Connect with us

    FILM

    ದರ್ಶನ್ ಬೆಂಬಲಕ್ಕೆ ನಿಂತ ಪರಭಾಷಾ ನಟ; ಏನಂದ್ರು ನಾಗಶೌರ್ಯ?

    Published

    on

    ಮಂಗಳೂರು/ ಬೆಂಗಳೂರು : ರೇಣುಕಾಸ್ವಾಮಿ ಕೊ*ಲೆ ಪ್ರಕರಣ ಆರೋಪ ಎದುರಿಸುತ್ತಿರೋ ದರ್ಶನ್ ಜೈಲು ಪಾಲಾಗಿದ್ದಾರೆ. ಇತ್ತ ಅನೇಕ ನಟ – ನಟಿಯರು ದರ್ಶನ್ ಪರವಾಗಿ ಮಾತನಾಡುತ್ತಿದ್ದಾರೆ. ದರ್ಶನ್ ಕೊ*ಲೆ ಮಾಡುವಂತವರಲ್ಲ ಎಂಬುದಾಗಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

    ಇತ್ತೀಚೆಗಷ್ಟೇ ನಟಿ ಭಾವನಾ ರಾಮಣ್ಣ, ಅದೇನೇ ಆಗ್ಲಿ, ಐ ಸ್ಟ್ಯಾಂಡ್ ವಿತ್ ದರ್ಶನ್. ಸಂತೋಷದಲ್ಲಿ ಜೊತೆಗಿದ್ದು ದುಖದಲ್ಲಿ ಇಲ್ಲ ಅನ್ನೋ ರೀತಿ ಅಲ್ಲ. ದರ್ಶನ್ ಅವರು ಹೀರೋ ಆಗೋಕ್ಕಿಂತ ಮುಂಚೆನೆ ನನಗೆ ಗೊತ್ತು. ಅವರು ನನಗೆ ಗೊತ್ತಿರೋರು…ಸಾಕಷ್ಟು ವರ್ಷದಿಂದ ಜೊತೇಲಿ ಇರೋರು ನಾವು ಎಂದಿದ್ದಾರೆ.


    ಈಗ ಪರಭಾಷಾ ನಟ ನಾಗ ಶೌರ್ಯ ದರ್ಶನ್ ಪರವಾಗಿ ಮಾತನಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ. ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ದರ್ಶನ್ ಅಣ್ಣ ತಮ್ಮ ಕೆಟ್ಟ ದುಃಸ್ವಪ್ನದಲ್ಲೂ ಯಾರಿಗೂ ತೊಂದರೆ ಕೊಡುವವರಲ್ಲ ಎಂದಿದ್ದಾರೆ.

    ಏನಂದ್ರು ನಾಗ ಶೌರ್ಯ ?

    ನನ್ನ ಹೃದಯವು ಮೃ*ತರ ಕುಟುಂಬಕ್ಕೆ ಮರುಗುತ್ತದೆ ಮತ್ತು ಈ ಕಷ್ಟದ ಸಮಯದಲ್ಲಿ ಅವರಿಗೆ ಶಕ್ತಿಯನ್ನು ನೀಡಬೇಕೆಂದು ನಾನು ಪ್ರಾಮಾಣಿಕವಾಗಿ ಬಯಸುತ್ತೇನೆ.

    ಆದಾಗ್ಯೂ, ಜನರು ಈ ವಿಷಯದ ಬಗ್ಗೆ ತೀರ್ಮಾನಗಳಿಗೆ ಬರುತ್ತಿರುವುದನ್ನು ನೋಡುವುದು ನಂಬಲಾಗದಷ್ಟು ನಿರಾಶಾದಾಯಕವಾಗಿದೆ. ದರ್ಶನ್ ಅಣ್ಣ ತಮ್ಮ ಕೆಟ್ಟ ದುಃಸ್ವಪ್ನದಲ್ಲೂ ಯಾರಿಗೂ ತೊಂದರೆ ಕೊಡುವವರಲ್ಲ. ದರ್ಶನ್ ಅವರನ್ನು ಚೆನ್ನಾಗಿ ಬಲ್ಲವರಿಗೆ ಅವರ ಉದಾರತೆ, ಸಹೃದಯ ಸ್ವಭಾವ ಮತ್ತು ಇತರರಿಗೆ ಸಹಾಯ ಮಾಡುವ ಗುಣ ತಿಳಿದಿದೆ. ಅವರು ಯಾವಾಗಲೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಮುಂದಾಗುತ್ತಾರೆ ಮತ್ತು ಅನೇಕರಿಗೆ ಶಕ್ತಿಯ ಆಧಾರಸ್ತಂಭವಾಗಿದ್ದಾರೆ.
    ನನ್ನ ಕರಾಳ ಭಯದಲ್ಲಿಯೂ ನಾನು ಈ ಸುದ್ದಿಯನ್ನು ಒಪ್ಪಿಕೊಳ್ಳಲಾರೆ. ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ನನಗೆ ನಂಬಿಕೆಯಿದೆ ಮತ್ತು ಸತ್ಯವು ಶೀಘ್ರದಲ್ಲೇ ಹೊರಬರುತ್ತದೆ ಎಂದು ನಂಬುತ್ತೇನೆ.

