Connect with us

    FILM

    ವನ್ಯ ಜೀವಿಗಳೊಂದಿಗೆ ಅದಾ ಶರ್ಮಾ; ಆನೆ, ಕರಡಿಗಳಿಗೆ ಆಹಾರ ತಯಾರಿಸಿ ಕೊಟ್ಟ ನಟಿ!

    Published

    on

    ಖ್ಯಾತ ನಟಿ ಅದಾ ಶರ್ಮಾ ಈಗ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಅವರು ಇತ್ತೀಚೆಗೆ ಆಗ್ರಾ ಮತ್ತು ಮಥುರಾ ವನ್ಯಜೀವಿ ಎಸ್ ಒ ಎಸ್ ಕೇಂದ್ರಗಳಿಗೆ ಭೇಟಿ ನೀಡಿದರು. ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    ಮೂರು ದಿನಗಳ ಕಾಲ ಅವರು ವನ್ಯಜೀವಿ ಎಸ್ ಒ ಎಸ್ ಕೇಂದ್ರಗಳಿಗೆ ಭೇಟಿ ನೀಡಿದರು. ಮೂರು ದಿನಗಳ ಕಾಲ ಅದಾ ಶರ್ಮಾ ಅಲ್ಲೇ ಕಾಲ ಕಳೆದಿದ್ದಾರೆ. ಅಲ್ಲಿ ಪ್ರಾಣಿಗಳೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಪ್ರಾಣಿಗಳಿಗೆ ಆಹಾರ ನೀಡಿದ್ದಾರೆ. ಜೊತೆಗೆ ಅವುಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಅವರ ಪ್ರಭಾವಶಾಲಿ ‘ರಿಫ್ಯೂಸ್ ಟು ರೈಡ್’ ಅಭಿಯಾನ ಬಗ್ಗೆ ಅಲ್ಲಿ ತಿಳಿದುಕೊಂಡರು.

     

    ಹಲವು ವಿಚಾರ ತಿಳಿದುಕೊಂಡ ನಟಿ :

    ಆನೆ ಸಂರಕ್ಷಣಾ ಮತ್ತು ಆರೈಕೆ ಕೇಂದ್ರದಲ್ಲಿ, ಪಾರುಗಾಣಿಕಾ ಸೌಲಭ್ಯದಲ್ಲಿ ರಕ್ಷಿಸಲಾದ ಆನೆಗಳ ಇತಿಹಾಸದ ಬಗ್ಗೆ ತಿಳಿದುಕೊಂಡರು. ಸಂಸ್ಥೆಯ ಆನೆ ಆರೈಕೆ ತಜ್ಞರು ಮತ್ತು ಪಶುವೈದ್ಯರ ತಂಡದೊಂದಿಗೆ ತಿಳಿವಳಿಕೆ ಸೆಷನ್‌ಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ, ಅದಾ ಅವರು ಭಾರತದಲ್ಲಿ ಏಷ್ಯಾದ ಆನೆಗಳು ಎದುರಿಸುತ್ತಿರುವ ಮಹತ್ವದ ಸವಾಲುಗಳ ಬಗ್ಗೆ ತಿಳಿದುಕೊಂಡರು.

    ವಿಶ್ವದ ಅತಿದೊಡ್ಡ ಪಾರುಗಾಣಿಕಾ ಮತ್ತು ಪುನರ್ವಸತಿ ಕೇಂದ್ರವಾದ ಆಗ್ರಾ ಕರಡಿ ಸಂರಕ್ಷಣಾ ಕೇಂದ್ರದ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದ ಅದಾ ಶರ್ಮಾ ಭಾರತದಲ್ಲಿನ ಕರಡಿ ವ್ಯಾಪಾರದ ಕುರಿತು ಮಾಹಿತಿ ಪಡೆದರು.

