Connect with us

FILM

‘ನಾನು ಸತ್ತರೇ ಸೀಮನ್ ಕಾರಣ.. ಕರ್ನಾಟಕದಲ್ಲೇ ಸಾಯುತ್ತೇನೆ’- ನಟಿ ವಿಜಯಲಕ್ಷ್ಮೀ

Published

on

ತಮಿಳುನಾಡು : ‘ನಾಗ ಮಂಡಲ’ ಖ್ಯಾತಿಯ ನಟಿ ವಿಜಯಲಕ್ಷ್ಮೀ ಒಬ್ಬಾಕೆ ಅಪ್ರತಿಮ ನಟಿ. ಸುಂದರ ಚಹರೆಯುಳ್ಳ ಅಭಿನೇತ್ರಿ. ಈಕೆ ಕನ್ನಡದಲ್ಲಿ ‘ಸೂರ್ಯವಂಶ’, ‘ಜೋಡಿ ಹಕ್ಕಿ’ ಸಿನೆಮಾಗಳಲ್ಲಿ ನಟಿಸಿ ಜನಪ್ರಿಯರಾದವರು. ಸಿನೆಮಾಗಳಲ್ಲಿ ನಟಿಸಿದ್ದು ಮಾತ್ರವಲ್ಲ ಧಾರವಾಹಿಗಳಲ್ಲೂ ನಟಿಸಿರುವ ವಿಜಯಲಕ್ಷ್ಮೀ ಕಲಾವಿದೆಯಾಗಿ ಸುದ್ದಿಯಾಗಿದ್ದಕ್ಕಿಂತ ವಿವಾದಾತ್ಮಕ ನಟಿಯಾದದ್ದೇ ಹೆಚ್ಚು.ತಮಿಳುನಾಡಿನ ನಟ, ನಿರ್ದೇಶಕ ಸೀಮನ್ ವಿರುದ್ಧ ಲೈಂಗಿಕ ಶೋಷಣೆ ಎಸಗಿರುವ ಆರೋಪವನ್ನು ವಿಜಯಲಕ್ಷ್ಮೀ ಮಾಡಿದ್ದರು. ಈ ಸುದ್ದಿ ಭಾರೀ ಸಂಚಲನವನ್ನು ಮೂಡಿಸಿತ್ತು.ತಮಿಳುನಾಡಿನ ನಟ, ನಿರ್ದೇಶಕ ಸೀಮನ್ ತನ್ನನ್ನು ಮದುವೆ ಆಗಿ ಮೋಸ ಮಾಡಿದ್ದಾನೆ ಎಂದು ಆರೋಪಿಸುತ್ತಿರುವ ವಿಜಯಲಕ್ಷ್ಮೀ ಕಳೆದ ಅನೇಕ ಬಾರಿ ವಿಡೀಯೋ ಮಾಡಿ ತಮ್ಮ ನೋವನ್ನು ಹಂಚಿಕೊಂಡಿದ್ರು.