    ಇದನ್ನೂ ಓದಿ : ಜೈಲಿನಿಂದಲೇ ದರ್ಶನ್‌ನಿಂದ ಅಭಿಮಾನಿಗಳಿಗೆ ವಿಶೇಷ ಮನವಿ

    ಇನ್ನೊಂದು ಕುಟುಂಬವು ಸಹ ಬಹಳವಾಗಿ ನರಳುತ್ತಿದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಈ ಸವಾಲಿನ ಅವಧಿಯಲ್ಲಿ ಅವರು ಗೌಪ್ಯತೆ ಮತ್ತು ಗೌರವಕ್ಕೆ ಅರ್ಹರಾಗಿದ್ದಾರೆ. ತನ್ನ ಸಮಗ್ರತೆ ಮತ್ತು ಸಹಾನುಭೂತಿಗೆ ಹೆಸರುವಾಸಿಯಾದ ಅಣ್ಣ ನಿರಾಪರಾಧಿ ಎಂದು ಸಾಬೀತಾಗುತ್ತಾರೆ. ನಿಜವಾದ ಅಪರಾಧಿಯನ್ನು ನ್ಯಾಯಾಂಗಕ್ಕೆ ತರಲಾಗುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ ಎಂದು ನಾಗಶೌರ್ಯ ಬರೆದುಕೊಂಡಿದ್ದಾರೆ.

    #standbydarshan #justiceforall ಎಂದು ಹ್ಯಾಶ್ ಟ್ಯಾಗ್ ನ್ನೂ ನಟ ಬಳಸಿದ್ದಾರೆ.

    ಪರಪ್ಪನ ಅಗ್ರಹಾರದಲ್ಲಿದ್ದಾರೆ ದರ್ಶನ್:

    ರೇಣುಕಾಸ್ವಾಮಿ ಕೊ*ಲೆ ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಪ್ರಕರಣದ ಆರೋಪ ಹೊತ್ತಿರುವ ನಟ ದರ್ಶನ್ ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ.

    FILM

    ‘ಎಲ್ಲಾ ಹಣೆಬರಹ..ನಾವೇನು ಮಾಡೋಕ್ಕಾಗಲ್ಲ…’ ದರ್ಶನ್ ಕೊಲೆ ಪ್ರಕರಣದ ಬಗ್ಗೆ ಶಿವಣ್ಣ ಪ್ರತಿಕ್ರಿಯೆ

    Published

    on

    ಬೆಂಗಳೂರು/ಮಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್ ವಿಚಾರಣಾಧೀನ ಖೈದಿಯಾಗಿ ಜೈಲು ಸೇರಿದ್ದಾರೆ. ದೇಶದೆಲ್ಲೆಡೆ ಈ ಕೊಲೆ ಪ್ರಕರಣ ಸಂಚಲನ ಮೂಡಿಸಿದೆ. ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ ರವರು ದರ್ಶನ್ ಕೊಲೆ ಪ್ರಕರಣದ ಬಗ್ಗೆ ಮೌನ ಮುರಿದಿದ್ದಾರೆ.