    ಮಥುರಾದಲ್ಲಿರುವ ಭಾರತದ ಮೊದಲ ಆನೆ ಆಸ್ಪತ್ರೆಗೂ ಅದಾ ಭೇಟಿ ನೀಡಿದ್ದರು. ಇಲ್ಲಿ ಸೆರೆಯಾಗಿರುವ ಆನೆಗಳಲ್ಲಿ ಸಂಭವಿಸುವ ಗಂಭೀರ ಆರೋಗ್ಯ ಸಮಸ್ಯೆಗಳ ಬಗ್ಗೆ ಅವರು ತಿಳಿದುಕೊಂಡರು. ಗಾಯಗೊಂಡ, ಅನಾರೋಗ್ಯ ಮತ್ತು ವಯಸ್ಸಾದ ಆನೆಗಳಿಗೆ ಚಿಕಿತ್ಸೆ ನೀಡುವಲ್ಲಿ ತಜ್ಞ ಪಶುವೈದ್ಯ ತಂಡದ ಪ್ರಯತ್ನಗಳನ್ನು ವೀಕ್ಷಿಸಿದರು.


    ಆಸ್ಪತ್ರೆಗೆ ತನ್ನ ಭೇಟಿಯ ಸಮಯದಲ್ಲಿ, ಅದಾ ವಯಸ್ಸಾದ ಹೆಣ್ಣು ಆನೆಗೆ ದಿನನಿತ್ಯದ ವೈದ್ಯಕೀಯ ಚಿಕಿತ್ಸೆ ಮತ್ತು ಲೇಸರ್ ಚಿಕಿತ್ಸೆಯನ್ನು ಸಹ ವೀಕ್ಷಿಸಿದರು.

    ಇದನ್ನೂ ಓದಿ : ನೀರಿಲ್ಲ..ನೀರಿಲ್ಲ…ಗಂಡ – ಹೆಂಡತಿ ಒಟ್ಟಿಗೆ ಸ್ನಾನ ಮಾಡಿ ಎಂದು ಆದೇಶಿಸಿದ ಪಾಲಿಕೆ

    ಆಹಾರ ತಯಾರಿ :

    ಕರಡಿ ಮತ್ತು ಆನೆ ರಕ್ಷಣಾ ಕೇಂದ್ರಗಳಲ್ಲಿದ್ದಾಗ, ಅದಾ ಅವರು ವಿವಿಧ ಸ್ವಯಂಸೇವಕ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಅಲ್ಲಿ ಅವರು ಕರಡಿಗಳಿಗೆ ಆಹಾರ ವಿತರಿಸಿದರು. ಕೇಂದ್ರಗಳಲ್ಲಿನ ಆನೆಗಳು ಮತ್ತು ಕರಡಿಗಳಿಗೆ ಆಹಾರದ ವ್ಯವಸ್ಥೆ ಮಾಡಿದರು. ಆನೆಗೆ ಆಹಾರವನ್ನು ತಯಾರಿಸುವಾಗ, ಅವರು ಹಣ್ಣುಗಳನ್ನು ಕತ್ತರಿಸಿ ನೀಡಿದರು.

    ಆನೆಗಳಿಗೆ ತಿನ್ನಲು ಮೇವು ಕೂಡ ನೀಡಿದರು. ಆನೆಗಳೊಂದಿಗೆ ಯಮುನಾ ನದಿಯ ದಡದಲ್ಲಿ ಸಂಜೆ ವಾಕ್ ಮಾಡಿದರು. ಕೊನೆಗೆ ತಮ್ಮ ಭೇಟಿಯ ಸ್ಮರಣೆಗಾಗಿ ಅಲ್ಲೊಂದು ಗಿಡ ನೆಟ್ಟರು.

    FILM

    ಯಶ್ ‘ಟಾಕ್ಸಿಕ್’ ಚಿತ್ರಕ್ಕೆ ಸಂಕಷ್ಟ; ಹೈಕೋರ್ಟ್ ನೋಟೀಸ್!

