Connect with us

FILM

“ಒಂದುವೇಳೆ ನನ್ನ ಮಗಳು ನಟಿಯಾಗಲು ಬಯಸಿದರೆ ಅವಳೊಂದಿಗೂ ನಾನು ಮಲಗುತ್ತಿದ್ದೆ….!!”

Published

on

ನಾನು ನಿಮ್ಮ ಮಗಳಿನ ವಯಸ್ಸಿನವಳು ಅಂದೆ. ಅದಕ್ಕೆ ಅವರು ನನ್ನ ಮಗಳು ನಟಿಯಾಗಲು ಬಯಸಿದರೆ ಅವಳೊಂದಿಗೂ ನಾನು ಮಲಗುತ್ತಿದ್ದೆ ಎಂದು ಹೇಳಿದರು.
ಮುಂಬೈ : ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಸದ್ದು ಇದೀಗ ಮತ್ತೆ ಜೋರಾಗಿದೆ.  ಇದೀಗ ಮತ್ತೊಬ್ಬ ನಟಿ ತನಗೆ ಆದ ಕಹಿ ಅನುಭವದ ಬಗ್ಗೆ ಮಾತನಾಡಿದ್ದಾಳೆ.
ಹಿಂದಿ ಕಿರುತೆರೆಯಲ್ಲಿ ಜನಂ ಮೋಹೇ ಬಿತಿಯ ಹಿ ಕಿಚೋ ಧಾರವಾಹಿ ಮೂಲಕ ಜನಮನ್ನಣೆ ಪಡೆದ ರತನ್ ರಜಪೂತ್ ತಮ್ಮ ವೃತ್ತಿ ಬದುಕಿನಲ್ಲಿ ಆಗಿದ್ದ ಕರಾಳ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ.

14 ವರ್ಷಗಳ ಹಿಂದೆ ಸಿನಿಮಾಕ್ಕಾಗಿ ಮುಂಬೈಗೆ ಹೋಗಿದ್ದೆ. ಅಲ್ಲಿ 60 ವರ್ಷದ ನಿರ್ಮಾಪಕರೊಬ್ಬರನ್ನು ಭೇಟಿಯಾಗಿದ್ದೆ. ಅವರು ನನ್ನನ್ನು ನೋಡಿ ನಿನ್ನ ಸಂಪೂರ್ಣ ಲುಕ್ ಬದಲಾಯಿಸಬೇಕು. ಅದಕ್ಕೆ ಆಗುವ ವೆಚ್ಚವನ್ನು ನಾನು ಭರಿಸುತ್ತೇನೆ. ಅದಕ್ಕೆ ನೀನು ನನ್ನೊಂದಿಗೆ ಸ್ನೇಹಿತೆ ಆಗಿರಬೇಕು ಎಂದು ಕೇಳಿದರು.

ನಾನು ನಿಮ್ಮ ಮಗಳಿನ ವಯಸ್ಸಿನವಳು ಅಂದೆ. ಅದಕ್ಕೆ ಅವರು ನನ್ನ ಮಗಳು ನಟಿಯಾಗಲು ಬಯಸಿದರೆ ಅವಳೊಂದಿಗೂ ನಾನು ಮಲಗುತ್ತಿದ್ದೆ ಎಂದು ಹೇಳಿದರು.

ಆ ಮಾತನ್ನು ಕೇಳಿ ನಾನು ಆಘಾತಕ್ಕೊಳಗಾದೆ. ತಡ ಮಾಡದೆ ಅಲ್ಲಿಂದ ಹೊರಟು ಬಂದುಬಿಟ್ಟಿದೆ ಎಂದು ನಟಿ ರತನ್ ರಜಪೂತ್ ಹೇಳಿಕೊಂಡಿದ್ದಾಳೆ.