    ಎಲ್ಲಾ ಹಣೆಬರಹ ಏನೂ ಮಾಡೋಕಾಗಲ್ಲ. ಇದೆಲ್ಲಾ ಒಂಥರಾ ಪಾರ್ಟ್ ಆಫ್ ದಿ ಲೈಫ್. ಒಳ್ಳೆಯದು ಕೆಟ್ಟದ್ದು ಎರಡೂ ನಡೆಯುತ್ತದೆ. ಪ್ರಕರಣ ನ್ಯಾಯಾಲಯದಲ್ಲಿದೆ. ಎಲ್ಲರಿಗೂ ಒಂದು ನ್ಯಾಯ ಸಿಗಬೇಕು. ಎಲ್ಲಾ ಕುಟುಂಬಕ್ಕೂ ಒಳ್ಳೆದಾಗಬೇಕು’ ಎಂದು ಶಿವಣ್ಣ ಹೇಳಿದ್ದಾರೆ.

    ದರ್ಶನ್ ಬೆಂಬಲಕ್ಕೆ ನಿಂತ ಪರಭಾಷಾ ನಟ; ಏನಂದ್ರು ನಾಗಶೌರ್ಯ?

    ನ್ಯಾಯ ಏನಿದೆಯೋ ಅದು ಆಗುತ್ತದೆ. ಇದೆಲ್ಲ ಹಣೆಬರಹ ನಾವೇನು ಮಾಡೋಕಾಗಲ್ಲ. ನಾವ್ ಏನ್ ಮಾಡ್ತೀವಿ ಅದು ಸರಿನಾ ಅಂತ ಯೋಚನೆ ಮಾಡಬೇಕು. ಈ ಘಟನೆಯಿಂದ ರೇಣುಕಾಸ್ವಾಮಿ ಫ್ಯಾಮಿಲಿಗೆ ಆಗಲಿ, ದರ್ಶನ್ ಅವರ‌ ಫ್ಯಾಮಿಲಿಗೆ ಆಗಲಿ ನೋವಾಗಿರುತ್ತೆ. ನ್ಯಾಯ ಏನಿದೆಯೋ ನೋಡೋಣ. ಈಗ ಮಾತಾಡಿ ಪ್ರಯೋಜನ ಇಲ್ಲ’ ಎಂದು ಹೇಳಿದ್ದಾರೆ.

    Continue Reading

    FILM

    ಸಾಲಗಾರರಿಂದ ಕಿರುಕುಳ; ಸಿಸಿಬಿ ಪೊಲೀಸರಿಗೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ದೂರು

    Published

    on

    ಬೆಂಗಳೂರು : ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಸಾಲಗಾರರು ತಮಗೆ ಕಿರುಕುಳ ಕೊಡುತ್ತಿದ್ದು, ಬೆದರಿಕೆ ಹಾಕಿದ್ದಾರೆ ಎಂದು ಸಿಸಿಬಿ ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ. ಸಾಲ ನೀಡಿರುವ ಕೆಲವರು ಮನೆ ಬಳಿ ಗೂಂಡಾಗಳನ್ನು ಕಳಿಸಿ ಗಲಾಟೆ ಮಾಡಿಸಿದ್ದಾರೆ ಎಂದು ಪುಷ್ಕರ್ ಆರೋಪ ಮಾಡಿದ್ದಾರೆ. ಅವರುಗಳ ಮೇಲೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.


    ‘ಅವನೇ ಶ್ರೀಮನ್ನಾರಾಯಣ’, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕಿರಿಕ್ ಪಾರ್ಟಿ’, ‘ಅವತಾರ ಪುರುಷ’ ಸೇರಿದಂತೆ ಅನೇಕ ಸಿನಿಮಾಗಳಿಗೆ ಪುಷ್ಕರ್ ಬಂಡವಾಳ ಹೂಡಿದ್ದಾರೆ. ಇತ್ತೀಚೆಗೆ ಅವರ ಸಿನಿಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿಲ್ಲ. ಸಿನಿಮಾಗಳಿಂದ ನಷ್ಟ ಉಂಟಾಗಿ ಪುಷ್ಕರ್ ಮಲ್ಲಿಕಾರ್ಜುನ, ಸಿನಿಮಾ ಮಾಡಿದ್ದ ಸಾಲ ಮರುಪಾವತಿ ಸರಿಯಾಗಿ ಮಾಡಲಾಗಿಲ್ಲವಾದ್ದರಿಂದ ಸಾಲ ನೀಡಿರುವವರು ಪುಷ್ಕರ್​ಗೆ ಸಮಸ್ಯೆ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ದೂರಿನಲ್ಲಿ ಏನಿದೆ?