ಇದೀಗ ಮತ್ತೆ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೇಸರ ಹೊರ ಹಾಕಿದ್ದಾರೆ. ಮದುವೆ ಆಗುತ್ತೇನೆ ಎಂಬ ಭರವಸೆಯನ್ನು ನೀಡಿ, ಬಳಿ ಯಾರಿಗೂ ಗೊತ್ತಾಗದಂತೆ ರಹಸ್ಯವಾಗಿ ಮದುವೆ ಆಗಿದ್ದ. ಆದ್ರೆ ಲೈಂಗಿಕವಾಗಿ ದೌರ್ಜನ್ಯ ನಡೆಸಿ 7 ಬಾರಿ ಗರ್ಭಪಾತವನ್ನು ಮಾಡಿಸಿದ್ದಾನೆ. ನಾನು ಫೆ. 29ರಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದೆ.ಆ ವಿಡಿಯೋದಲ್ಲಿ ನನ್ನ ಜೊತೆ ಮಾತನಾಡುವಂತೆ ಮತ್ತು ಜೊತೆಗೆ ಇರಲು ಅವಕಾಶ ಮಾಡಿಕೊಡುವಂತೆ ಕೇಳಿದ್ದೆ. ಆದ್ರೆ ಸೀಮನ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನೀ ನನಗೆ ಬೇಕು. ನೀ ಇಲ್ಲದಿದ್ದರೆ ನಾನು ಸತ್ತು ಹೋಗುತ್ತೇನೆ ಎಂದರೂ ಆತ ನನ್ನನ್ನು ಕೇರ್ ಮಾಡಲೇ ಇಲ್ಲ ನನ್ನ ಜೀವನವನ್ನೇ ಹಾಳು ಮಾಡಿದ್ದಾರೆ.ಹೀಗಾಗಿ ನಾನು ಸಾಯಲು ನಿರ್ಧರಿಸಿದ್ದೇನೆ. ‘ಇದು ನನ್ನ ಕೊನೆಯ ವಿಡಿಯೋ.ಇನ್ನು ಎರಡು ದಿನದೊಳಗೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನಾನು ಕರ್ನಾಟಕದಲ್ಲಿ ಸಾಯಲು ಸಿದ್ಧಳಾಗಿದ್ದೇನೆ.ನನ್ನ ಸಾವಿಗೆ ಸೀಮನ್ ಕಾರಣ ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

 

 

Click to comment

Leave a Reply

Your email address will not be published. Required fields are marked *

FILM

ಚಿತ್ರೋದ್ಯಮಕ್ಕೆ ದ್ವಾರಕೀಶ್ ಕೊಡುಗೆ ಅಪಾರ ಎಂದ ಪ್ರಧಾನಿ ಮೋದಿ

Published

on

ಬೆಂಗಳೂರು : ಹೃದಯಾ*ಘಾತದಿಂದ ಮಂಗಳವಾರ(ಏ.16) ಹಿರಿಯ ನಟ ದ್ವಾರಕೀಶ್ ಇಹಲೋಕ ತ್ಯಜಿಸಿದ್ದಾರೆ. ಅವರ ಅಗಲಿಕೆಗೆ ಚಿತ್ರರಂಗವೇ ಮರುಗಿದೆ. ಅನೇಕರು ಕಂಬನಿ ಮಿಡಿದಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ದ್ವಾರಕೀಶ್ ಅವರ ನಿ*ಧನಕ್ಕೆ ಸಂತಾಪ ಸೂಚಿಸಿದ್ದಾರೆ.

ದ್ವಾರಕೀಶ್ ಕೊಡುಗೆ ಅಪಾರ :

ದ್ವಾರಕೀಶ್ ಅವರ ಬಗ್ಗೆ ಪ್ರಧಾನಿ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಚಲನಚಿತ್ರೋದ್ಯಮಕ್ಕೆ ದ್ವಾರಕೀಶ್ ಅವರ ಕೊಡುಗೆ ಅಪಾರವಾಗಿದೆ. ದಶಕಗಳ ಕಾಲ ಸದಾ ನೆನಪಿನಲ್ಲಿ ಉಳಿಯುವ ನಟನೆ ಹಾಗೂ ಸಿನಿಮಾಗಳನ್ನು ನೀಡಿದ್ದಾರೆ.
ಪ್ರೇಕ್ಷಕರನ್ನು ಸೆಳೆದಿಟ್ಟುಕೊಳ್ಳುವ ಹಾಗೂ ಹೊಸಬರನ್ನು ಬೆಂಬಲಿಸುವ ಮೂಲಕ ಕನ್ನಡ ಚಿತ್ರರಂಗವನ್ನು ರೂಪಿಸುವಲ್ಲಿ ಅವರ ಪಾತ್ರ ದೊಡ್ಡದು. ಅವರ ನಿಧನದಿಂದ ದುಃಖವಾಗಿದೆ. ಅವರ ಅದ್ಭುತ ಜರ್ನಿಯನ್ನು ನಾವು ಸ್ಮರಿಸುತ್ತೇವೆ. ಅವರ ಕುಟುಂಬಕ್ಕೆ ಮತ್ತು ಆತ್ಮೀಯರಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಬ್ರಹ್ಮಾವರ : ಮನೆಯಲ್ಲಿ ಮತದಾನ ಮಾಡಿ ಕೆಲವೇ ಕ್ಷಣಗಳಲ್ಲಿ ಇಹಲೋಕ ತ್ಯಜಿಸಿದ ವೃದ್ಧೆ

