Connect with us

DAKSHINA KANNADA

ರೋಮ್ಯಾನ್ಸ್‌ ಸೀನ್‌ನಲ್ಲಿ ಕಂಟ್ರೋಲ್ ತಪ್ಪಿದವರು..!

Published

on

ಮಂಗಳೂರು ( ಬಾಲಿವುಡ್ ನ್ಯೂಸ್ ) : ಸಿನೆಮಾ ನಟ ನಟಿಯರು ತೆರೆಯ ಮೇಲೆ ರೋಮ್ಯಾನ್ಸ್ ಮಾಡೋ ಸೀನ್ ಕೆಲವೊಂದು ಬಾರಿ ಫ್ಯಾಮಿಲಿ ಸಮೇತ ಸಿನೇಮಾ ನೋಡೋ ಪ್ರೇಕ್ಷಕರಿಗೇ ಮುಜುಗರ ತಂದು ಬಿಡುತ್ತದೆ. ಹಾಗಿರೋವಾಗ ಅಂತಹ ಸೀನ್‌ಗಳನ್ನ ನಟ ನಟಿಯರು ಯಾವ ರೀತಿ ನಿರ್ವಹಿಸಿರಬಹುದು ಅನ್ನೋದು ಊಹಿಸೋದು ಅಸಾದ್ಯ. ಆದ್ರೆ ಅಂತಹ ಸೀನ್ ನಲ್ಲಿ ನಟಿಸುವಾಗ ಸಾಕಷ್ಟು ಜನ ತಮ್ಮ ಕಂಟ್ರೋಲ್ ಕಳೆದುಕೊಂಡಿದ್ದಾರೆ ಅನ್ನೋದು ವಿಶೇಷ.

ಕೇವಲ ರೊಮ್ಯಾಂಟಿಕ್ ಸೀನ್ ಮಾತ್ರವಲ್ಲದೆ ಕೋಪದ ಹಾಗೂ ದುಃಖದ ಸೀನ್‌ನಲ್ಲೂ ನಟ ನಟಿಯರು ತಾವೊಂದು ಪಾತ್ರದಾರಿಗಳು ಅನ್ನೋದನ್ನೇ ಮರೆತು ಬಿಡ್ತಾರೆ. ಅಳುವ ಸೀನ್‌ನಲ್ಲಿ ಗ್ಲೀಸರಿನ್ ಇಲ್ಲದೇ ನಿಜವಾಗಿಯೂ ಕಣ್ಣೀರು ಹಾಕಿದ ಎಷ್ಟೋ ನಟ ನಟಿಯರು ಇದ್ದಾರೆ. ಹಾಗೇ ಕೋಪದ ಸೀನ್‌ನಲ್ಲಿ ನಿಜವಾಗಿ ತಮ್ಮ ಕಂಟ್ರೋಲ್ ಕಳೆದುಕೊಂಡು ನಿಜ ಕೋಪ ಪ್ರದರ್ಶನ ಮಾಡಿದವರೂ ಇದ್ದಾರೆ. ಆದ್ರೆ ಎಲ್ಲದಕ್ಕಿಂತ ಮಿಗಿಲಾಗಿ ಬಾಲಿವುಡ್‌ನಲ್ಲಿ ರೋಮ್ಯಾಂಟಿಕ್ ಸೀನ್‌ ಮಾಡುವಾಗ ಕಳೆದುಹೋದವರೇ ಜಾಸ್ತಿ ಇದ್ದಾರೆ.