    ತಮ್ಮ ಸಂಬಂಧಿ ಆದರ್ಶ್ ಎಂಬವರ ಬಳಿ ಪುಷ್ಕರ್ ಮಲ್ಲಿಕಾರ್ಜುನ ಕಾಲಾಂತರದಲ್ಲಿ ಐದು ಕೋಟಿ ರೂಪಾಯಿ ಸಾಲ ಪಡೆದಿದ್ದರಂತೆ. ಅದಕ್ಕೆ ಪ್ರತಿಯಾಗಿ ಪ್ರತಿ ತಿಂಗಳು 5% ಬಡ್ಡಿ ಪಾವತಿ ಮಾಡುತ್ತಿದ್ದರಂತೆ. ಐದು ಕೋಟಿ ಸಾಲಕ್ಕೆ ಪ್ರತಿಯಾಗಿ ಹತ್ತು ಚೆಕ್ಕುಗಳನ್ನು ಸಹ ನೀಡಿದ್ದರಂತೆ. ಪುಷ್ಕರ್ ಹೇಳಿರುವಂತೆ ಅವರು ಐದು ಕೋಟಿ ಸಾಲಕ್ಕೆ ಬಡ್ಡಿ ಎಲ್ಲ ಸೇರಿಸಿ ಈಗಾಗಲೇ 11 ಕೋಟಿ ಹಣ ನೀಡಿದ್ದಾರಂತೆ. ಆದರೆ ಸಾಲ ಕೊಟ್ಟಿರುವ ಆದರ್ಶ್, ಪುಷ್ಕರ್ ಕೊಟ್ಟಿರುವ ಹಣವನ್ನು ಚಕ್ರಬಡ್ಡಿ, ಬಡ್ಡಿಗೆ ಲೆಕ್ಕ ಹಾಕಿ ಈಗ ಇನ್ನೂ 13 ಕೋಟಿ ನೀಡುವಂತೆ ಕೇಳಿದ್ದಾರಂತೆ.

    ವಾದ ವಿವಾದಗಳು ನಡೆದಾಗ ಸಾಲ ನೀಡಿರುವ ಆದರ್ಶ್, ಹರ್ಷ ಸಿ, ಹರ್ಷ ಡಿ.ಬಿ. ಹಾಗೂ ಅವರ ಕೆಲವು ಸಹಚರರು ತಮ್ಮ ವಾಸದ ಮನೆ, ಕಚೇರಿಗಳಿಗೆ ಹುಡುಗರನ್ನು ಕಳುಹಿಸಿ ಗಲಾಟೆ ಮಾಡಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ನಿರ್ಮಾಪಕ ಪುಷ್ಕರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಇದನ್ನೂ ಓದಿ :ರಿಲೀಸ್‌ಗೂ ಮುನ್ನವೇ ರಾಧಿಕಾ ನಟನೆಯ ಸಿನೆಮಾ ನಿರ್ದೇಶಕನಿಗೆ ಕಾರು ಉಡುಗೊರೆ..!!

    ಸಿಸಿಬಿಯ ಕಿಶೋರ್ ಕುಮಾರ್ ಅವರಿಗೆ ಪುಷ್ಕರ್ ದೂರು ನೀಡಿದ್ದು, ಕರ್ನಾಟಕ ಮನಿ ಲೆಂಡರ್ಸ್ ಕಾಯಿದೆ, ಕರ್ನಾಟಕ ಪ್ರಹಿಬಿಷನ್ ಆಫ್ ಚಾರ್ಜಿಂಗ್ ಎಕ್ಸಾರ್ಬಿಟೇಶನ್ ಇಂಟರೆಸ್ಟ್ ಆ್ಯಕ್ಟ್, ವಂಚನೆ, ಬೆದರಿಕೆ ಆರೋಪದಡಿ ಎಫ್ಐಆರ್ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ.

    Continue Reading

    FILM

    ರಿಲೀಸ್‌ಗೂ ಮುನ್ನವೇ ರಾಧಿಕಾ ನಟನೆಯ ಸಿನೆಮಾ ನಿರ್ದೇಶಕನಿಗೆ ಕಾರು ಉಡುಗೊರೆ..!!