ಅಂತಿಮ ದರ್ಶನ ಪಡೆದ ಗಣ್ಯರು :

ದ್ವಾರಕೀಶ್ ಅವರ ಪಾರ್ಥೀ*ವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ 11.30ರವರೆಗೂ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಕಿಚ್ಚ ಸುದೀಪ್, ಕೆ.ಮಂಜು, ಮಾಳವಿಕಾ ಅವಿನಾಶ್, ಸುಧಾರಾಣಿ, ರಾಘವೇಂದ್ರ ರಾಜ್ ಕುಮಾರ್, ಶ್ರೀ ಮುರಳಿ ಸೇರಿದಂತೆ ಚಿತ್ರರಂಗದ ಹಲವರು ಅಂತಿಮ ನಮನ ಸಲ್ಲಿಸಿದರು.

Continue Reading

FILM

ರಿಲೀಸ್ ಗೂ ಮುನ್ನ ಭರ್ಜರಿ ಬೇಟೆಯಾಡಿದ ಪುಷ್ಪ-2..; ಎಷ್ಟು ಕೋಟಿ ಗೊತ್ತಾ..?

Published

on

ಅಲ್ಲು ಅರ್ಜುನ್ ನಟನೆಯ ಪುಷ್ಪ ಮೂವಿ ಬಾಕ್ಸ್ ಅಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಇದೀಗ ಅದರ ಎರಡನೇ ಭಾಗವಾಗಿರುವ ಪುಷ್ಟ-2 ಕೂಡಾ ನಿರೀಕ್ಷೆಯನ್ನು ದಾಟಿ ಮುಂದೆ ಸಾಗ್ತಾ ಇದೆ.  ಈಗಾಗಲೇ ಪುಷ್ಟಾ-2 ಸಿನೆಮಾ ರಿಲೀಸ್ ಗೂ ಮುನ್ನ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಾಣುವ ಸೂಚನೆ ಸಿಕ್ಕಿದೆ.

ಪುಷ್ಪಾ-2 ಸಿನಿಮಾ ರಿಲೀಸ್​ಗೂ ಮೊದಲೇ ಸಾಕಷ್ಟು ಹಕ್ಕುಗಳು ಮಾರಾಟ ಆಗಿದೆ ಎಂದು ವರದಿ ಆಗಿದೆ. ಹೀಗಾಗಿ ಸಿನಿಮಾ ರಿಲೀಸ್​ಗೂ ಮೊದಲೇ 1000 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆಯಂತೆ. ಇದರಿಂದ ನಿರ್ಮಾಪಕರು ಭರ್ಜರಿ ಲಾಭ ಪಡೆದುಕೊಂಡಿದ್ದು, ಈ ಚಿತ್ರದ ಮೂರನೇ ಪಾರ್ಟ್ ಕೂಡಾ ಬರಲಿದೆ ಎಂದು ಈಗಾಗಲೆ ಸುದ್ದಿಯಾಗಿದೆ.