ranbeer kapoor

ಬಾಲಿವುಡ್‌ನ ಪ್ಲೇ ಬಾಯ್ ಅಂತಾನೆ ಕುಖ್ಯಾತಿ ಪಡೆದುಕೊಂಡಿರುವ ರಣಬೀರ್ ಕಪೂರ್ ‘ಯೇ ಜವಾನಿ ಹೇ ದಿವಾನಿ’ ಸಿನೆಮಾದಲ್ಲಿ ಎವಲಿನ್ ಶರ್ಮಾ ಜೊತೆಗೆ ಇಂತಹ ಒಂದು ಪರಿಸ್ಥಿತಿ ಎದುರಿಸಿದ್ದಾರೆ. ಎವಲಿನ್ ಶರ್ಮಾ ಜೊತೆಗೆ ರೊಮ್ಯಾನ್ಸ್‌ ಸೀನ್‌ ಒಂದರಲ್ಲಿ ತಲ್ಲೀನರಾಗಿದ್ದ ರಣಬೀರ್ ಕಪೂರ್‌ ಡೈರೆಕ್ಟರ್‌ ಕಟ್‌ ಅನ್ನೋದೇ ಕೇಳಿಸಿಲ್ಲವಂತೆ. ಆ ರೋಮ್ಯಾನ್ಸ್‌ ಸೀನ್‌ನಲ್ಲಿ ರಣಬೀರ್ ಕಪೂರ್ ಎಲವಿನ್ ಅವರ ಕಾಲು ಸವರುತ್ತಾ ಇರೋ ದೃಶ್ಯ ಶೂಟ್ ಮಾಡಲಾಗುತ್ತಿತ್ತು. ಅವರು ಪಾತ್ರದಲ್ಲಿ ಅದೆಷ್ಟು ಮುಳುಗಿ ಹೋಗಿದ್ದರು ಅಂದ್ರೆ ಅಲ್ಲಿ ನಿಜವಾಗಿಯೂ ಎವಲಿನ್ ಶರ್ಮಾ ಜೊತೆ ರೊಮ್ಯಾನ್ಸ್‌ ಮೂಡ್‌ಗೆ ಜಾರಿದ್ದರು.

ಇದನ್ನೂ ಓದಿ ಬಾಲಿವುಡ್ ನಟಿ ಸಾರಾ ಅಲಿಖಾನ್ ವಿಡಿಯೋ ವೈರಲ್‌.. !

tiger shroff

ಇನ್ನೊಂದು ಸಿನೆಮಾದಲ್ಲಿ ಟೈಗರ್ ಶ್ರಾಫ್ ಹಾಗೂ ಜಾಕ್ವೆಲಿನ್‌ ಫೆರ್ನಾಂಡಿಸ್‌ ಅವರ ಲಿಪ್‌ ಲಾಕ್ ಸೀನ್ ಶೂಟ್ ಆಗುತ್ತಿತ್ತು. ‘ಎ ಫ್ಲೈಯಿಂಗ್ ಜಟ್’ ಸಿನೆಮಾ ಅದಾಗಿದ್ದು ತೆರೆಕಂಡ ಸಿನೆಮಾದಲ್ಲಿ ಆ ಸೀನ್ ಪಡ್ಡೆ ಹುಡುಗರ ನಿದ್ದೆ ಹಾರಿಸಿ ಬಿಟ್ಟಿತ್ತು. ಹೀಗಿರುವಾಗ ರಿಯಲ್ ಆಗಿ ಈ ಲಿಪ್ ಲಾಕ್ ಸೀನ್‌ ನೋಡಿದವರ ಪರಿಸ್ಥಿತಿ ಹೇಗಿರಬಹುದು ಅಲ್ವಾ ? ಸಿನೆಮಾ ಶೂಟಿಂಗ್‌ನಲ್ಲಿ ಇಬ್ಬರ ಈ ಸೀನ್ ನೋಡುತ್ತಿದ್ದ ನಿರ್ದೇಶಕರಿಗೂ ಕೂಡಾ ಅದೇ ಆಗಿತ್ತು . ಹಲವಾರು ಸಿನೆಮಾ ನಿರ್ದೇಶನ ಮಾಡಿದ್ದರೂ ಈ ಸಿನೆಮಾ ಶೂಟಿಂಗ್ ವೇಳೆ ಅವರು ಕಟ್ ಹೇಳೋದೆ ಮರೆತು ಬಿಟ್ಟಿದ್ದರು.

‘ಎ ಜಂಟ್ಲ್‌ಮೆನ್’ ಸಿನೆಮಾದಲ್ಲಿ ನಟಿಸಿದ್ದ ಜಾಕ್ವೆಲಿನ್ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಜೋಡಿ ಕೂಡಾ ಇಂತಹ ಒಂದು ಪ್ರಸಂಗ ಎದುರಿಸಿದೆ. ‘ಎ ಫ್ಲೈಯಿಂಗ್ ಜೆಟ್‌’ ನಲ್ಲಿ ಲಿಪ್ ಲಾಕ್ ಸೀನ್‌ಗೆ ನಿರ್ದೇಶಕ ಕಟ್ ಹೇಳಲು ಮರೆತು ಹೋಗಿದ್ರೆ ‘ಎ ಜಂಟ್ಲ್‌ಮೆನ್’ ಸಿನೆಮಾದಲ್ಲಿ ನಿರ್ದೇಶಕ ಕಟ್‌ ಹೇಳಿದ್ರೂ ಸಿದ್ದಾರ್ಥ್ ಹಾಗೂ ಜಾಕ್ವೆಲಿನ್ ಅವರು ಕಿಸ್‌ ಮಾಡೋದು ನಿಲ್ಲಿಸಿರಲಿಲ್ಲ.