    Published

    on

    ಮಂಗಳೂರು / ಬೆಂಗಳೂರು : ಕೆಜಿಎಫ್ ಸಿನಿಮಾ ಹಿಟ್ ಆದ ಮೇಲೆ ಯಶ್ ನತ್ತ ಎಲ್ಲರ ಚಿತ್ತ ತುಸು ಹೆಚ್ಚಾಗೇ ವಾಲಿದೆ. ಯಶ್ ಮುಂದಿನ ಚಿತ್ರದ ಬಗ್ಗೆ ಎಲ್ಲರ ಕಣ್ಣಿದೆ. ಸದ್ಯ ರಾಕಿಂಗ್ ಸ್ಟಾರ್ ‘ಟಾಕ್ಸಿಕ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಅಪ್ಡೇಟ್ ಗಾಗಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಇತ್ತೀಚೆಗೆ ಅವರ ಹೊಸ ಹೇರ್ ಸ್ಟೈಲ್ ಗಮನ ಸೆಳೆದಿತ್ತು. ಆದರೆ, ಈಗ ಯಶ್ ‘ಟಾಕ್ಸಿಕ್’ಗೆ ಸಂಕಷ್ಟ ಎದುರಾಗಿದೆ.


    ಹೌದು, ಇದೀಗ ಟಾಕ್ಸಿಕ್ ಚಿತ್ರದ ವಿರುದ್ಧ ವಕೀಲರೊಬ್ಬರು ಕೋರ್ಟ್ ಮೆಟ್ಟಿಲೇರಿದ್ದಾರೆ. ಚಿತ್ರಕ್ಕಾಗಿ ನಿರ್ಮಿಸಲಾಗಿರುವ ಬೃಹತ್ ಸೆಟ್ ನಿಂದ ಸಮಸ್ಯೆ ಎದುರಾಗಿದೆ ಎಂಬ ಆರೋಪ ಮಾಡಿದ್ದಾರೆ. ಪೀಣ್ಯ ಪ್ಲಾಂಟೇಷನ್ ಜಮೀನಿನ ಬಳಿ 20 ಎಕರೆ ಜಾಗದಲ್ಲಿ ಬೃಹತ್ ಸೆಟ್ ಹಾಕಲಾಗಿದೆ. ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಸೆಟ್ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿ, ವಕೀಲ ಜಿ. ಬಾಲಾಜಿ ನಾಯ್ಢು ಕರ್ನಾಟಕ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದಾರೆ. ಈ ಸಂಬಂಧ ಹೈಕೋರ್ಟ್ ಟಾಕ್ಸಿಕ್ ಚಿತ್ರದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಮತ್ತು ಎಚ್ ಎಂಟಿ ಸಂಸ್ಥೆಗೆ ನೊಟೀಸ್ ನೀಡಿದೆ.

    ಇದನ್ನೂ ಓದಿ : ವಿವಾಹಿತ ನಾಯಕ ನಟನ ಜೊತೆ ‘ಸಾಯಿ ಪಲ್ಲವಿ’ ಡೇಟಿಂಗ್..!
    ‘ಟಾಕ್ಸಿಕ್’ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿದ್ದು, ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಯಶ್ ಗೆ ಕಿಯಾರಾ ಅಡ್ವಾಣಿ ನಾಯಕಿ. ಚಿತ್ರದಲ್ಲಿ ನಯನತಾರಾ, ಹುಮಾ ಖುರೇಷಿ, ಕರೀನಾ ಕಪೂರ್ ಸೇರಿದಂತೆ ದೊಡ್ಡ ತಾರಾಂಗಣವಿದೆ.

    Continue Reading

    FILM

    ವಿವಾಹಿತ ನಾಯಕ ನಟನ ಜೊತೆ ‘ಸಾಯಿ ಪಲ್ಲವಿ’ ಡೇಟಿಂಗ್..!

