FILM
ಕೆರಿಯರ್‌ನಲ್ಲಿ ಉಳಿಯಬೇಕಾದ್ರೆ ಇದನ್ನೆಲ್ಲಾ ಮಾಡಬೇಕು – ತಮನ್ನಾ ಭಾಟಿಯಾ..!
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamannaah Bhatia) ಅವರು ತೆಲುಗು- ಬಾಲಿವುಡ್‌ನಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ. ಹೊಸ ನಟಿಯರ ನಡುವೆ ತಮನ್ನಾ ಕೂಡ ಎಲ್ಲೂ ಡಲ್ ಆಗದಂತೆ ಶೈನ್ ಆಗ್ತಿದ್ದಾರೆ.
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamannaah Bhatia) ಅವರು ತೆಲುಗು- ಬಾಲಿವುಡ್‌ನಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ. ಹೊಸ ನಟಿಯರ ನಡುವೆ ತಮನ್ನಾ ಕೂಡ ಎಲ್ಲೂ ಡಲ್ ಆಗದಂತೆ ಶೈನ್ ಆಗ್ತಿದ್ದಾರೆ.
ಇದೀಗ ಸಂದರ್ಶನವೊಂದರಲ್ಲಿ ತಾವ್ಯಾಕೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು? ತಾವು ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಳ್ಳಲು ಕಾರಣವೇನು ಎಂದು ನಟಿ ಬಾಯ್ಬಿಟ್ಟಿದ್ದಾರೆ.
ತಮನ್ನಾ ಭಾಟಿಯಾ ಅವರು ಕಳೆದ ವರ್ಷ 18 ವರ್ಷಗಳಿಂದ ಸಿನಿಮಾರಂಗದಲ್ಲಿ ಆಕ್ಟೀವ್ ಆಗಿದ್ದಾರೆ.
ಬಹುಭಾಷೆಗಳಲ್ಲಿ ನಾಯಕಿಯಾಗಿ ಮಿಂಚ್ತಿದ್ದಾರೆ. ನೋ ಲಿಪ್ ಲಾಕ್ ಎಂಬ ತಮ್ಮ ರೂಲ್ಸ್ ಬ್ರೇಕ್ ಮಾಡಿ ಸಖತ್ ಹಾಟ್ ಆಗಿ ತಮನ್ನಾ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಅದಕ್ಕೆ ತಾಜಾ ಉದಾಹರಣೆ ಎಂದರೆ, ಲಸ್ಟ್ ಸ್ಟೋರಿಸ್ 2, ಜೀ ಕರ್ದಾ(Jee Kardha) ಪ್ರಾಜೆಕ್ಟ್. ಈ ಎರಡರಲ್ಲೂ ತಮನ್ನಾ ಹಾಟ್ & ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು.
ಸಂದರ್ಶನವೊಂದರಲ್ಲಿ ತಮನ್ನಾ ಮಾತನಾಡಿ ನಾವು ಬದಲಾಗದಿದ್ದರೆ ಎಲ್ಲಿ ಆರಂಭಿಸಿದ್ದೆವೋ ಅಲ್ಲೇ ನಿಂತುಬಿಡುತ್ತೇವೆ.
ಆ ರೀತಿ ನಿಂತು ಬಿಡಬೇಕು ಎಂದು ಯಾರು ಅಂದುಕೊಳ್ಳುವುದಿಲ್ಲ. ಎಲ್ಲರೂ ಕೆರಿಯರ್‌ನಲ್ಲಿ ಬೆಳೆಯಬೇಕು ಎಂದುಕೊಳ್ಳುತ್ತಾರೆ. ಪ್ರತಿ ಕೆಲಸದಲ್ಲಿ ಪ್ರಮೋಷನ್ ಇದ್ದಂತೆ ನಮ್ಮ ಕೆಲಸದಲ್ಲೂ ಇದೆ.
ಪ್ರಮೋಷನ್‌ಗಾಗಿ ಸ್ವಲ್ಪ ಬ್ರಾಡ್ ಆಗಿ ಆಲೋಚಿಸಬೇಕು. ಹೊಸ ಹೊಸ ಪ್ರಯತ್ನ ಮಾಡಬೇಕು. ಆಗ ಮಾತ್ರ ಜರ್ನಿ ಮತ್ತಷ್ಟು ಸುದೀರ್ಘವಾಗಿ ಚೆನ್ನಾಗಿ ಇರುತ್ತದೆ ಎಂದು ತಮನ್ನಾ ಹೇಳಿದ್ದಾರೆ.
