Connect with us

    LATEST NEWS

    ಕಿಸ್ ಕೊಡಲು ಮೂರು ರೂಲ್ಸ್ ನೀಡಿದ ಯುವತಿ; ಯಾಕಾಗಿ ಗೊತ್ತಾ ?

    Published

    on

    ಮಂಗಳೂರು : ದಾಂಪತ್ಯ ಜೀವನವು ಸುಖಕರವಾಗಿ ಸಾಗಬೇಕಾದರೆ ಬಿಸಿ ಅಪ್ಪುಗೆಯ ಜೊತೆಗೆ ಸಿಹಿ ಮುತ್ತು ಸುರಕ್ಷತೆಯ ಭಾವವನ್ನು ಕಟ್ಟಿಕೊಡುತ್ತದೆ. ಪ್ರೀತಿಯನ್ನು ವ್ಯಕ್ತಪಡಿಸುವ ವಿಧಾನದಲ್ಲಿ ಒಂದು ಈ ಚುಂಬನ. ಮುತ್ತು ಎಂದ ಕೂಡಲೇ ಎಲ್ಲರಲ್ಲೂ ಮುಜುಗರವೊಂದು ಕಾಡುತ್ತದೆ. ದೈಹಿಕ ಆರೋಗ್ಯ ಹಾಗೂ ಉತ್ತಮ ಹಾರ್ಮೋನ್ಗಳನ್ನು ಬಿಡುಗಡೆ ಮಾಡುವುದಕ್ಕೆ ಈ ಚುಂಬನ ಸಹಕಾರಿಯಾಗಿದೆ. ಆದರೆ ಬೋಸ್ಟನ್ ಮೂಲದ ಟಿಕ್ಟಾಕ್ ಬಳಕೆದಾರರಲ್ಲಿ ಒಬ್ಬರಾಗಿರುವ 25 ವರ್ಷದ ಕ್ಯಾರೋಲಿನ್ ಕ್ರೇ ಕ್ವಿನ್ ಎಂಬ ಯುವತಿಯು ತನ್ನನ್ನು ಚುಂಬಿಸುವ ಸಂಗಾತಿಗೆ ಮೂರು ಕಟ್ಟುನಿಟ್ಟಾದ ನಿಯಮವನ್ನು ಹಾಕಿದ್ದು, ಇದರ ಹಿಂದಿನ ಕಾರಣವನ್ನು ಸ್ವತಃ ಆಕೆಯೇ ಹೇಳಿಕೊಂಡಿದ್ದಾಳೆ.


    ಆಕೆ ವಿಡಿಯೋದಲ್ಲಿ ತಾನು ಮಾಸ್ಟ್ ಸೆಲ್ ಆಕ್ಟಿವೇಶನ್ ಸಿಂಡ್ರೋಮ್ (ಎಂಸಿಎಎಸ್) ಎಂಬ ಕಾಯಿಲೆಯಿಂದ ಬಳಲುತ್ತಿರುವುದಾಗಿ ಬಹಿರಂಗಪಡಿಸಿದ್ದಾಳೆ. ಈ ಕಾಯಿಲೆಯ ಗಂಭೀರತೆಯಿಂದ ರಕ್ಷಿಸಿಕೊಳ್ಳಲು, ಸಂಗಾತಿಗೆ ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ಹಾಕಿದ್ದಾಳೆ.
    ಮೂರು ನಿಯಮಗಳು :
    ಕ್ಯಾರೋಲಿನ್ ಕ್ವಿನ್ ಮೂರು ನಿಯಮಗಳನ್ನು ವಿವರಿಸಿದ್ದು, “ಮೊದಲ ನಿಯಮವೆಂದರೆ, ನನ್ನನ್ನು ಚುಂಬಿಸುವ 24 ಗಂಟೆಗಳ ಮೊದಲು ಆರು ಪ್ರಮುಖ ಅನಾಫಿಲ್ಯಾಕ್ಟಿಕ್ ಅಲರ್ಜಿಗೆ ಕಾರಣವಾಗುವ ಏನನ್ನೂ ತಿನ್ನಬಾರದು. ಎರಡನೆಯ ನಿಯಮವೆಂದರೆ, ನನ್ನನ್ನು ಚುಂಬಿಸುವ ಮೂರು ಗಂಟೆಗಳ ಮೊದಲು ಯಾವುದೇ ಆಹಾರವನ್ನು ಸೇವಿಸಬಾರದು. ಮೂರನೆಯ ನಿಯಮದಲ್ಲಿ ತನ್ನನ್ನು ಚುಂಬಿಸುವ ಮುನ್ನ ಸಂಗಾತಿಯೂ ಬ್ರಷ್ ಮಾಡುವುದು ಅವಶ್ಯಕ” ಎಂದಿದ್ದಾಳೆ.


