Monday, May 17, 2021

ಯುವಕನೋರ್ವ ಡೇರಿಮಿಲ್ಕ್ ಚಾಕಲೇಟ್ ಖರೀದಿಸಲು ಹೋಗಿ ಕಳೆದುಕೊಂಡದ್ದಾದರೂ ಏನು ಗೊತ್ತೇ..!

ಬೆಂಗಳೂರು: ರಾಜ್ಯದಾದ್ಯಂತ ಶನಿವಾರ ಭಾನುವಾರ ವೀಕೆಂಡ್ ಕರ್ಫ್ಯೂ ವಿಧಿಸಲಾಗಿತ್ತು. ಈ ವೇಳೆ ಯುವಕನೋರ್ವ ಚಾಕಲೇಟ್ ಖರೀದಿಸಲೆಂದು ಹೋಗಿ 2ಲಕ್ಷ ಮೌಲ್ಯದ ಬೈಕ್ ಕಳೆದುಕೊಂಡ ಘಟನೆ ಗೊಲ್ಲರಹಳ್ಳಿಯಲ್ಲಿ ನಡೆದಿದೆ.

ಕೌಶಿಕ್ ಎನ್ನುವ ಯುವಕನೋರ್ವ ಡ್ಯೂಕ್ ಬೈಕನ್ನು ಟೋಲ್ ಬಳಿ ಪಾರ್ಕ್ ಮಾಡಿ ಹೋಗಿದ್ದ, ಆತ ಬರುವುದರೊಳಗಾಗಿ ಪೊಲೀಸರು  ಬೈಕನ್ನು ಪೊಲೀಸರು ಸೀಝ್ ಮಾಡಿದ್ದಾರೆ.ಗೊಲ್ಲರಹಳ್ಳಿ ನೈಸ್ ರಸ್ತೆ ಬಳಿ ಚಾಕಲೇಟ್ ಕೊಳ್ಳಲು ಕೌಶಿಕ್ ಎಂಬಾತ ಡ್ಯೂಕ್ ಬೈಕ್ ನಲ್ಲಿ ಬಂದಿದ್ದ ಈ ವೇಳೆ ಬೈಕನ್ನು ತಡೆದ ಪೊಲೀಸರು ವೀಕೆಂಡ್ ಕರ್ಫ್ಯೂ ಇದ್ದಾಗ ಹೊರ ಬಂದದ್ದೇ ತಪ್ಪು ಎಂದು ಆತನ ಬೈಕ್ ಸೀಝ್ ಮಾಡಿದ್ದಾರೆ.

ಬೈಕ್ ಕೊಡಲು ಯುವಕ  ಪೊಲೀಸರಲ್ಲಿ  ಅಲವತ್ತುಕೊಂಡಾಗ  ಮೇ 5ರಂದು ಪೊಲೀಸ್ ಠಾಣೆಗೆ ಬಂದು ಬೈಕ್  ಬಿಡಿಸಿಕೊಂಡು ಹೋಗುವಂತೆ ಹೇಳಿದ್ದಾರೆ.

ಆದರೆ ಇದೀಗ ಮತ್ತೆ ಮಂಗಳವಾರ ರಾತ್ರಿಯಿಂದ ಪೂರ್ತಿ ಲಾಕ್ ಡೌನ್ ಇರೋದ್ರಿಂದ ಮೇ 5ರಂದು ಆತನ ಬೈಕ್ ಸಿಗೋ ಛಾನ್ಸ್ ಕಡಿಮೆ.
ಅದಕ್ಕೇ ಲಾಕ್ ಡೌನ್, ಕರ್ಫ್ಯೂ ಸಂದರ್ಭ ಅನಗತ್ಯ ಹೊರ ಹೋಗಿ ಇಂಥಹ ಅನಾಹುತ ಮಾಡದಿರುವುದು ಒಳಿತು.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...