ನವ ನಟಿಯರ ನಡುವೆ ತಮನ್ನಾ ಎಲ್ಲೂ ಡಿಮ್ಯಾಂಡ್ ಕಮ್ಮಿಯಾಗದಂತೆ ಅವಕಾಶ ಎಂಬ ರೇಸ್‌ನಲ್ಲಿ ತಮನ್ನಾ ಮುಂಚೂಣಿಯಲ್ಲಿದ್ದಾರೆ. ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಮೃಣಾಲ್ ಠಾಕೂರ್ ಎಂಬ ಈ ಬೇಡಿಕೆಯ ನಟಿಯರ ಮಧ್ಯೆ ‘ಕಾವಾಲಾ’ (Kavaala) ಬ್ಯೂಟಿ ಗಮನ ಸೆಳೆಯುತ್ತಿದ್ದಾರೆ.
FILM
ಸಮಂತಾ ಔಟ್.. ರಶ್ಮಿಕಾ ಮಂದಣ್ಣಗೆ ಸಿಕ್ತು ಬಿಗ್ ಜಾಕ್ ಪಾಟ್..!
ಸೌತ್ ನಟಿ ಸಮಂತಾ ನಾಯಕಿಯಾಗಿ ನಟಿಸಬೇಕಾಗಿದ್ದ ಸಿನೆಮಾದಲ್ಲಿ ರಶ್ಮಿಕಾ ಮಂದಣ್ಣ ಚಾನ್ಸ್ ಗಿಟ್ಟಿಸಿಕೊಂಡಿದ್ದು, ಸ್ಯಾಮ್ ಔಟ್ ಆಗಿದ್ದಾರೆ.
ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಸಮಂತ ಶೂಟಿಂಗ್‌ಗೆ ಬ್ರೇಕ್ ಕೊಟ್ಟಿದ್ದು ಈ ಹಿನ್ನೆಲೆ ದೊಡ್ಡ ಅವಕಾಶ ರಶ್ಮಿಕಾ ಪಾಲಾಗಿದೆ.
ಸದ್ಯ ಶ್ರೀವಲ್ಲಿ ಕೈಯಲ್ಲಿ ಪುಷ್ಪ 2, ಅನಿಮಲ್, ರೈನ್‌ಬೋ, ರವಿತೇಜ ಜೊತೆಗಿನ ಸಿನಿಮಾ, ವಿಜಯ್ ದೇವರಕೊಂಡ ಜೊತೆ ಚಿತ್ರ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಿವೆ.
ತೆಲುಗಿನ ನಿರ್ದೇಶಕ ರಾಹುಲ್ ರವಿಚಂದ್ರನ್ ಡೈರೆಕ್ಷನ್ ಚಿತ್ರದಲ್ಲಿ ಸಮಂತಾ ನಟಿಸುತ್ತಾರೆ ಎಂದು ಫೈನಲ್ ಆಗಿತ್ತು. ಈಗ ಕಾರಣಾಂತರಗಳಿಂದ ಸ್ಯಾಮ್ ನಟಿಸುತ್ತಿಲ್ಲ.
ಆ ಪಾತ್ರಕ್ಕೆ ರಶ್ಮಿಕಾರನ್ನ ತಂಡ ಸಂಪರ್ಕಿಸಿ ಕಥೆ ಹೇಳಿದ್ದಾರಂತೆ, ನಟಿ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
ಈ ಹಿಂದೆ ರೈನ್‌ಬೋ ಸಿನಿಮಾದಲ್ಲಿ ಸಮಂತಾ ನಟಿಸಬೇಕಿತ್ತು. ಆದರೆ ಸ್ಯಾಮ್ ಆ ಪ್ರಾಜೆಕ್ಟ್‌ನ ಅನಾರೋಗ್ಯದ ದೃಷ್ಟಿಯಿಂದ ಕೈಬಿಟ್ಟಿದ್ದರು. ‘ರೈನ್‌ಬೋ’ ಸಿನಿಮಾ ಕೂಡ ರಶ್ಮಿಕಾ ಪಾಲಾಯ್ತು.