    Published

    on

    Sai Pallavi: ಮಳಯಾಲಂ ಚಿತ್ರ ‘ಪ್ರೇಮಂ’ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ಸಾಯಿ ಪಲ್ಲವಿ ಚೊಚ್ಚಲ ಸಿನೆಮಾದಲ್ಲಿ ತಮ್ಮ ನಟನೆಯ ಮೂಲಕ ಎಲ್ಲರ ಮನಗೆದ್ದಿದ್ದರು. ವಿಭಿನ್ನ ರೀತಿಯ ಕಥೆಗಳನ್ನು ಆರಿಸಿಕೊಳ್ಳುವ ಈಕೆ ನ್ಯಾಚುರಲ್ ಬ್ಯೂಟಿ ಎಂದೇ ಖ್ಯಾತಿಯಾಗಿದ್ದಾರೆ. ಮೊಡವೆ ಅಂದ್ರೆ ಎಲ್ಲಾ ಹುಡುಗಿಯರು ಮುಜುಗರ ಪಟ್ಟುಕೊಂಡ್ರೆ ಸಾಯಿ ಪಲ್ಲವಿಗೆ ಮಾತ್ರ ವರದಾನ ಅಂದ್ರೆ ತಪ್ಪಾಗಲ್ಲ. ಇತ್ತೀಚೆಗೆ ಕೋಟಿ ಕೋಟಿ ಸಂಭಾವನೆ ಪಡೆಯುವ ಸ್ಟಾರ್‌ ನಟಿಯರ ಸಾಲಿನಲ್ಲಿ ಸಾಯಿ ಪಲ್ಲವಿ ಕೂಡಾ ಸೇರಿದ್ದಾರೆ. ಚಿತ್ರರಂಗದ ಘಟಾನುಘಟಿ ನಾಯಕ ನಟರುಗಳು ಕಾಣಿಸಿಕೊಳ್ಳಲಿರುವ ‘ರಾಮಾಯಣ’ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ.

    ನಿವಿನ್ ಪೌಲ್ ನಟನೆಯ ‘ಪ್ರೇಮಂ’ ಸಿನೆಮಾದಲ್ಲಿ ಮಲಾರ್‌ ಆಗಿ ಕಾಣಿಸಿಕೊಂಡ ಪಲ್ಲವಿ ಎಲ್ಲರ ಫೇವರೆಟ್ ಆಗಿದ್ದರು. ಬಳಿಕ ತೆಲುಗುವಿನ ‘ಫಿದಾ’ ಸಿನೆಮಾ ಕೂಡಾ ಸೂಪರ್‌ ಹಿಟ್ ಆಗಿತ್ತು. ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ಈಕೆ ಸಾಂಪ್ರದಾಯಿಕ ಉಡುಗೆಯಲ್ಲೇ ಹೆಚ್ಚು ಜನರ ಗಮನ ಸೆಳೆದಿದ್ದಾರೆ.

    ಸುಸಂಸ್ಕೃತ ಕುಟುಂಬದಿಂದ ಬಂದ ಸಾಯಿ ಪಲ್ಲವಿ ಡೀಪ್‌ ಡ್ರೆಸ್‌ಗಳನ್ನು ಇಷ್ಟ ಪಡುವುದಿಲ್ಲ. ಆದರೆ ಈ ಹಿಂದೆ ಟ್ಯಾಂಗೊ ಡ್ಯಾನ್ಸ್ ಅಭ್ಯಾಸ ಮಾಡುತ್ತಿದ್ದ ನಟಿ ಈ ನೃತ್ಯಕ್ಕೆ ಅನುಗುಣವಾಗಿ ಬಟ್ಟೆಯನ್ನು ಧರಿಸಬೇಕಿತ್ತು. ಮನೆಯವರ ಅನುಮತಿಯೊಂದಿಗೆ ಸ್ಲೀವ್‌ಲೆಸ್‌ ಬಟ್ಟೆಯನ್ನು ತೊಟ್ಟಿದ್ದು, ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಅದಲ್ಲದೇ ಯಾವುದೇ ಸಿನೆಮಾ ಪ್ರಶಸ್ತಿ ಕಾರ್ಯಕ್ರಮಗಳಲ್ಲಿ ಸಾಯಿ ಪಲ್ಲವಿ ದೇಸೀ ಉಡುಗೆ ಸೀರೆಯಲ್ಲಿ ಮಿಂಚುತ್ತಾರೆ.