FILM

ಶೈನ್‌ ಶೆಟ್ಟಿ, ಅಂಕಿತಾ ಜಸ್ಟ್ ಮ್ಯಾರೀಡ್..!! ಅಭಿಮಾನಿಗಳಿಗೆ ಖುಷಿ

Published

on

ಬೆಂಗಳೂರು: ಬಿಗ್‌ಬಾಸ್ ಖ್ಯಾತಿ ಶೈನ್ ಶೆಟ್ಟಿ ಹಾಗೂ ಕಿರುತೆರೆ ನಟಿ ಅಂಕಿತಾ ಅಮರ್‌ ಜೊತೆಯಾಗಿ ನಟಿಸಿರುವ ಜಸ್ಟ್ ಮ್ಯಾರೇಜ್‌ ಬಿಗ್‌ಸ್ಕ್ರೀನ್‌ಗೆ ಎಂಟ್ರಿಯಾಗಲು ಸಿದ್ಧವಾಗಿದೆ. ಇಲ್ಲಿವರೆಗೂ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದ ಅಜನೀಶ್ ಲೋಕನಾಥ್‌ ರವರ ಚೊಚ್ಚಲ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಸಿನೆಮಾ ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

Just married

ಬಿಗ್‌ಬಾಸ್ ಖ್ಯಾತಿಯ ಕರಾವಳಿ ಹುಡುಗ ಶೈನ್‌ ಶೆಟ್ಟಿ ಹಾಗೂ ಕಿರುತೆರೆ ನಟಿ ಅಂಕಿತಾ ಅಮರ್‌ ಇವರಿಬ್ಬರ ಜೋಡಿಯನ್ನು ತೆರೆ ಮೇಲೆ ಕಾಣಲು ಪ್ರೇಕ್ಷಕರು ಕಾತುರರಾಗಿದ್ದಾರೆ. ಸಿ ಆರ್ ಬಾಬಿ ಅವರು ಸಿನೆಮಾ ನಿರ್ದೇಶನ ಮಾಡುತ್ತಿದ್ದಾರೆ. ಅದರಲ್ಲೂ ಸಂಗೀತದಿಂದ ಮೋಡಿ ಮಾಡಿದ್ದ ಅಜನೀಶ್ ರವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಿಂದ ಜನರು ಹೆಚ್ಚಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ಸಿನೆಮಾ ತಂಡ ಕಂಪ್ಲೀಟ್ ಶೂಟಿಂಗ್‌ ಮುಗಿಸಿದ್ದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ತೆರೆಗೆ ಸಿದ್ಧಗೊಂಡ ಸಿನೆಮಾ..

ಜಸ್ಟ್ ಮ್ಯಾರೀಡ್’ ಸಿನಿಮಾಗೆ ಬೆಂಗಳೂರು, ಮೈಸೂರು ಹಾಗೂ ಚಿಕ್ಕಮಗಳೂರಿನಲ್ಲಿ 45 ದಿನಗಳ ಕಾಲ ಶೂಟಿಂಗ್​ ಮಾಡಲಾಗಿದೆ. ಈಗ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಬಿರುಸಿನಿಂದ ಸಾಗಿದ್ದು,  ಸಿ.ಆರ್.ಬಾಬಿ ಅವರು ಈ ಸಿನಿಮಾದ ನಿರ್ಮಾಣದಲ್ಲಿ ಅಜನೀಶ್​ಗೆ ಸಾಥ್ ನೀಡಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದ ಸಿ.ಆರ್. ಬಾಬಿ ಅವರು ತನ್ನ ಚೊಚ್ಚಲ ನಿರ್ದೇಶನದ ಮೂಲಕ ಅಜನೀಶ್ ರವರಿಗೆ ಸಾಥ್ ನೀಡಿದ್ದಾರೆ.