    ಮಾಸ್ಟ್ ಸೆಲ್ ಆಕ್ಟಿವೇಶನ್ ಸಿಂಡ್ರೋಮ್ ಎಂದರೇನು?
    ಮಾಸ್ಟ್ ಸೆಲ್ ಆಕ್ಟಿವೇಶನ್ ಸಿಂಡ್ರೋಮ್ ಎನ್ನುವುದು ಅತ್ಯಂತ ಅಪರೂಪದ ಕಾಯಿಲೆಯಾಗಿದ್ದು, 1.50 ಲಕ್ಷ ಜನರಲ್ಲಿ ಒಬ್ಬರಲ್ಲಿ ಕಾಣಿಸಿಕೊಳ್ಳುತ್ತದೆ. ಇದು ರಕ್ತ ಕಣಗಳು, ಆಹಾರ ಹಾಗೂ ಇತರ ಪರಿಸರ ಪ್ರಚೋದಕಗಳಿಗೆ ಅತಿಯಾಗಿ ಪ್ರತಿಕ್ರಿಯಿಸುವ ಅಸ್ವಸ್ಥತೆಯಾಗಿದೆ. ರೋಗ ಪೀಡಿತ ವ್ಯಕ್ತಿಯು ಬಹುತೇಕ ಎಲ್ಲದರಿಂದಲೂ ಅಲರ್ಜಿಗೊಳಗಾ ಗುತ್ತಾನೆ. ಸ್ವಲ್ಪ ಎಚ್ಚರ ತಪ್ಪಿದರೂ ಈ ರೋಗದಿಂದ ಬಳಲುವ ವ್ಯಕ್ತಿಯ ಜೀವಕ್ಕೆ ಮಾರಕವಾಗಬಹುದು.
    ಕ್ಯಾರೋಲಿನ್ ಆರೋಗ್ಯ ಸ್ಥಿತಿಗತಿ:
    ವರದಿಗಳ ಪ್ರಕಾರ, ಅವಳ ಅನಾರೋಗ್ಯವು ತುಂಬಾ ಗಂಭೀರವಾಗಿದೆ. ಓಟ್ ಮೀಲ್ ಹಾಗೂ ಪೌಷ್ಟಿಕಾಂಶಯುಕ್ತ ಈ ಎರಡು ರೀತಿಯ ಆಹಾರವನ್ನು ಮಾತ್ರ ಸೇವಿಸಬಹುದು. ಇನ್ಯಾವುದೇ ರೀತಿಯ ಆಹಾರ ಪದಾರ್ಥಗಳನ್ನು ಸೇವಿಸಿದರೆ ಅಲರ್ಜಿಯಾಗುತ್ತದೆ. ಆಕೆಗೆ ಅಲರ್ಜಿಯಾಗುವ ಆಹಾರ ಸೇವಿಸಿದ ವ್ಯಕ್ತಿಗೆ ಮುತ್ತು ಕೊಟ್ಟರೆ ಅದು ಅವಳ ಪ್ರಾಣಕ್ಕೆ ಅಪಾಯ ತಂದೊಡ್ಡುತ್ತದೆ. ಹೀಗಾಗಿ ಜೀವ ಉಳಿಸಿಕೊಳ್ಳುವ ಸಲುವಾಗಿ ಈ ಕೆಲವು ನಿಯಮಗಳನ್ನು ಹಾಕಿಕೊಂಡಿದ್ದಾಳೆ.

