Friday, July 1, 2022

ನಾಳೆಯಿಂದ ಶೈಕ್ಷಣಿಕ ವರ್ಷ ಪ್ರಾರಂಭ: ಶಿಕ್ಷಣ ಇಲಾಖೆ

ಬೆಂಗಳೂರು: ನಾಳೆಯಿಂದಲೇ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ. ಜುಲೈ 1ರಿಂದ ಶಾಲೆಗಳು ಆರಂಭವಾಗಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.


ನಾಳೆಯಿಂದ ಮಕ್ಕಳ ಶಾಲಾ ದಾಖಲಾತಿಯನ್ನು ಪ್ರಾರಂಭಿಸಿ, ಆಗಸ್ಟ್ 31ರ ಒಳಗೆ ದಾಖಲಾತಿ ಮುಕ್ತಾಯಗೊಳಿಸಬೇಕು. ಲಾಕ್​ಡೌನ್​ ಇರುವ ಜಿಲ್ಲೆಗಳಲ್ಲಿ ಪಾಸ್ ಪಡೆದು ಶಾಲೆಗೆ ಬರಬೇಕು. ಈಗಾಗಲೇ ಒಂದು ಶೈಕ್ಷಣಿಕ ವರ್ಷ ತಡವಾಗಿದೆ. ಶಿಕ್ಷಕರು ಅನ್ಯ ಕಾರಣ ನೀಡುವಂತಿಲ್ಲ. ಕೋವಿಡ್ ಸಮಯದಲ್ಲಿ ವೈದ್ಯರು ಪೌರಕಾರ್ಮಿಕರ ಮಾದರಿಯಲ್ಲಿ ಶಿಕ್ಷಕರು ಕೆಲಸ ಮಾಡಬೇಕು ಎಂದು ಅನ್ಬುಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಶೈಕ್ಷಣಿಕ ವರ್ಷ ಮೂಂದುಡುವ ಪ್ರಶ್ನೆಯೇ ಇಲ್ಲ. ಕೋವಿಡ್ ಹಿನ್ನೆಲೆ ತರಗತಿಗಳನ್ನು ಭೌತಿಕವಾಗಿ ನಡೆಸಲು ಸಾಧ್ಯವಾಗದೆ ಇದ್ದರೆ ಪರ್ಯಾಯವಾಗಿ ಆನ್​ಲೈನ್​, ದೂರದರ್ಶನ, ಅಂತರ್ಜಾಲ ಕಲಿಕೆಯನ್ನು ನೀಡಬೇಕಾಗುತ್ತದೆ ಎಂದರು.

LEAVE A REPLY

Please enter your comment!
Please enter your name here

Hot Topics

ಮಂಗಳೂರು: ಬೈಕಾಡಿ ಪ್ರತಿಷ್ಠಾನದ ವತಿಯಿಂದ ಮಕ್ಕಳಿಗಾಗಿ “ಕಥಾನಕ” ಸ್ಪರ್ಧೆ

ಮಂಗಳೂರು: ಮಂಗಳೂರು ಉರ್ವದ ಬೈಕಾಡಿ ಪ್ರತಿಷ್ಠಾನದ ವತಿಯಿಂದ ಮಕ್ಕಳಿಗಾಗಿ ಕನ್ನಡದಲ್ಲಿ ಕಥೆ ಹೇಳುವ ಆನ್ ಲೈನ್ ಕಥಾ ಸ್ಪರ್ಧೆ"ಕಥಾನಕ" ಎಂಬ ಸ್ಪರ್ಧೆ ಆಯೋಜನೆ ಮಾಡಲಾಗಿದೆ.ಈ ಕುರಿತು ಪ್ರತಿಷ್ಠಾನದ ಕಾರ್ಯದರ್ಶಿಯಾದ ಭರತ್ ಬೈಕಾಡಿಯವರು ಮಾಧ್ಯಮಗಳೊಂದಿಗೆ...

ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಫೇಲ್‌ ಆಗಿದ್ದರಿಂದ ಮನನೊಂದು ಪಿಯುಸಿ ವಿದ್ಯಾರ್ಥಿನಿ ಜೀವಾಂತ್ಯ

ಉಡುಪಿ: ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಮತ್ತೆ ಅನುತ್ತೀರ್ಣಳಾಗಿದ್ದರಿಂದ ಮನನೊಂದು ಪ್ರಥಮ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದಲ್ಲಿ ನಿನ್ನೆ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಮಾನಸ (17)...

ಸುಳ್ಯ: ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ಮತ್ತೆ ಕಂಪಿಸಿದ ಭೂಮಿ-ಸ್ತಬ್ಧರಾದ ಜನ

ಸುಳ್ಯ: ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ನಿನ್ನೆ ತಡರಾತ್ರಿ 1.15ಕ್ಕೆ ಭಾರಿ ಶಬ್ದದೊಂದಿಗೆ ಮತ್ತೆ ಭೂಮಿ ಕಂಪಿಸಿದ ಅನುಭವ ಆಗಿದೆ.ಸುಳ್ಯದ ಸಂಪಾಜೆ, ಚೆಂಬು, ಕಲ್ಲುಗುಂಡಿ ಗಡಿಭಾಗ ಹಾಗೂ ಕೊಡಗಿನ ಗಡಿಭಾಗಗಳು...