Friday, July 1, 2022

ಕೊರಗಜ್ಜನ ಕೋಲ ನಡೆಯುತ್ತಿರುವಾಗ ಪೊಲೀಸ್ ಜೀಪಿಗೆ ಕಲ್ಲೆಸೆತ:ಆರೋಪಿಯ ಬಂಧನ..!

ಮಂಗಳೂರು:  ಕೋಲದ ಸಂದರ್ಭ ಅಲ್ಲೇ ನಿಂತಿದ್ದ ಪೊಲೀಸ್ ವಾಹನಕ್ಕೆ  ಬಿಲ್ಡಿಂಗ್ ಮೇಲೆ ನಿಂತು ಕಲ್ಲೆಸೆದ ಘಟನೆ ಮಂಗಳೂರಿನ ಹೊರವಲಯದ  ತೊಕ್ಕೊಟ್ಟು ಜಂಕ್ಷನ್ ಬಳಿ ನಡೆದಿದೆ.ಅಲ್ಲಿ ನೆರೆದಿದ್ದ ಜನತೆ ಪೊಲೀಸರೊಂದಿಗೆ ಸೇರಿ ಆರೋಪಿಯನ್ನು ಹಿಡಿದಿದ್ದಾರೆ. ಕೋಡಿ ನಿವಾಸಿ ಮಹಮ್ಮದ್ ಹಫೀಝ್ ಎಂಬಾತನೇ ಬಂಧಿತ ಆರೋಪಿ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊರಗಜ್ಜನ ಕೋಲದ ಬಳಿ ಘಟನೆ ನಡೆದಿರುವುದು ಕೋಮು ಸಾಮರಸ್ಯಕ್ಕೆ ಧಕ್ಕೆ ತರಲು ನಡೆಯುತ್ತಿರುವ ಷಡ್ಯಂತ್ರ ವೆನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here

Hot Topics

ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಫೇಲ್‌ ಆಗಿದ್ದರಿಂದ ಮನನೊಂದು ಪಿಯುಸಿ ವಿದ್ಯಾರ್ಥಿನಿ ಜೀವಾಂತ್ಯ

ಉಡುಪಿ: ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಮತ್ತೆ ಅನುತ್ತೀರ್ಣಳಾಗಿದ್ದರಿಂದ ಮನನೊಂದು ಪ್ರಥಮ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದಲ್ಲಿ ನಿನ್ನೆ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಮಾನಸ (17)...

ರಾಜಸ್ಥಾನ್ ಟೈಲರ್ ಹತ್ಯೆ ಖಂಡಿಸಿ ಬಂಟ್ವಾಳದಲ್ಲಿ ಪ್ರತಿಭಟನೆ

ಬಂಟ್ವಾಳ: ರಾಜಸ್ತಾನದ ಉದಯಪುರದಲ್ಲಿ ಭಯೋತ್ಪಾದಕರಿಂದ ಹಿಂಸಾತ್ಮಕ ರೀತಿಯಲ್ಲಿ ಹತ್ಯೆಯಾದ ಟೈಲರ್ ಕನ್ಹಯ್ಯಲಾಲ್ ಅವರ ಸಾವಿಗೆ ನ್ಯಾಯ ಸಿಗಬೇಕು ಹಾಗೂ ಹತ್ಯೆ ಮಾಡಿದ ಭಯೋತ್ಪಾದಕ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡುವಂತೆ ಒತ್ತಾಯಿಸಿ ವಿಶ್ವಹಿಂದೂ ಪರಿಷತ್...

ವಿಟ್ಲದಲ್ಲಿ ಧಾರಾಕಾರ ಮಳೆ: ಜಲಾವೃತಗೊಂಡ ರಸ್ತೆ-ವಾಹನಗಳ ಬದಲಿ ಸಂಚಾರ

ವಿಟ್ಲ: ನಿನ್ನೆಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಸ್ತೆ ಜಲಾವೃತಗೊಂಡು ನೀರಿನ ಮಟ್ಟ ಮಧ್ಯಾಹ್ನದವರೆಗೆ ಇಳಿಕೆಯಾಗದ ಹಿನ್ನೆಲೆಯಲ್ಲಿ ಘನವಾಹನಗಳನ್ನು ಹೊರತುಪಡಿಸಿ ಕೆಲವೊಂದು ವಾಹನಗಳು ಸುತ್ತು ಬಳಸಿ ಬದಲಿ ಸಂಚಾರ ನಡೆಸಿದ ಘಟನೆ ವಿಟ್ಲದ ಕೊಳ್ನಾಡು...