ಈ ಹಿಂದೆ ಬಾಕ್ಸ್ ಆಫೀಸ್‌ನಲ್ಲಿ  ಸಿನೆಮಾ 100 ಕೋಟಿ ಲಾಭವನ್ನು ಗಳಿಸಿದ್ರೆ ಅದು ದೊಡ್ಡ ವಿಷಯ. ವರ್ಷಗಳು ಕಳೆದಂತೆ ನಿರ್ಮಾಣ ವೆಚ್ಚ ಹೆಚ್ಚಾಗುತ್ತಿದೆ. ಸಿನೆಮಾ ಟಿಕಿಟ್ ಬೆಲೆ ಕೂಡಾ ಏರುತ್ತಿದೆ. ಹೀಗಾಗಿ ಸಿನೆಮಾದ ಗೆಲುವನ್ನು  500 ಕೋಟಿಯಿಂದ 1000 ಕೋಟಿ ತನಕ ಬೆಂಚ್ ಮಾರ್ಕ್ ನಿಂದ ಅಳೆಯಲಾಗಿದೆ. ಈಗಾಗಲೇ ಶಾರುಖ್ ಖಾನ್ ನಟನೆಯ ಎರಡು ಸಿನಿಮಾಗಳು 2023ರಲ್ಲಿ ರಿಲೀಸ್ ಆಗಿ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿವೆ. ಈಗ ‘ಪುಷ್ಪ 2’ ಸಿನಿಮಾ ರಿಲೀಸ್​ಗೂ ಮೊದಲೇ 1000 ಕೋಟಿ ರೂಪಾಯಿ ಬಿಸ್ನೆಸ್ ಮಾಡಿರುವುದು ವಿಶೇಷವಾಗಿದೆ.

ಮುಂದೆ ಓದಿ..; ದೀಪಿಕಾ ಪಡುಕೋಣೆ ಜೊತೆ ಒಪ್ಪಂದ ಮಾಡಿಕೊಂಡ ನಿಶಾ ಅಂಬಾನಿ..! ಏನು ಗೊತ್ತಾ?

‘ಪುಷ್ಪ 2’ ಸಿನಿಮಾದ ಬಜೆಟ್ 500 ಕೋಟಿ ರೂಪಾಯಿ ದಾಟಿದೆ ಎಂದು ಮೂಲಗಳು ತಿಳಿಸಿದೆ. ಈ ಚಿತ್ರದ ಆಂಧ್ರ ಹಾಗೂ ತೆಲಂಗಾಣ ಭಾಗದ ಹಂಚಿಕೆ ಹಕ್ಕು 200 ಕೋಟಿ ರೂಪಾಯಿಗೆ ಮಾರಾಟ ಆಗಿದೆ. ಹಿಂದಿಯಲ್ಲಿ ಈ ಸಿನಿಮಾ ದೊಡ್ಡ ಗೆಲುವು ಕಂಡಿದೆ. ಹೀಗಾಗಿ, ಆ ಭಾಗದಲ್ಲೂ ಸಿನಿಮಾದ ಹಂಚಿಕೆ ಹಕ್ಕು ದೊಡ್ಡ ಮಟ್ಟಕ್ಕೆ ಮಾರಾಟ ಆಗಿದೆ ಎನ್ನಲಾಗುತ್ತಿದೆ. ಇದರ ಜೊತೆಗೆ ಟಿವಿ ಹಕ್ಕು, ಒಟಿಟಿ ಹಕ್ಕು, ಸಾಂಗ್ ರೈಟ್ಸ್ ಕೂಡ ದೊಡ್ಡ ಮಟ್ಟಕ್ಕೆ ಮಾರಾಟ ಆಗಿದ್ದು, ಸಿನಿಮಾದ ಬಿಸ್ನೆಸ್ 1000 ಕೋಟಿ ರೂಪಾಯಿ ದಾಟಿದೆ.

ಸುಕುಮಾರ್ ಅವರು ‘ಪುಷ್ಪ 2’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು ಚಿತ್ರದ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆಗಸ್ಟ್ 15ರಂದು ಐದು ಭಾಷೆಗಳಲ್ಲಿ ಪುಷ್ಪಾ-2 ಸಿನಿಮಾ ರಿಲೀಸ್ ಆಗುತ್ತಿದೆ.

