರಕರಣಳು ರಾಜ್ಯದಲ್ಲಿ ನಡೆಯುತ್ತಿವೆ.
    ಪ್ರತಿ ಜಿಲ್ಲೆಯಲ್ಲೂ ಗೋಶಾಲೆ
    ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ಬಳಿಕ ರಾಜ್ಯದಲ್ಲಿ ಗೋವುಗಳ ಸಂಖ್ಯೆ ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ಗೋವುಗಳ ಸಂರಕ್ಷಣೆಗಾಗಿ ಪ್ರತಿ ಜಿಲ್ಲೆಗಳಲ್ಲಿ ಗೋಶಾಲೆ ನಿರ್ಮಾಣಕ್ಕೆ ಈಗಾಗಲೇ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.

    ಆದರೆ ಕಾರಣಾಂತರಗಳಿಂದ ಗೋಶಾಲೆ ಆರಂಭ ವಿಳಂಬವಾಗುತ್ತಿದೆ. ಅ. 2 ಕ್ಕೆ ಈ ಪ್ರಕ್ರಿಯೆಗೆ ಚಾಲನೆ ನೀಡಬೇಕಿತ್ತು. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಸ್ಥಳ ಗುರುತಿಸುವ ಕಾರ್ಯ ಆರಂಭವಾಗಿದೆ.

    LATEST NEWS

    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಪಡುಬಿದ್ರಿ: ಜೂ. 23 ರಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ

    Published

    on

    ಪಡುಬಿದ್ರಿ: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಪಡುಬಿದ್ರಿ ಶಾಖೆಯ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ತಪಾಸಣೆ ಚಿಕಿತ್ಸಾ ಶಿಬಿರವು ರೋಟರಿ ಕ್ಲಬ್ ಪಡುಬಿದ್ರಿ ಹಾಗೂ ಯುವವಾಹಿನಿ (ರಿ.) ಪಡುಬಿದ್ರಿ ಘಟಕ, ಇವರುಗಳ ಜಂಟಿ ಸಹಯೋಗದೊಂದಿಗೆ ಜೂನ್ ೨೩ ರ ಆದಿತ್ಯವಾರ, ಪೂರ್ವಾಹ್ನ ೯.೩೦ ರಿಂದ ಅಪರಾಹ್ನ ೧೨.೩೦ರವರೆಗೆ ಕರ್ನಾಟಕ ಪಬ್ಲಿಕ್ ಶಾಲೆ (ಬೋರ್ಡ್ ಶಾಲೆ), ಪಡುಬಿದ್ರಿಯಲ್ಲಿ ಆಯೋಜಿಸಲಾಗಿದೆ.

    ವೈದ್ಯಕೀಯ ಶಿಬಿರದಲ್ಲಿ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ, ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ, ದೇರಳಕಟ್ಟೆ ಹಾಗೂ ಸಮುದಾಯ ದಂತ ವಿಭಾಗ ,ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ ಇವರ ನುರಿತ ವೈದ್ಯರ ತಂಡದಿAದ ಉಚಿತ ಕಣ್ಣಿನ ತಪಾಸಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ, ಹುಳುಕು ಹಲ್ಲುಗಳ ಭರ್ತಿ, ಶುಚಿಗೊಳಿಸುವುದು, ಕೀಳುವುದು, ಬಿ.ಪಿ. ಮತ್ತು ಮಧುಮೇಹ ತಪಾಸಣೆ, ಸಾಮಾನ್ಯ ರೋಗ ತಪಾಸಣೆ, ಉಚಿತ ಔಷಧಿ ವಿತರಣೆ, ರಕ್ತ ಗುಂಪಿನ ವರ್ಗಿಕರಣ, ಇತರ ವೈದ್ಯಕೀಯ ಸೇವೆಗಳು ಹಾಗೂ ಹೆಚ್ಚಿನ ಚಿಕಿತ್ಸೆಗೆ ಸೂಕ್ತ ಸಲಹೆಗಳನ್ನು ನೀಡಲಾಗುವುದು. ಅಗತ್ಯವುಳ್ಳ ಕಣ್ಣಿನ ರೋಗಿಗಳಿಗೆ ಸಂಘದ ವತಿಯಿಂದ ಕನ್ನಡಕವನ್ನು ಉಚಿತವಾಗಿ ವಿತರಿಸಲಾಗುವುದು.