ಇದನ್ನೂ ಓದಿ ಚಿತ್ರರಂಗಕ್ಕೆ ಶಾಕ್; ಯಶ್ ‘ಕಿರಾತಕ’ ವಿಲನ್ ಡ್ಯಾನಿಯಲ್ ಬಾಲಾಜಿ ಇನ್ನಿಲ್ಲ  

imran hashmi

ಇದನ್ನೂ ಓದಿ..; ಕೊನೆಗೂ ಸಿಕ್ಕೇ ಬಿಡ್ತು “ಸಮಂತಾ-ನಾಗಚೈತನ್ಯ” ಡಿವೋರ್ಸ್ ಗುಟ್ಟು..!! ಇದೇ ಕಾರಣನಾ?

ಇಮ್ರಾನ್​ ಹಷ್ಮಿ ಸೀರಿಯಲ್​ ಕಿಸ್ಸರ್​ ಎಂದೇ ಫೇಮಸ್​. ಅವರ ನಟನೆಯ ಪ್ರತಿ ಸಿನಿಮಾದಲ್ಲೂ ಕಿಸ್ಸಿಂಗ್​ ಸೀನ್​ಗೆ ಸಾಕಷ್ಟು ಮಹತ್ವ ಇರುತ್ತಿತ್ತು. ಇಮ್ರಾನ್​ ಹಾಗೂ ನರ್ಗೀಸ್​ ‘ಅಜರ್’​ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ‘ಬೋಲ್​ ದೋ ನಾ ಜರಾ..’ ಸಾಂಗ್​ನಲ್ಲಿ ಕಿಸ್ಸಿಂಗ್​ ದೃಶ್ಯವೊಂದು ಇದೆ. ನಿರ್ದೇಶಕರು ಕಟ್ ಎಂದರೂ ನರ್ಗಿಸ್ ಕಿಸ್ ಮಾಡೋದನ್ನು ನಿಲ್ಲಿಸಿರಲಿಲ್ಲ. ಹೀರೋ ಹೀರೋಯಿನ್‌ಗಳೇ ಶೂಟಿಂಗ್ ಸಮಯದಲ್ಲಿ ಈ ರೀತಿ ಮೈಮರೆತು ಹೋದ್ರೆ ಇನ್ನು ರೇಪ್‌ ಸೀನ್‌ನಲ್ಲಿ ನಟಿಸುವ ವಿಲನ್‌ಗಳದ್ದೂ ಕೂಡಾ ಕಥೆ ಬೇರೆನೇ ಇದೆ. ಆದ್ರೆ ಈ ಸಂದರ್ಭದಲ್ಲಿ ನಿರ್ದೇಶಕರಾಗಲಿ ನಟಿಯಾಗಲಿ ತುಂಬಾ ಅಲರ್ಟ್‌ ಆಗಿದ್ರೂ ಒಂದೆರಡು ಕಹಿ ಘಟನೆಗಳು ಅಲ್ಲೂ ಕೂಡಾ ನಡೆದಿದೆ.

DAKSHINA KANNADA

WATCH VIDEO : ದಪ್ಪು ಹಿಡಿದು ನೃತ್ಯ ಮಾಡಿದ ಯು.ಟಿ.ಖಾದರ್; ಹಬ್ಬದ ಸಂಭ್ರಮದ ವಿಡಿಯೋ ವೈರಲ್

Published

on

ಮಂಗಳೂರು : ವಿಧಾನ ಸಭಾ ಸ್ಪೀಕರ್ ಆಗಿದ್ರೂ ಸದಾ ಒಂದಿಲ್ಲ ಒಂದು ಕಾರಣದಿಂದ ಸ್ಪೀಕರ್ ಯು.ಟಿ ಖಾದರ್ ಅವರು ಸುದ್ದಿಯಾಗ್ತಾನೆ ಇರ್ತಾರೆ. ಅವರು ಎಲ್ಲೇ ಹೋದ್ರು ಅವರ ಅಭಿಮಾನಿಗಳು ಅವರ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡ್ತಾರೆ. ಅಂತಹ ಒಂದು ವಿಡಿಯೋ ಈಗ ವೈರಲ್ ಆಗಿದೆ.