ಇದೀಗ 2ನೇ ಬಾರಿ ಸ್ಯಾಮ್ ನಟಿಸಿಬೇಕಿದ್ದ ಪಾತ್ರ ಮತ್ತೆ ರಶ್ಮಿಕಾ ಪಾಲಾಗಿದೆ.
bangalore
SHOCKING! ಗುರುತೇ ಸಿಗದಷ್ಟು ಬದಲಾದ ‘ಹುಚ್ಚ’ ಖ್ಯಾತಿಯ ನಟಿ ರೇಖಾ …!
ಶಾಕಿಂಗ್ ಲುಕ್ ನಲ್ಲಿ ಕಾಣಿಸಿಕೊಂಡ ಕಿಚ್ಚ ಸುದೀಪ್ ಜೊತೆ ‘ಹುಚ್ಚ’ ಚಿತ್ರದಲ್ಲಿ ನಟಿಸಿ ಮನೆ ಮಾತಾಗಿದ್ದ ನಟಿ ರೇಖಾ ವೇದವ್ಯಾಸ್.
ಬೆಂಗಳೂರು : ಕಿಚ್ಚ ಸುದೀಪ್ ಜೊತೆ ‘ಹುಚ್ಚ’ ಚಿತ್ರದಲ್ಲಿ ನಟಿಸಿ ಮನೆ ಮಾತಾಗಿದ್ದ ನಟಿ ರೇಖಾ ವೇದವ್ಯಾಸ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.
ಅಷ್ಟೊಂದು ಮುದ್ದು ಮುದ್ದು ಮುಖ, ಹೊಳೆಯುತ್ತಿದ್ದ ಕಣ್ಣು, ಮಿನುಗುತ್ತಿದ್ದ ಕೆನ್ನೆಯನ್ನು ಇಂದಿಗೂ ಅಭಿಮಾನಿಗಳು ನೆನೆಸಿಕೊಳ್ಳುತ್ತಾರೆ.ಆದ್ರೆ ಈಗ ಅದೇ ರೇಖಾ ಗುರುತೆ ಸಿಗದಷ್ಟರ ಮಟ್ಟಿಗೆ ಬದಲಾಗಿ ಹೋಗಿದ್ದಾರೆ.
ಸಣಕಲು ದೇಹ, ಬತ್ತಿದ ಕಣ್ಣುಗಳು, ಬಾಡಿದ ಕೆನ್ನೆಗಳು ರೇಖಾ ಅವರ ನಿಜ ಸ್ವರೂಪವನ್ನೇ ಬದಲಾಯಿಸಿ ಬಿಟ್ಟಿದೆ.
ಒಂದು ಕಾಲದಲ್ಲಿ ಬೆಳ್ಳಿ ತೆರೆಯಲ್ಲಿ ಮಿರ ಮಿರ ಮಿಂಚಿ ಮರೆಯಾಗಿರುವ ನಟಿ ರೇಖಾ ದಿಢೀರನೆ ತೆಲುಗು ಕಿರುತೆರೆ ಕಾರ್ಯಕ್ರಮದಲ್ಲಿ ಪ್ರತ್ಯಕ್ಷ ಆಗಿದ್ದಾರೆ.
ತೆಲುಗಿನ ‘ಶ್ರೀದೇವಿ ಡ್ರಾಮಾ ಕಂಪನಿ’ ಕಾಮಿಡಿ ಶೋಗೆ ಅತಿಥಿಯಾಗಿ ಬಂದಿದ್ದ ರೇಖಾ ಎಲ್ಲರಿಗೂ ಶಾಕ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಹುಟ್ಟಿಬೆಳೆದ ರೇಖಾ ಕನ್ನಡದ ‘ಹುಚ್ಚ’ ಚಿತ್ರದಲ್ಲಿ ಮೊದಲಿಗೆ ಆಕೆ ಬಣ್ಣ ಹಚ್ಚಿದ್ದರು.
ಅಲ್ಲಿಂದ ಮುಂದೆ ಕನ್ನಡ ಸಿನಿರಸಿಕರಿಗೆ ‘ಹುಚ್ಚ’ ನಟಿ ರೇಖಾ ಅಂತ್ಲೇ ಪರಿಚಿತರಾದರು.