ಸಿನೆಮಾದಲ್ಲಿದೆ ಸೂಪರ್ ಹಿಟ್ ಹಾಡುಗಳು:

ಈ ಸಿನೆಮಾದಲ್ಲಿ ಅಜನೀಶ್ ಲೋಕನಾಥ್‌ರವರ ಆರು ಸುಮಧುರ ಹಾಡುಗಳಿವೆ. ಈಗಾಗಲೇ ಅವುಗಳ ಪೈಕಿ ‘ಅಭಿಮಾನಿಯಾಗಿ ಹೋದೆ..’ ಗೀತೆ ಇತ್ತೀಚಿಗೆ ರಿಲೀಸ್​ ಆಗಿ ಮೆಚ್ಚುಗೆ ಪಡೆದಿದೆ. ಈ ಹಾಡನ್ನು ಪ್ರಮೋದ್ ಮರವಂತೆ ಬರೆದಿದ್ದು, ವಿಜಯ್ ಪ್ರಕಾಶ್ ಧ್ವನಿಗೂಡಿಸಿದ್ದಾರೆ.

Read More..; ವಿಚ್ಛೇದನದ ಸುದ್ದಿಗೆ ಉತ್ತರ ಕೊಟ್ಟ ಐಶ್ – ಅಭಿ ಆ್ಯನಿವರ್ಸರಿ ಫೋಟೋ!

ಚಿತ್ರದಲ್ಲಿದೆ ದೊಡ್ಡ ತಾರಾಗಣ:

ಈ ಚಿತ್ರದಲ್ಲಿ ಶೈನ್ ಶೆಟ್ಟಿ, ಅಂಕಿತಾ ಅಮರ್, ಅಚ್ಯುತ್​ ಕುಮಾರ್, ದೇವರಾಜ್, ಅನೂಪ್ ಭಂಡಾರಿ, ಮಾಳವಿಕಾ ಅವಿನಾಶ್, ಶ್ರುತಿ ಹರಿಹರನ್, ಸಾಕ್ಷಿ ಅಗರವಾಲ್, ಶ್ರುತಿ ಕೃಷ್ಣ, ರವಿಶಂಕರ್ ಗೌಡ, ಶ್ರೀಮಾನ್, ರವಿ ಭಟ್, ಸಂಗೀತಾ ಅನಿಲ್, ವಾಣಿ ಹರಿಕೃಷ್ಣ, ಕುಮುದಾ, ವೇದಿಕಾ ಕಾರ್ಕಳ, ಜಯರಾಮ್ ಮುಂತಾದ ನಟಿಸಿದ್ದು ದೊಡ್ಡ ತಾರಾಗಣವೆ ಇದೆ.  ಸಿ.ಆರ್. ಬಾಬಿ ಕಥೆ ಬರೆದಿದ್ದಯ,  ಧನಂಜಯ್ ರಂಜನ್ ಚಿತ್ರಕಥೆ ಬರೆದಿದ್ದಾರೆ. ಈ ಚಿತ್ರದ ಸಂಭಾಷಣೆ ರಘು ನಿಡುವಳ್ಳಿ , ಪಿ.ಜಿ. ಛಾಯಾಗ್ರಹಣ, ಶ್ರೀಕಾಂತ್ ಹಾಗೂ ಅಶಿಕ್ ಕುಸುಗೊಳ್ಳಿ ಅವರ ಸಂಕಲನ, ಅಮರ್ ಅವರ ಕಲಾ ನಿರ್ದೇಶನ ಈ ಸಿನಿಮಾಗಿದೆ. ವಿಕ್ರಮ್ ಮೋರ್ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ಬಾಬಾ ಭಾಸ್ಕರ್, ಶಾಂತಿ ಅರವಿಂದ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ.

 

Continue Reading

FILM

ವಿಚ್ಛೇದನದ ಸುದ್ದಿಗೆ ಉತ್ತರ ಕೊಟ್ಟ ಐಶ್ – ಅಭಿ ಆ್ಯನಿವರ್ಸರಿ ಫೋಟೋ!