ರಮ್ಜಾನ್ ಹಬ್ಬದಂದು ಈ ವಿಡಿಯೋ ಶೂಟ್ ಮಾಡಲಾಗಿದೆ ಎನ್ನಲಾಗಿದೆಯಾದ್ರೂ ಅದರ ಖಚಿತತೆ ಇಲ್ಲ. ಹಬ್ಬದ ಸಲುವಾಗಿ ನಡೆದಿದ್ದ ಮೆರವಣಿಗೆ ಒಂದರಲ್ಲಿ ಸ್ಪೀಕರ್ ಖಾದರ್ ಅವರು ದಪ್ಪು ಬಾರಿಸಿ ನೃತ್ಯ ಮಾಡಿದ್ದಾರೆ. ದಪ್ಪು ಅನ್ನೋದು ಮುಸ್ಲಿಂ ಸಮೂದಾಯದ ಸಾಂಪ್ರದಾಯಿಕ ನೃತ್ಯವಾಗಿದ್ದು, ಹೆಚ್ಚಾಗಿ ಇದನ್ನು ಮಕ್ಕಳು ಪ್ರದರ್ಶನ ಮಾಡುತ್ತಾರೆ.


ಇಲ್ಲಿ ಕೂಡಾ ಮೆರವಣಿಗೆಯಲ್ಲಿ ದಪ್ಪು ಪ್ರದರ್ಶನ ಮಾಡುತ್ತಿರುವ ಮಕ್ಕಳ ಜೊತೆ ಮಕ್ಕಳಾಗಿ ದಪ್ಪು ನೃತ್ಯಕ್ಕೆ ಖಾದರ್ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ಖಾದರ್ ಅವರ ಅಭಿಮಾನಿಗಳು ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೆ ಈ ವಿಡಿಯೋ ಯಾವಾಗಿನದ್ದು ಅನ್ನೋದು ಇನ್ನೂ ಗೊತ್ತಾಗಿಲ್ಲ.

ಇದನ್ನೂ ಓದಿ : WATCH VIDEO : ಪುತ್ರಿಯ ಜೊತೆ ಖಾದರ್ ರೌಂಡಪ್‌.. ಮಕ್ಕಳಿಗೆ ಬಡವರ ಕಷ್ಟದ ಅರಿವು ಮೂಡಿಸಿದ ಜನನಾಯಕ

Continue Reading

DAKSHINA KANNADA

WATCH VIDEO : ಪುತ್ರಿಯ ಜೊತೆ ಖಾದರ್ ರೌಂಡಪ್‌.. ಮಕ್ಕಳಿಗೆ ಬಡವರ ಕಷ್ಟದ ಅರಿವು ಮೂಡಿಸಿದ ಜನನಾಯಕ

Published

on

ಮಂಗಳೂರು : ಸ್ಪೀಕರ್ ಯು.ಟಿ.ಖಾದರ್ ಅವರನ್ನು ಕ್ಷೇತ್ರದ ಜನ ತುಂಬಾ ಪ್ರೀತಿ ಮಾಡೋದು ಅವರ ಸಿಂಪ್ಲಿಸಿಟಿ ಹಾಗೂ ಜನರ ಜೊತೆ ಅವರ ಬೆರೆಯುವಿಕೆಯಿಂದ. ಹೀಗಾಗಿ ಖಾದರ್ ಎಲ್ಲೇ ಹೋದ್ರು ಅದೊಂದು ದೊಡ್ಡ ಸುದ್ದಿಯಾಗಿ ಜನ ಮೆಚ್ಚುಗೆ ಗಳಿಸಿಕೊಳ್ಳುತ್ತಾರೆ. ಜನ ಸೇವಕನಾಗಿರೋ ಯು.ಟಿ.ಖಾದರ್ ಈಗ ಮತ್ತೊಂದು ರೀತಿಯಲ್ಲಿ ಸುದ್ಧಿಯಾಗಿದ್ದಾರೆ.