ಕನ್ನಡ ಜೊತೆ ಜೊತೆಗೆ ತೆಲುಗು, ತಮಿಳು ಸಿನಿಮಾಗಳಲ್ಲಿ ರೇಖಾ ಮಿಂಚಿದರು. ತೆಲುಗಿನಲ್ಲೂ ಆಕೆ ಹಲವು ಹಿಟ್ ಸಿನಿಮಾಗಳಲ್ಲಿ ಮಿಂಚಿದ್ದಾರೆ.
ಕಾಲೇಜು ದಿನಗಳಲ್ಲೇ ಮಾಡೆಲಿಂಗ್ ಆರಂಭಿಸಿದ ಚೆಲುವೆಗೆ ಚಿತ್ರರಂಗಕ್ಕೆ ಬರುವುದು ಕಷ್ಟವಾಗಲಿಲ್ಲ.
‘ಚಿತ್ರ’, ‘ತುಂಟಾಟ’, ‘ಮೋನಲಿಸಾ’, ‘ಚೆಲ್ಲಾಟ’ ಹೀಗೆ ಹಿಟ್ ಸಿನಿಮಾಗಳಲ್ಲಿ ಮಿಂಚಿದರು.
ಬಳಿಕ ತೆಲುಗು, ತಮಿಳು ಸಿನಿಮಾಗಳತ್ತ ಮುಖ ಮಾಡಿದ್ದರು. ಗಣೇಶ್ ಜೋಡಿಯಾಗಿ ‘ಹುಡುಗಾಟ’ ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಬಂದ ರೇಖಾ ಮತ್ತೊಮ್ಮೆ ಕಮಾಲ್ ಮಾಡಿದರು.
ನಟಿ ರೇಖಾ 2014ರ ನಂತರ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿಲ್ಲ. ಅವಕಾಶಗಳು ಸಿಕ್ಕಿಲ್ವೋ ಅಥವಾ ಸಿನಿಮಾ ಮೇಲಿನ ಆಸಕ್ತಿ ಕಮ್ಮಿ ಆಯ್ತೋ ಗೊತ್ತಿಲ್ಲ.
ಆದರೆ ಇದ್ದಕ್ಕಿಂದ್ದಂತೆ ಬಿಗ್ ಸ್ಕ್ರೀನ್ನಿಂದ ಮಾಯವಾಗಿದ್ದ ರೇಖಾ ಸಿನಿಪ್ರೇಮಿಗಳಿಗೆ ಅಪರೂಪದ ತಾರೆಯಾಗಿ ಉಳಿದುಕೊಂಡು ಬಿಟ್ರು.
ಆದಷ್ಟು ಬೇಗ ಕನ್ನಡ ಮುದ್ದು ಮುಖದ ನಟಿ ರೇಖಾ ವೇದವ್ಯಾಸ್ ಗುಣ ಮುಖರಾಗಿ ಮೊದಲಿನ ಮಂದಹಾಸ ಬರಲಿ ಅನ್ನೋದೆ ಅವರ ಅಭಿಮಾನಿಗಳ ಆಸೆ.
FILM
ಮಲಯಾಳಂನ ‘2018’ ಚಿತ್ರ ಆಸ್ಕರ್ ಗೆ ನಾಮಿನೇಟ್
OSCAR AWARD : 2024ಕ್ಕೆ ಭಾರತವು ಆಸ್ಕರ್ ಪ್ರಶಸ್ತಿಗೆ ಮಲಯಾಳಂ ಭಾಷೆಯ ‘2018’ ಚಿತ್ರವನ್ನು ನಾಮಿನೇಟ್ ಮಾಡಿದೆ.
ಬಾರಿ ಆಸ್ಕರ್ಗೆ ಭಾರತದದಿಂದ ಕಳಿಸಲಾಗುವ ಅಧಿಕೃತ ಸಿನಿಮಾ ಘೋಷಣೆ ಆಗಿದ್ದು, ಮಲಯಾಳಂ ನ ‘2018’ ಸಿನೆಮಾ ಆಯ್ಕೆಯಾಗಿದೆ.