    Click to comment

    Leave a Reply

    Your email address will not be published. Required fields are marked *

    BIG BOSS

    ಕನ್ನಡ ಬಿಗ್‌ಬಾಸ್‌ನಿಂದ ಲಾಯರ್ ಜಗದೀಶ್ ಎಲಿಮಿನೇಷನ್..!

    Published

    on

    ಬಿಗ್ ಬಾಸ್ ಕನ್ನಡ ಸೀಸನ್ 11 ಕ್ಕೆ 17 ಸ್ಪರ್ಧಿಗಳು ಬಂದಿದ್ದಾರೆ. ಆ ಪೈಕಿ ಲಾಯರ್ ಜಗದೀಶ್ ಅವರು ಮಿತಿಮೀರಿ ವರ್ತಿಸುತ್ತಿದ್ದಾರೆ. ಇದನ್ನು ಸುದೀಪ್ ಅವರು ಖಂಡಿಸಿ, ಹಿಂದಿ ಬಿಗ್ ಬಾಸ್ ರೀತಿಯೇ ಇಲ್ಲಿಯೂ ಮಾಡಲಿ ಎಂದು ಕೋರಿಕೊಳ್ಳಲಾಗುತ್ತಿದೆ.

    ಹಿಂದಿ ಬಿಗ್ ಬಾಸ್ ನ 10ನೇ ಸೀಸನ್ ನಲ್ಲಿ ಪ್ರಿಯಾಂಕಾ ಜಗ್ಗಾ ಎಂಬುವವರು ದರ್ಪ ತೋರಿದ್ದರು. ‘ಬಿಗ್ ಬಾಸ್ ಶೋ ನನ್ನ ಲೆವೆಲ್ಲ ಅಲ್ಲವೇ ಅಲ್ಲ’ ಎಂದಿದ್ದರು.ವೀಕೆಂಡ್ ನಲ್ಲಿ ಸಲ್ಮಾನ್ ಖಾನ್ ಅವರು ನೇರವಾಗಿ ಹೊರಹೋಗುವಂತೆ ಹೇಳಿದ್ದರು. ಜೊತೆಗೆ ಕಲರ್ಸ್ ವಾಹಿನಿಯ ಜೊತೆ ಅವರು ಕೆಲಸ ಮಾಡಿದರೆ ನಾನು ಕಲರ್ಸ್ ಜೊತೆಗಿನ ಸಂಬಂಧ ಕಡಿದುಕೊಳ್ಳುತ್ತೇನೆ ಎಂದು ಹೇಳಿದ್ದರು ಸಲು. ತಕ್ಷಣವೇ ಪ್ರಿಯಾಂಕಾನ ಹೊರಹಾಕಲಾಯಿತು.

    ಕನ್ನಡದಲ್ಲೂ ಬಿಗ್ ಬಾಸ್ ಗೆ ಅವಮಾನ ಮಾಡುವ ರೀತಿಯ ಘಟನೆ ನಡೆದಿದೆ. ಜಗದೀಶ್ ಅವರು ‘ಬಿಗ್ ಬಾಸ್ ಕಿತ್ತೋಗಿರೋ ಪ್ರೋಗ್ರಾಂ’, ‘ಬಿಗ್ ಬಾಸ್ನೇ ಖರೀದಿ ಮಾಡುತ್ತೇನೆ’, ‘ನನ್ನ ಎದುರಾಕ್ಕೊಂಡು ಬಿಗ್ ಬಾಸ್ ನಡೆಸ್ತೀರಾ’ ಎಂದೆಲ್ಲ ಪ್ರಶ್ನೆ ಮಾಡಿದ್ದರು. ಮನೆಯಲ್ಲಿದ್ದುಕೊಂಡೇ ಸ್ಪರ್ಧಿ ಹೇಳುವ ಮಾತು ಇದಲ್ಲ. ಹೀಗಾಗಿ, ಜಗದೀಶ್ ಅವರನ್ನು ಸುದೀಪ್ ನೇರವಾಗಿ ಹೊರಕ್ಕೆ ಹಾಕಲಿ ಎಂದು ಅನೇಕರು ಬಯಸಿದ್ದಾರೆ.