Published

on

ಮುಂಬೈ : ಬಾಲಿವುಡ್ ಅಂಗಳಲ್ಲಿ ಟ್ರೆಂಡಿಂಗ್ ನಲ್ಲಿರುವ ಸ್ಟಾರ್ ದಂಪತಿಯಲ್ಲಿ ಐಶ್ವರ್ಯ ರೈ- ಅಭಿಷೇಕ್ ಬಚ್ಚನ್ ಮೊದಲಿನ ಸಾಲಿನಲ್ಲಿ ಇದ್ದಾರೆ. ಅವರ ಚಲನವಲನ, ಜೊತೆಗೆ ಅವರಿಬ್ಬರ ವಿಚ್ಛೇದನ ವಿಚಾರ ಯಾವಾಗಲೂ ಕೇಳಿ ಬರುತ್ತಿರುತ್ತದೆ. ಅವರಿಬ್ಬರು ಬೇರೆಯಾಗುತ್ತಾರೆ ಎಂದು ಸುದ್ದಿ ಹರಿದಾಡುತ್ತಲೇ ಇರುತ್ತದೆ.


ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ 2007ರ ಏಪ್ರಿಲ್ 20 ರಂದು ವಿವಾಹವಾದರು. ಇಬ್ಬರಿಗೂ ಆರಾಧ್ಯ ಎಂಬ ಮುದ್ದಾದ ಹೆಣ್ಣು ಮಗಳಿದ್ದಾಳೆ. ಆರಂಭದಿಂದಲೂ ಇವರಿಬ್ಬರ ಬಗ್ಗೆ ಅಪಸ್ವರ ಕೇಳಿ ಬರುತ್ತಿತ್ತು. ದಂಪತಿ ನಡುವೆ ಯಾವುದೂ ಸರಿಯಿಲ್ಲ. ಬೇರೆ ಬೇರೆ ಆಗುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿರುತ್ತದೆ.

ಐಶ್ – ಅಭಿ ಮಾತ್ರವಲ್ಲ ಐಶ್ ಅತ್ತೆ ಜಯಾ ಬಚ್ಚನ್ ಜೊತೆಯೂ ಮುನಿಸಲ್ಲಿದ್ದಾರೆ ಎನ್ನಲಾಗುತ್ತಿರುತ್ತದೆ. ಅತ್ತೆ – ಸೊಸೆ ಬೇರೆ ಬೇರೆ ಮನೆಯಲ್ಲಿ ವಾಸವಾಗಿದ್ದಾರೆ ಎಂದೇ ಹೇಳಲಾಗುತ್ತಿದೆ. ಈ ಎಲ್ಲಾ ವಿಚಾರಗಳ ನಡುವೆ ಐಶ್ – ಅಭಿ ತಮ್ಮ 17 ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.

ಇದನ್ನೂ ಓದಿ : ನೇಹಾ ಹ*ತ್ಯೆ ಪ್ರಕರಣ : ಏನಂದ್ರು ನಟ ದರ್ಶನ್?

ಫೋಟೋ ಹಂಚಿಕೊಂಡ ದಂಪತಿ :

ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ದಂಪತಿಯ ದಾಂಪತ್ಯ ಜೀವನಕ್ಕೆ 17 ವರ್ಷ ತುಂಬಿದೆ. ಇವರಿಬ್ಬರು ಬೇರೆಯಾಗುತ್ತಾರೆ ಎಂಬ ಸುದ್ದಿಗೆ ಈ ಫೋಟೋ ಬ್ರೇಕ್ ನೀಡಿದೆ. ಈ ಹಿಂದೆಯೂ ಅವರು ಹಲವು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡು ‘ಡಿವೋರ್ಸ್’ ಸುದ್ದಿಗೆ ವಿರಾಮ(Break) ನೀಡುತ್ತಿದ್ದರು. ಆದರೆ, ಅದು ಪೂರ್ಣ ವಿರಾಮ(full stop) ಆಗಿರಲಿಲ್ಲ. ಮತ್ತೆ ಮತ್ತೆ ಐಶ್ – ಅಭಿ ಡಿವೋರ್ಸ್ ವಿಚಾರ ಹರಿದಾಡುತ್ತಿತ್ತು.


