Connect with us

    LATEST NEWS

    ಕಿರುತೆರೆ ನಟನಿಂದ ಪತ್ನಿ ಮೇಲೆ ಹ*ಲ್ಲೆ..! ನಟನಿಗೆ ಜಾಮೀನು

    Published

    on

    ಬೆಂಗಳೂರು/ಮಂಗಳೂರು:  ಪತ್ನಿ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಕಿರುತೆರೆ ನಟ ಸನ್ನಿ ಮಹಿಪಾಲ್ ರವರನ್ನು ಎಚ್‌ಎಎಲ್ ಪೊಲೀಸರು ಬಂಧಿಸಿದ್ದು ಇದೀಗ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಆರೋಪಿಗೆ ನೋಟೀಸ್ ನೀಡಿ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಿ ಕಳುಹಿಸಲಾಗಿದೆ. ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ‘ನೇತ್ರಾವತಿ’ ಧಾರಾವಾಹಿಯಲ್ಲಿ ಸನ್ನಿ ಮಹಿಪಾಲ್ ಬಣ್ಣ ಹಚ್ಚಿದ್ದರು. ಇದಾದ ಬಳಿಕ ಖಾಸಗಿ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದರು.

    ಏನಿದು ಪ್ರಕರಣ?
    ಕಿರುತೆರೆ ನಟ ಸನ್ನಿ ಮಹಿಪಾಲ್ ಮತ್ತು ಪತ್ನಿ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರು ಖಾಸಗಿ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗುತ್ತದೆ. ತುಂಬಾ ಆತ್ಮೀಯರಾಗಿದ್ದ ಇವರು ದೈಹಿಕ ಸಂಪರ್ಕವನ್ನು ಬೆಳೆಸಿದ್ದಾರೆ. ಮದುವೆ ಮಾಡಿಕೊಳ್ಳುವುದಾಗಿ ನಟ ಸನ್ನಿ ಹೇಳಿ ನಂಬಿಸುತ್ತಾನೆ. ದೈಹಿಕ ಸಂಪರ್ಕ ಬೆಳೆಸಿದ ಬಳಿಕ ನಟಿ ಎರಡು ತಿಂಗಳ ಗರ್ಭಿಣಿಯಾಗುತ್ತಾಳೆ. ಬಳಿಕ ಇವರಿಬ್ಬರು ಪರಸ್ಪರ ಒಪ್ಪಿಗೆಯಿಂದ ಜೂ.15ರಂದು ದೇವಸ್ಥಾನದಲ್ಲಿ ಮದುವೆ ಆಗಿದ್ದಾರೆ ಎಂದು ಹೇಳಲಾಗಿದೆ. ಆದರೆ ಮನೆಯವರಿಗೆ ನಮ್ಮ ಮದುವೆ ವಿಚಾರವನ್ನು ತಿಳಿಸಲು ಸ್ವಲ್ಪ ಸಮಯಬೇಕೆಂದು ಸನ್ನಿ ತನ್ನ ಪತ್ನಿಗೆ ತಿಳಿಸಿರುತ್ತಾನೆ. ಆದರೆ ಈ ಮಧ್ಯೆ ನಟ ಬೇರೊಬ್ಬ ಯುವತಿ ಜೊತೆ ವಿವಾಹ ನಿಶ್ವಿತಾರ್ಥವನ್ನು ಮಾಡಿಕೊಂಡಿದ್ದಾನೆ. ಈ ವಿಚಾರವಾಗಿ ಇವರಿಬ್ಬರ ನಡುವೆ ಮಾತುಕತೆ ನಡೆದಿದ್ದು ಮಹಿಪಾಲ್ ಯುವತಿ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಂಗಳೂರು ಸಬ್‌ ಜೈಲಿನಲ್ಲಿ ಪೊಲೀಸರ ದಿಢೀರ್ ದಾಳಿ..!! ಗಾಂಜಾ, ಡ್ರಗ್‌ ಪ್ಯಾಕೇಟ್‌ಗಳು ವಶ