ಮಕ್ಕಳಿಗೆ ಬಡವರ ಕಷ್ಟದ ಅರಿವು :


ಜನರ ಸಮಸ್ಯೆ ಆಲಿಸಲು ರೌಂಡ್ಸ್‌ ಹಾಕಿದ್ದ ಸ್ಪೀಕರ್ ಖಾದರ್, ತನ್ನ ಜೊತೆ ಪುತ್ರಿ ಹವ್ವಾ ನಸೀಮಾ ಹಾಗೂ ಸಹೋದರ ಇಫ್ತಿಕಾರ್ ಪುತ್ರಿ ಲಯಾ ಸಸೀಮಾ ಅವನ್ನು ಜತೆ ಕರೆದೊಯ್ದಿದ್ದಾರೆ. ಐಶಾರಾಮಿ ಬದುಕು ಸಾಗಿಸುವ ಮಕ್ಕಳಿಗೆ ಬಡವರ ಕಷ್ಟ ಅರ್ಥ ಮಾಡಿಸೋ ನಿಟ್ಟಿನಲ್ಲಿ ಸ್ಪೀಕರ್ ಖಾದರ್ ಈ ರೀತಿ ಮಾಡಿದ್ದಾರೆ. ಉಳ್ಳಾಲ ಕ್ಷೇತ್ರದ ಕೆಲವೊಂದು ಮನೆಗಳಿಗೆ ಭೇಟಿ ನೀಡಿ ಮನೆಯ ಪರಿಸ್ಥಿತಿಯನ್ನು ಖಾದರ್ ಅವಲೋಕಿಸಿದ್ರು. ಈ ವೇಳೆ ಅವರ ಸಂಕಷ್ಟಗಳನ್ನು ಕೇಳಿ ಅವರಿಗೆ ಸ್ಪಂದಿಸಿದ್ರು.

ಇದನ್ನೂ ಓದಿ : ರಾಮೇಶ್ವರಂ ಕೆಫೆ ಸ್ಫೋ*ಟ ಪ್ರಕರಣ : ಪ.ಬಂಗಾಳದಲ್ಲಿ ಮಾಸ್ಟರ್ ಮೈಂಡ್ ಅರೆಸ್ಟ್

ಈ ವೇಳೆ ಪುತ್ರಿ ಹಾಗೂ ಸಹೋದರನ ಪುತ್ರಿಯನ್ನೂ ಜೊತೆ ಕರೆದೊಯ್ದು ಅವರಿಗೂ ಜನರ ಸಂಕಷ್ಟದ ಅರಿವು ಮೂಡಿಸಿದ್ರು. ಸ್ಪೀಕರ್ ಖಾದರ್ ಅವರ ಈ ನಡೆ ಈಗ ಜನರ ಮೆಚ್ಚುಗೆ ಗಳಿಸಿದೆ. ಮಕ್ಕಳಿಗೆ ಬಡ ಜನರ ಕಷ್ಟವನ್ನು ಅರ್ಥ ಮಾಡಿಸಿ ಅವರಿಗೆ ಸಹಾಯ ಮಾಡುವಂತಹ ಪ್ರೇರಣೆ ನೀಡಿದ್ದಾರೆ. ಇದು ಒಬ್ಬ ನೈಜ್ಯ ಸಮಾಜ ಸೇವಕನಿಗೆ ಇರಬೇಕಾದ ಗುಣ ಅಂತ ಜನರು ಗುಣಗಾನ ಮಾಡಿದ್ದಾರೆ.

Continue Reading

Baindooru

ಪತಿ ಪತ್ನಿ ನಡುವೆ ವಿರಸ..! ರಸ್ತೆಯಲ್ಲಿ ಇಬ್ಬರ ಕಿತ್ತಾಟ..! ಮಧ್ಯೆ ಬಂದ ಯುವಕನ ಮೇಲೆ ಬಿತ್ತು ಕೇಸ್

Published

on

ಬೈಂದೂರು: ಹೆಂಡತಿಯನ್ನು ಪ್ರಶ್ನಿಸುತ್ತಿದ್ದ ಪತಿಯ ಮೇಲೆ ಅನ್ಯಕೋಮಿನ ಯುವಕ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿರುವುದಾಗಿ ಆರೋಪಿಸಿ ಬೈಂದೂರು ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ ಇದಕ್ಕೆ ಪ್ರತಿಯಾಗಿ ದೂರು ನೀಡಿರುವ ಪತ್ನಿ ಹಾಗೂ ಪತ್ನಿಯ ತಾಯಿ ಪತಿ ಹಾಗೂ ಆತನ ಬಾವ ಹಲ್ಲೆ ನಡೆಸುವಾಗ ಯವಕ ನಮಗೆ ರಕ್ಷಣೆ ನೀಡಿದ್ದಾನೆ ಎಂದಿದ್ದಾರೆ.