    ರಾಮ-ಸೀತೆಯಂತೆ ಕಾಣಿಸಿಕೊಂಡ ರಣ್​ಬೀರ್​, ಸಾಯಿ ಪಲ್ಲವಿ.. ರಾಮಾಯಣ ಸಿನಿಮಾ ಸೆಟ್ಟಿನ ಫೋಟೋ ಲೀಕ್​

    ತುಂಬಾನೇ ಸಿಂಪಲ್ ಆ್ಯಂಡ್ ಬ್ಯೂಟಿಫುಲ್ ನಟಿ ಇದೀಗ ಚರ್ಚೆಗೆ ಕಾರಣವಾಗಿದ್ದಾರೆ. ಕೆಲ ತಿಂಗಳ ಹಿಂದೆ ಸಾಯಿ ಪಲ್ಲವಿಯವರ ಸಹೋದರಿಯ ವಿವಾಹ ನಿಶ್ಚಿತಾರ್ಥ ನಡೆದಿದೆ. ಈ ವೇಳೆ ಸಾಯಿ ಪಲ್ಲವಿ ಮದುವೆ ಬಗ್ಗೆ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಯನ್ನು ಹರಿಸಿದ್ದರು. ಈ ನಡುವೆ ಸಾಯಿ ಪಲ್ಲವಿಯವರ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದ ವಿಚಾರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೌದು, ನಟಿ ಸಾಯಿ ಪಲ್ಲವಿ ವಿವಾಹಿತ ನಾಯಕನಟನೊಬ್ಬನ ಜೊತೆ ಡೇಟಿಂಗ್‌ನಲ್ಲಿದ್ದಾರೆ ಎಂದು ಹೇಳಲಾಗಿದೆ. ಅದೂ ಅಲ್ಲದೆ ನಾಯಕನಿಗೆ ಈಗಾಗಲೇ ಮದುವೆಯಾಗಿ ಇಬ್ಬರೂ ಮಕ್ಕಳಿದ್ದಾರೆ. ಆದರೆ, ಇದನ್ನು ಕೇಳಿದ ಸಾಯಿ ಪಲ್ಲವಿ ಆಭಿಮಾನಿಗಳು ಶಾಕ್ ಆಗಿದ್ದಾರೆ. ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ, ಯಾರೋ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

    Continue Reading

    FILM

    ಯಶ್ ಹೊಸ ಲುಕ್ ಹಿಂದಿನ ಅಸಲಿ ಕಥೆ ಹೇಳಿದ ಹೇರ್​ಸ್ಟೈಲಿಸ್ಟ್

    Published

    on

    ಯಶ್ ಅವರು ಇತ್ತೀಚೆಗೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಮದುವೆಯಲ್ಲಿ ಭಾಗಿ ಆಗಿದ್ದರು. ಈ ವೇಳೆ ಯಶ್ ಅವರು ಹೊಸ ಹೇರ್​ಸ್ಟೈಲ್​ನಲ್ಲಿ ಕಾಣಿಸಿಕೊಂಡಿದ್ದರು. ಅವರು ತಲೆ ಕೂದಲನ್ನು ಶಾರ್ಟ್ ಮಾಡಿಸಿದ್ದರು. ಇದಕ್ಕೆ ಕಾರಣ ಏನು ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಇದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಯಶ್ ಹೇರ್​ಸ್ಟೈಲಿಸ್ಟ್ ಅಲೆಕ್ಸ್ ವಿಜಯಕಾಂತ್ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಇದರ ಹಿಂದಿನ ರಹಸ್ಯ ಏನು ಎಂಬುದನ್ನು ಅವರು ರಿವೀಲ್ ಮಾಡಿದ್ದಾರೆ.

    ‘ನಾವು ಇನ್ನೂ ಹೋಟೆಲ್ ತಲುಪಿರಲಿಲ್ಲ. ಆಗಲೇ ಫೋಟೋಗಳು ಹರಿದಾಡಲು ಆರಂಭಿಸಿದ್ದವು. ಕೆಲವೇ ನಿಮಿಷಗಳಲ್ಲಿ ಇಂಟರ್​ನೆಟ್​ನಲ್ಲಿ ಫೋಟೋ ವೈರಲ್ ಆಯಿತು. ಪ್ರತಿಕ್ರಿಯೆ ಅಗಾಧವಾಗಿತ್ತು. ಈ ಲುಕ್ ಸಾಕಷ್ಟು ಪರಿಣಾಮ ಬೀರಿತ್ತು’ ಎಂದು ಅಲೆಕ್ಸ್ ವಿಜಯಕಾಂತ್ ಹೇಳಿಕೊಂಡಿದ್ದಾರೆ.