    Published

    on

    ಬೆಂಗಳೂರು: ರಾಧಿಕಾ ಕುಮಾರಸ್ವಾಮಿ ನಟನೆಯ ಅಜಾಗ್ರತಾ ಸಿನೆಮಾ ನಿರ್ದೇಶಕರಿಗೆ ಸಿನೆಮಾ ಬಿಡುಗಡೆ ಮುನ್ನವೇ ಬಂಪರ್ ಬಹುಮಾನ ನೀಡಲಾಗಿದೆ. ರಾಧಿಕಾ ಕುಮಾರಸ್ವಾಮಿ ಸಹೋದರ ನಿರ್ಮಾಪಕ ರವಿರಾಜ್ ರವರು ಈ ಉಡುಗೊರೆಯನ್ನು ನೀಡಿದ್ದಾರೆ.

    ಈ ಹಿಂದೆ ತಮಿಳಿನ ಜೈಲರ್ ಸಿನೆಮಾ ಹಿಟ್ ಅದ ಬಳಿಕ ಸಿನೆಮಾ ನಾಯಕನಟ ರಜನಿಕಾಂತ್, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್, ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ರವರಿಗೆ  ನಿರ್ಮಾಪಕ ಕಲಾನಿಧಿಮಾರನ್ ಐಶರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದರು. ಕಾಟೇರಾ ಸಿನೆಮಾ ಹಿಟ್ ಆದಾಗಲೂ ಸಿನೆಮಾ ಕಥೆಗಾರರಿಗೆ ಕಾರನ್ನು ಗಿಫ್ಟ್ ಮಾಡಲಾಗಿತ್ತು. ಇದೀಗ ರಾಧಿಕಾ ನಟನೆಯ ಅಜಾಗ್ರತ ಸಿನೆಮಾ ಶೂಟಿಂಗ್ ಮುಗಿದು ಸಿನೆಮಾದ ಮೊದಲ ಪ್ರತಿ ಬಿಡುಗಡೆಯಾದ ಬೆನ್ನಲ್ಲೇ ಸಿನೆಮಾ ನಿರ್ದೇಶಕ ಶಶಿಧರ್‌ ಅವರಿಗೆ ನಿರ್ಮಾಪಕ ರವಿರಾಜ್ ಟೊಯೋಟಾ ಫಾರ್ಚ್ಯುನಾರ್‌ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಇನ್ನು ನಿರ್ಮಾಪಕರು ಹೇಗೆ ಹೇಳಿದ್ದರೋ ಅದಕ್ಕಿಂತಲೂ ತುಂಬಾ ಚೆನ್ನಾಗಿ ಸಿನೆಮಾ ಮೂಡಿ ಬಂದಿದೆ. ನನಗೆ ಸಿನೆಮಾ ಬಹಳ ಇಷ್ಟವಾಗಿದೆ. ಶ್ರಮಪಟ್ಟು ಸಿನೆಮಾವನ್ನು ಅತ್ಯತ್ತಮವಾಗಿ ಕಟ್ಟಿಕೊಟ್ಟ ನಿರ್ದೇಶಕರಿಗೆ ಫಾರ್ಚ್ಯೂನರ್ ಕಾರನ್ನು ಉಡುಗೊರೆಯಾಗಿ ನೀಡಿದ್ದೇನೆ ಎಂದು ನಿರ್ಮಾಪಕ ರವಿರಾಜ್ ಹೇಳಿದ್ದಾರೆ.

    ದರ್ಶನ್ ಬೆಂಬಲಕ್ಕೆ ನಿಂತ ಪರಭಾಷಾ ನಟ; ಏನಂದ್ರು ನಾಗಶೌರ್ಯ?

    ಇನ್ನು ಈ ಸಿನೆಮಾದಲ್ಲಿ ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ನಾಯಕರಾಗಿ ನಟಿಸಿದ್ದು, ಚಿತ್ರದ ನಾಯಕಿಯಾಗಿ ರಾಧಿಕಾ ಕುಮಾರಸ್ವಾಮಿ ಅಭಿನಯಿಸಿದ್ದಾರೆ. ನಟ ಬಾಬಿ ಸಿಂಹ , ಸುನೀಲ್, ರಾಘವೇಂದ್ರ ಶ್ರವಣ್, ಆದಿತ್ಯ ಮೆನನ್, ದೇವರಾಜ್, ಜಯಪ್ರಕಾಶ್, ವಿನಯಾಪ್ರಸಾದ್, ರಾವ್ ರಮೇಶ್‌ ಮುಂತಾದವರು ಈ ಸಿನಿಮಾದ ತಾರಾಬಳಗದಲ್ಲಿದ್ದಾರೆ.

    Continue Reading

    LATEST NEWS

    Trending