    ಇದನ್ನೂ ಓದಿ : ಬೆಂಗಳೂರಿನಲ್ಲಿ ಭಾರತ​ ತಂಡದ ಮಾಜಿ ಕ್ರಿಕೆಟರ್ ಆತ್ಮಹ*ತ್ಯೆ; ಕಂಬನಿ ಮಿಡಿದ ಅನಿಲ್ ಕುಂಬ್ಳೆ

    ಸಂಘದ ಸದಸ್ಯರು ಮತ್ತು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕಾಗಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

    Continue Reading

    LATEST NEWS

    ಬೆಂಗಳೂರಿನಲ್ಲಿ ಭಾರತ​ ತಂಡದ ಮಾಜಿ ಕ್ರಿಕೆಟರ್ ಆತ್ಮಹ*ತ್ಯೆ; ಕಂಬನಿ ಮಿಡಿದ ಅನಿಲ್ ಕುಂಬ್ಳೆ

    Published

    on

    ಬೆಂಗಳೂರು: ಭಾರತ ತಂಡದ ಮಾಜಿ ಕ್ರಿಕೆಟರ್ ಡೇವಿಡ್ ಜಾನ್ಸನ್​(52) ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಇಂದು (ಜೂನ್ 20) ಬೆಂಗಳೂರಿನ ಕೊತ್ತನೂರು ಬಳಿ ಇರುವ ಅಪಾರ್ಟ್​ಮೆಂಟ್​ ಮೇಲಿಂದ ಹಾರಿ ಆತ್ಮಹತ್ಯೆ*ಗೆ ಶರಣಾಗಿದ್ದಾರೆ.

    ಡೇವಿಡ್ ಜಾನ್ಸನ್ ಅವರು ಅನಾರೋಗ್ಯ ನಿಮಿತ್ತ ಖಿನ್ನತೆಗೊಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಆತ್ಮಹ*ತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. 1996ರಲ್ಲಿ ಭಾರತ​ ತಂಡದ ಪರ ಟೆಸ್ಟ್​ ಪಂದ್ಯ ಆಡಿದ್ದ ಡೇವಿಡ್ ಜಾನ್ಸನ್. ಕೆಪಿಎಲ್​ನಲ್ಲಿ ಬೆಳಗಾವಿ ಪ್ಯಾಂಥರ್ಸ್ ಪರ ಆಡಿದ್ದರು.

    ಸದ್ಯ ಸ್ಥಳಕ್ಕೆ ಕೊತ್ತನೂರು ಪೊಲೀಸರು ಭೇಟಿ ನೀಡಿ ಘಟನೆಯ ಸಂಬಂಧ ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಇನ್ನು ಡೇವಿಡ್ ಜಾನ್ಸನ್ ನಿಧನಕ್ಕೆ ಕ್ರಿಕೆಟ್ ವಲಯದಿಂದ ಸಂತಾಪಗಳು ವ್ಯಕ್ತವಾಗಿವೆ. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ಹಿರಿಯ ಕ್ರಿಕೆಟಿಗ ಜಾನ್ಸನ್​ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

    1971ರ ಅಕ್ಟೋಬರ್ 16ರಂದು ಹಾಸನ ಜಿಲ್ಲೆಯ ಅರಸಿಕೆರೆಯಲ್ಲಿ ಜನಿಸಿದ್ದ ಡೇವಿಡ್ ಜಾನ್ಸನ್, ಟೀಂ ಇಂಡಿಯಾ ಪರ ಎರಡು ಟೆಸ್ಟ್ ಪಂದ್ಯಗಳನ್ನಾಡಿ ಮೂರು ವಿಕೆಟ್ ಕಬಳಿಸಿದ್ದರು. ಆ ಕಾಲಘಟ್ಟದಲ್ಲಿ ಟೀಂ ಇಂಡಿಯಾ ಪರ ಅತಿವೇಗದ ಬೌಲಿಂಗ್ ಮಾಡಿದ ದಾಖಲೆ ಡೇವಿಡ್ ಜಾನ್ಸನ್ ಅವರ ಹೆಸರಿನಲ್ಲಿತ್ತು.