ಇದೀಗ ಮತ್ತೆ ಐಶ್ – ಅಭಿ ತಮ್ಮ ವಿವಾಹ ವಾರ್ಷಿಕೋತ್ಸವಕ್ಕೆ ಫೋಟೋ ಹಂಚಿಕೊಂಡು ಗಾಳಿ ಸುದ್ದಿಗೆ ಬ್ರೇಕ್ ನೀಡಿದ್ದಾರೆ. ಹೌದು, ಈ ಫೋಟೋದಲ್ಲಿ ಐಶ್ – ಅಭಿ – ಆರಾಧ್ಯ ಜೊತೆಯಾಗಿ ನಿಂತಿದ್ದಾರೆ. ಇದು ಸೆಲ್ಫಿ ಕ್ಲಿಕ್. ಈ ಫೋಟೋವನ್ನು ಹಾರ್ಟ್ ಸಿಂಬಲ್ ನೊಂದಿಗೆ ದಂಪತಿ ಹಂಚಿಕೊಂಡಿದ್ದಾರೆ.

ಅಭಿಮಾನಿಗಳು ಏನಂದ್ರು? :

ಇನ್ನು ಐಶ್ವರ್ಯ ರೈ – ಅಭಿಷೇಕ್ ಬಚ್ಚನ್ ಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಅಲ್ಲದೇ, ಕೊನೆಗೂ ಇದು ವಿಚ್ಛೇದನದ ಗಾಳಿ ಸುದ್ದಿಗೆ ವಿಶ್ರಾಂತಿ ನೀಡಿದೆ. ನಿಜಕ್ಕೂ ರಿಲೀಫ್ ಎಂದು ಕಮೆಂಟ್ ಮಾಡಿದ್ದಾರೆ. ಡಿವೋರ್ಸ್ ಗಾಳಿ ಸುದ್ದಿಯನ್ನು ಇದು ಹೊಡೆದುರುಳಿಸಿದೆ ಎಂದಿದ್ದಾರೆ.

Continue Reading

FILM

ನೇಹಾ ಹ*ತ್ಯೆ ಪ್ರಕರಣ : ಏನಂದ್ರು ನಟ ದರ್ಶನ್?

Published

on

ಬೆಂಗಳೂರು : ಹುಬ್ಬಳ್ಳಿಯಲ್ಲಿ ನಡೆದ ಆ ಒಂದು ಕೊ*ಲೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಹುಬ್ಬಳ್ಳಿ ಕಾರ್ಪೋರೇಟರ್ ನಿರಂಜನ್ ಹಿರೇಮಠ್ ಪುತ್ರಿ ನೇಹಾ ಹಾಡಹಗಲೇ ಫಯಾಝ್ ಎಂಬಾತನಿಂದ ಪ್ರಾ*ಣ ಕಳೆದುಕೊಂಡಿದ್ದಳು. ಈ ಘಟನೆಗೆ ರಾಜ್ಯವ್ಯಾಪಿ ಆಕ್ರೋಶ ಕೇಳಿ ಬಂದಿದೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ #justiceforneha ಎಂಬ ಅಭಿಯಾನವೂ ಆರಂಭವಾಗಿದೆ. ಇದಕ್ಕೆ ಸಿನಿ ತಾರೆಯರೂ ಕೈ ಜೋಡಿಸಿದ್ದಾರೆ. ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

ದರ್ಶನ್ ಏನಂದ್ರು?

ನೇಹಾ ಕೊ*ಲೆ ಭಯಹುಟ್ಟಿಸಿರೋದು ಸುಳ್ಳಲ್ಲ. ಇನ್ನು ಮುಂದೆ ಇಂತಹ ಕೃತ್ಯಗಳು ನಡೆಯಬಾರದು ಎಂಬ ಆಗ್ರಹವೂ ಕೇಳಿ ಬರುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಆಕ್ರೋಶ ಹೊರ ಹಾಕಿದ್ದಾರೆ.