sirajuddin

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆಮ್ಮಾಯಿ ನಿವಾಸಿಯಾಗಿರುವ ಸುರೇಶ್ ಭಟ್‌ ಎಂಬವರು ತನ್ನ ಪತ್ನಿಯನ್ನು ದಾರಿ ಮಧ್ಯೆ ನಿಲ್ಲಿಸಿ ಮಾತನಾಡುವಾಗ ಪತ್ನಿಯ ಸ್ನೇಹಿತ ಸಿರಾಜುದ್ದೀನ್ ಎಂಬ ಅನ್ಯಕೋಮಿನ ಯುವಕ ತನಗೆ ಹಲ್ಲೆ ನಡೆಸಿರುವುದಾಗಿ ಬೈಂದೂರು ಪೊಲೀಸರಿಗೆ ದೂರು ನೀಡಿದ್ದಾರೆ. ನ್ಯಾನೋ ಕಾರಿನಲ್ಲಿ ಅನ್ಯ ಕೋಮಿನ ಯುವಕನ ಜೊತೆ ಬರುತ್ತಿರುವುದು ನೋಡಿ ತಾನು ಕಾರು ನಿಲ್ಲಿಸಿ ವಿಚಾರಿಸಿದಾಗ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆದರೆ ಸುರೇಶ್ ಭಟ್‌ ಅವರ ದೂರನ್ನು ಅಲ್ಲಗಳೆದಿರುವ ಪತ್ನಿ ಪ್ರತಿಮಾ ಹಾಗೂ ಅತ್ತೆ ಶಿವಕುಮಾರಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ. ದೂರು ನೀಡಿರುವ ಶಿವಕುಮಾರಿ ತನ್ನ ಮಗಳು ಪ್ರತಿಮಾ ಹಾಗೂ ಪತಿ ಸುರೇಶ್ ಭಟ್‌ ಅವರಿಗೆ ಹಲವು ತಿಂಗಳಿನಿಂದ ಭಿನ್ನಾಬಿಪ್ರಾಯ ಇದ್ದು ಹೀಗಾಗಿ ಮಾನ ಹರಾಜು ಹಾಕಲು ಈ ರೀತಿ ಸುಳ್ಳು ದೂರು ದಾಖಲಿಸಿದ್ದಾರೆ. ಸಿರಾಜುದ್ದೀನ್ ಅಂಬ್ಯುಲೆನ್ಸ್‌ನಲ್ಲಿ ಡ್ರೈವರ್ ಆಗಿದ್ದು, ಕೆಲವೊಮ್ಮೆ ತಮ್ಮ ಕಾರಿಗೂ ಡ್ರೈವರ್ ಆಗಿ ಬರುತ್ತಾನೆ. ನನ್ನ ಮಗ ಹಾಗೂ ಮಗಳನ್ನು ಕರೆದುಕೊಂಡು ಹೋಗಲು ತಾನೇ ಸಿರಾಜುದ್ದಿನ್ ಗೆ ಕರೆ ಮಾಡಿದ್ದೆ. ಹೀಗೇ ನನ್ನ ಮಗ ಮತ್ತು ಮಗಳು ಕಾರಿನಲ್ಲಿ ಹೋಗುವಾಗ ಅವರ ಮೇಲೆ ಸುರೇಶ್ ಭಟ್ ಹಾಗೂ ಆತನ ಭಾವ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಅವರಿಗೆ ಸಿರಾಜುದ್ದೀನ್ ರಕ್ಷಣೆ ನೀಡಿದ್ದಾರೆ. ಆದರೆ ಇದಕ್ಕೆ ಬೇರೆ ಕಥೆ ಕಟ್ಟಿ ಈ ರೀತಿ ಸುಳ್ಳು ದೂರು ನೀಡಲಾಗಿದೆ ಎಂದು ಶಿವಕುಮಾರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸದ್ಯ ಹಲ್ಲೆಗೆ ಒಳಗಾದ ಸುರೇಶ್ ಭಟ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದು ಸುಳ್ಳು ದೂರು ಎಂದು ಸುರೇಶ್ ಭಟ್‌ ಅವರ ಅತ್ತೆ ಪ್ರತಿ ದೂರನ್ನು ಅದೇ ಠಾಣೆಗೆ ನೀಡಿದ್ದಾರೆ . ಇದೀಗ ಪ್ರಕರಣದ ಸತ್ಯಾಸತ್ಯತೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Continue Reading

LATEST NEWS

Trending