Continue Reading

FILM

ದೀಪಿಕಾ ಪಡುಕೋಣೆ ಜೊತೆ ಒಪ್ಪಂದ ಮಾಡಿಕೊಂಡ ನಿಶಾ ಅಂಬಾನಿ..! ಏನು ಗೊತ್ತಾ?

Published

on

ಮುಂಬೈ: ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯವರ ಪುತ್ರಿ ನಿಶಾ ಅಂಬಾನಿ ಇದೀಗ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಹೌದು, ನಿಶಾ ಅಂಬಾನಿ ರಿಲಾಯನ್ಸ್ ರಿಟೇಲ್ ಬೇಳವಣಿಗೆಗೆ ಇವರೂ ಕೂಡಾ ಮೂಲ ಕಾರಣ. ಇತ್ತೀಚೆಗೆ ದೀಪಿಕಾ ಪಡುಕೋಣೆ ಜೊತೆ 820000 ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

dipika nisha ambani

ಅಂಬಾನಿ ರಿಲಯನ್ಸ್ ರಿಟೇಲ್ ಅನ್ನು ಮುಕೇಶ್ ಅಂಬಾನಿ 2022ರ ಆಗಸ್ಟ್ ನಲ್ಲಿ ಪುತ್ರಿ ನಿಶಾ ಅಂಬಾನಿಗೆ ಹಸ್ತಾಂತರಿಸಿದ್ರು. ಬಳಿಕ ಪುತ್ರಿ ನಿಶಾ ಅಂಬಾನಿ ಕಂಪೆನಿಯ ಬೆಳವಣಿಗೆಗೆ ಎಲ್ಲಾ ರೀತಿಯ ಕಾರ್ಯತಂತ್ರಗಳನ್ನು ಉಪಯೋಗಿಸುತ್ತಿದ್ದಾರೆ.

ನಿಶಾ ಅಂಬಾನಿ ನೇತೃತ್ವದ  ರಿಲಯನ್ಸ್ ರಿಟೇಲ್ ಪ್ರಸ್ತುತ 820000ಕೋಟಿ ರೂ. ಮೌಲ್ಯ ಹೊಂದಿದ್ದು ಸುಮಾರು ಟಾಪ್ ಬ್ರ್ಯಾಂಡ್‌ಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿದ್ದಾರೆ.  ನಿಶಾ ಮಾಲಕತ್ವದ ರಿಲಯನ್ಸ್ ರಿಟೇಲ್ ನ ತಿರಾ, ದೀಪಿಕಾ ಪಡುಕೋಣೆಯ ಬ್ರ್ಯಾಂಡ್ ಬ್ಯೂಟಿ 82° E ನಿಂದ ಐಟಮ್‌ಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಈ ಇಟ್ಟಿನಲ್ಲಿಇನ್ನುಮುಂದೆ  ದೀಪಿಕಾ ಬ್ರ್ಯಾಂಡ್ ಎಲ್ಲಾ ಮಾರುಕಟ್ಟೆಯಲ್ಲಿ ವಿಸ್ತರಿಸಲಿದೆ.

ಈ ಒಪ್ಪದಿಂದಾಗಿ ಪ್ರೀಮಿಯಂ ತ್ವಚೆ ಉತ್ಪನ್ನಗಳನ್ನು ಒದಗಿಸಲು ಅವಕಾಶವಿದೆ. ಇಶಾ ಅಂಬಾನಿ ನಿರ್ವಹಿಸುತ್ತರುವ ಅಂಬಾನಿ ಗ್ರೂಪ್‌ನ್ನು ಬ್ಯೂಟಿ ಪ್ರಾಡಕ್ಟ್‌ ತಿರಾದ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕರೀನಾ ಕಪೂರ್, ಕಿಯಾರ ಅಡ್ವಾಣಿ, ಶಾರುಖಾನ್ ಪುತ್ರಿ ಸುಹಾನ ಖಾನ್ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ..; ಮೂಗುತಿ ಸುಂದರಿ ಮೇಲೆ ತೆಲುಗು ಹೀರೋ ಕಣ್ಣು…!

Continue Reading

LATEST NEWS

Trending