ಪ್ರೀತಿಯ ಹೆಸರಲ್ಲಿ ಇಂತ ಅಮಾನುಷಕರವಾದ ಕೃತ್ಯ ಮಾಡಿರುವವರಿಗೆ ನ್ಯಾಯಾಂಗದ ಅನುಸಾರವಾಗಿ ತಕ್ಕ ಶಿಕ್ಷೆ ಸಿಗಲಿ. ಇನ್ನು ಬಾಳಿ ಬದುಕಬೇಕಿದ್ದ ೨೩ ವಯಸ್ಸಿನ ನೇಹಾ ಹಿರೇಮಠ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ #justicefornehahiremath ಎಂದು ಹ್ಯಾಶ್ ಟ್ಯಾಗ್ ಕೂಡಾ ಬಳಸಿದ್ದಾರೆ.

ವಿ ವಾಂಟ್ ಜಸ್ಟೀಸ್ ಎಂದ ಡಿಂಪಲ್ ಕ್ವೀನ್ :

ಇನ್ನು ಘಟನೆಗೆ ನಟಿ ರಚಿತಾ ರಾಮ್ ಬೇಸರ ವ್ಯಕ್ತಪಡಿಸಿದ್ದಾರೆ. ಜಾತಿ, ಧರ್ಮ, ಯಾವುದೇ ಆಗಿರಲಿ ಮೊದಲು ನಾವು ಮಾನವರು. ನಾನು ಈ ಪೋಸ್ಟ್ ಹಾಕಲು ಕಾರಣ ಆಕೆಗೆ ಆಗಿರುವ ಅನ್ಯಾಯ. ತಪ್ಪು ಯಾರೇ ಮಾಡಿದರು ತಪ್ಪೆ. ಸರ್ಕಾರಕ್ಕೆ ನನ್ನ ಒಂದು ಮನವಿ! ರಾಜಕೀಯ ಆಯಾಮದಲ್ಲಿ ಈ ವಿಷಯವನ್ನು ತರಬೇಡಿ. ಆಗಿರೋದು ಅನ್ಯಾಯ. ಈಗ ನ್ಯಾಯ ಬೇಕಾಗಿದೆ. ಅಷ್ಟೇ. ಈ ರೀತಿಯ ಕೃತ್ಯ ಮಾಡುವವರನ್ನು ಗ*ಲ್ಲಿಗೇರಿಸುವ ಬದಲು ಅವರನ್ನು ಜನಸಾಮಾನ್ಯರ ಕೈಗೆ ಒಪ್ಪಿಸಿ. #WEWANTJUSTICE ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.


ನಟ ಧ್ರುವ ಸರ್ಜಾ ಅವರು ಟ್ವೀಟ್ ಮಾಡಿ, ಸಹೋದರಿ ನೇಹಾ ಹಿರೇಮಠ್ ರ ಹ*ತ್ಯೆ ಅತ್ಯಂತ ಹೀನ ಕೃತ್ಯ. ಕ್ಯಾಂಪಸ್ ಲಿ ಹ*ತ್ಯೆ ನಿಜಕ್ಕೂ ಆತಂಕ ಮೂಡಿಸುತ್ತದೆ. ಸರ್ಕಾರ ಶೀಘ್ರದಲ್ಲೇ ತ್ವರಿತಗತಿ ನ್ಯಾಯಾಲಯದಲ್ಲಿ ಈ ಕೇಸ್ ತೀರ್ಪು ಬರಲು ವರ್ಗಾಯಿಸಬೇಕು. ಹಾಗು ಇದನ್ನ ಎಲ್ಲಾ ಆಯಮದಲ್ಲೂ ತನಿಖೆ ನಡೆಸಿ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡುವಂತಾಗಬೇಕು. ಜೈ ಆಂಜನೇಯ ಎಂದಿದ್ದಾರೆ.

