Connect with us

FILM

ಖ್ಯಾತ ನಟ ವಿಶಾಲ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ನಟಿ ಗಾಯತ್ರಿ..!

Published

on

ಚೆನ್ನೈ: ಕಾಲಿವುಡ್ ನ ಖ್ಯಾತ ನಟ ಇತ್ತೀಚೆಗೆ ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಇದೀಗ ನಟಿಯೊಬ್ಬರು ವಿಶಾಲ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಹೌದು.. ವಿಶಾಲ್ ಹಾಗೂ ಆತನ ಗೆಳೆಯರು ಹಲವಾರು ನಟಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿ ಗಾಯತ್ರಿ ರಘುರಾಮ್ ಗಂಭೀರ ಆರೋಪ ಮಾಡಿದ್ದಾರೆ.

ಶಿಕ್ಷಕರು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟರ್‌ನಲ್ಲಿ ಆಘಾತ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದ ವಿಶಾಲ್, ಆ ಶಾಲೆಯನ್ನು ಮುಚ್ಚಬೇಕು. ಅಂತಹ ಅಪರಾಧಗಳನ್ನು ನಿಜವಾಗಿಯೂ ಕಠಿಣವಾಗಿ ತೆಗೆದುಕೊಳ್ಳಬೇಕು ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ನಟಿ ಗಾಯತ್ರಿ ರಘುರಾಂ ಅವರು, ಚಿತ್ರರಂಗಕ್ಕೆ ಹೊಸದಾಗಿ ಪ್ರವೇಶಿಸುತ್ತಿರುವ ಹುಡುಗಿಯರಿಗೆ ಏನಾಗುತ್ತಿದೆ ಎಂಬುದನ್ನು ನೋಡಿ.

‘ಚಿತ್ರರಂಗದಲ್ಲಿ ಇರುವ ವ್ಯಕ್ತಿಯಾಗಿ ಮೊದಲಿಗೆ ಲೈಂಗಿಕ ದೌರ್ಜನ್ಯದ ವಿರುದ್ಧ ದನಿ ಎತ್ತಬೇಕು. ವಿಶಾಲ್ ಒಮ್ಮೆ ನಿನ್ನ ಸುತ್ತಲೂ ನೋಡು ಏನಾಗುತ್ತಿದೆ ಎಂದು. ಹೊಸದಾಗಿ ಚಿತ್ರರಂಗಕ್ಕೆ ಬರುತ್ತಿರುವ ನಟಿಯರ ಸ್ಥಿತಿ ಹೇಗಿದೆಯೆಂದು. ನಟಿಯರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ನೋಡು. ನೀನು ಮತ್ತು ನಿನ್ನ ಗೆಳೆಯರು ಅದೇ ವಿಭಾಗಕ್ಕೆ ಸೇರಿದವರು. ಬಳಸಿ ಬಿಸಾಡುವುದು ನಿಮಗೆ ಅಭ್ಯಾಸವಾಗಿ ಹೋಗಿದೆ. ಸಾಕಷ್ಟು ಮಂದಿ ನಟಿಯರು ನಿಮ್ಮಿಂದ ತೊಂದರೆ ಅನುಭವಿಸಿದ್ದಾರೆ’ ಎಂದಿದ್ದಾರೆ.

ಅಲ್ಲದೇ ‘ನೀನು ಪದೇ-ಪದೇ ಪೀಡಿಸುವ ಕಾರಣದಿಂದ ನಾಯಕ ನಟಿಯರು ನಿನ್ನಿಂದ ದೂರ ಓಡುತ್ತಾರೆ. ಈ ವಿಷಯ ನಿನಗೆ ಗೊತ್ತಿದೆಯೇ?’ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ‘ಸಿನಿಮಾ ರಂಗದ ಯುವತಿಯರನ್ನು ಕಾಪಾಡಲು ನೀನು ನಿನ್ನ ಹೀರೋತನ ಪ್ರದರ್ಶಿಸಬೇಕಿತ್ತು. ಆದರೆ ನೀನು ವಿಲನ್‌ ನಂತೆ ವರ್ತಿಸಿದೆ’ ಎಂದಿದ್ದಾರೆ.

ಪ್ರಮುಖ ನಟಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದೀರಿ. ನೀವು ಮತ್ತು ನಿಮ್ಮ ಸ್ನೇಹಿತರು ಪ್ರಭಾವ ಬಳಸಿ ನಟಿಯರನ್ನು ಬಳಸಿಕೊಂಡು ಬಿಸಾಡುತ್ತಿದ್ದೀರಿ. ಹಲವರು ನಿಮ್ಮಿಂದ ಕಿರುಕುಳಕ್ಕೊಳಗಾಗಿದ್ದಾರೆ ಎಂದು ನಟ ವಿಶಾಲ್ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.

ಕನ್ನಡದ ‘ಮನಸೆಲ್ಲಾ ನೀನೆ’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಗಾಯತ್ರಿ ಈಗ ಬಿಜೆಪಿ ಸೇರಿ ರಾಜಕಾರಣಿ ಆಗಿ ಗುರುತಿಸಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *

FILM

ಕನ್ನಡದ ಖ್ಯಾತ ನಟ ಕೆ. ಶಿವರಾಮ್ ಗೆ ಹೃದಯಾಘಾತ- ಆಸ್ಪತ್ರೆಗೆ ದಾಖಲು

Published

on

ಬೆಂಗಳೂರು: ಖ್ಯಾತ ನಟ ಕೆ. ಶಿವರಾಮ್ ಗೆ ಹೃದಯಾಘಾತವಾಗಿದ್ದು, ಬೆಂಗಳೂರಿನ ಎಚ್.ಸಿ.ಜಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಾಹಿತಿ ಪ್ರಕಾರ ಕಾರ್ಡಿಯಕ್ ಅರೆಸ್ಟ್ ಹಾಗೂ ಬ್ರೈನ್ ಡೆಡ್ ಆಗಿದೆ ಎಂದು ತಿಳಿದು ಬಂದಿದೆ. ಶಿವರಾಮ್ ಅವರಿಗೆ 71 ವರ್ಷ ವಯಸ್ಸಾಗಿದೆ.