    1996ರಲ್ಲಿ ಭಾರತ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಡೇವಿಡ್ ಜಾನ್ಸನ್, ಆಸ್ಟ್ರೇಲಿಯಾ ತಂಡವು ಭಾರತ ಪ್ರವಾಸ ಮಾಡಿದ್ದಾಗ ಟೀಂ ಇಂಡಿಯಾ ಪರ ಕಣಕ್ಕಿಳಿದಿದ್ದರು. ಆ ಸರಣಿಯಲ್ಲಿ ಡೇವಿಡ್ ಜಾನ್ಸನ್ ಗಂಟೆಗೆ 157.8 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿ ಆಸ್ಟ್ರೇಲಿಯಾದ ಮೈಕಲ್ ಸ್ಲೇಟರ್ ಅವರನ್ನು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

    ಇನ್ನು ಡೇವಿಡ್ ಜಾನ್ಸನ್‌ ಒಟ್ಟು 39 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನಾಡಿ ಒಟ್ಟು 125 ವಿಕೆಟ್ ಕಬಳಿಸಿ ಮಿಂಚಿದ್ದರು. ಇನ್ನು ಕೆಳಕ್ರಮಾಂಕದಲ್ಲಿ ಬ್ಯಾಟರ್ ಆಗಿದ್ದ ಜಾನ್ಸನ್ 437 ರನ್ ಪೇರಿಸಿದ್ದರು.

    Continue Reading

    LATEST NEWS

    ಅತ್ತಿಗೆ ಮೇಲಿನ ಕೋಪಕ್ಕೆ 3 ವರ್ಷದ ಮಗುವನ್ನು ಹ*ತ್ಯೆಗೈದ ಪಾಪಿ!

    Published

    on

    ಚಿಕ್ಕಬಳ್ಳಾಪುರ : ಚಿಂತಾಮಣಿ ತಾಲ್ಲೂಕಿನ ನಿಮ್ಮಕಾಯಲಹಳ್ಳಿ ಗ್ರಾಮದಲ್ಲಿ ಬುಧವಾರ(ಜೂ.19) ಸಂಜೆ  3 ವರ್ಷದ ಮಗುವನ್ನು ಹ*ತ್ಯೆ ಮಾಡಲಾಗಿತ್ತು. ಈ ಪ್ರಕರಣದ ಬೆಂಬತ್ತಿದ ಬಟ್ಲಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊ*ಲೆಗೈದಿದ್ದು ಬೇರ್ಯಾರೂ ಅಲ್ಲ, ಮಗುವಿನ ಚಿಕ್ಕಪ್ಪನೆ ಎಂಬುದು ಬಹಿರಂಗವಾಗಿದೆ.


    ಆರೋಪಿ ರಂಜಿತ್​ಗೆ ಅತ್ತಿಗೆ,​ ದುಡಿದು ತಿನ್ನುವಂತೆ ಬುದ್ದಿವಾದ ಹೇಳಿದ್ದೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಇಂಜಿನಿಯರಿಂಗ್ ಮುಗಿಸಿದ್ದ ಆರೋಪಿ ರಂಜಿತ್​ ಕೆಲಸವಿಲ್ಲದೆ ಮನೆಯಲ್ಲೇ ಇರುತ್ತಿದ್ದ. ಹೀಗಾಗಿ ಅತ್ತಿಗೆ ಉಂಡಾಡಿ ಗುಂಡ ಆಗಿದ್ದೀಯಾ ಅಂತ ಬುದ್ದಿವಾದ ಹೇಳಿದ್ದಾರಂತೆ. ಇದರಿಂದ ಕೋಪಗೊಂಡ ರಂಜಿತ್, ಅತ್ತಿಗೆಗೆ ಹೊಡೆದಿದ್ದಲ್ಲದೆ, ಮಗುವನ್ನು ಕರೆದುಕೊಂಡು ಹೋಗಿ ಕೊ*ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

    ಏನಿದು ಪ್ರಕರಣ ?