    ‘ಸ್ಕ್ರಿಪ್ಟ್​ನಿಂದ ಸ್ಫೂರ್ತಿ ಪಡೆದು ಈ ಹೇರ್​ಸ್ಟೈಲ್​ ಮಾಡಿದ್ದೇನೆ. ನಾನು ಮೊದಲು ಸ್ಕ್ರಿಪ್ಟ್ ಕೇಳಿದೆ. ಈ ಕಥೆಗೆ ಸಣ್ಣ ತಲೆಗೂದಲು ಹೊಂದುತ್ತದೆ ಎಂದುಕೊಂಡೆ. ಸಿನಿಮಾದ ಪಾತ್ರ ಏನನ್ನು ಬೇಡುತ್ತದೆಯೋ ಅದೇ ರೀತಿಯಲ್ಲಿ ಹೇರ್​ಸ್ಟೈಲ್ ಮಾಡಿರುವೆ’ ಎಂದು ಮಾಹಿತಿ ನೀಡಿದ್ದಾರೆ ಅವರು.

    ಹೇರ್​ಸ್ಟೈಲ್​ನ ನೋಡಿ ಯಶ್ ಅವರು ಯಾವ ರೀತಿಯ ರಿಯಾಕ್ಷನ್ ನೀಡಿದರು ಎನ್ನುವ ಬಗ್ಗೆಯೂ ವಿಜಯಕಾಂತ್ ಅವರು ಮಾತನಾಡಿದ್ದಾರೆ. ‘ಅವರು ನನ್ನನ್ನು ಹಗ್ ಮಾಡಿದರು. ಅಲೆಕ್ಸ್ ನೀವು ಸಾಧಿಸಿದಿರಿ ಎಂದರು’ ಎಂಬುದು ವಿಜಯಕಾಂತ್ ಮಾತು.

    ಯಶ್​ಗೆ ಹೇರ್​ಸ್ಟೈಲ್ ಮಾಡುತ್ತಿರುವ ಫೋಟೋನ ಅಲೆಕ್ಸ್ ವಿಜಯಕಾಂತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಯಶ್ ಅವರು ‘ಕೆಜಿಎಫ್’ ಚಿತ್ರಗಳಿಗಾಗಿ ಉದ್ದ ಕೂದಲು ಬಿಟ್ಟಿದ್ದರು. ಅಲ್ಲಿಂದ ಇಲ್ಲಿಯವರೆಗೆ ಅವರು ಇದೇ ರೀತಿಯ ಹೇರ್​ಸ್ಟೈಲ್​ನ ಕಾಯ್ದುಕೊಂಡು ಬಂದಿದ್ದರು. ಈಗ ಅದಕ್ಕೆ ಕತ್ತರಿ ಹಾಕಿದ್ದಾರೆ.

    ಯಶ್ ಹೇರ್​ಸ್ಟೈಲ್ ಮೊದಲು ರಿವೀಲ್ ಆಗಿದ್ದು ಅನಂತ್ ಅಂಬಾನಿ ಮದುವೆ ಸಂದರ್ಭದಲ್ಲಿ. ಇದಾದ ಬಳಿಕ ಅನೇಕರು ಈ ಫೋಟೋಗಳನ್ನು ಹಂಚಿಕೊಳ್ಳುತ್ತಾ ಬರುತ್ತಿದ್ದಾರೆ. ಅನೇಕರು ಈ ಹೇರ್​ಸ್ಟೈಲ್​ನ ಫಾಲೋ ಮಾಡಿದ್ದಾರೆ.

    Continue Reading

    LATEST NEWS

    Trending