    ಈ ಗಲಾಟೆಯಲ್ಲಿ ಸನ್ನಿ ಮಹಿಪಾಲ್‌ ಚಾಕುವಿನಿಂದ ತೋಳಿಗೆ ಇರಿದಿದ್ದಾರೆ. ಅಲ್ಲದೆ ಈ ಗಲಾಟೆಯಿಂದ ಗರ್ಭಪಾತ ಆಗಿರೋದಾಗಿಯೂ ಪತ್ನಿ ಹೇಳಿದ್ದಾರೆ. ಈ ಗಲಾಟೆ ಆದ ಮೇಲೆ 112ಕ್ಕೆ ಮಹಿಪಾಲ್‌ ಪತ್ನಿ ಕರೆ ಮಾಡಿ ಸ್ಥಳಕ್ಕೆ ಹೊಯ್ಸಳ ಸಿಬ್ಬಂದಿಯನ್ನು ಕರೆದಿದ್ದಾರೆ. ಗರ್ಭಪಾತದಿಂದ ತ್ರೀವ್ರ ರಕ್ತಸ್ರಾವವಾಗುತ್ತಿತ್ತು. ಆಸ್ಪತ್ರೆಗೆ ಕರೆದೊಯ್ಯುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಆದರೆ ಮಹಿಳಾ ಸಿಬ್ಬಂದಿ ಇಲ್ಲದ ಕಾರಣ ಕರೆದುಕೊಂಡು ಹೋಗಲಾಗಿಲ್ಲ.  ಹೆಚ್‌ಎಎಲ್‌ ಪೊಲೀಸ್ ಠಾಣೆಯಲ್ಲಿ ಪತ್ನಿ ದೂರು ದಾಖಲಿಸಿದ್ದಾರೆ. ಮನೆಗೆ ಅತಿಕ್ರಮ ಪ್ರವೇಶ ಮಾಡಿರುವುದಾಗಿ ಹಾಗೂ ಒತ್ತಾಯದಿಂದ ಮದುವೆಯಾಗಿರೋದಕ್ಕೆ ಸನ್ನಿ ಮಹಿಪಾಲ್‌ ಕೂಡ ದೂರು ನೀಡಿದ್ದರು. ದೂರಿನ ಹಿನ್ನೆಲೆ ಸನ್ನಿ ಮಹಿಪಾಲ್ ರವರನ್ನು ಪೊಲೀಸರು ಬಂಧಿಸಿದ್ದು ಇದೀಗ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಬಂಟ್ವಾಳ :ನವದಂಪತಿ ಪ್ರಯಾಣಿಸುತ್ತಿದ್ದ ಕಾರು ಅಪಘಾ*ತ; ಪತ್ನಿ ಸಾ*ವು; ಪತಿ ಗಂಭೀ*ರ

    Published

    on

    ಬಂಟ್ವಾಳ : ನವದಂಪತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ ಸಂಭವಿಸಿ ಪತ್ನಿ ಸಾ*ವನ್ನಪ್ಪಿದ್ದು, ಪತಿ ಗಂ*ಭೀರವಾಗಿ ಗಾ*ಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ ಮಂಗಳೂರು-ಬೆಂಗಳೂರು ರಸ್ತೆಯ ಬಂಟ್ವಾಳದ ತಲಪಾಡಿ ಎಂಬಲ್ಲಿ ನಡೆದಿದೆ. ಪೆರ್ನೆ ಸಮೀಪದ ಒಡ್ಯದಗಯ ನಿವಾಸಿ ಅನಿಶ್ ಕೃಷ್ಣ ಎಂಬವರ ಪತ್ನಿ ಮಾನಸ ಸಾ*ವನ್ನಪ್ಪಿದ ನವವಿವಾಹಿತೆ. ಘಟನೆಯಿಂದ ಅನಿಶ್ ಕೃಷ್ಣ ಗಂಭೀ*ರವಾಗಿ ಗಾ*ಯಗೊಂಡಿದ್ದಾರೆ.

    ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಸಿರೋಡಿನ ಕಡೆಯಿಂದ ‌ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ನವದಂಪತಿಯ ಆಲ್ಟೋ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯಿಂದ ಡಿವೈಡರ್ ಮೇಲಿನಿಂದ ಇನ್ನೊಂದು ಬದಿಗೆ ಹಾರಿದೆ. ಬಳಿಕ ಮಂಗಳೂರು ಕಡೆಯಿಂದ ಬಿಸಿರೋಡಿನ ಕಡೆಗೆ ಬರುತ್ತಿದ್ದ ಕೆ.ಎಸ್.ಆರ್‌ಟಿ.ಸಿ ಬಸ್ ಗೆ ಡಿ*ಕ್ಕಿ ಹೊಡೆದಿದೆ.