    ನಿಮ್ಮಕಾಯಲಹಳ್ಳಿ ಗ್ರಾಮದಲ್ಲಿ ಬುಧವಾರ(ಜೂ.20) ಸಂಜೆ ಬೆಚ್ಚಿ ಬೀಳುವಂತಹ ಘಟನೆ ನಡೆದಿತ್ತು. ಸ್ವತಃ ಚಿಕ್ಕಪ್ಪ ರಂಜಿತ್ ತನ್ನ ಅಣ್ಣನ 3 ವರ್ಷದ ಮಗುವನ್ನು ಮನೆ ಬಳಿಯ ಪಾಳುಬಿದ್ದ ಮನೆಯೊಂದರಲ್ಲಿ ಬಟ್ಟೆ ಒಗೆದಂತೆ ಚಪ್ಪಡಿಕಲ್ಲಿಗೆ ಹೊಡೆದು, ನಂತರ ಚಾಕುವಿನಿಂದ ಕತ್ತುಸೀಳಿ ಬರ್ಬರವಾಗಿ ಹ*ತ್ಯೆ ಮಾಡಿದ್ದಾನೆ.

    ಇನ್ನು ವಿಷಯ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್.ನಾಗೇಶ್, ಬಟ್ಲಹಳ್ಳಿ ಠಾಣೆಯ ಪೊಲೀಸರು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು.  ಆರೋಪಿ ರಂಜಿತ್ ಮೃ*ತ ಬಾಲಕನ ತಂದೆ ಮಂಜುನಾಥ್ ಚಿಕ್ಕಪ್ಪನ ಮಗನಾಗಿದ್ದಾನೆ. 2 ಕುಟುಂಬಗಳು ಒಟ್ಟಿಗೆ ಇವೆ. ಭೂ ವಿವಾದ, ವೈಯಕ್ತಿಕ ದ್ವೇಷ, ಹಳೇ ದ್ವೇಷ ಯಾವುದೂ ಇವರ ನಡುವೆ ಇರಲಿಲ್ಲವಂತೆ. ಹಾಗಾಗಿ ಯಾವುದೇ ಅನುಮಾನ ಬಂದಿರಲಿಲ್ಲ.

    ಇದನ್ನೂ ಓದಿ …ಬೆಚ್ಚಿ ಬಿದ್ದ ಹಾಸನ….ಹಾಡಹಗಲೇ ಗುಂಡಿಕ್ಕಿ ಇಬ್ಬರ ಹ*ತ್ಯೆ

    ಆರೋಪಿ ರಂಜಿತ್ ಬುಧವಾರ ಸಂಜೆ 4 ಗಂಟೆ ಸಮಯದಲ್ಲಿ ಅಣ್ಣನ ಮನೆಯಲ್ಲೇ ಊಟ ಮಾಡಿ, ಮಗುವಿನ ಜೊತೆ ಆಟವಾಡಿದ್ದಾನೆ. ನಂತರ ಮಗುವನ್ನು ಕರೆದುಕೊಂಡು ಹೋಗಿದ್ದ. ಇನ್ನು ಆರೋಪಿಯ ಮೇಲೆ ಆತನ ಸಂಬಂಧಿಕರಿಗೆ ಯಾವುದೇ ಅನುಮಾನವಿರಲಿಲ್ಲ. ಪೊಲೀಸರ ಮುಂದೆಯೂ ಆರೋಪಿ ಬಾಯ್ಬಿಡುತ್ತಿರಲಿಲ್ಲ. ಇದರಿಂದ ಪುಟಾಣಿ ಕೊ*ಲೆ ನಿಗೂಢವಾಗಿ ಉಳಿದಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    Continue Reading

    LATEST NEWS

    Trending