ಘಟನೆ ಬಗ್ಗೆ ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ ಆಕ್ರೋಶ ಹೊರ ಹಾಕಿದ್ದಾರೆ. ನೇಹಾ ಹಿರೇಮಠ್ ಗೆ ನ್ಯಾಯ ಸಿಗಲೇಬೇಕು. ಮಹಿಳೆಯರಿಗೆ ಸುರಕ್ಷತೆ ಎಲ್ಲಿದೆ? ಕಾಲೇಜಿಗೆ ಹೋಗುವ ಯುವತಿಯರಿಗೂ ಕೂಡ ರಕ್ಷಣೆ ಇಲ್ಲ. ಶೇಮ್ ಶೇಮ್ ಎಂದಿದ್ದಾರೆ.

ಪ್ರೀತಿಸಬೇಕು ಅಂತ ಅದ್ಹೇಗೆ ಒತ್ತಾಯಿಸಲು ಸಾಧ್ಯ? ಪ್ರೀತಿಯನ್ನ ಒಪ್ಪಿಕೊಳ್ಳಲಿಲ್ಲ ಅಂತ ಬರ್ಬರವಾಗಿ ಹುಬ್ಬಳ್ಳಿ ಕಾಲೇಜ್ ಕ್ಯಾಂಪಸ್ನಲ್ಲೇ ಹ*ತ್ಯೆ ಮಾಡಿದ್ದಾನೆ. ಅದೆಂಥಾ ಮೈಂಡ್ ಸೆಟ್ ಹೊಂದಿದ್ದಾರೆ ಆ ವಯಸ್ಸಿನ ಹುಡುಗರು? ಪೋಷಕರಾಗಿ ನಮ್ಮ ಗಂಡು ಮಕ್ಕಳಿಗೆ ಕೆಲವು ಬೇಸಿಕ್ ಸಂಗತಿಗಳನ್ನ ನಾವು ಹೇಳಿಕೊಡಲೇಬೇಕು. ಅದನ್ನೆಲ್ಲಾ ಶಾಲಾ ಕಾಲೇಜುಗಳಲ್ಲಿ ಕಲಿಸುವುದಿಲ್ಲ. ಇದನ್ನ ಸಹಿಸಲು ಸಾಧ್ಯವೇ ಇಲ್ಲ. ಶೇಮ್ ಶೇಮ್. ಪೋಷಕರಾಗಿ ನನ್ನ ಹೃದಯ ಛಿದ್ರವಾಗುತ್ತಿದೆ ಎಂದು ರಕ್ಷಿತಾ ಪ್ರೇಮ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ನೇಹಾ ಹ*ತ್ಯೆ ಪ್ರಕರಣ : ಆಕ್ರೋಶ ಹೊರ ಹಾಕಿದ ಸಿನಿತಾರೆಯರು

ಹುಬ್ಬಳ್ಳಿ ಕಾರ್ಪೋರೇಟರ್ ನಿರಂಜನ್ ಹಿರೇಮಠ ಅವರ ಮಗಳು ನೇಹಾ ಹಿರೇಮಠಳನ್ನು ಫಯಾಜ್ ಎಂಬಾತ ಕಾಲೇಜ್ ಕ್ಯಾಂಪಸ್ ನಲ್ಲಿ ಚಾಕುವಿನಿಂದ ಇರಿದು ಹ*ತ್ಯೆ ಮಾಡಿದ್ದ. ಹುಬ್ಬಳ್ಳಿಯ ಕೆಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನೇಹಾ ಪ್ರಥಮ ವರ್ಷದ ಎಂಸಿಎ ಓದುತ್ತಿದ್ದಳು. ಸದ್ಯ ಪ್ರಕರಣದ ಬಗ್ಗೆ ತೀವ್ರ ಆಕ್ರೋಶ ಕೇಳಿ ಬಂದಿದೆ. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂಬ ಆಗ್ರಹ ಕೇಳಿ ಬಂದಿದೆ.

Continue Reading

LATEST NEWS

Trending