    ಡಿ*ಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಘಟನೆಯಿಂದ ಹೆದ್ದಾರಿಯಲ್ಲಿ ಕೆಲಹೊತ್ತು ಸಂಚಾರಕ್ಕೆ ಅಡಚಣೆ ಉಂಟಾಯಿತು.

    ಎರಡು ದಿನದ ಹಿಂದಷ್ಟೇ ಮದುವೆ : 

    ಸೆ.5 ರಂದು ದೇಂತಡ್ಕ ದೇವಸ್ಥಾನದಲ್ಲಿ ಮಾನಸ ಹಾಗೂ ಅನಿಶ್ ಕೃಷ್ಣ  ಮದುವೆ ನಡೆದಿತ್ತು. ಮದುವೆ ಕಾರ್ಯಕ್ರಮದ ವಿಚಾರವಾಗಿ ಇಂದು ಅಲ್ಲಿನ ಕೆಲವೊಂದು ಲೆಕ್ಕಾಚಾರ ಮಾಡಲು ದೇಂತಡ್ಕ ದೇವಸ್ಥಾನಕ್ಕೆ ಬಂದು ವಾಪಸ್ ಮಾವನ ಮನೆಗೆ ಹೋಗುವ ವೇಳೆ ಈ ‌ಘ‌ಟನೆ ನಡೆದಿದೆ ಎನ್ನಲಾಗಿದೆ. ಇಬ್ಬರು ಮಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ. ಸ್ಥಳಕ್ಕೆ ಮೆಲ್ಕಾರ್ ‌ಟ್ರಾಫಿಕ್ ಪೊಲೀಸರು ಭೇಟಿ ನೀಡಿದ್ದು,  ಪ್ರಕರಣ ದಾಖಲಿಸಿಕೊಂಡಿದ್ದಾರೆ

    Continue Reading

    LATEST NEWS

    ಲಿಫ್ಟ್ ಕೊಡುವ ಮುನ್ನ ಎಚ್ಚರ: ಡ್ರಾಪ್ ಕೇಳಿ ಚಾಕು ಇರಿದ ದು*ಷ್ಕರ್ಮಿ

    Published

    on

    ಮಂಗಳೂರು/ಬೆಂಗಳೂರು : ಇತ್ತೀಚಿಗೆ ಕ್ರೈಂ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಕೊ*ಲೆ ಮಾಡೋದಕ್ಕಂತೂ ಕಾರಣವೇ ಬೇಡ. ಕ್ಷುಲ್ಲಕ ಕಾರಣಕ್ಕಾಗಿ ಒಬ್ಬ ವ್ಯಕ್ತಿಯನ್ನು ಹ*ತ್ಯೆ ಮಾಡಲು ಹೇಸುವುದಿಲ್ಲ. ಅಂತಹುದೇ ಕೃ*ತ್ಯ ಬೆಂಗಳೂರಿನಲ್ಲಿ ನಡೆದಿದೆ. ಬೈಕ್ ನಲ್ಲಿ ಲಿಫ್ಟ್ ಕೊಟ್ಟಾತನಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ.

    ಖಾಸಗಿ ಬ್ಯಾಂಕ್ ಉದ್ಯೋಗಿ ಪಿ.ಈಶ್ವರಗೌಡ(38) ಚೂ*ರಿ ಇರಿತಕ್ಕೊಳಗಾದವರು. ರೋಹಿತ್ ಗೌಡ (24) ಚೂ*ರಿ ಇರಿದಾತ. ಈಶ್ವರಗೌಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ರೋಹಿತ್ ಗೌಡನನ್ನು ಬಂಧಿಸಲಾಗಿದೆ.

    ಅವಮಾನಕ್ಕೆ ಪ್ರತೀಕಾರ :

    ಸಾಲ ವಸೂಲಾತಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪಿ.ಈಶ್ವರಗೌಡ ಕ್ರಿಕೆಟ್ ಟೂರ್ನಮೆಂಟ್ ವೇಳೆ ರೋಹಿತ್ ಗೌಡನನ್ನು ಸಾರ್ವಜನಿಕವಾಗಿ ಅವಮಾನಿಸಿದ್ದ ಎನ್ನಲಾಗಿದೆ. ಇದಕ್ಕೆ ಪ್ರತೀಕಾರವಾಗಿ ಆರೋಪಿ ಆತನನ್ನು ಕೊ*ಲ್ಲಲು ಸಂಚು ರೂಪಿಸಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.