ಕಳೆದ ಸಲ ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡಿಗಾಗಿ ಆಸ್ಕರ್ ಪ್ರಶಸ್ತಿ ಬಂದಿತ್ತು.
ಈ ಬಾರಿ ದಕ್ಷಿಣದ ಮತ್ತೊಂದು ಸಿನಿಮಾ ಈ ವರ್ಷದ ಆಸ್ಕರ್ ಪ್ರಶಸ್ತಿಗಾಗಿ ನಾಮಿನೇಟ್ ಆಗಿದೆ.
ಮಲಯಾಳಂನ 2018 ಹೆಸರಿನ ಚಿತ್ರ ಈ ಬಾರಿ ಆಸ್ಕರ್ ಪ್ರಶಸ್ತಿಗಾಗಿ ಸೆಣಸಲಿದೆ. ಈ ವಿಷಯವನ್ನು ಆಸ್ಕರ್ ಆಯ್ಕೆ ಸಮಿತಿ ಅಧ್ಯಕ್ಷ, ಕನ್ನಡದವರೇ ಆಗಿರುವ ಗಿರೀಶ್ ಕಾಸರವಳ್ಳಿ ತಿಳಿಸಿದ್ದಾರೆ.
ಟೊವಿನೋ ಥಾಮಸ್ ನಟನೆಯ 2018 ಹೆಸರಿನ ಮಲಯಾಳಂ ಸಿನಿಮಾ ವಿಶೇಷ ಕಥಾವಸ್ತುವನ್ನು ಹೊಂದಿದೆ.
ಕೇರಳದಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದ ಅತಿವೃಷ್ಠಿ ಸೃಷ್ಟಿಸಿದ ಆವಾಂತರವನ್ನು ಆಧರಿಸಿದ ಚಿತ್ರಿಸಲಾಗಿದೆ.
ಈ ಚಿತ್ರಕ್ಕೆ ಭಾರೀ ಪ್ರತಿಕ್ರಿಯೆ ಕೂಡ ಉತ್ತಮವಾಗಿತ್ತು. ಈ ಸಿನಿಮಾವನ್ನು ಕಾಸರವಳ್ಳಿ ಅಧ್ಯಕ್ಷತೆಯ ಕಮೀಟಿಯು ಆಸ್ಕರ್ ಪ್ರಶಸ್ತಿ ಸ್ಪರ್ಧೆಗಾಗಿ ಆಯ್ಕೆ ಮಾಡಲಾಗಿದೆ.
ಈ ಆಯ್ಕೆಯು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಮೂಲಕ ನಡೆಯುತ್ತದೆ. ಇದು ಪ್ರತಿ ವರ್ಷವೂ ಒಂದು ಸಿನಿಮಾವನ್ನು ಆಯ್ಕೆ ಮಾಡಿ, ಸರಕಾರವೇ ಉಳಿದ ವೆಚ್ಚವನ್ನು ಭರಿಸಿ ಕಳುಹಿಸುತ್ತದೆ.
ಜೊತೆಗೆ ಖಾಸಗಿಯಾಗಿ ಯಾವ ಸಿನಿಮಾಗಳು ಕೂಡ ಸ್ಪರ್ಧಿಸಬಹುದಾಗಿದೆ.
- FILM7 days ago
ಕುರೂಪಿಯಾದ ಹಾಲಿವುಡ್ ನಟಿ ಆ್ಯಮಿ ಜಾಕ್ಸನ್..!
- DAKSHINA KANNADA7 days ago
ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ರಾಂಬೋ ಸರ್ಕಸ್- ಜನರನ್ನು ಬೆರಗುಗೊಳಿಸುವ ವಿಸ್ಮಯ ಪ್ರದರ್ಶನ..!
- FILM7 days ago
Film: ಹಂದಿ ಮಾಂಸ ಸೇವಿಸಿದ ಟಿಕ್ಟಾಕ್ ಸ್ಟಾರ್ಗೆ 2 ವರ್ಷ ಜೈಲು ಶಿಕ್ಷೆ..!
- bangalore6 days ago
ಹುಡುಗಿ ಚೇಂಜ್ ಆದ್ರೂ ಡ್ರೆಸ್ ಚೇಂಜ್ ಆಗಿಲ್ಲ ಅಲ್ವಾ ಶೆಟ್ರೇ?