ಸದ್ಯ ಪರಿಸ್ಥಿತಿ ಚಿಂತಾಜನಕವಾಗಿದ್ದು, ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆ. ಶಿವರಾಮ್ ಅವರು ಐ.ಎ.ಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಕನ್ನಡದಲ್ಲೇ ಪರೀಕ್ಷೆ ಬರೆದು ಐಎಎಸ್​ ಪಾಸ್​ ಮಾಡಿದ್ದಾರೆ. ಬಾನಲ್ಲೆ ಮಧುಚಂದ್ರಕ್ಕೆ ವಸಂತಕಾವ್ಯ’ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದರು. ಬಳಿಕ ರಾಜಕೀಯ ಪ್ರವೇಶ ಮಾಡಿದ್ದರು. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬೇಗ ಗುಣಮುಖರಾಗಿ ಬರಲಿ ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.

Continue Reading

FILM

ಬಿಗ್ ಬಾಸ್ ನಮ್ರತಾ ಜೊತೆ ಕಿಶನ್ ರೊಮ್ಯಾಂಟಿಕ್ ಡ್ಯಾನ್ಸ್

Published

on

ಕನ್ನಡದ ಬಿಗ್ ಬಾಸ್ 10ರ ಸ್ಪರ್ಧಿಯಾಗಿದ್ದ ನ್ರಮತಾ ಗೌಡ ಕಲರ್ಸ್​ ಕನ್ನಡ ವಾಹಿನಿಯ ತಕಧಿಮಿತ ರಿಯಾಲಿಟಿ ಶೋನಲ್ಲಿದ್ದ ಕಿಶನ್ ಇಬ್ಬರು ಡ್ಯಾನ್ಸ್ ಮಾಡಿರು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕಲರ್ಸ್​ ಕನ್ನಡ ವಾಹಿನಿಯ ತಕಧಿಮಿತ ರಿಯಾಲಿಟಿ ಶೋನಲ್ಲಿ ಕಿಶನ್ ಹಾಗೂ ನಮ್ರತಾ ಜೋಡಿ. ತಕಧಿಮಿತ ಶೋನಲ್ಲಿ ಶುರುವಾದ ನಮ್ರತಾ ಹಾಗೂ ಕಿಶನ್ ಗೆಳೆತನ ಇಂದಿಗೂ ಹಾಗೇ ಇದೆ. ಈಗಲೂ ಇಬ್ಬರು ಒಟ್ಟಿಗೆ ಡ್ಯಾನ್ಸ್ ಮಾಡುತ್ತಿದ್ದಾರೆ. ಕಿಶನ್ ಒಬ್ಬರು ಪ್ರೋಫೆಷನಲ್ ಡ್ಯಾನ್ಸರ್ ಆಗಿದ್ದಾರೆ. ಅದರಲ್ಲೂ ನಮ್ರತಾ ಕೂಡ ಅದ್ಭುತವಾಗಿ ಡ್ಯಾನ್ಸ್ ಮಾಡ್ತಾರೆ. ರೊಮ್ಯಾಂಟಿಕ್ ಡ್ಯಾನ್ಸ್ ಮಾಡಿರು ಕಿಶನ್ ಹಾಗೂ ನಮ್ರತಾ ಇಬ್ಬರ ನೃತ್ಯಕ್ಕೆ ಎಲ್ಲರು ಫಿದಾ ಆಗಿದ್ದಾರೆ.

Continue Reading

DAKSHINA KANNADA

ಕಾಗೆ ರಾಷ್ಟ್ರೀಯ ಪಕ್ಷಿಯಾಗಬೇಕಿತ್ತು, ಹಸು ರಾಷ್ಟ್ರೀಯ ಪ್ರಾಣಿಯಾಗಬೇಕಿತ್ತು- ನಟ ಪ್ರಕಾಶ್ ರಾಜ್

Published

on

ಉಳ್ಳಾಲ: ತೊಕ್ಕೊಟ್ಟಿನಲ್ಲಿ ನಡೆದ ಡಿವೈಎಫ್‌ಐನ 12ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾವೇಶಕ್ಕೆ ಅತಿಥಿಯಾಗಿ ಆಗಮಿಸಿದ ಬಹುಬಾಷಾ ನಟ ಪ್ರಕಾಶ್ ರಾಜ್‌ ಭಾಷಣದ ಉದ್ದಕ್ಕೂ ಪ್ರಧಾನಿ ಮೋದಿಯವರನ್ನು ಏಕವಚನದಲ್ಲೇ ಸಂಭೋದಿಸಿ ಟೀಕೆ ಮಾಡಿದ್ದಾರೆ.

ಅಲ್ಲದೇ  ಬಹುಮತ ಎಲ್ಲ ದೇಶದಲ್ಲಿ ನಡೆಯಲ್ಲ, ಪ್ರಕೃತಿಗೆ ಬಹುಮತ ಸರಿಯಲ್ಲ, ಬಹುಮತನೇ ಆಗಬೇಕಾದ್ರೆ ಕಾಗೆ ರಾಷ್ಟ್ರೀಯ ಪಕ್ಷಿಯಾಗಬೇಕಿತ್ತು. ಹಸು ರಾಷ್ಟ್ರೀಯ ಪ್ರಾಣಿಯಾಗಬೇಕಿತ್ತು ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.

Continue Reading

LATEST NEWS

Trending