    ಈಶ್ವರಗೌಡ ತನ್ನ ಸ್ನೇಹಿತನೊಂದಿಗೆ ಢಾಬಾವೊಂದಕ್ಕೆ ಊಟಕ್ಕೆ ಹೋಗಿದ್ದರು. ಅವರು ಢಾಬಾದಿಂದ ಹೊರಬಂದ ನಂತರ, ಗೇಟ್‌ನಲ್ಲಿದ್ದ ಆರೋಪಿ ಡ್ರಾಪ್ ನೀಡುವಂತೆ ವಿನಂತಿಸಿದ್ದ. ಈಶ್ವರ್ ಕೂಡ ಅದೇ ದಾರಿಯಲ್ಲಿ ಹೋಗುತ್ತಿದ್ದರಿಂದ ಅವನು ಡ್ರಾಪ್ ನೀಡಲು ಒಪ್ಪಿದರು. ಸ್ವಲ್ಪ ಹೊತ್ತು ಬೈಕ್ ಹಿಂದೆ ಕುಳಿತು ಸವಾರಿ ಮಾಡಿದ ರೋಹಿತ್, ಸ್ಮಶಾನದ ಬಳಿ ನಿರ್ಜನ ಪ್ರದೇಶದಲ್ಲಿ ತಾನು ತಂದಿದ್ದ ಚಾಕುವಿನಿಂದ ಈಶ್ವರ್ ಗೆ ಇ*ರಿದಿದ್ದಾನೆ.

    ಈ ವೇಳೆ ಬೈಕ್ ಚಲಾಯಿಸುತ್ತಿದ್ದ ಈಶ್ವರ್ ರ ನಿಯಂತ್ರಣ ತಪ್ಪಿದ್ದು,  ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಚಾಕು ಇ*ರಿತದಿಂದ ಈಶ್ವರ್ ಗೆ ಗಾ*ಯವಾಗಿದೆ. ಆದರೂ ರೋಹಿತ್‌ನಿಂದ ಹರಸಾಹಸ ಮಾಡಿ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಆದರೂ ಬಿಡದ ರೋಹಿತ್ ಬೆನ್ನತ್ತಿ ಇ*ರಿದಿದ್ದಾನೆ.

    ಇದನ್ನೂ ಓದಿ : ಗಣೇಶ ವಿಗ್ರಹ ತರಲು ತೆರಳುತ್ತಿದ್ದ ಟಾಟಾ ಏಸ್ ಪಲ್ಟಿ, ಇಬ್ಬರು ಸಾ*ವು

    ಈ ವೇಳೆ ಈಶ್ವರ್ ತಪ್ಪಿಸಿಕೊಂಡು ಮುಖ್ಯರಸ್ತೆಗೆ ಬಂದು ಸಹಾಯಕ್ಕಾಗಿ ತನ್ನ ಸಹೋದರನನ್ನು ಕರೆದಿದ್ದು, ಆತನ ಸಹೋದರ ಆತನನ್ನು ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಸೇರಿಸಿದರು. ಅಷ್ಟು ಹೊತ್ತಿಗಾಗಲೇ ಆರೋಪಿ ರೋಹಿತ್ ಬೈಕ್ ನಲ್ಲಿ ಪರಾರಿಯಾಗಿದ್ದ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    ಉಡುಪಿ : ಲಲಿತಾ ಕಲ್ಕೂರ ವಿಧಿವಶ

    Published

    on

    ಉಡುಪಿ : ದಿವಂಗತ ಪ್ರೊ. ಮಂಜುನಾಥ ಕಲ್ಕೂರ ಅವರ ಪತ್ನಿ ಲಲಿತಾ ಕಲ್ಕೂರ (83) ವಿ*ಧಿವಶರಾಗಿದ್ದಾರೆ.  ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ(ಸೆ.7) ಉಡುಪಿಯ ಸ್ವಗೃಹದಲ್ಲಿ ನಿಧ*ನ ಹೊಂದಿದರು.

    ಮೃತರು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಸಹಿತ 3ಮಂದಿ ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

    Continue Reading

    LATEST NEWS

    Trending