    Continue Reading

    LATEST NEWS

    ಅರಿಯದೆ ಕಲುಷಿತ ನೀರು ಸೇವಿಸಿ ಆಸ್ಪತ್ರೆಗೆ ದಾಖಲು…. ಎಲ್ಲಿ ಗೊತ್ತಾ ?

    Published

    on

    ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪಮಮದ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಒಂದು ಸಾವಿರಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ನಡೆದಿರುವುದು ತಿಳಿದು ಬಂದಿದೆ. ಜನರಿಗೆ ವಾಂತಿ, ಭೇಧಿ ಉಂಟಾಗಿದ್ದು ಇಡೀ ಪ್ರದೇಶದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ.


    ಕರ್ಕಿಹಳ್ಳಿ ಹಾಗೂ ಮೇಡಿಕಲ್ ಗ್ರಾಮಸ್ಥರು ಕಾಫಿನಾಡಿಯ ಟ್ಯಾಂಕಿನಿಂದ ಕಲುಷಿತ ನೀರನ್ನು ಕುಡಿದು, ಕರ್ಕಿಹಳ್ಳಿಯಲ್ಲಿ 500 ಹಾಗೂ ಮೇಡಿಕಲ್‌ನಲ್ಲಿ 600 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರೂ ವಾಂತಿ ಭೇದಿಯನ್ನು ಅನುಭವಿಸುತ್ತಿದ್ದು, 80 ವರ್ಷದ ವೃದ್ಧನ ಪರಿಸ್ಥಿತ ತೀರಾ ಹದಗೆಟ್ಟು, ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
    ಗ್ರಾಮ ಪಂಚಾಯತಿ ವ್ಯಾಪ್ತಿಯ 6 ಮತ್ತು 7 ನೇ ವಾರ್ಡ್‌ನಲ್ಲಿ ಬರುವ ನೀರು ಸಂಪೂರ್ಣವಾಗಿ ಅಶುದ್ಧಿಯಾದ ಹಿನ್ನಲೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರನ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    BIG BOSS

    BBK11: ದೊಡ್ಮನೆಗೆ ಬಂದ 4 ದಿನಕ್ಕೆ ಸ್ಪರ್ಧಿಗಳ ಕಣ್ಣೀರು; ಕಾರಣವೇನು?

    Published

    on

    ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್ 11 ಶುರುವಾಗಿ 4 ದಿನಕ್ಕೆ ಕಾಲಿಟ್ಟಿದೆ. ಬಿಗ್​ಬಾಸ್​ ಸೀಸನ್ 11 ಬಹಳ ಅದ್ಧೂರಿಯಾಗಿ ಓಪನಿಂಗ್​ ಕಂಡಿದೆ. ಆದರೆ ಕಳೆದ 10 ಸೀಸನ್​ಗೂ ಈಗಿನ ಸೀಸನ್ 11ಗೂ ತುಂಬಾನೇ ವ್ಯತ್ಯಾಸವಿದೆ.

    ಕಳೆದ ಸೀಸನ್​ ಸ್ಪರ್ಧಿಗಳು ಬಿಗ್​ಬಾಸ್​ ಮನೆಯಲ್ಲಿ ಅಷ್ಟೂ ಜನ ಇದ್ದರು ನನಗೆ ಒಂಟಿತನ ಕಾಡುತ್ತಿದೆ ಬಿಗ್​ಬಾಸ್​. ನನಗೆ ಮನೆಗೆ ಕಳುಹಿಸಿ ಬಿಗ್​ಬಾಸ್​, ನನಗೆ ಕುಟುಂಬಸ್ಥರ ನೆನಪಾಗುತ್ತದೆ ಅಂತ ಹೇಳುತ್ತಿದ್ದರು. ಆದರೆ ಈ ಬಾರಿಯ ಬಿಗ್​ಬಾಸ್​ ಸೀಸನ್​ 11 ಶುರುವಾಗಿ ಎರಡೇ ದಿನಕ್ಕೆ ಸ್ಪರ್ಧಿಗಳು ಕಣ್ಣೀರು ಹಾಕುತ್ತಿದ್ದಾರೆ.

    ಅದರಲ್ಲೂ ಬಿಗ್​ಬಾಸ್​ಗೆ ಬಂದ ಮೊದಲ ದಿನವೇ ಧನರಾಜ್​ ಆಚಾರ್ಯ ಅವರು ಕಣ್ಣೀರು ಹಾಕಿದ್ದರು. ಇದಾದ ಬಳಿಕ ಅನುಷಾ ರೈ ಅವರು ಊಟಕ್ಕೆ ತೊಂದರೆ ಆಗ್ತಾ ಇದೆ ಅಂತ ಅತ್ತಿದ್ದರು. ಬಳಿಕ ಪುಟ್ಟಕ್ಕನ ಮಕ್ಕಳು ಸೀರಿಯಲ್ ನಟಿ ಹಂಸ ನಾರಾಯಣ್ ಕೂಡ ಬಿಗ್​ಬಾಸ್​ಮನೆಯ ವಾತಾವರಣಕ್ಕೆ ಕ್ಯಾಮೆರಾ ಮುಂದೆ ಬಂದು ಕಣ್ಣೀರು ಹಾಕಿದ್ರು. ಜೊತೆಗೆ ಮಾನಸಾ ಲಾಯರ್​ ಜಗದೀಶ್​ ಮಾತಿಗೆ ಬೇಸರದಿಂದ ಕಣ್ಣೀರು ಹಾಕಿದ್ದಾರೆ. ಇದೀಗ ಐಶ್ವರ್ಯ ಸಿಂಧೋಗಿ ಅವರು ಜೋರಾಗಿ ಅತ್ತುಕೊಂಡು ಆಚೆ ಬಂದಿದ್ದಾರೆ.

    ಕಲರ್ಸ್​ ಕನ್ನಡ ಶೇರ್ ಮಾಡಿಕೊಂಡ ಹೊಸ ಪ್ರೋಮೋದಲ್ಲಿ ಐಶ್ವರ್ಯ ಜೋರಾಗಿ ಅಳುತ್ತಾ ಬಂದಿದ್ದಾರೆ. ಐಶ್ವರ್ಯಾ ಅವರ ಕಣ್ಣೀರಿಗೆ ಕಾರಣ ಏನಂತ ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. ಇನ್ನೂ ಜೋರಾಗಿ ಅಳುತ್ತಾ ಕುಳಿತುಕೊಂಡಿದ್ದ ಐಶ್ವರ್ಯಾಗೆ ಗೌತಮಿ ಜಾಧವ್, ಭವ್ಯಾ ಗೌಡ ಅವರು ಸಮಾಧಾನ ಮಾಡಿದ್ದಾರೆ. ನಮ್ಮ ಮನೆಯ ಕೆಲಸದವರಿಗೂ ನಾನು ಈ ರೀತಿ ಮಾತುಗಳನ್ನು ಹೇಳಲ್ಲ ಅಂತ ಐಶ್ವರ್ಯಾ ಅವರು ಕಣ್ಣೀರು ಸುರಿಸಿದ್ದಾರೆ. ಸದ್ಯ ಇದಕ್ಕೆಲ್ಲ ವೀಕ್ಷಕರು ಕಿಚ್ಚನ ಪಂಚಾಯ್ತಿಗಾಗಿ ಕಾಯುತ್ತಿದ್ದಾರೆ.

    Continue Reading

    LATEST NEWS

    Trending